ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಹೊಸ ದಾಖಲೆ ನಿರ್ಮಿಸಿದ ನೀರಜ್ ಚೋಪ್ರಾ 

ನೀರಜ್ ಚೋಪ್ರಾ ಭಾನುವಾರ ಬುಡಾಪೆಸ್ಟ್‌ನಲ್ಲಿ ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೈನಲ್‌ನಲ್ಲಿ ಚೋಪ್ರಾ ಅವರ ಎರಡನೇ ಪ್ರಯತ್ನದಲ್ಲಿ ಅವರು ಜಾವೆಲಿನ್ ಅನ್ನು 88.17 ಮೀಟರ್‌ಗಳ ದೂರಕ್ಕೆ  ಎಸೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.

ನವದೆಹಲಿ: ನೀರಜ್ ಚೋಪ್ರಾ ಭಾನುವಾರ ಬುಡಾಪೆಸ್ಟ್‌ನಲ್ಲಿ ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೈನಲ್‌ನಲ್ಲಿ ಚೋಪ್ರಾ ಅವರ ಎರಡನೇ ಪ್ರಯತ್ನದಲ್ಲಿ ಅವರು ಜಾವೆಲಿನ್ ಅನ್ನು 88.17 ಮೀಟರ್‌ಗಳ ದೂರಕ್ಕೆ  ಎಸೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಪಾಕಿಸ್ತಾನದ ಅರ್ಷದ್ ನದೀಮ್ ಅವರು 87.82 ಮೀಟರ್‌ಗಳಷ್ಟು ದೂರ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದರೆ . ಇನ್ನೊಂದೆಡೆಗೆ  ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ 86.67 ಮೀ ದೂರದಲ್ಲಿ ಕಂಚಿನ ಪದಕ ಪಡೆದರು.

ಸ್ಪರ್ಧೆಯಲ್ಲಿರುವ ಇತರ ಇಬ್ಬರು ಭಾರತೀಯ ಜಾವೆಲಿನ್ ಎಸೆತಗಾರರೆಂದರೆ ಕಿಶೋರ್ ಜೆನಾ ಮತ್ತು ಡಿಪಿ ಮನು ಅವರು ಪೋಡಿಯಂ ಸ್ಥಾನಗಳನ್ನು ಪಡೆಯಲು ಸಾಧ್ಯವಾಗದಿದ್ದರೂ ಸಹ ಉತ್ತಮ  ಪ್ರದರ್ಶನಗಳನ್ನು ನೀಡಿದರು. ಇಬ್ಬರೂ ಎಸೆತಗಾರರು  ಕ್ರಮವಾಗಿ ಐದು ಮತ್ತು ಆರನೇ ಸ್ಥಾನ ಪಡೆದರು. 

ಜಾವೆಲಿನ್ ವಿಶ್ವ ಶ್ರೇಯಾಂಕದಲ್ಲಿ ಪ್ರಸ್ತುತ ನಂ.1 ಚೋಪ್ರಾ ಅವರು ಟೋಕಿಯೊ 2020 ರಲ್ಲಿ ಒಲಿಂಪಿಕ್ ಚಿನ್ನವನ್ನು ಗೆದ್ದಿದ್ದರು, ಆದರೆ ಕಳೆದ ವರ್ಷ ಯುಜೀನ್‌ನಲ್ಲಿ ನಡೆದ ವರ್ಲ್ಡ್ಸ್‌ನಲ್ಲಿ ಆಂಡರ್ಸನ್ ಪೀಟರ್ಸ್ ಚಿನ್ನವನ್ನು ಗೆದ್ದಿದ್ದರಿಂದ ಬೆಳ್ಳಿಗೆ ತೃಪ್ತಿಪಟ್ಟಿದ್ದರು. ಭಾರತದ ನೀರಜ್ ಚೋಪ್ರಾ ಅವರು ಜೆಕ್ ಗಣರಾಜ್ಯದ ಐಕಾನಿಕ್ ಜಾನ್ ಝೆಲೆಜ್ನಿ ಮತ್ತು ನಾರ್ವೆಯ ಆಂಡ್ರಿಯಾಸ್ ಥೋರ್ಕಿಲ್ಡ್‌ಸೆನ್ ನಂತರ,  ಈ ಕ್ರೀಡೆಯ ಇತಿಹಾಸದಲ್ಲಿ ಏಕಕಾಲದಲ್ಲಿ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗೆದ್ದ ಮೂರನೆ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Source : https://zeenews.india.com/kannada/sports/neeraj-chopra-set-a-new-record-by-winning-a-gold-medal-at-the-world-athletics-championships-154902

Leave a Reply

Your email address will not be published. Required fields are marked *