Nitya Bhavishya 16 February: ಈ ರಾಶಿಯವರು ಆಕಸ್ಮಿಕವಾಗಿ ಪ್ರೇಮದಲ್ಲಿ ಬೀಳುವರು, ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು.

ಮೇಷ ರಾಶಿ: ಕುಂಟುತ್ತ ಸಾಗುವ ಉದ್ಯಮವು ನಿಮಗೆ ಬೇಸರವನ್ನು ತರಿಸೀತು. ಅಭಾವ ವೈರಾಗ್ಯದಲ್ಲಿ ನೀವಿರುವಿರಿ. ಕೃಷಿಯಲ್ಲಿ ಆಸಕ್ತಿ ಇದ್ದರೂ ಅದರಲ್ಲಿ ತೊಡಗಿಕೊಳ್ಳುವ ಅವಕಾಶ ಇರದು. ಭೂಮಿಯಲ್ಲಿ ಹೂಡಿಕೆ ಮಾಡುವ ಪ್ರಯತ್ನದಲ್ಲಿ ನೀವಿರುವಿರಿ. ನೌಕರರ ತಪ್ಪಿನಿಂದ ನೀವು ಹಣವನ್ನು ಖರ್ಚು ಮಾಡಬೇಕಾದೀತು. ಕೃಷಿಯಲ್ಲಿ ನಿಮಗೆ ಆಸಕ್ತಿ ಹೆಚ್ಚಾಗುವುದು. ಮಕ್ಕಳು ನಿಮ್ಮಿಂದ ಪ್ರೀತಿಯನ್ನು ಬಯಸುವರು. ಒತ್ತಡ ನಿವಾರಣೆಗೆ ಧ್ಯಾನ ಹಾಗೂ ಯೋಗಾಭ್ಯಾಸವು ಬೇಕಾಗುವುದು. ಅಪರಿಚಿತರು ಆಪ್ತರಾಗುವ ಸಾಧ್ಯತೆ ಇದೆ.‌ ದುರಭ್ಯಾಸಕ್ಕೆ ಅವಕಾಶಗಳು ಬರಲಿದ್ದು ಆಲೋಚಿಸಿ ಮುಂದುವರಿಯಿರಿ. ನಿಮ್ಮ ವರ್ತನೆಯನ್ನು ಕಂಡು ಯಾರಾದರೂ ನಕ್ಕಾರು. ನಿಮ್ಮ‌ ವೇಷಭೂಷಣದ ಬಗ್ಗೆ ಟೀಕಿಸುವರು.ಹೂಡಿಕೆಯ ಬಗ್ಗೆ ಸಂಗಾತಿಯ ನಿಲುವಿಗೆ ಬದ್ಧರಾಗಬೇಲಾದೀತು. ವ್ಯವಹಾರದಲ್ಲಿ ಸಡಿಲಿಕೆ ಬೇಡ.

ವೃಷಭ ರಾಶಿ: ಇಂದು ಹಲವು ದಿನಗಳಿಂದ ಸ್ಥಿರಾಸ್ತಿ ಖರೀದಿಯ ನಿಮ್ಮ ಪ್ರಯತ್ನಗಳು ಫಲಿಸುವುದು. ಉದ್ಯಮಕ್ಕೆ ಸಂಬಂಧಿಸಿದಂತೆ ಹೊಸ ದಿಕ್ಕಿನತ್ತ ನೀವು ಯೋಚಿಸುವುದು ಉತ್ತಮ. ಉದ್ಯೋಗದಲ್ಲಿನ ಆರ್ಥಿಕ ಸಮಸ್ಯೆಗಳು ಹೇಗೋ ಪರಿಹಾರವಾಗುವುದು. ಬಂಧುಗಳಿಂದ ಶುಭ ಸುದ್ದಿ ಸಿಗಲಿದೆ. ಅನಿರೀಕ್ಷಿತವಾಗಿ ಬರುವ ಗೆಲುವಿನಿಂದ ನಿಮಗೆ ಖುಷಿಯಾಗಲಿದೆ. ನಿಂದನೆಗಳು ಸಹಜವೆಂಬಂತೆ ಆಗಲಿದೆ.