ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಶತಭಿಷಾ, ಯೋಗ: ವರೀಯಾನ್, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 07 ಗಂಟೆ 00 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 34 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:53 ರಿಂದ 11:20ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:14 ರಿಂದ 03:41 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:59 ರಿಂದ 08:27ರ ವರೆಗೆ.
ಮೇಷ ರಾಶಿ: ನೀವು ಆಸ್ತಿಗೆ ಸಂಬಂಧಿಸಿದ ವಿವಾದವು ಇನ್ನೊಂದು ತಿರುವನ್ನು ಪಡೆಯಬಹುದು. ಯಾವುದೋ ಅಗಾಧ ಯೋಚನೆಯಲ್ಲಿ ನೀವು ಇರುವಿರಿ. ವ್ಯಾಪಾರದಲ್ಲಿ ನಷ್ಟ ಸಂಭವಿಸಬಹುದು. ತೆರಿಗೆಯನ್ನು ನೀವು ಸರಿಯಾಗಿ ಕೊಡುವ ಬಗ್ಗೆ ಆಲೋಚನೆ ಇರುವುದು. ಆಹಾರದಲ್ಲಿ ಮಿತಿ ಇರಲಿ. ಮನಸ್ತಾಪದ ನಡೆವೆಯೂ ನೀವು ಕಾರ್ಯವನ್ನು ಬಹಳ ನಿಷ್ಠೆಯಿಂದ ಮಾಡುವಿರಿ. ಬಂದಿದ್ದರಲ್ಲಿ ಸುಖವಾಗಿರಲು ಪ್ರಯತ್ನಿಸುವಿರಿ. ಅಧ್ಯಾತ್ಮದಲ್ಲಿ ಮನಸ್ಸು ಇರಲಿದೆ. ಕೆಲವರಿಗೆ ಮಾತ್ರ ನಿಮ್ಮ ಬಗ್ಗೆ ಗೊತ್ತಾಗಲಿದ್ಸು ದ್ವೇಷಿಸುವವರನ್ನು ಇಷ್ಟಪಡುವಿರಿ. ಪಾಲುದಾರಿಕೆಗಾಗಿ ಇಂದು ದೂರ ಪ್ರಯಾಣ ಮಾಡಬೇಕಾಗುವುದು. ನಿಮ್ಮದಲ್ಲದ ವಿಚಾರಕ್ಕೆ ತಲೆಬಿಸಿಮಾಡಿಕೊಳ್ಳುವುದು ಬೇಡ. ವಿದ್ಯುತ್ ಉಪಕರಣಗಳ ಖರೀದಿಗೆ ಮುಂದಾಗುವಿರಿ.
ವೃಷಭ ರಾಶಿ: ಎಂತಹ ಸವಾಲನ್ನೂ ನೀವು ಎದುರಿಸುವ ಹುಂಬುತನದಲ್ಲಿ ಏನನ್ನಾದರೂ ಮಾಡಿಕೊಳ್ಳುಬಿರಿ. ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ನೀವು ಧೈರ್ಯವನ್ನು ಕಾಪಾಡಿಕೊಳ್ಳುವಿರಿ. ನಿಮ್ಮ ಪೋಷಕರು ನಿಮಗೆ ಯಾವುದೇ ಜವಾಬ್ದಾರಿಯನ್ನು ನೀಡಿದರೆ, ನೀವು ಅದನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲಾಗದು. ನಿಮ್ಮ ಮಕ್ಕಳ ಜೊತೆ ನೀವು ಯಾವುದಕ್ಕಾದರೂ ಕೋಪಗೊಳ್ಳುವಿರಿ. ರಾಜಕೀಯದಲ್ಲಿ ಡೋಲಾಯಮಾನವಾಗಿ ಇರಲಿದ್ದು ಆತಂಕವೂ ಇರಲಿದೆ. ಯಾರಾದರೂ ನಿಮಗೆ ಮಾದರಿಯಾದಾರು. ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತದೆ ಎಂಬ ತೀರ್ಮಾನ ಬೇಡ. ಇಂದು ನೀವು ಮಾಡಲು ಹೊರಟ ಕಾರ್ಯವು ನಿರ್ವಿಘ್ನವಾಗಿ ಮುಗಿಯುವುದು. ನಿಮ್ಮ ಜಾಣ್ಮೆಯಿಂದ ಎಲ್ಲವನ್ನೂ ಉತ್ತಮವಾಗಿ ಮಾಡುವಿರಿ. ನಿಮ್ಮ ಸರಳವಾದ ಕಾರ್ಯವು ಸಂಕೀರ್ಣವಾಗಬಹುದು.
