ಚಿತ್ರದುರ್ಗ ಆ. 08
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಎಸ್. ನಿಜಲಿಂಗಪ್ಪ ಮೊಮೋರಿಯಲ್ ಟ್ರಸ್ಟ್ (ರಿ) ಪುಣ್ಯಭೂಮಿ, ಸೀಬಾರ, ಚಿತ್ರದುರ್ಗ ತಾಲ್ಲೂಕು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಿಂದ ಸ್ವಾತಂತ್ರ್ಯ ಹೋರಾಟಗಾರ, ಏಕೀಕರಣ ರೂವಾರಿ, ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪರವರ 25ನೇ ಪುಣ್ಯಸ್ಮರಣೆ ಮತ್ತು ಬೌದ್ಧಧರ್ಮ ಗುರು ದಲೈಲಾಮ ಅವರ 90ನೇ ವರ್ಧಂತಿ ಸಮಾರಂಭ ಎಸ್. ನಿಜಲಿಂಗಪ್ಪ ಸಮಾಧಿಗೆ ಬೌದ್ಧ ಭಿಕ್ಕುಗಳಿಂದ ಮತ್ತು ಟಿಬೆಟಿಯನ್ ಎಕ್ಸೆಲ್ ಸರ್ಕಾರದ ಮುಖ್ಯಸ್ಥರಿಂದ ಪುಷ್ಪನಮನ ಕಾರ್ಯಕ್ರಮವೂ ಆ. 10 ಭಾನುವಾರ ಸಂಜೆ 4.ರಿಂದ ಸೀಬಾರದ ಎಸ್. ನಿಜಲಿಂಗಪ್ಪ ಸ್ಮಾರಕದ ಪುಣ್ಯಭೂಮಿಯಲ್ಲಿ ಹಮ್ಮಿ ಕೊಳ್ಳಲಾಗಿದೆ ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್‍ನ ಸಂಯೋಜಕರು ಹಾಗೂ ಧರ್ಮದರ್ಶಿಗಳಾದ ಎಸ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಸಮ್ಮುಖವನ್ನು ಶ್ರೀ ಮಾದಾರ ಚನ್ನಯ್ಯ ಗುರುಪೀಠ ಮತ್ತು ಇಂಡೋ-ಟಿಬೆಟಿಯನ್ ಫ್ರೆಂಡ್ಶಿಪ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಯೋಗವನ ಬೆಟ್ಟದ ಅಧ್ಯಕ್ಷರು, ಮತ್ತು ಶ್ರೀ ಜಗದ್ಗುರು ಮುರುಘರಾಜೇಂದ್ರ, ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಮಾಜಿ ಸಂಸದರು, ಎಸ್.ಎನ್. ಮೆಮೋರಿಯಲ್ ಟ್ರಸ್ಟ್‍ನ ಗೌರವ ಉಪಾಧ್ಯಕ್ಷರಾದ ಹೆಚ್. ಹನುಮಂತಪ್ಪ ವಹಿಸಲಿದ್ದಾರೆ. ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್‍ನ ಗೌರವ ಕಾರ್ಯದರ್ಶಿಪ್ರೊ. ಎಸ್.ಎನ್. ಕಿರಣ್ ಶಂಕರ್ ಪ್ರಾಸ್ತಾವಿಕ ನುಡಿಗಳನ್ನಾಡುವರು
ಶ್ರೀ ಎಸ್. ನಿಜಲಿಂಗಪ್ಪ ನ್ಯಾಷನಲ್ ಫೌಂಡೇಷನ್, ಬೆಂಗಳೂರು ಇವರಿಂದ ನಿರ್ಮಾಣವಾದ ಪಿ.ಎನ್. ರುದ್ರಪ್ಪ ನಿರ್ದೇಶನದ ಶ್ರೀ ಎಸ್. ನಿಜಲಿಂಗಪ್ಪ ಅವರ ಸಾಕ್ಷ್ಯಚಿತ್ರ ಹಾಗೂ ಲೇಖಕರು: ಪಿ.ಎನ್. ರುದ್ರಪ್ಪ ರವರ ಯುಗಪುರುಷ ರಾಷ್ಟ್ರನಾಯಕ ಸಿದ್ದವ್ವನಹಳ್ಳಿ ನಿಜಲಿಂಗಪ್ಪ ಅವರ ಕಿರುಹೊತ್ತಿಗೆಬಿಡುಗಡೆಯನ್ನು ಧರ್ಮಶಾಲಾದ ಎಕ್ಸೆಲ್ ಸರ್ಕಾರದ ದಲೈಲಾಮರವರ 14ನೇ ಪ್ರತಿನಿಧಿ, ಟಿಬೆಟಿಯನ್ ಜಿಗ್ಗೆ ಜ್ಜುಗ್ ಲಾಮಾ ಮಾಡಲಿದ್ದಾರೆ.
ಮಾಜಿ ವಿಧಾನಪರಿಷತ್ ಸದಸ್ಯರು ಹಾಗೂ ಎಸ್.ಎನ್. ಟ್ರಸ್ಟ್‍ನ ಧರ್ಮದರ್ಶಿಮೋಹನ್ ಕುಮಾರ್ ಕೊಂಡಜ್ಜಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಎಸ್.ಎನ್. ಟ್ರಸ್ಟ್‍ನ ಧರ್ಮದರ್ಶಿಗಳಾದ ಎಂ.ಕೆ. ತಾಜ್ ಪೀರ್ ಭಾಗವಹಿಸಲಿದ್ದಾರೆ.
Views: 11