‌ ನೀವು ಯಶಸ್ಸನ್ನು ಗಳಿಸದಂತೆ ಹಿತಶತ್ರುಗಳು ಅಡ್ಡಗಾಲು ಹಾಕುವಿರಿ. ಆಭರಣದ ವಿಚಾರದಲ್ಲಿ ಜಾಗರೂಕತೆ ಇರಲಿ. ಮನಸ್ಸಿನ ಚಾಂಚಲ್ಯವನ್ನು ನಿಲ್ಲಿಸಲಾಗದು. ಎಲ್ಲರ ಜೊತೆ ಬೆರೆಯುವುದು ಇಷ್ಟವಾಗದು. ಇಂದು ನೀವು ಖುಷಿ ಕೊಡುವ ಕಾರ್ಯವನ್ನು ಮಾತ್ರ ಮಾಡುವಿರಿ.‌ ನಿಮ್ಮ ಸ್ವಭಾವವು ಕೆಲವರಿಗೆ ಇಷ್ಟವಾಗದೇ ಹೋಗುವುದು. ಸ್ವತಂತ್ರವಾಗಿರಲು ನೀವು ಹೆಚ್ಚು ಇಷ್ಟಪಡುವಿರಿ. ಯಾರ ಮಾತನ್ನೂ ಕೇಳದೇ ನಿಮ್ಮದೇ ದಾರಿಯಲ್ಲಿ ಸಾಗುವಿರಿ.

ಮಿಥುನ ರಾಶಿ: ನಿಮಗೆ ಉದ್ಯೋಗ ಬದಲಾವಣೆಯ ಮನಸ್ಸಾಗುವುದು. ದೇವರ ಮೇಲೆ ಭಕ್ತಿಯು ಹೆಚ್ಚಾಗುವುದು. ನಿಮ್ಮ ಕಾರಣಕ್ಕೆ ಬೇರೆಯವರಿಗೆ ಕಷ್ಟವಾಗುವುದು. ನಿಮಗೆ ಏಕಾಂತವು ಬೇಕು ಎನಿಸಬಹುದು. ಸಂಗಾತಿಯ ಮೇಲೆ ಅನುಮಾನವನ್ನು ವ್ಯಕ್ತಪಡಿಸುವಿರಿ. ಅಭಿನಯ ಕ್ಷೇತ್ರದಲ್ಲಿ ನಿಮಗೆ ಅವಕಾಶಗಳು ಸಿಗಲಿವೆ. ನ್ಯಾಯಾಲಯದ ವಿಚಾರವನ್ನು ಬೇಗ ಮುಗಿಸಿಕೊಳ್ಳಲು ಪ್ರಯತ್ನಿಸುವಿರಿ. ಭೋಗವಸ್ತುಗಳ ಖರೀದಿಯನ್ನು ಹೆಚ್ಚು ಮಾಡುವಿರಿ. ಕಛೇರಿಯಲ್ಲಿ ಅನಿರೀಕ್ಷಿತ ಒತ್ತಡವು ಬಂದು ಮುತ್ತಿಕೊಂಡು ದಿಕ್ಕು ತೋಚದಂತೆ ಆಗುವುದು. ದಾಂಪತ್ಯ ಕಲಹವು ಸುಖಾಂತವಾಗಲಿದೆ. ಇಂದು ನಿಮ್ಮ ಸಂತೋಷಕ್ಕೆ ಕಾರಣವಿರದು. ಉದ್ಯೋಗದ ಕಾರಣ ಪ್ರಯಾಣ ಮಾಡುವ ಸನ್ನಿವೇಶವು ಬರಲಿದೆ. ನಿಷ್ಠುರ ಮಾತುಗಳನ್ನು ಆಡುವುದು ಬೇಡ.

