ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ದಶಮೀ, ನಿತ್ಯನಕ್ಷತ್ರ : ಆರ್ದಾ, ಯೋಗ: ವಿಷ್ಕಂಭ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 56 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 6 ಗಂಟೆ 37 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:24 ರಿಂದ 09:51ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:19 ರಿಂದ ಮಧ್ಯಾಹ್ನ12:47ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:14 ರಿಂದ 03:42ರ ವರೆಗೆ.
ಮೇಷ ರಾಶಿ: ನಿಮಗೆ ಅವಕಾಶಗಳು ಸಿಗಲಿಲ್ಲ ಎಂದು ಬೇಸರಿಸುವುದು ಬೇಡ. ಸಿಕ್ಕಿದ್ದನ್ನು ಸದುಪಯೋಗ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿ. ಮಾತನ್ನು ಉಳಿಸಿಕೊಂಡು ಗೆಲ್ಲುವಿರಿ. ಸತತ ಪ್ರಯತ್ನದಿಂದ ಸಮಾಜದಲ್ಲಿ ಗೌರವವವು ಸಿಗಲಿದೆ. ಅದೃಷ್ಟದಿಂದ ಆರೋಪವು ದೂರವಾಗುವುದು. ವಿದ್ಯಾರ್ಥಿಗಳ ಸಾಧನೆಯ ಹಾದಿಯು ಸುಗಮವಾಗುವುದು. ಸ್ವಂತ ಭೂಮಿ ಅಥವಾ ಮನೆಯನ್ನು ಕೊಳ್ಳುವ ವಿಚಾರವೊರುವುದು. ಮನದಲ್ಲಿ ಆತಂಕವಿದ್ದರೂ ಶಾಂತಿಯಿಂದ ವರ್ತಿಸುವಿರಿ. ನಿಮ್ಮ ದೌರ್ಬಲ್ಯವನ್ನು ನೀವು ಸಹಾಕರಾತ್ಮಕವಾಗಿ ಪಡೆದುಕೊಂಡು ಮುನ್ನಡೆಯಬಹುದು. ಅತಿಯಾದ ನಿದ್ರೆಯಿಂದ ಮನಸ್ಸು ಕುಗ್ಗುವುದು. ಮನೆಯ ವಿಷಮ ಸ್ಥಿತಿಯನ್ನು ನಿಭಾಯಿಸುವಿರಿ. ಸಂಗಾತಿಗೆ ನಿಮ್ಮ ವಾಸ್ತವದ ಉದ್ಯೋಗದ ವಾಸ್ತವ ಚಿತ್ರಣವನ್ನು ಕೊಡುವಿರಿ. ಆಕಸ್ಮಿಕವಾಗಿ ಸ್ನೇಹಿತರಿಂದ ಉಡುಗೊರೆ ಸಿಗಲಿದೆ.
ವೃಷಭ ರಾಶಿ: ಇಂದು ಮನಬಿಚ್ಚಿ ಮಾತನಾಡಿ ನಿಮ್ಮ ಬಯಕೆಯನ್ನು ಈಡೇರಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಬಡ್ತಿ ದೊರೆತು ವಿದೇಶಕ್ಕೆ ತೆರಳಬಹುದು. ಮಕ್ಕಳಿಗೆ ಪ್ರಸಿದ್ಧ ಸಂಸ್ಥೆಯ ಅಧಿಕಾರವು ಸಿಗಬಹುದು. ಕುಟುಂಬದಲ್ಲಿ ಬೇಸರದ ಸನ್ನಿವೇಶವು ನಡೆಯಲಿದೆ. ತಾಯಿಗೆ ಸೇರಬೇಕಾಗಿದ್ದ ಆಸ್ತಿಯಲ್ಲಿ ವಿವಾದ ಇರುತ್ತದೆ. ನಿಮ್ಮ ಮನಸ್ಸಿಗೆ ಒಪ್ಪುವಂತಹ ಕೆಲಸಗಳನ್ನು ಮಾತ್ರ ಮಾಡಿ. ನಿರ್ಧಾರವನ್ನು ಬದಲಿಸುವುದು ಸರಿಕಾಣದು. ಆಸ್ತಿಯ ವಿಚಾರದಲ್ಲಿ ನೀವು ಆಸಕ್ತಿಯನ್ನು ಕಳೆದುಕೊಳ್ಳುವಿರಿ. ಯಾರಾದರೂ ನಿಮ್ಮ ಕಿವಿಕಚ್ಚಬಹುದು. ನಿಮ್ಮ ಮನಸ್ಸು ಹೊಸ ಪರಿವರ್ತನೆಯ ಕಡೆ ಹೊರಳುವುದು. ಅಶುಭವಾರ್ತೆಗೆ ನೀವು ಕಿವಿಯಾಗಬೇಕಾದೀತು. ನಿಮ್ಮ ನೈಜ ಸ್ವಭಾವವು ಕಾರಣಾಂತರಗಳಿಂದ ಬದಲಾಗಲಿದೆ. ಸುಲಭವಾಗಿ ದೊರೆಯುವುದನ್ನು ಇಷ್ಟಪಡುವುದಿಲ್ಲ. ಒಂಟಿತನವು ನಿಮಗೆ ಅಭ್ಯಾಸವಾಗಲಿದ್ದು ನಿಶ್ಚಿಂತೆಯಿಂದ ಇರುವಿರಿ.