ಮಿಥುನ ರಾಶಿ: ಇಂದು ನಿಮಗೆ ಬಿಡುವಿಲ್ಲದ ದಿನವಾಗಿದ್ಸರೂ ಕುಟುಂಬಕ್ಕೆ ಅಲ್ಪ ಸಮಯವನ್ನು ಕೊಡುವಿರಿ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ನಿಮಗೆ ಉತ್ತಮವಾಗಿರುತ್ತದೆ. ನೂತನ ಮನೆಯ ನಿರೀಕ್ಷೆಯಲ್ಲಿ ನೀವು ಇರುವಿರಿ. ಮನೆಯ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ನೀವು ನಿರತರಾಗಿರುವಿರಿ. ನಿಮ್ಮ ಹವ್ಯಾಸವು ಬದಲಾಗಬಹುದು. ಪ್ರವಾಸಕ್ಕೆ ಹೋಗಲು ಉತ್ಸಾಹವು ಇರಲಿದೆ. ಎಲ್ಲರೂ ನಿಮ್ಮ ಬಗ್ಗೆ ಹೇಳಿ ಸಾಕಾದೀತು. ಅಧಿಕಾರಿಗಳಿಂದ ನಿಮಗೆ ಬೇಕಾದುದನ್ನು ಜಾಣತನದಿಂದ ಮಾಡಿಸಿಕೊಳ್ಳುವಿರಿ. ಇಂದು ನಿಮಗೆ ಅದೃಷ್ಟವಿರುವ ಕಾರಣ ಉತ್ತಮ ಫಲವನ್ನು ಪಡೆಯುವಿರಿ. ನೀವು ಪ್ರಭಾವೀ ವ್ಯಕ್ತಿಗಳಂತೆ ತೋರುವಿರಿ. ಅಪರಿಚಿತರ ಸಹವಾಸವು ಸಾಕೆನಿಸಬಹುದು.
ಕರ್ಕ ರಾಶಿ: ಇಂದು ನಿಮ್ಮ ಸಂತೋಷವನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ಕೈ ತಪ್ಪಿ ಹೋಗುವ ಕೆಲಸವನ್ನು ಹೇಗಾದರೂ ಉಳಿಸಿಕೊಳ್ಳುವಿರಿ. ಅನುಮಾನದ ನಿಮ್ಮ ಸ್ವಭಾವವು ಅಧಿಕವಾಗುದು. ಎಲ್ಲವನ್ನೂ ಸಮಾನವಾಗಿ ನೋಡಲು ಕಷ್ಟವಾಗಬಹುದು. ಕಲಹಕ್ಕೆ ಏನಾದರೂ ವಿಷಯವನ್ನು ಹುಡುಕಿಕೊಳ್ಳುವಿರಿ. ಅನಿರೀಕ್ಷಿತ ಧನಾಗಮನವು ಸಂತೋಷವನ್ನು ಕೊಡುವುದು. ತಾಯಿಯ ಅನಾರೋಗ್ಯದಿಂದ ನಿಮಗೆ ಚಿಂತೆ ಕಾಡಬಹುದು. ಇನ್ನೊಬ್ಬರ ವಸ್ತುಗಳನ್ನು ಬಳಸಿಕೊಳ್ಳುವಿರಿ. ಕಲಾವಿದರು ಹೆಚ್ಚಿನ ಶ್ರಮದಿಂದ ಆದಾಯವನ್ನು ಗಳಿಸುವರು. ವಾಹನ ಸಂಚಾರದಲ್ಲಿ ಮಂದಗತಿ ಇರಲಿ. ನಿಮ್ಮ ಮಾತು ಬಾಲಿಶದಂತೆ ತೋರುವುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸಮಸ್ಯೆ ಆಗುವುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು. ಅಶಿಸ್ತು ನಿಮಗೆ ಸಿಟ್ಟನ್ನು ತರಬಹುದು. ಕಣ್ಣಿನ ತೊಂದರೆಗೆ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ. ವಿವಾಹ ಸಂಬಂಧದಿಂದ ಕಿರಿಕಿರಿ ಆಗಬಹುದು. ಒತ್ತಡದಿಂದ ದಿಗ್ಭ್ರಾಂತಿಯಾಗಬಹುದು.
