IPL 2023: ಪಂಜಾಬ್ ಕಿಂಗ್ಸ್ ತಂಡಕ್ಕೆ ಹೊಸ ಆಟಗಾರ ಎಂಟ್ರಿ

IPL 2023: ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡದಿಂದ ಯುವ ಆಟಗಾರ ಹೊರಬಿದ್ದಿದ್ದಾರೆ. ತಂಡದಲ್ಲಿದ್ದ ಯುವ ಆಲ್‌ರೌಂಡರ್ ರಾಜ್ ಅಂಗದ್ ಬಾವಾ ಗಾಯಗೊಂಡಿದ್ದು, ಹೀಗಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ.ರಾಜ್ ಅಂಗದ್ ಬಾವಾ ಹೊರಗುಳಿಯುತ್ತಿದ್ದಂತೆ ಇದೀಗ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಮತ್ತೊರ್ವ ಯುವ ಆಟಗಾರ ಗುರ್ನೂರ್ ಸಿಂಗ್ ಬ್ರಾರ್‌ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಆಯ್ಕೆ ಮಾಡಿದೆ. 22 ವರ್ಷದ ಗುರ್ನೂರ್ ಸಿಂಗ್ ಬ್ರಾರ್ ಕೂಡ ಆಲ್​ರೌಂಡರ್ ಆಟಗಾರ ಎಂಬುದು ವಿಶೇಷ. ಇನ್ನು ಎಡಗೈ ಬ್ಯಾಟರ್​ ಆಗಿರುವ ಬ್ರಾರ್ ಬಲಗೈ ಮಧ್ಯಮ ವೇಗಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಪಂಜಾಬಿ ಮೂಲದ ಆಟಗಾರ ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡವನ್ನು ಸೇರಿಕೊಂಡಿದ್ದಾರೆ.ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ಸ್ಟಾರ್ ಆಟಗಾರ ಜಾನಿ ಬೈರ್​ಸ್ಟೋವ್ ಗಾಯದ ಕಾರಣ ಐಪಿಎಲ್​ನಿಂದ ಹಿಂದೆ ಸರಿದಿದ್ದರು. ಅವರ ಬದಲಿಗೆ ಆಸ್ಟ್ರೇಲಿಯಾ ಮ್ಯಾಥ್ಯೂ ಶಾರ್ಟ್ ಅವರನ್ನು ಪಂಜಾಬ್ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿತ್ತು.ಇನ್ನು ಇಂಗ್ಲೆಂಡ್​ನ ಆಲ್​ರೌಂಡರ್ ಲಿಯಾಮ್ ಲಿವಿಂಗ್​ಸ್ಟೋನ್ ಇನ್ನು ಕೂಡ ಪಂಜಾಬ್ ಕಿಂಗ್ಸ್​ ತಂಡವನ್ನು ಸೇರಿಕೊಂಡಿಲ್ಲ. ಗಾಯದ ಕಾರಣ ಇಂಗ್ಲೆಂಡ್ ತಂಡದಿಂದ ಹೊರಗುಳಿದಿದ್ದ ಲಿವಿಂಗ್​​ಸ್ಟೋನ್ ಅವರಿಗೆ IPL 2023 ಆಡಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಎನ್​ಒಸಿ ಪತ್ರ ನೀಡಿಲ್ಲ. ಅಂದರೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಫಿಟ್​ನೆಸ್ ಟೆಸ್ಟ್ ಮಾಡಲಿದ್ದು, ಅದರಲ್ಲಿ ಪಾಸಾದ ಬಳಿಕ ಲಿಯಾಮ್ ಲಿವಿಂಗ್​ಸ್ಟೋನ್ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಸದ್ಯ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿರುವ ಪಂಜಾಬ್ ಕಿಂಗ್ಸ್ ತಂಡವು ಬುಧವಾರ (ಏ.5) ನಡೆಯಲಿರುವ 2ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.ಪಂಜಾಬ್ ಕಿಂಗ್ಸ್ ತಂಡ ಹೀಗಿದೆ: ಶಿಖರ್ ಧವನ್ (ನಾಯಕ), ಶಾರುಖ್ ಖಾನ್, ಪ್ರಭ್​ ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಥೈಡೆ, ಅರ್ಷ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್, ಶಿವಂ ಸಿಂಗ್, ಮೋಹಿತ್ ರಥಿ, ವಿದ್ವತ್ ಕಾವೇರಪ್ಪ, ಹರ್‌ಪ್ರೀತ್ ಭಾಟಿಯಾ, ಸಿಕಂದರ್ ರಾಝ, ಸ್ಯಾಮ್ ಕರನ್, ಮ್ಯಾಥ್ಯೂ ಶಾರ್ಟ್​, ಗುರ್ನೂರ್ ಸಿಂಗ್ ಬ್ರಾರ್.

source https://tv9kannada.com/photo-gallery/cricket-photos/ipl-2023-punjab-kings-rope-in-gurnoor-singh-brar-kannada-news-zp-au50-549718.html

Leave a Reply

Your email address will not be published. Required fields are marked *