ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 04
ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ (ರಿ.), ವತಿಯಿಂದ ಸಹ್ಯಾದ್ರಿ’ ಸ್ಪೋಕನ್ ಇಂಗ್ಲಿಷ್ ಅಕಾಡೆಮಿಯ ನೂತನ ಬ್ರಾಂಚ್ ಉದ್ಘಾಟನೆ ಹಾಗೂ ಪೂಜಾ ಕಾರ್ಯಕ್ರಮವೂ ಫೆ. 5ರ ಬೆಳಿಗ್ಗೆ 10 ರಿಂದ 12.30ರವರೆಗೆ ನಡೆಯಲಿದೆ ಎಂದು ಯೋಗೀಶ್ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ (ರಿ.)ನ ಅಧ್ಯಕ್ಷರಾದ ಯೋಗೀಶ್ ಹಾಗೂ ಕಾರ್ಯದರ್ಶಿ ಚಿತ್ರ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೆಸರಾಂತ ಸಹ್ಯಾದ್ರಿ ಸ್ಪೋಕನ್ ಇಂಗ್ಲಿಷ್ ಅಕಾಡೆಮಿಯು ಚಿತ್ರದುರ್ಗ ವಿದ್ಯಾನಗರದಲ್ಲಿ 2023-24 ರಲ್ಲಿ ಪ್ರಾರಂಭಗೊಂಡಿದ್ದು, ಇದೀಗ ವಿದ್ಯಾರ್ಥಿಗಳ ಹಾಗೂ ಪೋಷಕರ ಅನುಕೂಲಕ್ಕಾಗಿ ಚಿತ್ರದುರ್ಗ ನಗರದ ಹೃದಯ ಭಾಗವಾದ ಬಿ.ಡಿ. ರಸ್ತೆಯ SBI ಸರ್ಕಲ್ ಹತ್ತಿರ ನೂತನ ಬ್ರ್ಯಾಂಚ್ ಆರಂಭಿಸಲಾಗುತ್ತಿದೆ.
ಕಛೇರಿ ಉದ್ಘಾಟನೆ ಹಾಗೂ ಪೂಜಾ ಕಾರ್ಯಕ್ರಮವೂ ಫೆ. 05ರ ಗುರುವಾರದಂದು ಬೆಳಗ್ಗೆ 10 ರಿಂದ 12.30 ರವರೆಗೆ ಹಮ್ಮಿಕೊಳ್ಳಲಾಗಿದೆ, ಈ ಕಾರ್ಯಕ್ರಮಕ್ಕೆ ಭಾಗವಹಿಸಿವಂತೆ ಮನವಿ ಮಾಡಿದ್ದಾರೆ.