ಕರ್ಕ ರಾಶಿ: ನಿಮ್ಮ ವ್ಯಾಪಾರದ ವಿಸ್ತರಣೆಗೆ ಅಡೆತಡೆಗಳು ಬರುವುದು. ನಿಮ್ಮವರೇ ನಿಮ್ಮ ಆಲೋಚನೆಗಳನ್ನು ಇಷ್ಟಪಡುವುದಿಲ್ಲ. ಮಕ್ಕಳಿಂದ ನಿಮಗೆ ಸಹಕಾರವು ಸಿಗದೇಹೋಗಬಹುದು. ಉದ್ಯಮಕ್ಕೆ ನೌಕರರ ಕೊರತೆ ಕಾಣಿಸೀತು. ಸಾಲವನ್ನು ನೀವು ಯೋಗ್ಯತೆಗೆ ಅನುಸಾರವಾಗಿ ಮಾಡಿ. ಸಂಬಂಧಿಕರ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲನ್ನು ಕೇಳುವ ಸ್ಥಿತಿ ಬರಬಹುದು. ವಿದ್ಯಾಭ್ಯಾಸವನ್ನು ಪೂರ್ಣ ಮಾಡಿದ ಸಂತೋಷವು ಸಿಗುವುದು. ನಿಮ್ಮ ಮಾತಿನಿಂದ ಇತರರಿಗೆ ನೋವಾಗುವುದು. ಪ್ರೇಮವು ಅಪಾಯಕ್ಕೆ ಸಿಕ್ಕಿಕೊಳ್ಳಬಹುದು. ವೇತನವನ್ನು ಹೆಚ್ಚಿಸಲು ಅಧಿಕಾರಿಗಳನ್ನು ಕೇಳಿಕೊಳ್ಳುವಿರಿ. ದೂರದ ಬಂಧುಗಳ ಭೇಟಿಯಿಂಸ ನಿಮಗೆ ಸಂತೋಷವಾಗುವುದು. ಸಹೋದ್ಯೋಗಿಗಳ ಜೊತೆ ವಾದವನ್ನು ಮಾಡುವಿರಿ. ವ್ಯವಹಾರದಲ್ಲಿ ಮಾತನಾಡುವಾಗ ನಿಮ್ಮನ್ನು ಅಳೆಯಬಹುದು.

ಸಿಂಹ ರಾಶಿ: ಇಂದು ಆಕಸ್ಮಿಕವಾಗಿ ವಾಹನ ಖರೀದಿಯ ಬಗ್ಗೆ ಆಸಕ್ತಿ ಮೂಡುವುದು. ಆತ್ಮೀಯ ಸ್ನೇಹಿತರ ಜೊತೆ ಮನೋರಂಜನಾ ಕಾರ್ಯಗಳಲ್ಲಿ ಭಾಗವಹಿಸುವಿರಿ. ಶತ್ರುಗಳ ಬಗ್ಗೆ ನಿಮಗೆ ಯಾರಿಂದಲಾದರೂ ಮಾಹಿತಿ ಸಿಗಬಹುದು. ಪ್ರೀತಿಪಾತ್ರರಿಂದ ಆಹ್ವಾನಗಳು ಬರುತ್ತವೆ. ಮುಂಗೋಪದಿಂದ ಕೆಲವರನ್ನು ಕಳೆದುಕೊಳ್ಳಬೇಕಾಗಬಹುದು. ಇನ್ನೊಬ್ಬರಿಗೆ ನಿಮ್ಮಿಂದಾದ ನೋವನ್ನು ಸರಿ‌ ಮಾಡಿಕೊಳ್ಳುವಿರಿ. ಸಾಂತ್ವನದಿಂದ ಸ್ನೇಹವು ಮೊದಲಿನಂತಾಗುವುದು.‌ ನಿಮ್ಮ ಅತಿಯಾದ ನಂಬುಗೆಯು ಇಂದು ಹುಸಿಯಾಗಬಹುದು. ಉದ್ಯಮದ ವಿಷಯದಲ್ಲಿ ಸಲ್ಲದ ಮಾತುಗಳು ಕೇಳಿಬರಬಹುದು.‌ ಸಂಪತ್ತಿನ ಮೇಲೆ ನಿಮಗೆ ಮೋಹವು ಕಡಿಮೆ ಇರುವುದು. ವಂಚಿಸಿದವರಿಗೆ ಪ್ರತಿವಂಚನೆಯನ್ನು ಮಾಡಲು ಸಮಯವನ್ನು ನಿರೀಕ್ಷಿಸುತ್ತಿರುವಿರಿ. ಆಶಿಸ್ತಿನ ಕೆಲಸಕ್ಕೆ ಹಿರಿಯರು ನಿಂದಿಸಬಹುದು.