ಮಿಥುನ ರಾಶಿ: ನಿಮ್ಮ ಕಾರ್ಯವಿಧಾನವನ್ನು ಶ್ಲಾಘಿಸುವರು. ತಪ್ಪನ್ನು ಒಪ್ಪಿಕೊಳ್ಳಲಾರಿರಿ. ನಿಮ್ಮ ನಷ್ಟವನ್ನು ಮರೆಮಾಚಲು ತಂತ್ರವನ್ನು ಹೂಡುವಿರಿ. ಕೊಡಬೇಕಾದವರಿಗೆ ಗೌರವವನ್ನು ಕೊಡಿ. ನಿಮ್ಮ ಶ್ರಮದಿಂದ ಉನ್ನತ ಸ್ಥಾನವು ಸಿಗಲಿದೆ. ಮಕ್ಕಳ ಸಹಕಾರದಿಂದ ವಿದೇಶಕ್ಕೆ ಹೋಗುವಿರಿ. ಯಶಸ್ಸು ಪಡೆಯಲು ಇತರರಿಗೆ ಸಹಾಯ ಮಾಡುವಿರಿ. ನಿಧಾನಗತಿಯಲ್ಲಿ ಕೆಲಸವನ್ನು ಆರಂಭಿಸುವಿರಿ. ಪ್ರಯಾಣವೊಂದನ್ನು ಮುಂದೂಡಿ. ಗೃಹನಿರ್ಮಾಣದ ವಸ್ತುಗಳನ್ನು ಮಾರಾಟ ಮಾಡುವವರು ಅಧಿಕ ಲಾಭವನ್ನು ಪಡೆಯುವರು. ಹೊಸ ಉದ್ಯಮದ ಸಲುವಾಗಿ ಉದ್ಯಮಿಗಳನ್ನು ಭೇಟಿ ಮಾಡುವಿರಿ. ಸಾಲವನ್ನು ಮಾಡಬೇಕಾಗಿಬರಬಹುದು. ಸಹೋದರನಿಂದ ಯಾವ ಸಹಕಾರವನ್ನು ನಿರೀಕ್ಷಿಸದೇ ಕಾರ್ಯಪ್ರವೃತ್ತರಾಗುವಿರಿ. ಇರುವುದನ್ನು ಇದ್ದಂತೆ ಹೇಳುವುದು ಇನ್ನೊಬರಿಗೆ ಆಗಿಬಾರದು. ನಿಮ್ಮ ಸ್ವಭಾವವನ್ನು ಮರೆಮಾಚುವುದು ಕಷ್ಟಸಾಧ್ಯ. ಅಚಾತುರ್ಯದಿಂದ ತಪ್ಪು ನಡೆಯಬಹುದು. ಹಳೆಯ ಹೂಡಿಕೆಯು ಪ್ರಯೋಜನಕ್ಕೆ ಬರಲಿದೆ.
