Nitya Bhavishya 20 February: ಇಂದು ನಿಮ್ಮ ವ್ಯಾಪಾರದಲ್ಲಿ ಧನ ಲಾಭ, ಅನಗತ್ಯ ವಿಚಾರಗಳ ಬಗ್ಗೆ ಆಲೋಚನೆ.

ಮೇಷ ರಾಶಿ: ನೀವು ಇಂದು ಮಕ್ಕಳಿಗಾಗಿ ಖರ್ಚು ಮಾಡುವುದು ಅಗತ್ಯವೂ ಅನಿವಾರ್ಯವೂ ಆದೀತು. ವಿರೋಧಿಗಳ ಮಧ್ಯದಲ್ಲಿ ನೀವು ಗೆಲ್ಲುವ ತವಕವು ಇರುವುದು. ಸಿಟ್ಟು ಮಾಡಿಕೊಳ್ಳಲು ನಿಮಗೆ ಕಾರಣ ಬೇಕಿಲ್ಲ. ಸುಮ್ಮನೆ ವಾದಕ್ಕಾಗಿ ವಾದ ಮಾಡುವಿರಿ. ತಿಳಿದುಕೊಳ್ಳುವ ಆಸಕ್ತಿಯು ಕಡಿಮೆ ಇದ್ದೀತು. ಆದಾಯದ ಕಡೆಗೆ ವಿಶೇಷಗಮನವು ಇರಲಿದೆ. ನಿಮ್ಮಲ್ಲಿರುವ ಒಳ್ಳೆಯದನ್ನು ನಿಜವಾಗಿಯೂ ಪ್ರಶಂಸಿಸಲು ನಿಮ್ಮಿಬ್ಬರಿಗೂ ಸ್ವಲ್ಪ ಅಂತರದ ಅಗತ್ಯವಿದೆ. ಒಂದೇ ಕೆಲಸವನ್ನು ನಿರಂತರ ಮಾಡಿ ಶಿಸ್ತನ್ನು ರೂಢಿಸಿಕೊಳ್ಳಬೇಕಾಗುವುದು. ದೊಡ್ಡ ಕನಸನ್ನು ಇಟ್ಟುಕೊಳ್ಳುವುದು ಸೂಕ್ತವಾಗಬಹುದು. ಇತರರ ಧಾರ್ಮಿಕ ನಂಬಿಕೆಯನ್ನು ನೀವು ಘಾಸಿಮಾಡುವಿರಿ. ಅನಂತರದ ಹತಾಶೆಯಿಂದ ಕಷ್ಟವಾದೀತು. ದೂರದ ಬಂಧುವಿನ ಭೇಟಿಯಾಗಿ ಪರಿಚಯ ಮಾಡಿಕೊಳ್ಳುವಿರಿ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ್ದು ಬೇಸರಕ್ಕೆ ಕಾರಣವಾಗಬಹುದು.

ವೃಷಭ ರಾಶಿ: ಖರ್ಚಿನಿಂದಾಗಿ ಬೇಸರವು ಅಧಿಕವಾಗಬಹುದು. ನೀವು ನೋಡುವ ದೃಷ್ಟಿಯಿಂದ ಎಲ್ಲವೂ ಹಾಗೆ ಕಾಣಿಸುವುದು. ಗುರಿಯ ಸಾಧನೆಯು ಆಗಬೇಕಾದರೆ ತಾಳ್ಮೆ ಅವಶ್ಯಕ. ಸಿಟ್ಟಿನಿಂದ ಎಲ್ಲವೂ ಬದಲಾದೀತು. ಪ್ರೀತಿಯ ವಿಷಯದಲ್ಲಿ ಪರಿಚಿತರ ಜೊತೆ ಚರ್ಚಿಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಮೃದುವಾಗುವಿರಿ. ಇನ್ನೊಬ್ಬರ ವಸ್ತುವನ್ನು ನೀವು ಇಟ್ಟುಕೊಳ್ಳಲಿದ್ದೀರಿ. ವಾಸ್ತವವನ್ನು ಅರಿಯುವ ಸ್ಥಿತಿಯನ್ನು ಕಳೆದುಕೊಳ್ಳುವಿರಿ. ವಿದೇಶದಲ್ಲಿ ಇರುವವರಿಗೆ ಆರೋಗ್ಯವು ಕೆಡಬಹುದು. ವ್ಯಾಪಾರಸ್ಥರು ಲಾಭವನ್ನು ಗಳಿಸುವತ್ತ ಯೋಜನೆ ರೂಪಿಸಿಕೊಳ್ಳುವುದು. ಬಂಧುಗಳ ಕಿರಿಕಿರಿಯನ್ನು ಸಹಿಸುವುದು ನಿಮಗೆ ಕಷ್ಟವಾದೀತು. ಮನಸ್ಸಿಗೆ ಭಾರವಾದ ವಿಚಾರವನ್ನು ನೀವು ಹೇಗಾದರೂ ಮಾಡಿ ತಲೆಯಿಂದ ತೆಗೆಯಿರಿ. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆ ಇರುವುದು. ನಿಮಗೆ ಬೇಕಾದ ವಸ್ತುವೇ ಆದರೂ ಯಾರು ಕೇಳಿದರೂ ಕೊಡುವಿರಿ.