ಕನ್ಯಾ ರಾಶಿ: ಸಹೋದರರ ಜೊತೆಗಿನ ಮಾತುಗಳು ನಿಮಗೆ ಅಚ್ಚರಿಯಾದೀತು. ಹೊಸ ಜನರನ್ನು ಭೇಟಿಯಾಗುವುದು ನಿಮ್ಮ ಉದ್ಯಮಕ್ಕೆ ಪೂರಕವಾಗಬಹುದು. ವ್ಯಾಪಾರದ ವೃದ್ದಿಯನ್ನು ಒಂದೇ ರೀತಿಯಲ್ಲಿ ಇಟ್ಟುಕೊಳ್ಳಲಾಗದು. ಉದ್ಯೋಗದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಿರುವುದು. ಕೆಲಸವನ್ನು ವೇಗಗೊಳಿಸಬೇಕಾಗುವದು. ಕುಟುಂಬದವರ ಮಾತುಗಳು ಕಿರಿಕಿರಿ ಎನಿಸಬಹುದು. ನಿಮ್ಮ ತಾಳ್ಮೆಯು ಇಂದು ಕಡಿಮೆಯಾಗಿ ಏನಾದರೂ ಹೇಳುವಿರಿ. ಹಣದ ಉಳಿತಾಯದಲ್ಲಿ ಜಿಪುಣರಂತೆ ತೋರುವುದು. ನಿಮಗೆ ನಿರೀಕ್ಷಿತ ಉದ್ಯೋಗವು ಸಿಕ್ಕುವ ಸೂಚನೆ ಬರಲಿದೆ. ಸಾಲವು ಮುಗಿಯುತು ಎಂದುಕೊಳ್ಳುತ್ತಿದ್ದಂತೆ ಇನ್ನೊಂದು ಆರಂಭವಾಗಬಹುದು. ಬಂಧುಗಳಿಂದ ನೀವು ನಿರ್ಲಕ್ಷ್ಯಕ್ಕೆ ಒಳಗಾಗುವಿರಿ. ನಿಮಗೆ ಸಿಕ್ಕ ಅಶುಭ ಸೂಚನೆಯಿಂದ ಭಯವಾಗಬಹುದು.‌

ತುಲಾ ರಾಶಿ: ಇಂದು ಉದ್ಯೋಗದಲ್ಲಿ ಯಾವುದೇ ಆತುರವಿಲ್ಲದೇ ಇರುವಿರಿ. ಆಯಾಸವಾಗುವ ಕೆಲಸದಿಂದ ಹಿಂದೇಟು ಹಾಕುವಿರಿ. ನಿಮಗೆ ಸಹೋದ್ಯೋಗಿಗಳ ಸಹಕಾರವು ಸಿಗಲಿದೆ. ಉದ್ಯಮದಲ್ಲಿ ಕುಟುಂಬದವರ ಸಲಹೆಯನ್ನು ತಿರಸ್ಕರಿಸುವಿರಿ. ಆರ್ಥಿಕ ಪರಿಸ್ಥಿತಿ ತುಂಬಾ ಕಳಪೆಯಾಗಿದೆ ಎಂದು ಅನ್ನಿಸಬಹುದು. ಹತ್ತಿರದ ಸಂಬಂಧದ ಜೊತೆ ವಿವಾದಗಳು ಬೇಡ. ನಿಮ್ಮವರ ಅಶಿಸ್ತಿನ ಕೆಲಸವನ್ನು ನೀವು ಸರಿ ಮಾಡಬೇಕಾಗುವುದು.‌ ಕಾಮಗಾರಿಗಳ ವಿಚಾರದಲ್ಲಿ ದೂರು ಬರಬಹುದು. ಬಳಕೆಯಾಗದ ಭೂಮಿಯಿಂದ ಮಾರಾಟ ಮಾಡಿ ಆದಾಯವನ್ನು ಪಡೆಯುವಿರಿ. ಗೌಪ್ಯವಾಗಿ ನಿಮಗೆ ಹಣವು ಸಿಗಲಿದೆ‌. ಅದನ್ನು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಸಮಯವನ್ನು ನೋಡಿ ನಿಮ್ಮ ವಿಚಾರವನ್ನು ಮೇಲಧಿಕಾರಿಗಳಿಗೆ ಹೇಳಿ. ಮನೆಯಲ್ಲಿ ಇದ್ದು ಕೆಲಸ ಮಾಡುವವರಿಗೆ ಬಂಧನದಂತೆ ಅನ್ನಿಸಬಹುದು. ದಾನದಿಂದ ನಿಮಗೆ ಪ್ರಶಂಸೆಯು ಸಿಗುವುದು.