ಕರ್ಕ ರಾಶಿ: ವಿದ್ಯಾಭ್ಯಾಸದಲ್ಲಿ ಉನ್ನತ ಸ್ವರವನ್ನು ಮುಟ್ಟುವಿರಿ. ಜೀವನದಲ್ಲಿ ಅಸಾಧ್ಯವೆಂಬುದು ಯಾವುದೂ ಇಲ್ಲ ಎಂದು ತಿಳಿಯಿರಿ. ಸಂತಾನದ ಲಾಭವು ನಿಮ್ಮ ಸಂತೋಷವನ್ನು ದ್ವಿಗುಣ ಮಾಡುವುದು. ವಂಶದ ಹಿರಿಯರಿಗೆ ಸೇರಿದ ಆಸ್ತಿಯಲ್ಲಿನ ಪಾಲು ದೊರೆಯುತ್ತದೆ. ಎಡೆಬಿಡದ ಕಾರ್ಯಗಳ ನಡುವೆ ವಿಶ್ರಾಂತಿ ಬೇಕಾದೀತು. ಅವಶ್ಯಕತೆ ಇದ್ದಲ್ಲಿ ಉದ್ಯೋಗ ಬದಲಿಸಬಹುದು. ಹಣಕಾಸಿನ ವಿಚಾರದಲ್ಲಿ ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ನೀವು ಎಲ್ಲವನ್ನು ತಿಳಿದವರಂತೆ ನಿಮ್ಮ ನಡವಳಿಕೆ ಇರುವುದು. ಯಾರದೋ ತಪ್ಪಿನಿಂದ ಅಕಸ್ಮಾತ್ ಆಗಿ ವಾಹನದಿಂದ ಬೀಳುವ ಸಾಧ್ಯತೆ. ಸಭ್ಯತೆಯ ಮಾತಿನಿಂದ ನೀವು ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಕಾರ್ಯಕ್ಷೇತ್ರದಲ್ಲಿ ಹೆಚ್ಚು ಸಮಯ ಕೆಲಸವನ್ನು ಮಾಡಬೇಕಾಗುವುದು. ನೂತನ ವಸ್ತ್ರಗಳನ್ನು ಖರೀದಿಸುವಿರಿ. ಭೂಮಿಯ ವ್ಯವಹಾರದಲ್ಲಿ ಪೂರ್ಣವಾಗಿ ಇಂದು ತೊಡಗಿಕೊಳ್ಳುವಿರಿ. ಪಾಲುದಾರಿಕೆಯಿಂದ ನಿಮಗೆ ಉಪಯೋಗವಾಗಲಿದೆ.
ಸಿಂಹ ರಾಶಿ: ನಿಮಗೆ ಇಂದು ಆರೋಗ್ಯದಲ್ಲಿ ಏರಿಳಿತವು ಕಾಣಿಸಬಹುದು. ನಿಮ್ಮ ಜವಾಬ್ದಾರಿಯನ್ನು ಮತ್ತೆ ಪಡೆಯುವಿರಿ. ಇಂದು ಅನಾಯಾಸವಾಗಿ ಆದಾಯ ದೊರೆಯುತ್ತದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟ ತಲುಪುವುದು ನಿಮಗೆ ಖುಷಿ ಕೊಡುವುದು. ಸಂಗಾತಿಯ ಸಹಕಾರದಿಂದ ನೀವು ಗೆಲುವಾಗಿ ಇರುವಿರಿ. ಪಿತ್ರಾರ್ಜಿತ ಆಸ್ತಿಯನ್ನು ನ್ಯಾಯಯುತವಾಗಿ ಕೇಳಿ. ಭೂ ಮಾರಾಟದಿಂದ ಲಾಭವನ್ನು ಗಳಿಸುವಿರಿ. ಎಲ್ಲರ ಜೊತೆ ಪ್ರೀತಿ ವಿಶ್ವಾಸದಿಂದ ಬೆರೆಯುವಿರಿ. ಗೌರವವಿಲ್ಲದೆ ಕಡೆ ಹೋಗಲು ನೀವು ಬಯಸುವುದಿಲ್ಲ. ಇನ್ನೊಬ್ಬರಿಗೆ ಸಹಾಯ ಮಾಡಲು ಕೂಡಿಟ್ಟ ಹಣವನ್ನು ತೆಗೆಯಬೇಕಾದೀತು. ಕಳೆದ ಸಮಯವನ್ನು ಮೆಲುಕು ಹಾಕುವಿರಿ. ಯಾರ ಜೊತೆಯೂ ಅಸಂಬದ್ಧ ಚರ್ಚೆಗೆ ಹೋಗುವುದು ಬೇಡ. ನೀವು ಕುಟುಂಬದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಬಯಸುವಿರಿ. ನಿಮ್ಮ ಸಂಗಾತಿಯ ಮಾತುಗಳಿಗೆ ಪ್ರಾಮುಖ್ಯತೆ ನೀಡಿ. ನಿಮ್ಮ ಕಾರಣದಿಂದಲೇ ನೊಂದಿರಲೂ ಸಾಕು.
