ಸಿಇಟಿ ಎಕ್ಸಾಂನಲ್ಲಿ ಯಾವುದೇ ಬದಲಾವಣೆ ಇಲ್ಲ.

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇನ್ನುಮುಂದೆ ಹೊಸ ರೂಲ್ಸ್ ಜಾರಿ ಮಾಡುವುದಾಗಿ ಕೆಇಎ ತಿಳಿಸಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯಲ್ಲಿ ಒಂದು ಪ್ರಶ್ನೆಯ ಉತ್ತರಕ್ಕೆ 5 ಆಯ್ಕೆಯನ್ನು ಕೆಇಎ ಕೊಡಲಿದೆ. ಇನ್ನುಮುಂದೆ ನಡೆಯುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ಹೊಸ ನಿಯಮ ಅನ್ವಯವಾಗಲಿದೆ. ಯುಜಿಸಿಇಟಿ-2025 ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಸಿಇಟಿ ಪರೀಕ್ಷೆಯಲ್ಲಿ ಎಂದಿನಂತೆ ಒಂದು ಪ್ರಶ್ನೆಯ ಉತ್ತರಕ್ಕೆ 4 ಆಯ್ಕೆ ಮುಂದುವರಿಯಲಿದೆ. ಸಿಇಟಿ ಎಕ್ಸಾಂನಲ್ಲಿ ಯಾವುದೇ ಬದಲಾವಣೆ ಇಲ್ಲ. ಕೆಇಎ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾತ್ರ 5 ಉತ್ತರ ಆಯ್ಕೆಗಳು ಇರಲಿವೆ ಎಂದು ಕೆಇಎ ತಿಳಿಸಿದೆ.
Source : https://publictv.in/new-rules-for-kea-competitive-exams-5-options-for-one-question