ವೃಶ್ಚಿಕ ರಾಶಿ: ಕುಟುಂಬದಿಂದ ನಮಗೆ ಅಸಮಾಧಾನವಾಗಬಹುದು. ಎಲ್ಲದಕ್ಕೂ ಕುಹಕವು ನಿಮ್ಮ ನೆಮ್ಮದಿಯನ್ನು ಹಾಳುಮಾಡೀತು. ಸಂಗಾತಿಯ ಜೊತೆ ವಾಗ್ವಾದ ಆಗಬಹುದು. ವೃತ್ತಿಪರರು ಕೆಲಸಗಳಲ್ಲಿ ಮೇಲುಗೈ ಸಾಧಿಸುವರು. ಗೃಹ ನಿರ್ಮಾಣ ವಿಚಾರಗಳು ಕಾರ್ಯರೂಪಕ್ಕೆ ಬಲವಂತವಾಗಿ ತರುವಿರಿ. ಉದ್ಯೋಗದಲ್ಲಿ ನಿಮ್ಮ ಪ್ರತಿಭೆಯಿಂದ ಅನೇಕ ಲಾಭವಾಗಲಿದೆ. ಹಣವು ಹೆಚ್ಚಾಗುತ್ತದೆ ಎಂಬ ಸ್ಥೈರ್ಯವು ಇರುವುದು. ಅಂದುಕೊಂಡ ಕಾರ್ಯವು ಮುಗಿಯುತ್ತ ಇರುವಾಗಲೇ ಯಾರಾದರೂ ಅಡ್ಡಿ ಮಾಡುವರು. ಯಾರನ್ನೋ ಮೆಚ್ಚಿಸಲು ಹೋಗಿ ನಿಮ್ಮ ಸಮಯವು ವ್ಯರ್ಥವಾದೀತು. ಸಂದರ್ಭದಲ್ಲಿ ಎಲ್ಲವೂ ಗೊತ್ತಿದೆ ಎಂದು ತೋರಿಸಿಕೊಳ್ಳುವುದು ನಿಮಗೆ ಕಷ್ಟವಾದೀತು. ಆಪ್ತರ ಜೊತೆಗಿನ ಬಿಚ್ಚು ಮನಸ್ಸಿನ ಮಾತುಕತೆಯಿಂದ ನಿಮ್ಮ ಭಾರವಾದ ಮನಸ್ಸು ಹಗುರಾಗುವುದು. ಯಾವುದಾದರೂ ವಿಭಾಗಕ್ಕೆ ಮುಖ್ಯಸ್ಥರಾಗಲು ಬಯಸುವಿರಿ.

