ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಉತ್ತರಾಷಾಢಾ, ಯೋಗ: ಹರ್ಷಣ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 07 ಗಂಟೆ 00 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 32 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:47 ರಿಂದ 02:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:27 ರಿಂದ 09:54 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:20 ರಿಂದ 12:47ರ ವರೆಗೆ.

ಮೇಷ ರಾಶಿ : ನಿಮ್ಮ ಮೇಲಿನ ಪ್ರೀತಿಯಿಂದ ಯಾರಾದರೂ ಅಗತ್ಯ ಸಹಕಾರವನ್ನು ಕೊಡುವರು. ವ್ಯಾಪಾರವನ್ನು ವಿಸ್ತರಿಸಲು ಕುಟುಂಬದ ಸದಸ್ಯರ ಸಹಾಯವನ್ನು ತೆಗೆದುಕೊಳ್ಳಬೇಕಾಗಬಹುದು. ಧಾರ್ಮಿಕತೆಯು ನಿಮ್ಮನ್ನು ಆಪತ್ತಿನಿಂದ ಕಾಪಾಡಬಹುದು. ಕಲಾವಿದರಿಗೆ ನೀವು ಗೌರವ ಕೊಡುವಿರಿ. ಉನ್ನತ ಶಿಕ್ಷಣದ ಹಾದಿ ಸುಗಮವಾಗುವುದು. ಇಂದು ನೀವು ನಿಮ್ಮ ವೃತ್ತಿಗೆ ಸಂಬಂಧಿಸಿದ ಬೇರೆ ಬೇರೆ ಮಜಲುಗಳನ್ನು ಅರಿಯುವಿರಿ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಮುಖ್ಯ ಕೆಲಸವನ್ನು ನೀವು ಮರೆಯುವಿರಿ. ಅಪರಿಚಿತರಿಂದ ನಿಮಗೆ ಕೆಲಸ ಸಿಗಬಹುದು. ಇಂದು ನೀವು ಮಾನಸಿಕವಾಗಿ ತುಂಬಾ ಆಯಾಸವನ್ನು ಅನುಭವಿಸಬಹುದು. ಪ್ರೇಮ ಜೀವನದಲ್ಲಿ ಏರಿಳಿತಗಳಿರಬಹುದು. ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅಗತ್ಯವಿರುವವರಿಗೆ ಆರ್ಥಿಕ ಸಹಾಯವನ್ನು ಮಾಡಬೇಕು ಎನಿಸುವುದು.
ವೃಷಭ ರಾಶಿ : ಇಂದು ನೀವು ನಿರ್ಧಾರವನ್ನು ಆತುರದಿಂದ ಮತ್ತು ಭಾವನಾತ್ಮಕವಾಗಿ ತೆಗೆದುಕೊಳ್ಳುವಿರಿ. ನೀವು ಕೆಲವು ನಿರಾಶಾದಾಯಕ ಮಾಹಿತಿಯನ್ನು ಇಂದು ಪಡೆಯುವಿರಿ. ನೀವು ಅನಿರೀಕ್ಷಿತ ಪ್ರವಾಸವನ್ನು ಮಾಡುವಿರಿ. ನಿಮ್ಮ ದೀರ್ಘಾವಧಿಯ ಕಾನೂನು ಪ್ರಕರಣವು ನಿಮ್ಮ ಪರವಾಗಿ ಬಂದಿದ್ದು ಖುಷಿಕೊಡುವುದು. ಪರಿಚಯವಿಲ್ಲದ ಜನರಿಂದ ನೀವು ಅಂತರವನ್ನು ಕಾಯ್ದುಕೊಳ್ಳುವಿರಿ. ವೃತ್ತಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳ ನಿರೀಕ್ಷೆಯಲ್ಲಿ ಇರುವಿರಿ. ಶತ್ರುಗಳು ಪ್ರಬಲರಾಗದಂತೆ ನೋಡಿಕೊಳ್ಳಿ. ಕೆಲವು ಸಂಕೀರ್ಣವಾದ ವಿಷಯಗಳನ್ನು ಪರಿಹರಿಸಬಹುದು. ಇಂದು ಹೊಸ ಜನರನ್ನು ಭೇಟಿ ಮಾಡುವಿರಿ. ನೀವು ಸಹಾಯ ಪಡೆಯಬಹುದು ಮತ್ತು ನಿಮ್ಮ ವ್ಯವಹಾರದಲ್ಲಿ ಹೊಸದನ್ನು ಮಾಡುವಲ್ಲಿ ಯಶಸ್ವಿಯಾಗಬಹುದು. ಅನಾರೋಗ್ಯವನ್ನು ನಗಣ್ಯ ಮಾಡುವಿರಿ.