ಮಿಥುನ ರಾಶಿ: ಇಂದು ನಿಮಗೆ ಹಿರಿಯರ ಉಪದೇಶವು ಅಧಿಕವಾಗಿ ಇರುವುದು. ವಿವಾದವಾಗುವ ವಿಚಾರದಲ್ಲಿ ನೀವು ದೂರವಿರುವಿರಿ. ಉದ್ಯೋಗಾವಕಾಶಗಳನ್ನು ಬಿಡುವಿರಿ. ಇನ್ನೊಬ್ಬರ ಬಗ್ಗೆ ನಿಮಗೆ ಅನುಕಂಪ ಹೆಚ್ಚಾದೀತು. ಸಂಗಾತಿಯ ಜೊತೆ ಕಾಲ ಕಳೆಯಲು ಹವಣಿಸುವಿರಿ. ನಿಮ್ಮ ಏಕಾಗ್ರತೆಗೆ ಭಂಗಬರಬಹುದು. ಚಿತ್ತಚಾಂಚಲ್ಯವು ಕಾರ್ಯದ ಗತಿಯನ್ನು ತಗ್ಗಿಸೀತು. ಕಾರ್ಯದ ನಿರುತ್ಸಾಹವನ್ನು ನಿಮ್ಮದೇ ಆದ ವಿಧಾನದಿಂದ ಸರಿ ಮಾಡಿಕೊಳ್ಳುವಿರಿ. ಜನರ ಜೊತೆ ಮಾತನಾಡುವಾಗ ನಿಮ್ಮ ಮಾತುಗಳು ಸ್ಪಷ್ಟವಾಗಿ ಇರಲಿ. ಭವಿಷ್ಯದ ಬಗ್ಗೆ ಏನೇನೋ ಕಲ್ಪನೆಯನ್ನು ಇಟ್ಟುಕೊಂಡು ಹತಾಶರಾಗಬೇಕಾಗುವುದು. ನಿಮ್ಮ ಮನಸ್ಸಿಗೆ ಬಾರದೇ ಇರುವ ಯಾವುದನ್ನೂ ನೀವು ಒಪ್ಪಿಕೊಳ್ಳಲಾರಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದ ವಿಚಾರದಲ್ಲಿ ಏಕಾಗ್ರತೆಯ ಕೊರತೆ ಇರಲಿದ್ದು ಧ್ಯಾನ, ಯೋಗಾಭ್ಯಾಸವನ್ನು ಮಾಡಬೇಕಾಗಬಹುದು. ರಾಜಕೀಯ ವ್ಯಕ್ತಿಗಳಿಂದ ನಿಮಗೆ ಸ್ವಲ್ಪಮಟ್ಟಿನ ಲಾಭವಾಗುವುದು. ನಿಮ್ಮ ವರ್ತನೆಗೆ ಅಂಕುಶವು ಬೇಕಾದೀತು.