ಧನು ರಾಶಿ: ಎಲ್ಲರ ಬೆಂಬಲದಿಂದ ಮನೆಯಲ್ಲಿ ಒಳ್ಳೆಯ ಕೆಲಸಗಳು ನಡೆಯುವುದು. ಓಡಾಟದಿಂದ ನಿಮಗೆ ಆಗಬೇಕಾದ ಕಾರ್ಯಗಳು ಆಗುವುದು. ನಿರುದ್ಯೋಗಿಗಳ ಶ್ರಮಕ್ಕೆ ತಕ್ಕ ಪ್ರತಿಫಲವು ಸಿಕ್ಕಿ ಸಂತೋಷವಾಗುವುದು. ಹೊಸ ಜನರ ಭೇಟಿಯಿಂದ ಸಂತಸವಾಗಲಿದೆ. ಉದ್ಯೋಗದಲ್ಲಿ ನಿಮಗೆ ಉತ್ತೇಜನ ನೀಡಬಹುದು. ಹಲವು ದಿನಗಳಿಂದ ಉಳಿದ ಕಾಮಗಾರಿಗಳು ಪೂರ್ಣಗೊಳ್ಳುತ್ತವೆ. ಅವಿವಾಹಿತರು ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಿರಿ. ಆಕಸ್ಮಿಕವಾಗಿ ಪ್ರೇಮದಲ್ಲಿ ಬಿದ್ದುಬಿಡುವಿರಿ. ನೂತನ ವಸ್ತುಗಳನ್ನು ಪಡೆದು ಸಂತೋಷಪಡುವಿರಿ. ಗೌರವಾದಿಗಳು ಸಿಕ್ಕಿ ಸಂತೋಪಡುವಿರಿ. ನೀವು ಅಂದುಕೊಂಡ ಹಾಗೆಯೇ ನಡೆಯದು. ಅಮೂಲ್ಯ ವಸ್ತುಗಳನ್ನು ಎಲ್ಲಿಯೋ ಇಟ್ಟು ಹುಡುಕುವಿರಿ. ಧಾರ್ಮಿಕ ಆಚರಣೆಗಳನ್ನು ಹೆಚ್ಚು ಮಾಡಲು ಮನಸ್ಸಾಗುವುದು. ನಿಮ್ಮ ವಾಹನವನ್ನು ಚಲಾಯಿಸಲು ಕಷ್ಟವಾದೀತು. ನಿಮ್ಮವರು ನಿಮ್ಮ ದೋಷವನ್ನೇ ಹೆಚ್ಚು ಹೇಳುವರು.

ಮಕರ ರಾಶಿ: ಇಂದು ನೀವು ವ್ಯವಹಾರದಲ್ಲಿ ಒತ್ತಡವನ್ನು ಬಯಸುವಿರಿ. ಇದರಿಂದ ಕೆಲಸಗಳು ಆಗಬಹುದು. ಮಿತ್ರರ ಜೊತೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಉಂಟಾಗಿ ಬಗೆಹರಿಯಬಹುದು. ಆರ್ಥಿಕ ವಿಷಯಗಳಿಗೆ ಚಿಂತಿತರಾಗುವಿರಿ. ಉದ್ಯೋಗಗಳಲ್ಲಿ ಸ್ತ್ರೀಯರಿಂದ ಅಪಮಾನವಾಗಬಹುದು. ತುರ್ತು ಪ್ರಯಾಣದ ಸೂಚನೆ ಇರುವುದು. ಹೊಸ ಸಾಲಗಳನ್ನು ಮಾಡಬೇಕಾಗಬಹುದು. ವ್ಯಾಪಾರಗಳು ಸುಗಮವಾಗಿ ನಡೆಯುತ್ತವೆ. ಮಿತ್ರರಿಂದ ಭೂಮಿಯ ಖರೀದಿಯ ವಾರ್ತೆಯು ಇರುವುದು. ಸ್ತ್ರೀಯರು ತಮ್ಮ ಕಾರ್ಯದಲ್ಲಿ ಮುಳುಗುವರು. ತಮ್ಮ ಉದ್ಯಮವನ್ನು ಪ್ರಭಾವೀ ವ್ಯಕ್ತಿಗಳ ಸಹಾಯದಿಂದ ಜನಪ್ರಿಯ ಗೊಳಿಸಿಕೊಳ್ಳುವರು. ಒಂಟಿತನವು ಇಷ್ಟವಾಗುವುದು. ಕುರುಡು ನಂಬಿಕೆಯಿಂದ ನಿಮಗೆ ಇಷ್ಟವಾಗುವುದು. ಕುಟುಂಬದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಗೌಪ್ಯವಾಗಿ ಇರುವುದು. ಸಿಟ್ಟನ್ನು ಯಾರದೋ ಮೇಲೆ ತೀರಿಸಿಕೊಂಡು ಸಮಾಧಾನಪಡುವಿರಿ.