ಸಿಂಹ ರಾಶಿ: ವಿದ್ಯಾರ್ಥಿಗಳು ಯಾವುದಾದರೂ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಸ್ಥಾನವು ಸಿಗಲಿದೆ. ನಿಮ್ಮ ಆರೋಗ್ಯದಲ್ಲಿ ಸಮಸ್ಯೆಗಳನ್ನು ನೀವು ಅಲಕ್ಷ್ಯ ಮಾಡುವುದು ಸರಿಯಾಗದು. ಕೆಟ್ಟ ಕನಸನ್ನು ನೀವು ನೆನಪಿನಲ್ಲಿ ಇಡುವಿರಿ. ಕೆಲವರ ಮೇಲೆ ನಂಬಿಕೆಯನ್ನು ಇಡಲಾರಿರಿ. ನಿಮ್ಮ ಸಂಗಾತಿಗಾಗಿ ನೀವು ಯಾವುದಾದರೂ ಉದ್ಯೋಗವನ್ನು ನೀಡುವಿರಿ. ಕೆಲವು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಸಾಧ್ಯವಾಗದೇ ಹೋಗಬಹುದು. ನಿಮ್ಮ ಬಹುದಿನದ ವಿದೇಶ ಪ್ರಯಾಣದ ಕನಸು ಇಂದು ನನಸಾಗುವುದು. ಖರ್ಚನ್ನು ನೀವು ಸ್ನೇಹಿತರ ಜೊತೆ ಸಮವಾಗಿ ಹಂಚಿಕೊಳ್ಳುವಿರಿ. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ. ನೀವು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ. ಪ್ರೇಮಿಗಳಿಗೆ ಇಂದು ಶುಭವಾಗಿಲ್ಲ. ನಿರಂತರ ಓಡಾಟದಿಂದ ವಿಶ್ರಾಂತಿಯು ಸಿಗಲಿದೆ.
ಕನ್ಯಾ ರಾಶಿ: ಕುಟುಂಬದ ಇಂದಿನ ಜೀವನವು ಅನೂಹ್ಯ ತಿರುವುಗಳಿಂದ ಇರಬಹುದು. ಏಕಾಂತದಲ್ಲಿ ಇಂದು ನೆಮ್ಮದಿಯನ್ನು ಕಾಣಬಯಸುವಿರಿ. ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಇರುವುದು. ಮಕ್ಕಳ ವಿವಾಹದ ಕುರಿತು ಅತಿಯಾದ ಚಿಂತೆ ಇರುವುದು. ನಿರುದ್ಯೋಗಿಗಳಿಗೆ ಎಲ್ಲರಿಂದ ಮಾನಸಿಕ ಹಿಂಸೆ ಆಗಬಹುದು. ಮನೆಗೆ ಅತಿಥಿಗಳ ಆಗಮನವಾಗಲಿದ್ದು ಸಂತೋಷವಾಗುವುದು. ಹೊಸತನ್ನು ಏನನ್ನಾದರೂ ಮಾಡಬೇಕೆಂಬ ಬಯಕೆ ಬರುವುದು. ಧೈರ್ಯದಿಂದ ಏನನ್ನೂ ಎದುರಿಸುವ ಮನೋಬಲವು ಕಡಿಮೆ ಆದೀತು. ಯಾರ ಬಗ್ಗೆಯೂ ತಾರತಮ್ಯ ಭಾವವನ್ನು ತೋರಿಸುವುದು ಬೇಡ. ಆಸ್ತಿ ವ್ಯವಹಾರಗಳಿಂದ ನಿಮಗೆ ಲಾಭವು ಇರುವುದು. ಇತರರ ತಪ್ಪಿಗೆ ನಿಮ್ಮನ್ನು ಗುರಿಮಾಡುವರು. ಉದ್ಯೋಗಸ್ಥರು ಪ್ರಗತಿಯನ್ನು ಕಾಣುವರು. ಆರ್ಥಿಕ ಸಹಕಾರವನ್ನು ಯಾರಾದರೂ ಕೇಳಿಬರಬಹುದು.