ಮಿಥುನ ರಾಶಿ : ನಿಮ್ಮ ಸಂಗಾತಿಯ ಜೊತೆ ಸಂಬಂಧವನ್ನು ಸುಧಾರಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ನಾಯಕತ್ವದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಿರಿ. ನಿಮ್ಮ ಆಪ್ತರ ಜೊತೆ ಕೆಲವು ಸಂತೋಷದ ಕ್ಷಣಗಳನ್ನು ಕಳೆಯುವಿರಿ. ನೀವು ವ್ಯವಹಾರದಲ್ಲಿ ಆಸಕ್ತಿಯನ್ನು ಕಡಿಮೆ ಮಾಡಿದಂತೆ ತೋರುವುದು. ಸ್ನೇಹಿತರ ಜೊತೆ ಸಂಬಂಧದಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯವು ಪರಿಹರಿಸಲ್ಪಡುತ್ತದೆ. ಭೂಮಿಯ ವ್ಯವಹಾರದಲ್ಲಿ ಬೇಸರ ಬರಬಹುದು. ಹಿರಿಯ ಸದಸ್ಯರಿಗೆ ನೀವು ವಿನಯವಾಗಿ ಏನನ್ನಾದರೂ ಹೇಳಿ. ಇಲ್ಲವಾದರೆ ನಿಮ್ಮ ಬಗ್ಗೆ ಕೆಟ್ಟ ಭಾವನೆ ಬರಬಹುದು. ನೀವು ಆಡಂಬರದಿಂದ ದೂರವಿರಿ. ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ಬಂಧುಗಳ ಜೊತೆ ಚರ್ಚಿಸುವಿರಿ. ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯಲು ನೀವು ನಿರಾಕರಿಸುವಿರಿ. ನಿಮಗೆ ಸಂಗಾತಿಯ ಬಗ್ಗೆ ಚಿಂತೆ ಕಾಡಬಹುದು. ಆರೋಗ್ಯದ ದೃಷ್ಟಿಯಿಂದ ಹೊಸ ಕ್ರಮವನ್ನು ನೀವು ರೂಢಿಸಿಕೊಳ್ಳುವಿರಿ. ಸಮಯದ ಮೌಲ್ಯವನ್ನು ಅರ್ಥಮಾಡಿಕೊಂಡು ಕಾರ್ಯತತ್ಪರರಾಗಿ.