ಕರ್ಕ ರಾಶಿ: ನಿಮ್ಮ ಕುಟುಂಬದ ಆಲೋಚನೆಯು ಅಧಿಕವಾಗಿ ಇರುವುದು. ಪ್ರಯತ್ನಿಸಿದ ಕಾರ್ಯಗಳಿಗೆ ನೀವು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು. ಮಹಿಳೆಯರ ಸಂಘವು ಹೆಚ್ಚಾಗಬಹುದು. ಕೆಲವೊಮ್ಮೆ ನಿಮ್ಮ ಬುದ್ಧಿಗೆ ಸೂಕ್ಷ್ಮ ವಿಚಾರಗಳು ಗೊತ್ತಾಗದೇಹೋಗಬಹುದು. ಹಳೆಯದನ್ನು ನೀವು ನೆನೆದು ಸಂಕಟಪಡುವಿರಿ. ವಿನಾಕಾರಣ ಮಿತ್ರರನ್ನು ದೂರ ಮಾಡಿಕೊಳ್ಳುವಿರಿ. ಕೃಷಿಯಲ್ಲಿ ಆಸಕ್ತಿ ಉಂಟಾಗಬಹುದು. ರಮಣೀಯ ಸ್ಥಳಕ್ಕೆ ಸಂಗಾತಿಯ ಜೊತೆ ಹೋಗಲಿದ್ದೀರಿ. ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರುವುದು ನಿಮಗೆ ಮುಖ್ಯವಾದೀತು. ನಿಮ್ಮ ಮಿತಿಯಲ್ಲಿ ನೀವು ಇರುವುದು ಸೂಕ್ತ. ಇಂದಿನ ಕನಸು ನಿಮಗೆ ಭೀತಿಯನ್ನು ತಂದೀತು. ನಿಮ್ಮ ನೋವನ್ನು ಕೇಳಲು ಯಾರೂ ಇಲ್ಲವೆಂದು ಬೇಸರವಾಗಬಹುದು. ಕೋಪದ ವಿಚಾರದಲ್ಲಿ ನೀವು ಬದಲಾಗಬೇಕಾದ ಅವಶ್ಯಕತೆ ಇರಲಿದೆ.

ಸಿಂಹ ರಾಶಿ: ನಿಮ್ಮವರು ನಿಮ್ಮಿಂದ ಏನನ್ನಾದರೂ ಬಯಸುವರು. ಪ್ರಭಾವಿ ವ್ಯಕ್ತಿಗಳು ಬಂಧುಗಳಾಗಿದ್ದು ಅವರಿಂದ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ನಿಮ್ಮ ಸ್ಥಿರಾಸ್ತಿ ಮಾರಾಟದ ಬಗ್ಗೆ ಪೂರ್ಣವಾಗಿ ನಿಮಗೆ ಬೆಂಬಲ ಸಿಗದೇಹೋಗಬಹುದು. ಬಾಡಿಗೆ ಮನೆಯಲ್ಲಿ ನೀವಿದ್ದರೆ ಕಿರಿಕಿರಿಯಾದೀತು. ಸಂಗಾತಿಯ ಪ್ರೀತಿಗೆ ನೀವು ಸೋಲಬಹುದು. ಎಷ್ಟೋದಿನಗಳಿಂದ ಬಯಸಿದ್ದ ವಸ್ತುವನ್ನು ನೀವು ಅನಾಯಾಸವಾಗಿ ಯಾರಿಂದಲೋ ಪಡೆಯುವುರಿ. ಮನೆಯ ಕೆಲಸಲ್ಲಿ ಸಮಯವು ಹೋಗಿದ್ದೇ ಗೊತ್ತಾಗದು. ಇಂದು ನೀವು ಹೆಚ್ಚು ಉತ್ಸಾಹ ಹಾಗೂ ನಗುಮುಖದಲ್ಲಿ ಇರುವುದು ಎಲ್ಲರಿಗೂ ಗೊತ್ತಾಗಲಿದೆ. ನಿಮ್ಮ ಹೊಸ ಸುದ್ದಿಯು ಎಲ್ಲರಿಗೂ ಅಚ್ಚರಿ ಮೂಡಿಸುವುದು. ಕುಟುಂಬದಿಂದ ದೂರವಿದ್ದರೂ ಮಾತುಕತೆಗಳ ಮೂಲಕ ಹತ್ತಿರವಾಗುವಿರಿ. ಹೊಸ ಯೋಜನೆಗಳು ನಿಮ್ಮ ತಲೆಯಲ್ಲಿ ಓಡುತ್ತಿದ್ದು ಅದನ್ನು ಕಾರ್ಯರೂಪಕ್ಕೆ ತರಲು ನೋಡುವಿರಿ.