ತುಲಾ ರಾಶಿ: ಇಂದು ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಉತ್ತಮ ಕಾರ್ಯವು ಸಿಗಲಿದೆ. ನಿಮ್ಮ ಬಹುಕಾಲ ಬಾಕಿಯಿರುವ ಕೆಲಸಗಳ ಬಗ್ಗೆ ನೆಮ್ಮದಿ ಇರದು. ಸಣ್ಣ ವಿಚಾರಕ್ಕೆ ಯಾರದ್ದಾದರೂ ವಿರೋಧ ಮಾಡುವಿರಿ. ಸ್ವಾಭಿಮಾನಕ್ಕೆ ತೊಂದರೆಯಾಗಬಹುದು. ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಹಣ ಬಂದರೂ ಸಂತೋಷ ಇರುವುದಿಲ್ಲ. ನೀವು ಇಂದು ನಿಮ್ಮ ಕಾರ್ಯವನ್ನು ಉತ್ಸಾಹದಿಂದ ಮಾಡುತ್ತೀರಿ. ಬಹಳ ಕಾರ್ಯವೂ ಇದರಿಂದ ಅನಾಯಸವೆನಿಸಬಹುದು. ಭಾವನೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ. ಎಲ್ಲರದ್ದೂ ಒಂದಾದರೆ ನಿಮ್ಮದೇ ಒಂದು ದಾರಿಯಾಗಲಿದೆ. ಬಿಟ್ಟು ಬಿಟ್ಟು ಬರುವ ಅನಾರೋಗ್ಯದಿಂದ ನಿಮಗೆ ಮಾನಸಿಕ ಹಿಂಸೆ ಆಗುವುದು. ಸಂಶೋಧನೆಗೆ ಮಾರ್ಗದರ್ಶನ ಸಿಗಲಿದೆ. ಯಾವ ಒಪ್ಪಂದಕ್ಕೂ ನಿಮ್ಮ ಸಹಮತ ಇರದು. ಬೇಸರಕ್ಕೆ ಕಾರಣವನ್ನು ಹುಡುಕುತ್ತ ಇರುವುದಕ್ಕಿಂತ ಬೇರೆಯ ಕಾರ್ಯದಲ್ಲಿ ಮಗ್ನರಾಗಿ. ಬಹಳ ದಿನಗಳಿಂದ ನಿರೀಕ್ಷಿಸಿದ್ದ ಮಕ್ಕಳ ಪ್ರಗತಿಯು ಇಂದು ಸಫಲತೆಯನ್ನು ಕಾಣುವುದು.