ಕರ್ಕಾಟಕ ರಾಶಿ : ಇಂದು ನೀವು ಯಾರಿಂದಲೋ ಪಡೆದ ಹಣವನ್ನು ಮರಳಿಸುವುದು ಸೂಕ್ತ. ನಿಮ್ಮ ಇಂದಿನ ದಿನಚರಿಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಆರೋಗ್ಯಕ್ಕೆ ಯೋಗ ಮತ್ತು ವ್ಯಾಯಾಮವನ್ನು ರೂಢಿಸಿಕೊಳ್ಳುವುದು ಉತ್ತಮ. ನೀವು ದೊಡ್ಡ ಅಪಾಯವನ್ನು ತೆಗೆದುಕೊಳ್ಳುವ ಶಕ್ತಿಯನ್ನು ಇಟ್ಟುಕೊಂಡಿಲ್ಲ. ಇಂದು ನಿಮ್ಮ ಬಾಸ್ ಜೊತೆಗಿನ ನಿಮ್ಮ ಸಂಬಂಧದಲ್ಲಿ ವ್ಯತ್ಯಾಸವಾಗಬಹುದು. ನಿಮ್ಮ ವೃತ್ತಿಜೀವನಕ್ಕೆ ಮುಖ್ಯವಾದ ಜನರು ಇಂದು ನಿಮಗೆ ಸ್ವಲ್ಪ ತೊಂದರೆ ನೀಡಬಹುದು. ಕೆಲವು ವಿಶೇಷ ಕೆಲಸಗಳನ್ನು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅದು ಇಂದು ಪೂರ್ಣಗೊಳ್ಳುವುದಕ್ಕೆ ಒತ್ತಡವು ಅನಿವಾರ್ಯವಾದೀತು. ಇಂದು ನೀವು ಸ್ವಲ್ಪ ತಾಳ್ಮೆಯಿಂದಿರಬೇಕು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಜೊತೆ ತಮಾಷೆಯಿಂದ ಇರುವಿರಿ.
ಸಿಂಹ ರಾಶಿ : ನಿಮ್ಮ ವಿದ್ಯೆಯನ್ನು ಪ್ರಯೋಗಿಸುವ ಅವಕಾಶವು ಸಿಗಲಿದೆ. ಪ್ರಮುಖ ವಿಷಯಗಳಲ್ಲಿ ಒತ್ತಡವನ್ನು ತಂದು ವೇಗವನ್ನು ತೋರಿಸಬೇಕಾಗುತ್ತದೆ. ನೀವು ಹಿರಿಯರ ಮಾತನ್ನು ಕೇಳಬೇಕು ಮತ್ತು ಅನುಸರಿಸುವದೂ ಮುಖ್ಯ. ಇಂದು ನೀವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಯಾವುದನ್ನಾದರೂ ಬಹಳ ಚಿಂತನಶೀಲವಾಗಿ ಮಾತನಾಡುವಿರಿ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗೊಂದಲ ಸೃಷ್ಟಿಯಾಗಬಹುದು. ನೀವು ಇಂದು ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಇಂದು ಹಠಾತ್ ಘಟನೆಯ ಬಗ್ಗೆ ಯಾವುದೇ ತಕ್ಷಣದ ನಿರ್ಧಾರ ತೆಗೆದುಕೊಳ್ಳುವುದನ್ನು ಬೇಡ. ನಿಮ್ಮ ಆರೋಗ್ಯ ಸಾಮಾನ್ಯವಾಗಿದ್ದರೂ ಸ್ವಲ್ಪ ಆಯಾಸವೂ ಇರಬಹುದು. ಹೆಚ್ಚಿನ ಲಾಭವನ್ನು ಗಳಿಸಲು ಹೋಗಿ, ನಿಮ್ಮ ವ್ಯಕ್ತಿತ್ವಕ್ಕೆ ತೊಂದರೆ ಮಾಡಿಕೊಳ್ಳುವಿರಿ.
ಕನ್ಯಾ ರಾಶಿ : ನಿಮ್ಮ ನಡವಳಿಕೆಯನ್ನು ಯಾರದರೂ ಸೂಕ್ಷ್ಮವಾಗಿ ಗಮನಿಸಬಹುದು. ನಿಮ್ಮ ಸಂಪನ್ಮೂಲಗಳನ್ನು ಕಾಳಜಿಯಿಂದ ರಕ್ಷಿಸಿಕೊಳ್ಳಿ. ಇಂದು ನಿಮ್ಮ ಮಾಡಬೇಕಾದ ಕಾರ್ಯಗಳ ಪಟ್ಟಿಯನ್ನು ಮಾಡಿ. ಆದಾಯದ ಸ್ವಲ್ಪ ಭಾಗವನ್ನು ಉಳಿಸಲು ಬೇಕಾದ ಚಿಂತನೆ ಇರಲಿ. ಯಾವುದಾರೂ ಅಪ್ರಬುದ್ಧ ವಿವಾದಕ್ಕೆ ಸಿಲುಕಿಕೊಂಡು ಮನಸ್ತಾಪವಾಗುವುದು. ಹಳೆಯ ನೆನಪುಗಳನ್ನು ಸ್ನೇಹಿತರ ಜೊತೆ ಹಂಚಿಕೊಂಡು, ಹಗುರಾಗುವಿರಿ. ನಿಮ್ಮ ಮಕ್ಕಳ ಜೀವನವನ್ನು ಸುಧಾರಿಸಲು ನೀವು ಪ್ರಯತ್ನಿಸುತ್ತೀರಿ. ಕಠಿಣ ಪರಿಶ್ರಮಕ್ಕೆ ಸರಿಯಾಗಿ ಯಶಸ್ಸು ಸಿಗುತ್ತದೆ. ನಿಮ್ಮ ಆಸೆಯೂ ಈಡೇರುತ್ತದೆ. ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ನೀವು ಅಗತ್ಯ ಸಹಾಯವನ್ನು ಪಡೆಯುತ್ತೀರಿ. ನಿಮ್ಮ ಕೆಲಸವನ್ನು ಜನರು ಮಾಡುವಂತೆ ಮಾಡುವಲ್ಲಿ ನೀವು ಹೆಚ್ಚಿನ ಮಟ್ಟಿಗೆ ಯಶಸ್ವಿಯಾಗುತ್ತೀರಿ. ಇಂದು ನಿಮ್ಮ ಆರೋಗ್ಯವು ಸಾಮಾನ್ಯವಾಗಿರುತ್ತದೆ.
ತುಲಾ ರಾಶಿ : ಇಂದು ನಿಮ್ಮವರೆ ಮೇಲೆ ಅತಿಯಾದ ಅಕ್ಕರೆ ಇರುವುದು. ವ್ಯಾಪಾರದಲ್ಲಿ ನಿಮ್ಮ ಚಟುವಟಿಕೆ ಹೆಚ್ಚಾಗಿರುವುದು. ಉದ್ಯೋಗದಲ್ಲಿ ಕೆಲಸ ಮಾಡುವವರು ಯಾವುದೇ ವಿಷಯಕ್ಕೆ ತಮ್ಮ ಮೇಲಧಿಕಾರಿಯ ಜೊತೆ ವಾದ ಮಾಡುವುದು ಬೇಡ. ನಿಮ್ಮ ಶತ್ರುಗಳು ನಿಮ್ಮ ಹಿಂದೆ ಗಾಸಿಪ್ ಮಾಡಬಹುದು. ಇದು ನಿಮ್ಮ ಪ್ರಚಾರದ ಮೇಲೂ ಪರಿಣಾಮ ಬೀರಬಹುದು. ಅತಿಯಾದ ಕ್ರಮವನ್ನು ತೆಗೆದುಕೊಳ್ಳುವುದು ಬೇಡ. ನಿಮ್ಮ ವ್ಯವಹಾರದ ದೀರ್ಘಾವಧಿಯ ಯೋಜನೆಗಳಿಗೆ ನೀವು ಸಂಪೂರ್ಣ ಗಮನ ಹರಿಸಬೇಕು. ನಿಮ್ಮ ತಾಯಿವು ದೈಹಿಕ ನೋವನ್ನು ಅನುಭವಿಸಬಹುದು. ನಿಮ್ಮ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಕೆಲಸವನ್ನು ಪೂರ್ಣಗೊಳಿಸಬಹುದು. ಇಂದು ನೀವು ವೃತ್ತಿ ಮತ್ತು ಹೂಡಿಕೆ ಕ್ಷೇತ್ರದಲ್ಲಿ ಕೆಲವು ಹೊಸ ಮತ್ತು ಅತ್ಯುತ್ತಮ ಅವಕಾಶಗಳನ್ನು ಪಡೆಯಬಹುದು. ನೀವು ಹಣ ಮತ್ತು ಕುಟುಂಬದ ಪರಿಸ್ಥಿತಿಗೆ ಸಂಪೂರ್ಣ ಗಮನ ನೀಡಬೇಕು.
ವೃಶ್ಚಿಕ ರಾಶಿ : ನೀವು ಹಿಂಜರಿಕೆಯಿಲ್ಲದೆ ಅಂದುಕೊಂಡ ಕಾರ್ಯದಲ್ಲಿ ಮುಂದುವರಿಯುವಿರಿ. ನೀವು ಇಂದು ಹೊಸ ಸಂಬಂಧಗಳ ಕಡೆ ಇರಲಿದೆ. ನಿಮ್ಮ ಬಗ್ಗೆ ನಡೆಯುತ್ತಿರುವ ಅಪಶ್ರುತಿ ಬಗೆಹರಿಯಲಿದೆ. ನೀವು ಯಾವುದೇ ಹೂಡಿಕೆ ಮಾಡಿದ್ದರೆ, ನಿಮಗೆ ಲಾಭ ಸಿಗುತ್ತದೆ. ಕುಟುಂಬದಲ್ಲಿ ಶುಭಕಾರ್ಯವನ್ನು ನಡೆಸಲು ಸಮಾಲೋಚಿಸುವಿರಿ. ಕೆಲಸಗಳು ಪೂರ್ಣಗೊಳ್ಳಲು ನೀವು ದೀರ್ಘಕಾಲ ಕಾಯುತ್ತಿದ್ದರೆ, ಅದು ಸಂಭವಿಸಬಹುದು. ಆತ್ಮವಿಶ್ವಾಸವು ಇದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಗದು. ಇಂದು ನೀವು ಜನರನ್ನು ಆಕರ್ಷಿಸುವಿರಿ. ಜನರು ನಿಮ್ಮ ಆಲೋಚನಾ ವಿಧಾನವನ್ನು ಇಷ್ಟಪಡುತ್ತಾರೆ. ನಿಮ್ಮ ಸಲಹೆಯಿಂದ ಜನರು ಪ್ರಯೋಜನ ಪಡೆಯುತ್ತಾರೆ. ಇಂದು ಕೆಲವು ಒಳ್ಳೆಯ ಸುದ್ದಿಗಾಗಿ ಕಾಯುತ್ತಿದ್ದಾರೆ. ಪ್ರೀತಿಯ ಜೀವನಕ್ಕೆ ದಿನವು ಸಾಮಾನ್ಯವಾಗಿದೆ. ನಿಮ್ಮ ಸಂಗಾತಿ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಬೆನ್ನು ನೋವು ನಿಮ್ಮನ್ನು ಕಾಡಬಹುದು.