ಕನ್ಯಾ ರಾಶಿ: ನಿಮಗೆ ಇಂದು ದೇವತಾಕಾರ್ಯದಲ್ಲಿ ತೊಡಗುವ ಆಸಕ್ತಿಯು ಇರಲಿದೆ. ಕಳ್ಳತನದ ಭೀತಿಯು ಆಗಬಹುದು. ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸಿ‌. ಉದರ ಬಾಧೆಯು ಹೆಚ್ಚಾಗಿ ಔಷಧಿಯನ್ನು ಮಾಡಿಕೊಳ್ಳಬೇಕಾಗಬಹುದು. ಅನ್ಯರ ಮಾತಿಗೆ ಕಿವಿಗೊಟ್ಟು ಸಂಬಂಧವನ್ನು ಹಾಳುಮಾಡಿಕೊಳ್ಳುವಿರಿ. ನಿಮಗೆ ದ್ವಂದ್ವಗಳು ಒಂದು ಸರಿಯಾದ ನಿರ್ಧಾರಕ್ಕೆ ಬರಲು ಅನುಕೂಲ ಮಾಡಿಕೊಡುವುದಿಲ್ಲ. ನಿಮಗೆ ಸಿಕ್ಕ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳಲು ಮಾರ್ಗವನ್ನು ಹುಡುಕುವಿರಿ. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ. ಸ್ತ್ರೀಯರ ಬಗ್ಗೆ ನಿಮಗೆ ಅನುಕಂಪವಿದ್ದರೂ ಅದನ್ನು ಹೇಳಿಕೊಳ್ಳಲಾಗದು. ಅಪಹಾಸ್ಯಕ್ಕೆ ಸಿಲುಕುವಿರಿ. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸಿ ಸುಮ್ಮನಿರುವುದು ಉತ್ತಮ. ಸಂಗಾತಿಯು ಸಾಲವನ್ನು ಮಾಡಲು ಪ್ರಚೋದನೆ ಕೊಡಬಹುದು. ಕತ್ತಲೆಯಲ್ಲಿ ಗುದ್ದಾಟ ಮಾಡಿ ಆಯಾಸ ಮಾಡಿಕೊಳ್ಳುವಿರಿ.

ತುಲಾ ರಾಶಿ: ನಿಮ್ಮ ಇಂದಿನ ಉದ್ಯಮಕ್ಕೆ ಕೆಲವು ಅನಗತ್ಯ ಸಲಹೆಗಳು ಬರಬಹುದು. ಆದಾಯದ ಮೂಲವನ್ನು ಹೆಚ್ಚು ಮಾಡುವ ಸನ್ನಿವೇಶವು ಬರಬಹುದು. ವಾಹನ ಚಾಲನೆಯಲ್ಲಿ ಎಚ್ಚರ ತಪ್ಪಬಹುದು. ವಿವಾಹದ ಮಾತುಕತೆಯಲ್ಲಿ ನಿಮಗೆ ಸ್ಪಷ್ಟತೆಯು ಸಿಗದೇ ಹೋಗಬಹುದು. ಸ್ತ್ರೀಯರಿಂದ ನಿಮಗೆ ತೊಂದರೆ ಅನಿಸಬಹುದು. ನಿಮ್ಮ ಹೊಂದಿಕೊಳ್ಳುವ ಗುಣವನ್ನು ಎಲ್ಲರೂ ಶ್ಲಾಘಿಸುವರು. ಕೃತಘ್ನರಾಗಿ ಮೆರೆಯುವುದು ಬೇಡ. ಜಾರಿ ಬೀಳಲು ಹೆಚ್ಚು ಸಮಯ ಬೇಡ. ಅಂಗಳವನ್ನೇ ಹಾರಲಾರದವನು ಆಕಾಶವನ್ನು ಹಾರಿಯಾನು ಎಂದು ನಿಮ್ಮನ್ನು ಲೇವಡಿ ಮಾಡಬಹುದು. ಇದು ನಿಮಗೆ ಸಾಧನೆಗೆ ಪ್ರೇರಣೆಯೂ ಆಗಬಹುದು. ವಿದ್ಯಾರ್ಥಿಗಳ ಆಸೆಯನ್ನು ಮನೆಯವರು ಅರ್ಥಮಾಡಿಕೊಳ್ಳುವುದು ಕಷ್ಟವಾದೀತು. ವೃತ್ತಿಯಲ್ಲಿ ಅನಿರೀಕ್ಷಿತ ಒತ್ತಡಗಳು ಬರಲಿದ್ದು ಇಂದಿನ ಕಾರ್ಯವನ್ನು ಹಾಳುಮಡುವುದು. ಸ್ತ್ರೀಯರು ಕೆಲವರ ಬಗ್ಗೆ ಇರುವ ಪೂರ್ವಾಗ್ರಹವನ್ನು ಕಳೆದುಕೊಳ್ಳುವರು.