ಕನ್ಯಾ ರಾಶಿ: ಇಂದು ನೀವು ಎಲ್ಲರ ಜೊತೆ ಸ್ನೇಹದಿಂದ ಇರುವಿರಿ. ಕೆಲಸ ಕಾರ್ಯದಿಂದ ಸಮಾಜದಲ್ಲಿ ಗುರುತಿಸುವಿರಿ. ವಿದ್ಯಾರ್ಥಿಗಳ ಬಗ್ಗೆ ಯೋಚಿಸದೆ ಕರ್ತವ್ಯದಲ್ಲಿ ಭ್ರಷ್ಟರಾಗುವಿರಿ. ಕೌಟುಂಬಿಕ ಕಾರ್ಯಗಳಲ್ಲಿ ತೊಡಗುವುದು ನಿಮಗೆ ಖುಷಿಯ ವಿಚಾರವಾಗಲಿದೆ. ಉತ್ತಮ ಸಂಸ್ಥೆಯ ನೇತೃತ್ವ ಸಿಗುವ ಸಾಧ್ಯತೆ ಇದೆ. ಸಂತೃಪ್ತಿಯ ಜೀವನವು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಕೃಷಿ ಉತ್ಪನ್ನಗಳ ವಹಿವಾಹಿಟಿನಿಂದ ಆದಾಯು ಇರುವುದು. ಅಶಿಸ್ತಿನಿಂದ ನಿಮಗೆ ಕೆಟ್ಟ ಹೆಸರು ಬರಬಹುದು. ಸಂಕುಚಿತ ಸ್ವಭಾವವನ್ನು ದೂರ ಮಾಡಿಕೊಳ್ಳುವುದು ಉತ್ತಮ. ವಾಹನ ಸಂಚಾರದಲ್ಲಿ ಅಡಚಣೆ ಆಗಲಿದೆ. ನಿದ್ರೆಯು ಸರಿಯಾಗದೇ ಮನಸ್ಸು ಭಾರವಾಗಬಹುದು. ಇಷ್ಟವಿಲ್ಲದ ವೃತ್ತಿಯನ್ನು ಅವಲಂಬಿಸಿ ಕಷ್ಟಪಡುವಿರಿ. ಇನ್ನೊಬ್ಬರ ವಿಚಾರಕ್ಕೆ ತೊಂದರೆಯನ್ನು ತೆಗೆದುಕೊಳ್ಳುವಿರಿ. ಸಹೋದ್ಯೋಗಿಗಳ ಅಸಹಕಾರವು ಅವರ ಮೇಲೆ ದ್ವೇಷವನ್ನು ಮೂಡಿಸಬಹುದು.