ಧನು ರಾಶಿ : ನೀವು ಉಳಿತಾಯ ಯೋಜನೆಯಲ್ಲಿ ಉತ್ತಮ ಮೊತ್ತವನ್ನು ಹೂಡಿಕೆ ಮಾಡುವಿರಿ. ನಿಮ್ಮ ಜೀವನಶೈಲಿಯನ್ನು ಆಕರ್ಷಕವಾಗಿಸಲು ನೀವು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ನಿಮ್ಮ ಪೋಷಕರ ಜೊತೆ ಕೆಲವು ವಿಷಯದ ಬಗ್ಗೆ ನೀವು ಕಲಹದ ಸಾಧ್ಯತೆ ಇದೆ. ಮಕ್ಕಳಿಗಾಗಿ ನೀವು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಹಳೆಯ ಸ್ನೇಹಿತರನ್ನು ನೀವು ಭೇಟಿಯಾಗಬಹುದು. ವಿರೋಧಿಗಳನ್ನು ತತ್ಸಾರ ಮಾಡುವ ಅವಶ್ಯಕತೆ ಇಲ್ಲ. ಮಾತು ನಿಯಂತ್ರಣ ತಪ್ಪಬಹುದು. ಕೆಲಸದ ಸ್ಥಳದಲ್ಲಿ ವಾತಾವರಣವು ನಿಮಗೆ ಅನುಕೂಲಕರವಾಗಿಲ್ಲದಿದ್ದರೆ, ನಿಮ್ಮ ಮನಃಸ್ಥಿತಿಯು ಹದಗೆಡುತ್ತದೆ. ಪ್ರೇಮ ಜೀವನದ ಜಗಳದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ದೈನಂದಿನ ಕೆಲಸದಲ್ಲಿ ಸಮಸ್ಯೆಗಳು ಉಳಿಯಬಹುದು. ನೀವು ಯೋಜಿಸಿದ ನಿಮ್ಮ ಕೆಲಸವೂ ಪೂರ್ಣಗೊಳ್ಳುವುದಿಲ್ಲ. ವಿವಾದಗಳು ತಪ್ಪಿಸಲು ಪ್ರಯತ್ನಿಸಿ. ಯಾರ ಮೇಲೂ ಅವಲಂಬಿತರಾಗಬೇಡಿ. ಆರೋಗ್ಯಕ್ಕೆ ಸಂಬಂಧಿಸಿದ ಏರುಪೇರುಗಳೂ ಇರಬಹುದು.
ಮಕರ ರಾಶಿ : ಇಂದು ನೀವು ಕೆಲವು ಸಣ್ಣ ಕೆಲಸವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ಸರಿಯಾದ ಸಮಯಕ್ಕಾಗಿ ಕಾಯಿರಿ. ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಜಾಗರೂಕರಾಗಿರಬೇಕು. ನೀವು ಎಲ್ಲರ ಜೊತೆ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು. ಅದು ನಿಮಗೆ ಒಳ್ಳೆಯದು. ದೂರ ಪ್ರಯಾಣ ಹೋಗುವ ಸಾಧ್ಯತೆಗಳಿವೆ. ನೀವು ಒಂದರ ಅನಂತರ ಒಂದರಂತೆ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಕುಟುಂಬ ಸಂಬಂಧಗಳನ್ನು ಸುಧಾರಿಸಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸುತ್ತೀರಿ. ನಿಮ್ಮ ಸಂಗಾತಿಯ ಸಲಹೆಯು ನಿಮಗೆ ಮುಖ್ಯವಾಗಬಹುದು. ನೀವು ಹಠಾತ್ ಆರ್ಥಿಕ ಲಾಭವನ್ನು ಪಡೆಯಬಹುದು. ನೀವು ಕೆಲವು ಉತ್ತಮ ಅವಕಾಶಗಳನ್ನು ಪಡೆಯಬಹುದು. ಒಳ್ಳೆಯ ಮತ್ತು ಮಧುರವಾದ ಮಾತುಗಳನ್ನು ಹೇಳುವ ಮೂಲಕ ನಿಮ್ಮ ಕೆಲಸವನ್ನು ಪೂರ್ಣಗೊಳಿಸುತ್ತೀರಿ. ಆರೋಗ್ಯದ ವಿಷಯದಲ್ಲಿ ಒತ್ತಡ ಹೆಚ್ಚಾಗಬಹುದು. ತಿನ್ನುವುದು ಮತ್ತು ಕುಡಿಯುವಲ್ಲಿ ಜಾಗರೂಕತೆ ಮುಖ್ಯ.
ಕುಂಭ ರಾಶಿ : ಇಂದು ವ್ಯವಹಾರದಲ್ಲಿ ನಿಮ್ಮ ಯೋಜನೆಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ನೀವು ಕುಟುಂಬ ಸದಸ್ಯರಿಂದ ಸಾಕಷ್ಟು ಬೆಂಬಲವನ್ನು ಪಡೆಯುತ್ತೀರಿ. ಕುಟುಂಬದ ಎಲ್ಲರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತೀರಿ. ಪರಿಚಿತರ ಸ್ವಭಾವದಿಂದಾಗಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಪ್ರಮುಖ ಕೆಲಸಗಳಲ್ಲಿ ವಿಳಂಬ ಮಾಡಬೇಡಿ. ನಿಮ್ಮ ಮನಸ್ಸಿನಲ್ಲಿ ಸ್ಪರ್ಧಾತ್ಮಕ ಮನೋಭಾವವು ಇರುವುದು. ನಿಮ್ಮ ಆದಾಯದ ಜೊತೆಗೆ ನಿಮ್ಮ ಖರ್ಚುಗಳೂ ಹೆಚ್ಚಾಗುತ್ತವೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನೀವು ಮಕ್ಕಳಿಂದ ಬೆಂಬಲವನ್ನು ಪಡೆಯುತ್ತೀರಿ. ನೀವು ಕಠಿಣ ಪರಿಶ್ರಮದಿಂದ ನಿಮ್ಮ ಯೋಜನೆಯನ್ನು ಪೂರ್ಣಗೊಳಿಸುತ್ತೀರಿ ಮತ್ತು ಅದರಿಂದ ನೀವು ಪ್ರಯೋಜನಗಳನ್ನು ಪಡೆಯಬಹುದು. ಇಂದು ನೀವು ಸ್ನೇಹಿತರು ಮತ್ತು ಸಹೋದರರಿಂದ ಬೆಂಬಲವನ್ನು ಪಡೆಯಬಹುದು.
ಮೀನ ರಾಶಿ : ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮನ್ನು ಹೆಚ್ಚು ಗಮನಿಸುತ್ತ ಇರಬಹುದು. ಉದ್ಯೋಗದಲ್ಲಿ ಇರುವವರು ತಮ್ಮ ಸಹೋದ್ಯೋಗಿಗಳಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳಿ. ಉದ್ಯೋಗದಲ್ಲಿ ನಿಮ್ಮ ಕೆಲಸವು ವೇಗವನ್ನು ಪಡೆಯಬಹುದು. ಕುಟುಂಬದಲ್ಲಿ ವಿವಾಹದ ಪ್ರಸ್ತಾಪವು ಇರಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ತಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುವುದು. ನಿಮ್ಮ ಕೆಲಸಕ್ಕಿಂತ ಇತರರ ಕೆಲಸಗಳ ಮೇಲೆ ಹೆಚ್ಚು ಗಮನವಿರುವುದು. ನಿಮ್ಮ ಮೇಲೆ ದುಷ್ಪರಿಣಾಮ ಬೀರಬಹುದು. ಉದ್ಯಮಿಗಳಿಗೆ ಸಮಯ ಉತ್ತಮವಾಗಿಲ್ಲ. ಯಾರಿಗೂ ಸಾಲ ನೀಡುವುದನ್ನು ತಪ್ಪಿಸಿ. ಹಳೆಯ ಸಾಲವು ನಿಮಗೆ ಒತ್ತಡವನ್ನು ಉಂಟುಮಾಡಬಹುದು. ಕಚೇರಿಯಲ್ಲಿ ಸಮಸ್ಯೆಗಳಿರಬಹುದು. ಯಾರೊಂದಿಗಾದರೂ ಇಂದು ಜಗಳ ಇರಬಹುದು. ನಿಮ್ಮ ಸಂಗಾತಿಯು ಕೆಲವು ಸಮಸ್ಯೆಗಳಿಂದ ಕೆಟ್ಟ ಮನಃಸ್ಥಿತಿಯಲ್ಲಿರಬಹುದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1