ವೃಶ್ಚಿಕ ರಾಶಿ: ಇಂದಿನ ನಿಮ್ಮ ಘಟನೆಯು ಯಾರನ್ನೂ ಇಷ್ಟಪಡಲು ಆಗದು. ನಿಮ್ಮ ಸ್ವಭಾವವು ಇತರರಿಗೆ ಕಿರಿಕಿರಿಯನ್ನು ತಂದೀತು. ಯಾರಾದರೂ ಹಣವನ್ನು ಹೂಡಿಕೆ ಮಾಡುವುದನ್ನು ತಡೆಯುತ್ತೀರಿ. ನಿಮ್ಮ ವಿರೋಧಿಗಳು ನಿಮಗೆ ತೊಂದರೆ ಕೊಡಲು ಪ್ರಯತ್ನಿಸಬಹುದು. ಸಂಸಾರದಲ್ಲಿ ಯಾವುದೋ ವಿಚಾರಕ್ಕೆ ಜಗಳಕ್ಕೆ ಇಳಿಯಬೇಡಿ. ದೃಢವಾದ ಮನಸ್ಸಿನಿಂದ ಮುಂದುವರಿಯಿರಿ. ವಿದ್ಯಾರ್ಥಿಗಳು ಮನೆಯಿಂದ ದೂರ ಇರಬೇಕಾದ ಸ್ಥಿತಿ ಬರಬಹುದು. ಮಹಿಳೆಯರು ತಮ್ಮ ಕಾರ್ಯದಲ್ಲಿ ದಕ್ಷತೆಯನ್ನು ತೋರುವರು. ಶ್ರಮ ವಹಿಸಿ ಮಾಡಿದ ಕಾರ್ಯಕ್ಕೆ ಉತ್ತಮ ಫಲವು ಸಿಗಲಿದೆ. ನಿಮ್ಮವರನ್ನು ಸಂತೋಷಗೊಳಿಸುವಿರಿ. ಇಂದು ನಿಮಗೆ ಕಷ್ಟವಾದರೂ ತಾಳ್ಮೆಯಿಂದ ವ್ಯವಹರಿಸಿ. ಸ್ನೇಹಿತರ ಜೊತೆ ಹೆಚ್ಚು ಮೋಜಿನಲ್ಲಿ ಸಮಯವನ್ನು ಕಳೆಯುವಿರಿ. ನಿಮ್ಮ ಸಂಗಾತಿಯ ಬೆಂಬಲವು ಖುಷಿ ಕೊಡುವುದು. ಹಿತಶತ್ರುಗಳಿಂದ ಏನಾದರೂ ತೊಂದರೆ ಬರಬಹುದು. ಅಪಾಯದ ಮುನ್ಸೂಚನೆ ಸಿಕ್ಕಾಗ ಅದನ್ನು ಉಪಾಯದಿಂದ ಸರಿಮಾಡಿಕೊಳ್ಳಲು ಪ್ರಯತ್ನಿಸಿ. ಕೆಲಸವನ್ನು ಮಾಡಿಸಿಕೊಳ್ಳಲು ನೀವು ಹೆಚ್ಚು ಸಮಯವನ್ನು ನೀಡುವಿರಿ.
ಧನು ರಾಶಿ: ಇಂದು ನಿಮಗೆ ಏನಾದರೂ ವಿಶೇಷವಾದ ವಸ್ತುವು ಸಿಗಬಹುದು. ಪ್ರೇಮದಿಂದ ವಂಚನೆಯಾಗಬಹುದು. ಹಣವನ್ನು ಸಾಲವಾಗಿ ಯಾರಿಂದಲೂ ಪಡೆಯಲು ಹೋಗುವುದು ಬೇಡ. ನಿಮ್ಮ ಮನೆಯನ್ನು ನವೀಕರಿಸಲು ಬೇಕಾದ ತಯಾರಿಯಲ್ಲಿ ಇರುವಿರಿ. ಚಂಚಲವಾದ ಮನಸ್ಸನ್ನು ನೀವು ಒಂದೇ ಕಡೆ ನಿಲ್ಲಿಸುವುದು ಕಷ್ಡವಾದೀತು. ಹೊಸ ವಸ್ತುಗಳ ಖರೀದಿಗೆ ಹಿಂಜರಿಕೆ ಇರುವುದು. ನಿಮ್ಮ ಕುಟುಂಬದ ದೀರ್ಘಕಾಲದ ವಿವಾದವು ಅನ್ಯರ ಮೂಲಕ ಮುಕ್ತಾಯವಾಗಬಹುದು. ಸಾಮಾಜಿಕ ವಲಯದಲ್ಲಿ ಯಶಸ್ವಿಯಾಗಿ ಮುನ್ನಡೆಯುವಿರಿ. ನ್ಯಾಯಾಲಯದಲ್ಲಿ ನಿಮ್ಮ ವಾದಕ್ಕೆ ಸೋಲಾಗಬಹುದು. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ಪೂರ್ವ ತಯಾರಿ ಇಲ್ಲದೇ ಯಾವ ಕಾರ್ಯವನ್ನೂ ಮಾಡುವುದು ಸರಿಯಾಗದು. ಉದ್ಯಮವನ್ನು ಬೆಳೆಸುವ ಚಿಂತನೆ ಮಾಡುವಿರಿ. ಪ್ರಭಾವೀ ವ್ಯಕ್ತಿಗಳ ನಡೆಯನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಸಮಸ್ಯೆಗಳನ್ನು ಹಂಚಿಕೊಳ್ಳಲು ನಿಮಗೆ ಇಷ್ಟವಾಗದು.