ತುಲಾ ರಾಶಿ: ಉದ್ಯೋಗದಲ್ಲಿ ನಿಮಗಿರುವ ಆತಂಕವು ಕಡಿಮೆಯಾಗುವುದು. ನಿಮ್ಮ ಪ್ರತಿಯೊಂದು ವಿಚಾರವನ್ನು ಟೀಕಿಸಿಯಾರು. ಸ್ವತಂತ್ರವಾಗಿ ಇಂದಿನ ಕಾರ್ಯವನ್ನು ನೀವು ನಿರ್ವಹಿಸುವಿರಿ. ನೂತನ ವಾಹನವನ್ನು ಖರೀದಿಸುವಿರಿ. ಕುಟುಂಬದಲ್ಲಿ ಸಾಮರಸ್ಯವು ಕಾಣಿಸುವುದು. ಭೂಮಿಯ ವ್ಯಹಾರದ ಮಧ್ಯಸ್ಥಿಕೆಯಿಂದ ಆದಾಯವು ಇರುವುದು. ಮನಸಿಗೆ ಹಿತವಾದ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುವಿರಿ. ಉದ್ಯೋಗಕ್ಕಾಗಿ ಪರದಾಡುತ್ತಿರುವವರು ಉತ್ತಮ ಉದ್ಯೋಗವನ್ನು ಪಡೆದುಕೊಳ್ಳುವಿರಿ. ವ್ಯಾಪಾರಸ್ಥರು ಹೊಸತನ್ನು ಮಾಡಲು ಇಚ್ಛಿಸುವಿರಿ. ಈಗಿನ ಪರಿಸ್ಥಿತಿಯಲ್ಲಿ ಬದಲಾವಣೆ ಬೇಕೆನಿಸುವುದು. ನಿಮ್ಮ ಶ್ರಮದ ಬಗ್ಗೆ ಕಹಿಯಾದ ಮಾತುಗಳು ಕೇಳಿಬರಬಹುದು. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು ಹಾಕುವಿರಿ. ಅಪರಿಚಿತ ಕರೆಗಳು ನಿಮಗೆ ಹಿಂಸೆಯನ್ನು ಕೊಡಬಹುದು. ಪಾಲುದಾರಿಕೆಯಲ್ಲಿ ನಿಮಗೆ ಪೂರ್ಣ ಸಮಾಧಾನ ಇರದು.
ವೃಶ್ಚಿಕ ರಾಶಿ: ಇಂದು ನೀವು ಸಂಯಮದಿಂದ ವರ್ತಿಸುವುದು ಅನಿವಾರ್ಯ. ದುಡುಕಿ ಅಪಯಶಸ್ಸನ್ನು ತಂದುಕೊಳ್ಳಬೇಡಿ. ಉದ್ಯೋಗವನ್ನು ಬದಲಾಯಿಸುವ ಸಾಧ್ಯತೆ ಇದೆ. ಅಗಲವು ದಿನಗಳ ಭೂವಿವಾದಕ್ಕೆ ಅಂತ್ಯ ಸಿಗಲಿದೆ. ವ್ಯಾಪಾರದಲ್ಲಿ ಸ್ಪರ್ದೆಯು ಆರಂಭವಾಗುವುದು. ಅದೃಷ್ಟವನ್ನು ಎದುರು ನೋಡುವಿರಿ. ಮಕ್ಕಳ ಜೊತೆಯಲ್ಲಿ ಸಂತಸದಿಂದ ಕಾಲಕಳೆಯುವಿರಿ. ಕುಟುಂಬದ ಹಿರಿಯರ ಜೊತೆಯಲ್ಲಿ ವಾಗ್ವಾದ ಇರುತ್ತದೆ. ಆತ್ಮೀಯರಿಗೆ ಆರ್ಥಿಕ ಸಹಾಯ ಮಾಡುವಿರಿ. ಬಹಳ ದಿನಗಳಿಂದ ಸ್ಥಗಿತಗೊಂಡ ಕೆಲಸಗಳೂ ಪೂರ್ಣಗೊಳ್ಳುತ್ತವೆ. ಸಣ್ಣ ವ್ಯಾಪಾರಿಗಳು ವ್ಯವಹಾರ ಹೆಚ್ಚಳದ ಬಗ್ಗೆ ಗಮನಹರಿಸಬೇಕು. ಬಹಳ ದಿನಗಳಿಂದ ಕಾಣಿಸಿಕೊಳ್ಳದ ನೋವು ಕಾಣಿಸಿಕೊಳ್ಳಬಹುದು. ಚಿಂತಿತ ಕಾರ್ಯವನ್ನು ಪೂರೈಸಲು ನಿಮಗೆ ಬುದ್ಧಿಯು ಸೂಚಿಸದು. ಆಸ್ತಿಯನ್ನು ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗಬೇಕಾದೀತು. ಧಾರ್ಮಿಕ ಆಚರಣೆಯಲ್ಲಿ ವಿಶ್ವಾಸವು ಕಡಿಮೆಯಾಗಲಿದೆ.