ಕುಂಭ ರಾಶಿ: ಈ ದಿನ ನೀವು ಅನಿರೀಕ್ಷಿತವಾಗಿ ಸಮಾಜದ ಪ್ರಮುಖ ವ್ಯಕ್ತಿಗಳ ಭೇಟಿಯಾಗಲಿದೆ. ಆತ್ಮೀಯರಿಂದ ಆರ್ಥಿಕ ಲಾಭದ ಸಲಹೆಯು ಸಿಗಬಹುದು. ಉದ್ಯೋಗಗಳು ಸುಗಮವಾಗಿ ಸಾಗುವುದು. ಅಪರಿಚಿತರು ನಿಮಗೆ ಒಳ್ಳೆಯ ಸುದ್ದಿಯನ್ನು ನೀಡುವರು. ಹೊಸ ವಾಹನ ಖರೀದಿಯ ಪ್ರಯತ್ನವು ಫಲಪ್ರದವಾಗಲಿದೆ. ಇಂದಿನ ಖರ್ಚನ್ನು ಕಂಡು ಚಿಂತಿತರಾಗುವುದು ಬೇಡ. ಸರಳತೆಯನ್ನು ರೂಢಿಸಿಕೊಳ್ಳುವ ಅವಶ್ಯಕತೆ ಇರುವುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಭೂಮಿಯ ಉತ್ಪನ್ನದಿಂದ ಕೆಲವು ಅದಾಯವು ಸಿಗಬಹುದು. ಹೊಸ ಸಾಲಕ್ಕೂ ಮೊದಲು ಹಳೆಯದನ್ನು ದೂರಮಾಡಿಕೊಳ್ಳುವುದು ಉತ್ತಮ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಏಕಾಗ್ರತೆಯು ಇಲ್ಲವಾಗಬಹುದು. ಮಾತಿನಲ್ಲಿ ಪೇಲವ ಬೇಡ. ದೃಢತೆಯಿಂದ ಮಾತನಾಡಿ.

ಮೀನ ರಾಶಿ: ಈ ದಿನದ ಕೆಲಸದಲ್ಲಿ ಅಧಿಕಾರಿಗಳ ಜೊತೆ ಎಚ್ಚರಿಕೆ ಅಗತ್ಯ. ದೂರ ಪ್ರಯಾಣವನ್ನು ಮುಂದೂಡುವುದು ಉಚಿತ. ಕೈಗೆತ್ತಿಕೊಂಡ ಕಾರ್ಯವು ವಿಳಂಬವಾಗಬಹುದು. ವ್ಯಾಪಾರಗಳು ಮಂದಗತಿಯಲ್ಲಿದ್ದು ನಿಮಗೆ ಸಮಾಧಾನವಿರದು. ಹಣಕಾಸಿನ ವಿಷಯಗಳಿಂದ ನಿರಾಶೆಯು ಬರಬಹುದು. ಆರೋಗ್ಯದ ಬಗ್ಗೆ ನಿಗಾ ಅಗತ್ಯ. ತಾಯಿಯ ಕಡೆಯಿಂದ ನಿಮಗೆ ಆಸ್ತಿಯು ಲಭಿಸುವುದು. ಅಂದುಕೊಂಡ ಕಾರ್ಯಕ್ಕೆ ಬೆಂಬಲು ಪೂರ್ಣವಾಗಿ ಸಿಗದು.‌ ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬಬೇಕು ಎಂಬುದು ಗೊತ್ತಾಗದು. ಅತಿಥಿ ಸತ್ಕಾರದಿಂದ ಖುಷಿಯಾಗುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಆಸೆ ಇರುವುದು. ಪತ್ನಿಯ ಅನವಶ್ಯಕ ಖರ್ಚಿಗೆ ಕಡಿವಾಣವನ್ನು ಹಾಕಬೇಕಾದೀತು. ಇದಕ್ಕಾಗಿ ಕೂಗಾಡಿಕೊಳ್ಳಬಹುದು. ಮಕ್ಕಳ ಬಗ್ಗೆ ನಿಮ್ಮ ಲಕ್ಷ್ಯವು ಇರಲಿ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *