ಚಿತ್ರದುರ್ಗ ಮಾ. 03 ಸಂಘದ ಕೆಲವು ಸದಸ್ಯರುಗಳು ನನ್ನ ಹಾಗೂ ನಮ್ಮ ಸಂಘದ ಮೇಲೆ ಹಣ ದುರುಪಯೋಗದ ಆರೋಪವನ್ನು
ಮಾಡುತ್ತಿದ್ದಾರೆ.ನಾನಾಗಲೀ.. ನಮ್ಮ ಸಂಘವಾಗಲೀ.ಯಾವುದೇ ಹಣ ದುರುಪಯೋಗ ಮಾಡಿಲ್ಲ ಎಂದು ಜಿಲ್ಲಾ ಯಾದವ ಗೊಲ್ಲರ
ಸಂಘದ ಅಧ್ಯಕ್ಷ ಸಿ.ಮಹಲಿಂಗಪ್ಪ ತಮ್ಮ ವಿರುದ್ದ ಅಪ ಪ್ರಚಾರದಲ್ಲಿ ತೊಡಗಿರುವವರಿಗೆ ತಿರುಗೇಟು ನೀಡಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಗಳು ನಮ್ಮ ಸಂಘಕ್ಕೆ ಕಟ್ಟಡಗಳನ್ನ
ನಿರ್ಮಾಣ ಮಾಡಲು ಅನುದಾನವನ್ನು ನೀಡಿದ್ದರೂ ಅದು ಜಿಲ್ಲಾಧಿಕಾರಿಗಳ ಬಳಿ ಹಾಗೂ ಕಾಮಗಾರಿಯನ್ನು ನಿರ್ವಹಿಸಿದವರಿಗೆ
ತಲುಪುತ್ತದೆ ಇದರಲ್ಲಿ ಸಂಘದ ಪಾತ್ರ ಏನು ಇಲ್ಲ.ಅನುದಾನದ ಹಣ ನಮ್ಮ ಸಂಘಕ್ಕೆ ಬರುವುದಿಲ್ಲ.. ನಮ್ಮದು ಏನೇ ಇದ್ದರು ಕಟ್ಟಡ
ನಿರ್ವಣೆಯ ಮೇಲುಸ್ತುವಾರಿ ಮಾತ್ರ.. ಇದರಲ್ಲಿ ನಮ್ಮದು ಏನು ಇಲ್ಲ ಎಂದರು.
ನನ್ನ ಹಾಗೂ ಸಂಘದಲ್ಲಿ ಹಣ ದುರುಪಯೋಗ ಆಗಿದೆ ಎಂದು ನನ್ನ ಬಗ್ಗೆ ಸಚಿವರಲ್ಲಿ, ಸಂಸದರಲ್ಲಿ, ಶಾಸಕರ ಬಳಿ ದೂರನ್ನು
ನೀಡಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ.ನಾನಾಗಲೀ ಮತ್ತು ನಮ್ಮ ಸಂಘದವರಾಗಲೀ ಯಾವುದೇ
ಹಣವನ್ನು ದುರುಪಯೋಗ ಮಾಡಿಲ್ಲ.ಸಾರ್ವಜನಿಕವಾಗಿ ನಮ್ಮ ಸಮುದಾಯದವರು ನನ್ನ ಹಾಗೂ ಸಂಘದ ಹೆಸರಿಗೆ ಕೆಲವರು ಮಸಿ
ಬಳಿಯುವ ಕೆಲಸ ಮಾಡುತ್ತಿದ್ದಾರೆಂದು ಎಂದು ದೂರಿದರು.
ಸಂಘದ ಕೆಲವು ಸದಸ್ಯರು ಹಾಗೂ ಸಂಘಕ್ಕೆ ಸಂಬಂಧವೇ ಇಲ್ಲದ ಕೆಲವರು ತೇಜೋವಧೆಗಾಗಿ ನನ್ನ ಬಗ್ಗೆ ಇಲ್ಲ ಸಲ್ಲದ
ಆಪಾದನೆಗಳನ್ನು ಹೊರಿಸುತ್ತಿದ್ದಾರೆ. ಇದಕ್ಕೆ ಯಾರು ಕಿವಿಗೊಡಬಾರದೆಂದು ಕೇಂದ್ರ ಮಂತ್ರಿಯಾಗಿದ್ದ ನಾರಾಯಣಸ್ವಾಮಿರವರು
ಐವತ್ತು ಲಕ್ಷ ರೂ. ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಇಪ್ಪತ್ತು ಲಕ್ಷ ರೂ. ಸಂಸದ ಕೆ.ಎಸ್.ನವೀನ್ ಹತ್ತು ಲಕ್ಷ ರೂ.ಗಳನ್ನು
ಸಂಘದ ಕಟ್ಟಡಕ್ಕೆ ಮಂಜೂರು ಮಾಡಿದ್ದಾರೆ. ನಿರ್ಮಿತಿ ಕೇಂದ್ರದವರು ಕಟ್ಟಡ ಕಟ್ಟಿಸುತ್ತಿರುವುದರಿಂದ ಅನುದಾನ ನೇರವಾಗಿ
ಸಂಘಕ್ಕೆ ಬರುವುದಿಲ್ಲ. ವಾಸ್ತವ ಅರಿಯದವರು ಐದರಿಂದ ಹತ್ತು ಕೋಟಿ ರೂ.ದುರುಪಯೋಗವಾಗಿದೆಯೆಂದು ಎಲ್ಲಾ ಕಡೆ
ಹೇಳಿಕೊಂಡು ತಿರುಗಾಡುತ್ತಿರುವುದು ಸತ್ಯಕ್ಕೆ ದೂರವಾದುದು. ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಸರ್ವ ಸದಸ್ಯರ ಸಭೆ
ಕರೆಯುತ್ತೇನೆ. ತಾಕತ್ತಿದ್ದರೆ ಅಲ್ಲಿ ಬಂದು ಹಣ ದುರಪಯೋಗವಾಗಿರುವುದನ್ನು ಸಾಬೀತುಪಡಿಸಲಿ ಎಂದು ಸಿ.ಮಹಲಿಂಗಪ್ಪ ಸವಾಲು
ಹಾಕಿದರು.
ಚಿತ್ರದುರ್ಗದಲ್ಲಿ ಯಾದವ ಜನಾಂಗಕ್ಕೆ ಬಾಲಕಿಯರಿಗೆ 02 ಬಾಲಕರಿಗೆ 01 ವಸತಿ ನಿಲಯಗಳನ್ನು ಹೋರಾಟದ ಮೂಲಕ
ಮಾಡಿಸಿಕೊಡಲಾಗಿದೆ.. ಇದಲ್ಲದೇ ಸಂಘದಲ್ಲಿ ವಿವಿಧ ಕಟ್ಟಡ ಕಾಮಗಾರಿಗಳು ನಡೆಯುತ್ತಿವೆ.