ಧನು ರಾಶಿ: ಇಂದು ನಿಮ್ಮ ಖರ್ಚುಗೆ ಸಮಾನವಾದದ ಆದಾಯ ಇರುತ್ತದೆ. ಮನೆಗೆ ಅವಶ್ಯಕವಾದ ಆಕರ್ಷಕ ವಸ್ತುಗಳನ್ನು ಖರೀದಿಸಲು ಮುಂದಾಗುವಿರಿ. ಜಾಗರೂಕತೆಯಿಂದ ಕಾರ್ಯದಲ್ಲಿ ಮಗ್ನರಾಗುವಿರಿ. ಭವಿಷ್ಯದ ಬಗ್ಗೆ ಕಾಳಜಿಯೂ ಗೊಂದಲವೂ ಇರುತ್ತದೆ. ಗೃಹ ನಿರ್ಮಾಣಕ್ಕೆ ಭೂಮಿಯ ಲಾಭವಾಗವುದು. ಸಂಗಾತಿಯ ಬಗ್ಗೆ ಇದ್ದ ಬೇಸರವು ಮಾಯವಾಗಲಿದೆ. ಕೆಲಸದ ಬಗ್ಗೆ ಉತ್ಸಾಹದಿಂದ ಇರಬೇಕು. ಆತ್ಮವಿಶ್ವಾಸದ ಕೊರತೆಯಿಂದ ನಿಮ್ಮ ಕಾರ್ಯವು ವಿಳಂಬವಾಗಬಹುದು. ನೀವು ಉದ್ಯೋಗವನ್ನು ವಿನಮ್ರಭಾವದಿಂದ ನಡೆಸುವಿರಿ. ಮಕ್ಕಳ ಅತಿಯಾದ ಮಾತು ನಿಮಗೆ ಮುಜುಗರ ತಂದೀತು. ನಿಮ್ಮ ಶ್ರಮವು ದುರುಪಯೋಗವಾಗುವುದು. ದೂರಪ್ರಯಾಣದಿಂದ ನಿಮಗೆ ಖರ್ಚಾಗುವುದು ಗೊತ್ತಾಗದೇ ಹೋಗಬಹುದು. ನ್ಯಾಯಸಮ್ಮತ ಮಾರ್ಗದಲ್ಲಿ ನೀವು ಇರುವುದು ಸೂಕ್ತ. ಕಲಾವಿದರು ಹೆಚ್ಚಿನ ಅವಕಾಶವವನ್ನು ಬಳಸಿಕೊಳ್ಳುವರು. ಹಿರಿಯರ ಜೊತೆ ಔಚಿತ್ಯ ರೀತಿಯಿಂದ ವ್ಯವಸ್ಥೆ ವ್ಯವಹರಿಸಿ.
ಮಕರ ರಾಶಿ: ಇಂದು ಕುಟುಂಬದ ತೊಂದರೆಗಳು ಕಡಿಮೆಯಿರುವ ಕಾರಣ ಮನಸ್ಸು ನಿರಾಳವಾಗಿ ಇರುವುದು. ನಿಮಗೆ ಕೊಟ್ಟ ಜವಾಬ್ದಾರಿಯಲ್ಲಿ ಹತ್ತಾರು ಬದಲಾವಣೆಗಳು ಆಗಲಿದ್ದು ನಿಮಗೆ ಬೇಸರವಾಗುವುದು. ಆದಾಯದಲ್ಲಿ ಅನಿರೀಕ್ಷಿತ ಹೆಚ್ಚಳ ಕಂಡು ಸಂತೋಷವಾಗುವುದು. ಸರ್ಕಾರದ ಸಹಾಯದಿಂದ ವ್ಯಾಪಾರವು ಆರಂಭವಾಗುವುದು. ಮನಸ್ಸು ಒಳ್ಳೆಯದಾದರೂ ದುಡುಕಿ ಮಾತನಾಡಿದರೆ ಕೆಟ್ಟದ್ದಾದೀತು. ಸಾಲದ ವ್ಯವಹಾರದಿಂದ ದೂರವಿರಿ. ಮಕ್ಕಳು ಉತ್ಸಾಹದಿಂದ ದಿನವನ್ನು ಪ್ರಾರಂಭಿಸಲಿದ್ದು ಅವರಿಗೆ ಕೊಡಬೇಕಾದ ತಿಳಿವಳಿಕೆಯನ್ನು ಆಗಲೇ ಕೊಡುವುದು ಉತ್ತಮ. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಪ್ರಯಾಣದಲ್ಲಿ ತೊಂದರೆ ಬರಬಹುದು. ಯಾರದೋ ಪ್ರಭಾವವನ್ನು ಬಳಸಿ ನೀವು ಕೆಲಸವನ್ನು ಮಾಡಿಸಿಕೊಳ್ಳುವಿರಿ.