ಮಕರ ರಾಶಿ: ಸಾಮಾಜಿಕ ಕಾರ್ಯವು ನಿಮಗೆ ಖುಷಿ ಕೊಡಬಹುದು. ಬಡ್ತಿ ಸಿಗದೇ ಬೇಸರವಾಗುವ ಸಾಧ್ಯತೆ ಇದೆ. ನೀವು ನಿಮ್ಮದೇ ಕಲ್ಪನಾ ಲೋಕದಲ್ಲಿ ಹೆಚ್ಚು ಇರುವಿರಿ. ವ್ಯಾಪಾರದಲ್ಲಿ ಹೊಸ ಹೂಡಿಕೆ ಮಾಡಲು ಮನಸ್ಸಿರುವುದು. ಸ್ಥಿರಾಸ್ತಿಯನ್ನು ಹೆಚ್ಚು ಮಾಡಿಕೊಳ್ಳುವ ಬಯಕೆ ಅತಿಯಾದೀತು. ಹಿರಿಯರ ಮಾತನ್ನು ಧಿಕ್ಕರಿಸಿ ಏನನ್ನಾದರೂ ಮಾಡಲು ಹೋಗುವುದು ಬೇಡ. ಇಂದು ನಿಮ್ಮ ಸಹೋದರರು ಆರ್ಥಿಕ ಸಹಾಯವನ್ನು ಕೇಳಬಹುದು. ಉಚಿತವಾಗಿ ಯಾವುದನ್ನೂ ಬಯಸುವುದು ಬೇಡ. ಸ್ವಾಭಿಮಾನವನ್ನು ಬಿಟ್ಟು ವಿಚಲಿತರಾಗುವುದು ನಿಮ್ಮ ಸ್ವಭಾವ ಆಗಲಾರದು. ಅನಾರೋಗ್ಯದಿಂದ ಇಂದಿನ ಕಾರ್ಯಕ್ಕೆ ತಡೆಯುಂಟಾದೀತು. ಅತಿಯಾದ ಮಾತೂ ನಿಮ್ಮನ್ನು ಮಾಪನ ಮಾಡಬಹುದು. ಮಕ್ಕಳ ದೃಷ್ಟಿಯಿಂದ ನೀವು ಕೆಟ್ಟವರಾಗಬಹುದು. ನಾಯಕತ್ವವನ್ನು ನೀವು ಗೊತ್ತಿಲ್ಲದಂತೆ ಬೆಳೆಸಿಕೊಳ್ಳುವಿರಿ.
