ಸ್ಯಾಂಡಲ್ವುಡ್ ನಟಿ ಮಿಲನ ನಾಗರಾಜ್ ಹೆಣ್ಣುಮಗುವಿಗೆ ಜನ್ಮ ಕೊಟ್ಟಿದ್ದಾರೆ. ಮಗಳು ಬಂದ ಖುಷಿಯನ್ನ ಡಾರ್ಲಿಂಗ್ ಕೃಷ್ಣ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ಲವ್ಲಿ ಜೋಡಿ ಕೃಷ್ಣ ಮತ್ತು ಮಿಲನ ನಾಗರಾಜ್ (Milana Nagaraj) ಅವರಿಗೆ ಹೆಣ್ಣು ಮಗು (Baby Girl) ಆಗಿದೆ. ಮಿಲನ ಮತ್ತು ಮಗು ಆರೋಗ್ಯದಿಂದ ಇದ್ದಾರೆ. ನನಗೆ ತುಂಬಾನೆ ಖುಷಿ ಆಗುತ್ತಿದೆ. ಮಗಳು ಹುಟ್ಟಿದ್ದಾಳೆ ಅನ್ನೋದೇ ದೊಡ್ಡ ಖುಷಿ ಆಗುತ್ತಿದೆ. ಪ್ರತಿ ಹೆಣ್ಣುಮಕ್ಕಳ ಬಗ್ಗೆ ಗೌರವ ಇನ್ನಷ್ಟು ಜಾಸ್ತಿ ಆಗಿದೆ. ಮಗಳಿಗೆ ಜನ್ಮ ಕೊಟ್ಟ ಮಿಲನಗೂ ಧನ್ಯವಾದಗಳು. ಮಗಳು ಬಂದ ಖುಷಿಯನ್ನ ಡಾರ್ಲಿಂಗ್ ಕೃಷ್ಣ (Darling Krishna) ಹೀಗೆ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಮಗಳು ಮತ್ತು ಪತ್ನಿ ಚೆನ್ನಾಗಿದ್ದಾರೆ ಅನ್ನೋದನ್ನು ಹೇಳಿಕೊಂಡಿದ್ದಾರೆ.
ನಾನು ಅದೃಷ್ಟವಂತ ಫಾದರ್
ನನಗೆ ಮಗಳು ಹುಟ್ಟಿದ್ದಾಳೆ. ಮಿಲನ ನಾಗರಾಜ್‌ಗೆ ಧ್ಯನವಾದ. ಮಗಳನ್ನ ಕೊಟ್ಟಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ. ಅಮ್ಮ ಮತ್ತು ಮಗಳು ಇಬ್ಬರು ಚೆನ್ನಾಗಿದ್ದಾರೆ. ಮಿಲನ ಬಗ್ಗೆ ಹೆಮ್ಮೆ ಆಗುತ್ತಿದೆ. ಈ ಒಂದು ಪಯಣದಲ್ಲಿ ಮಿಲನ ತೋರಿದ ಧೈರ್ಯ, ತ್ಯಾಗ, ನೋವು ನೋಡಿದ್ದೇನೆ. ಇದನ್ನ ಕಂಡ ನನಗೆ ತುಂಬಾನೆ ಹೆಮ್ಮೆ ಆಗುತ್ತದೆ.
ಮಗಳು ಹುಟ್ಟಿದ್ಮೇಲೆ ಹೆಣ್ಣುಮಕ್ಕಳ ಬಗ್ಗೆ ಗೌರವ ಇನ್ನಷ್ಟು ಜಾಸ್ತಿ ಆಗಿದೆ. ಹೆಣ್ಣುಮಕ್ಕಳು ಮಕ್ಕಳಿಗೆ ಜನ್ಮ ಕೊಡುವಾಗ ಅನುಭವಿಸೋ ನೋವು ನಿಜಕ್ಕೂ ಕಷ್ಟದಾಯಕವೇ ಆಗಿದೆ. ಇದನ್ನೆಲ್ಲ ನೋಡಿದ ನನಗೆ ಹೆಣ್ಣುಮಕ್ಕಳ ಬಗ್ಗೆ ಹೆಮ್ಮ ಮತ್ತು ಗೌರವ ಎರಡೂ ಜಾಸ್ತಿ ಆಗಿದೆ.