ಕುಂಭ ರಾಶಿ: ನಿಮ್ಮ ಜೀವನದಲ್ಲಿನ ಹೊಸ ಬದಲಾವಣೆಯು ಖುಷಿಕೊಡುವುದು. ಹಠದ ಸ್ವಭಾವದ ಕಾರಣ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವಿರಿ. ಕಲೆಗಳ ಬಗ್ಗೆ ಹೆಚ್ಚು ಆಸಕ್ತಿ ಇರುವುದು. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ನಿರೀಕ್ಷಿಸಬಹುದು. ದಂಪತಿಗಳ ನಡುವೆ ಉತ್ತಮ ಅನ್ಯೋನ್ಯತೆ ಸಾಧಾರಣವಾಗಿ ಇರುವುದು. ಪ್ರವಾಸ ಮಾಡಲು ಸಾದ್ಯವಾಗುವುದಿಲ್ಲ. ಉದ್ಯಮಿಗಳು ಹೂಡಿಕೆಯ ಬಗ್ಗೆ ಚಿಂತಾಮಗ್ನರಾಗುವರು. ಅಂದುಕೊಂಡಿದ್ದಕ್ಕಿಂತ ಖರ್ಚು ಅಧಿಕವಾಗಿದ್ದು ಗಳಿಕೆಯ ಬಗ್ಗೆ ಆಲೋಚಿಸುವಿರಿ. ಧಾರ್ಮಿಕ ಕಾರ್ಯದಲ್ಲಿ ತೊಡಗಿರುವವರಿಗೆ ಆದಾಯವು ಹೆಚ್ಚು ಇರಲಿದೆ. ಕುಟುಂಬದ ಪೋಷಣೆಯಲ್ಲಿ ಇಂದು ಸಹಭಾಗಿತ್ವ ಇರುವುದು. ವೃತ್ತಿಯ ಸ್ಥಳದಲ್ಲಿ ತೇಜೋವಧೆಯಾಗುವ ಸಂದರ್ಭವು ಬರಬಹುದು. ಸ್ನೇಹಿತರು ನಿಮ್ಮನ್ನು ದೂರವಿಟ್ಟಾರು.
ಮೀನ ರಾಶಿ: ಇಂದು ನಿಮ್ಮ ಕಾರ್ಯಗಳಲ್ಲಿ ಹಿನ್ನಡೆ ಇರುತ್ತದೆ. ಧೃತಿಗೆಡದೇ ಮುಂದುವರಿಯಬೇಕು. ಹನಿಗೂಡಿದರೆ ಹಳ್ಳ ಎಂಬ ಮಾತು ನೆನಪಿರಲಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಅನವಶ್ಯಕವಾದ ಮಾನಸಿಕ ಒತ್ತಡಕ್ಕೆ ಸಿಲುಕುವಿರಿ. ಕೌಟುಂಬಿಕ ಜೀವನದಲ್ಲಿ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಎದುರಾಗುತ್ತವೆ. ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ಸಮಾನ ಚಿಂತನಶೀಲರ ನಡುವೆ ಸಖ್ಯವಾಗುವುದು. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ. ಸಂಧಾನಕ್ಕೆ ಕರೆದರೆ ಮಾತ್ರ ಹೋಗಿ. ಮನಸ್ಸಿನ ಸೋಮಾರಿತನವು ನಿಮ್ಮ ಕಾರ್ಯವನ್ನು ಹಿಂದಿಕ್ಕುವುದು. ವ್ಯಾಪಾರಸ್ಥರ ಗೌರವ ಹೆಚ್ಚುವುದು. ಇಂದು ವ್ಯವಹಾರಕ್ಕೆ ಉತ್ತಮ ದಿನ. ಗ್ರಾಹಕರಿಗೆ ನಿಮ್ಮ ಅಸಮಾಧಾನವೂ ಆಗುವುದು. ಇಂದು ಜ್ಞಾನವೃದ್ಧರ ಸೇವೆಗೆ ಅವಕಾಶ ಸಿಗಲಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1