ವೃಶ್ಚಿಕ ರಾಶಿ: ಇಂದು ನೀವು ಖರೀದಿಸುವ ವಸ್ತುವಿಗೆ ಹೆಚ್ಚು ಹಣವನ್ನು ಕೊಟ್ಟು ಸಂಪತ್ತನ್ನು ಹಾಳುಮಾಡಿಕೊಳ್ಳುವಿರಿ. ಸಮಯಕ್ಕೆ ಸರಿಯಾಗಿ ಆಹಾರವನ್ನು ಸ್ವೀಕರಿಸಿ. ಹಿನ್ನಡೆಯಾದ ಕಾರ್ಯಕ್ಕೆ ಬೇಸರ ಬೇಡ. ನೀವು ಶಿಸ್ತಿಗೆ ಒಳಪಟ್ಟಷ್ಟು ನಿಮ್ಮ ಕೆಲಸಗಳು ಸುಲಲಿತವಾಗುವುದು. ಏಕಕಾಲದಲ್ಲಿ ಅನೇಕ ವಿಚಾರಗಳ ಚಿಂತನೆಯನ್ನು ನಡೆಸುವಿರಿ. ಕಛೇರಿಯಲ್ಲಿ ನಿಮ್ಮದಾದ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುವಿರಿ. ಕೆಲವು ಸಂದರ್ಭಗಳು ನಿಮ್ಮ ಪರೀಕ್ಷೆಗಾಗಿ ಬರಲಿದ್ದು ಅದನ್ನು ಎದುರಿಸುವುದು ನಿಮ್ಮ ಮೇಲಿದೆ. ಮೂರ್ಖರಂತೆ ವರ್ತಿಸಿ ಎಲ್ಲರ ನಡುವೆ ನಗೆಪಾಟಲಾಗುವಿರಿ. ಸಂಗಾತಿಯ ಹೆಸರಿನಲ್ಲಿ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಎಷ್ಟೇ ಸೌಕರ್ಯವಿದ್ದರೂ ಇನ್ನಷ್ಟು ಬೇಕೆನಿಸಬಹುದು. ಆರ್ಥಿಕ ಸ್ಥಿತಿಯು ನಿಮಗೆ ಸಮಾಧಾನ ಕೊಡುವುದು. ಹಳೆಯ ವಸ್ತುಗಳು ನಿಮಗೆ ಭಾರವಾದೀತು. ಮುಂದೆ ಆಗಲಿರುವ ಕಾರ್ಯವನ್ನು ನೆನಪಿಸಿಕೊಂಡು ಮನಸ್ಸು ತಲ್ಲಣಿಸುವುದು.