ಕುಂಭ ರಾಶಿ: ಸಣ್ಣ ವಿಚಾರಗಳೂ ನಿಮಗೆ ಸಮಸ್ಯೆಯಂತೆ ತೋರುವುದು. ನೀವು ಭಾವೋದ್ವೇಗದಲ್ಲಿ ನಿರ್ಧಾರ ತೆಗೆದುಕೊಂಡು ಅನಂತರ ಪಶ್ಚಾತ್ತಾಪಪಡುವಿರಿ. ನಿಮ್ಮ ಸಂಗಾತಿಯಿಂದ ಇಂದು ಹಲವು ವಿಚಾರಕ್ಕೆ ಬೆಂಬಲವನ್ನು ಪಡೆಯುವಿರಿ. ಕಲಾವಿದರಿಗೆ ನಿಮಗೆ ವಿಶೇಷಸ್ಥಾನವು ಲಭಿಸುವುದು. ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಂಚನೆಯಾಗಬಹುದು. ವಿದ್ಯಾರ್ಥಿಗಳ ಕಲಿಕೆಯಲ್ಲಿ ಪ್ರಗತಿಯು ಆಗಬೇಕಾಗಿದೆ. ಸಹೋದ್ಯೋಗಿಗಳ ಜೊತೆ ನಿಮ್ಮ ಅಸಹಜ ಪ್ರವೃತ್ತಿಯನ್ನು ತೋರಿಸುವಿರಿ. ಇಂದಿನ ನಿಮ್ಮ ಪ್ರಯಾಣವು ಬಹಳ ಖರ್ಚಿನದ್ದಾಗಲಿದೆ. ಹೂಡಿಕೆಯನ್ನು ಮಾಡುವಾಗ ಮಾನಸಿಕ ನಿಯಂತ್ರಣವನ್ನು ಇಟ್ಟುಕೊಳ್ಳಿ. ತಂದೆಯ ಜೊತೆ ವಾಗ್ವಾದವು ನಡೆಯುವ ಸನ್ನಿವೇಶವು ಬಂದು ತಟಸ್ಥವಾಗುವುದು. ಆರ್ಥಿಕತೆಯ ಕಾರಣದಿಂದ ಕುಟುಂಬದಲ್ಲಿ ಕೆಲವು ಮಾತುಗಳು ಬರಬಹುದು. ಮಾತಿನ ಮೇಲೆ ನಿಯಂತ್ರಣವಿಟ್ಟುಕೊಂಡು ಮಾತನಾಡಿ.
ಮೀನ ರಾಶಿ: ಇಂದು ನೀವು ನಿಮ್ಮವರಿಗೆ ಹೆಚ್ಚು ಖರ್ಚನ್ನು ಮಾಡಬೇಕಾದೀತು. ನಿಮ್ಮ ಅನಗತ್ಯ ಖರ್ಚುಗಳನ್ನು ನೀವು ನಿಗ್ರಹಿಸಬೇಕು. ವ್ಯಾಪಾರ ಮಾಡುವವರು ಬಯಸಿದ ಅನುಕೂಲಗಳು ಸಿಗದಿದ್ದರೆ ಸ್ವಲ್ಪ ಕಸಿವಿಸಿಗೊಳ್ಳಬಹುದು. ಕುಟುಂಬದ ಯಾವುದಾದರೂ ಸದಸ್ಯರಿಂದ ನೀವು ಮನ ನೋಯುವ ಸಾಧ್ಯತೆ ಇದೆ. ಆದರೆ ನೀವು ಮೌನದಿಂದ ಇರುವಿರಿ. ಉದ್ಯೋಗದಲ್ಲಿ ಅಪೂರ್ಣ ಕಾರ್ಯಗಳನ್ನು ಪೂರ್ಣ ಮಾಡುವಿರಿ. ಅಧಿಕಾರಿಗಳು ನಿಮ್ಮ ಮೇಲೆ ಇಲ್ಲದ ಆರೋಪಮಾಡಬಹುದು. ಯಾರದೋ ಕಾರ್ಯಕ್ಕೆ ನೀವು ಶ್ರಮಿಸಬೇಕಾದೀತು. ಬೆಲೆಬಾಳುವ ವಸ್ತುಗಳು ಕಣ್ಮರೆಯಾಗಬಹುದು. ಮಂಗಲ ಕಾರ್ಯವನ್ನು ಮಾಡಲು ನಿಮಗೆ ಮನಸ್ಸು ಇರುವುದು. ದೈಹಿಕವಾಗಿ ದುರ್ಬಲರಾದಂತೆ ನಿಮಗೆ ಅನ್ನಿಸೀತು. ಬಂಧುಗಳ ಒಡನಾಟದಿಂದ ನೋವನ್ನು ಕಳೆಯುವಿರಿ. ದೇಹದಂಡನೆಯಲ್ಲಿ ಜಾಗರೂಕತೆ ಇರಲಿ. ವಿವಾಹಕ್ಕೆ ಸಂಬಂಧವನ್ನು ನೀವು ಎದುರುನೋಡುವಿರಿ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1