ಮಗಳು ಹುಟ್ಟಿದಳು
ನಮ್ಮ ಮನೆಗೆ ಮಗಳು ಬಂದಿದ್ದಾಳೆ. ತುಂಬಾನೆ ಖುಷಿ ಆಗುತ್ತಿದೆ. ನಾನು ತುಂಬಾನೆ ಹೆಮ್ಮೆ ಪಡುತ್ತೇನೆ. ಕಾರಣ, ಈಗ ನಾನು ಅಪ್ಪ. ಮಗಳಿಗೆ ಅಪ್ಪ ಅನ್ನೋದೇ ಅತಿ ದೊಡ್ಡ ಖುಷಿಯ ವಿಷಯವೇ ಆಗಿದೆ. ಮಿಲನ ಹೆಣ್ಣ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಅಮ್ಮ ಮತ್ತು ಮಗಳ ಬಗ್ಗೆ ಈಗ ಮತ್ತಷ್ಟು ಹೆಮ್ಮ ಆಗುತ್ತಿದೆ. ಹೀಗೆ ಡಾರ್ಲಿಂಗ್ ಕೃಷ್ಣ ತಮ್ಮ ಈ ಖುಷಿಯನ್ನ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಕೃಷ್ಣ-ಮಿಲನ ಫೋಟೋ ಶೂಟ್

ಮಿಲನ ಮತ್ತು ಕೃಷ್ಣ ಇತ್ತೀಚಿಗೆ ಒಂದು ಫೋಟೋ ಶೂಟ್ ಮಾಡಿಸಿದ್ದರು. ಇದರಲ್ಲಿ ಹೆಣ್ಣುಮಗು ಆದ್ರೂ ಓಕೆ? ಗಂಡು ಮಗು ಆದ್ರು ಓಕೆ..? ಅನ್ನುವ ಅರ್ಥದಲ್ಲಿಯೇ ಎರಡೂ ಡ್ರೆಸ್ ಹಿಡಿದು ಪೋಸ್ ಕೊಟ್ಟಿದ್ದರು. ಆದರೆ, ಇದೀಗ ಮಿಲನ ಮತ್ತು ಕೃಷ್ಣ ಅವರಿಗೆ ಹೆಣ್ಣುಮಗು ಆಗಿದೆ. ಆ ಖುಷಿಯನ್ನ ಇದೀಗ ಕೃಷ್ಣ ಎಲ್ಲರೊಟ್ಟಿಗೆ ಹಂಚಿಕೊಂಡಿದ್ದಾರೆ.
ಗರ್ಭಿಣಿ ಸ್ತ್ರೀಯರು ಹೇಗಿರಬೇಕು ಮಿಲನ ನಾಗರಾಜ್ ಗರ್ಭಿಣಿ ಸ್ತ್ರೀಯರು ಹೇಗಿರಬೇಕು ಅಂತ ತಿಳಿಸಿಕೊಟ್ಟಿದ್ದರು. ದಿನವೆಲ್ಲ ಹೇಗೆಲ್ಲ ಇರಬೇಕು ಅನ್ನೋದನ್ನ ಕೂಡ ಹೇಳಿಕೊಂಡಿದ್ದರು. ಯೋಗ, ಧ್ಯಾನ, ಓದು ಹೀಗೆ ಸುಮಾರು ವಿಚಾರಗಳನ್ನ ಮಿಲನ ನಾಗರಾಜ್ ಹೇಳಿದ್ದರು