ಧನು ರಾಶಿ: ನಿಮ್ಮ ಇಂದಿನ ಪ್ರಯತ್ನವು ನೂರಕ್ಕೆ ನೂರರಷ್ಟು ಇದ್ದರೂ ಫಲವು ಪೂರ್ಣವಾಗಿ ಸಿಗದಿರುವುದು ನಿಮಗೆ ಚಿಂತೆಯಾಗಬಹುದು. ಯಾರ ಬಳಿಯೂ ಏನನ್ನೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ನೀವು ಇರುವಿರಿ. ಮಹಿಳೆಯರು ನಿಮಗೆ ಶತ್ರುಗಳಂತೆ ಕಾಣುವರು. ಸಾಲಬಾಧೆಗೆ ಪೂರ್ಣವಿರಾಮವನ್ನು ಹಾಕುವುದು ಉತ್ತಮ. ನೀವು ಇಂದು ಸಕಾರಾತ್ಮಕ ಚಿಂತನೆಯಲ್ಲಿ ಇರುವಿರಿ. ನಿಮ್ಮ ಎಲ್ಲಾ ಶ್ರಮದಾಯಕ ಯೋಜನೆ ಮತ್ತು ಸಂಘಟನೆಯು ಅಂತಿಮವಾಗಿ ಫಲವನ್ನು ನೀಡಲಿದೆ. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವಂತೆ ನಿಮ್ಮ ಬಹಳ ದಿನದ ಕೂಡಿಟ್ಟ ಹಣವು ಕ್ಷಣಾರ್ಧದಲ್ಲಿ ಖಾಲಿಯಾಗಲಿದ್ದು ನಿಮಗೆ ಬೇಸರ ತರಿಸೀತು. ಸಂಬಂಧಗಳನ್ನು ಬೆಳೆಸಿಕೊಳ್ಳುವ ಇಚ್ಛೆ ಇದ್ದರೂ ಮುನ್ನುಗ್ಗಲು ಮನಸ್ಸು ಇರದು. ತಂದೆಯ ಜೊತೆಗಿನ ಮನಸ್ತಾಪವು ನಿಮ್ಮ ನೆಮ್ಮದಿಯನ್ನು ಹಾಳು ಮಾಡೀತು.

ಮಕರ ರಾಶಿ: ಇಂದು ನೀವಾಡುವ ಮಾತಿನಿಂದ ಕಲಹವಾಗಬಹುದು. ಅನರ್ಥಕ್ಕೆ ಅವಕಾಶ ಮಾಡಿಕೊಡದೇ ಸರಿಯಾಗಿರಿ. ಅಧಿಕ ಹಣವನ್ನು ನೀವು ಕೊಡಬೇಕಾಗಬಹುದು. ಕಾರ್ಯವಿಧಾನದ ಬದಲಾವಣೆಯಿಂದ ನಿಮಗೆ ಸಂತೋಷವಾಗಲಿದೆ. ಆಲಸ್ಯದ ಮನೋಭಾವವನ್ನು ನೀವು ಬಿಡಬೇಕಾದೀತು. ಕಿಟಕಿ ಮುಚ್ಚಿದೆ ಎಂದ ಮಾತ್ರಕ್ಕೆ ದ್ವಾರವೂ ಮುಚ್ಚಿರುತ್ತದೆ ಎಂದು ತಿಳಿದುಕೊಳ್ಳುವುದು ಮೂರ್ಖತನ. ನೀವು ಇಂದು ಸಂಗಾತಿಯ ಜೊತೆ ವಾಸ್ತವ ಬದುಕಿನ ಬಗ್ಗೆ ಚಿಂತನೆಯನ್ನು ನಡೆಸುವಿರಿ. ಉದ್ವೋಗದಿಂದಾಗಿ ಇಂದಿನ ಉತ್ತಮ ಲಾಭದಾಯಕ ವ್ಯಾಪಾರವನ್ನು ಕಳೆದುಕೊಳ್ಳುವಿರಿ. ಗೃಹನಿರ್ಮಾಣವು ನಿಮಗೆ ಅನಿವಾರ್ಯವಾದೀತು. ದುಡಿಮೆಯ ಸ್ವಲ್ಪ ಭಾಗವನ್ನಾದರೂ ಇತರಿಗೆ ಕೊಡಬೇಕು ಎಂದು ಅನ್ನಿಸಬಹುದು. ಒಬ್ಬರಾದರೂ ತಾಳ್ಮೆಯಿಂದ ಇರಬೇಕಾದೀತು. ನಿಮ್ಮ ಕನಸನ್ನು ಪೂರ್ಣ ಮಾಡಿಕೊಳ್ಳುತ್ತಿರುವುದು ನಿಮಗೆ ಖುಷಿಯಾಗಲಿದೆ.

ಕುಂಭ ರಾಶಿ: ನಿಮ್ಮ ಆರ್ಥಿಕ ಬಿಕ್ಕಟ್ಟು ಸ್ನೇಹಿತರ ಸಹಕಾರದಿಂದ ಸರಿಯಾಗುವುದು. ನಿಮ್ಮ ನಂಬಿಕೆಗೆ ದ್ರೋಹವುಂಟಾದೀತು. ನೀವು ತೆಗೆದುಕೊಳ್ಳುವ ನಿರ್ಧಾರವು ತಪ್ಪಾದೀತು ಎಂಬ ಆತಂಕವು ಇರಲಿದೆ. ರೋಗಬಾಧೆಯಿಂದ ನೀವು ಖಿನ್ನರಾಗುವಿರಿ. ಯಾವ ವಿಚಾರಕ್ಕೂ ಗೊಂದಲವಾಗುವಂತೆ ಇರುವುದು ಬೇಡ. ಇನ್ನೊಬ್ಬರ ನಿರ್ಧಾರಗಳನ್ನು ನಿಯಂತ್ರಿಸುವ ಮೂಲಕ ನೀವು ಎಂದಿಗೂ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆಯುವುದಿಲ್ಲ. ನಿಮ್ಮ ಸುತ್ತಲಿನ ಜನರು ತಮ್ಮದೇ ಮಿತಿಯಲ್ಲಿ ಇರುವರು. ತಮ್ಮಷ್ಟಕ್ಕೆ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಿ. ಆಕಸ್ಮಿಕವಾಗಿ ನೀವು ಅಶುಭ ಸಮಾಚಾರವನ್ನು ಕೇಳಬೇಕಾಗುವುದು. ನಿಮ್ಮ ಸುತ್ತಲೂ ನಡೆಯುವುದನ್ನು ಹತ್ತಿರದಿಂದ ಗಮನಿಸಿ, ನೀವು ನಿಮ್ಮನ್ನು ಸರಿಯಾಗಿ ಕಂಡುಕೊಳ್ಳಿ. ವೃತ್ತಿ ಜೀವನದಲ್ಲಿ ಗೌರವವನ್ನು ಪಡೆಯಬೇಕು ಎನಿಸುವುದು.

ಮೀನ ರಾಶಿ: ಇಂದು ನಿಮ್ಮ ವ್ಯಾಪಾರದಲ್ಲಿ ಧನ ಲಾಭವು ಆಗಲಿದ್ದು ಅದು ನಿಮ್ಮ ಮೇಲೆ‌ ಸತ್ಪರಿಣಾಮವನ್ನು ಬೀರಬಹುದು. ಅನಗತ್ಯ ವಿಚಾರಗಳ ಬಗ್ಗೆ ಆಲೋಚನೆ, ಆಸಕ್ತಿಯು ಹೆಚ್ಚಾಗುವುದು. ನಿಮಗೆ ಶತ್ರುವಿನಿಂದ ತೊಂದರೆಯಾದಂತೆ ಅನ್ನಿಸಬಹುದು. ದಾಂಪತ್ಯದಲ್ಲಿ ಪ್ರೀತಿಯು ಹೆಚ್ಚಾಗಬಹುದು. ನೀವು ಇನ್ನೊಬ್ಬರ ಅಹಂಕಾರವನ್ನು ಹೆಚ್ಚಿಸಲು ಹೋಗುವುದು ಬೇಡ. ಅತ್ಯಂತ ಮುಖ್ಯವೆಂದು ಪರಿಗಣಿಸುವ ವಿಷಯಗಳಲ್ಲಿ ನಿಮ್ಮ ಪ್ರಯತ್ನಗಳನ್ನು ಮುಂದುವರೆಸಿ. ರಾಜಕೀಯದ ಜೊತೆ ಸಂಪರ್ಕವು ಬೆಳೆಯವಹುದು. ಆರ್ಥಿಕ ಸಮಸ್ಯೆಯು ತಾತ್ಕಾಲಿಕವಾಗಿ ನಿವಾರಣೆಯಾಗಿ ಒತ್ತಡದಿಂದ ಹೊರಬರುವಿರಿ. ಇಂದು ನಿಮ್ಮ ಪ್ರಯತ್ನದಲ್ಲಿ ಯಶಸ್ಸು ನಿರೀಕ್ಷಿಸಬಹುದು. ಸಂಗಾತಿಗೆ ಬೇಕಾದ ಸಹಕಾರವನ್ನು ಖುಷಿಯಿಂದ ಮಾಡುವಿರಿ. ಶತ್ರುಗಳಿಗೆ ಏನನ್ನಾದರೂ ಮಾಡಲು ಯಾರಿಂದಲಾದರೂ ಪ್ರೇರಣೆ ಸಿಕ್ಕೀತು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *