Nitya Bhavishya 9 February: ಪ್ರಾಮಾಣಿಕ‌ ಪ್ರಯತ್ನದಲ್ಲಿ ಯಶಸ್ಸನ್ನು ಕಾಣುವಿರಿ, ಅಪರಿಚಿತರ ಸಂಪರ್ಕ ಮಾಡುವಿರಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ವ್ಯತಿಪಾತ್, ಕರಣ: ಶಕುನಿ, ಸೂರ್ಯೋದಯ ಬೆಳಗ್ಗೆ 07 ಗಂಟೆ 00 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 33 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:20 ರಿಂದ 12:47ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:40 ರಿಂದ 05:07 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:27 ರಿಂದ 09:54ರ ವರೆಗೆ.

ಮೇಷ ರಾಶಿ: ಇಂದು ನಿಮ್ಮ ಮಾತಿನಲ್ಲಿ ಕಠೋರತೆ ಇರಲಿದ್ದು, ಅದನ್ನು ಕಡಿಮೆ‌ ಮಾಡಿಕೊಳ್ಳಬೇಕು. ಕಾರ್ಯಕ್ಷೇತ್ರದಲ್ಲಿ ನಿಮ್ಮ ಯೋಗ್ಯತೆಗೆ ತಕ್ಕಂತೆ ಕೆಲಸ ಸಿಗುತ್ತದೆ. ಸರ್ಕಾರ ಮತ್ತು ಆಡಳಿತದ ವಿಷಯಗಳಲ್ಲಿ ನಿಮ್ಮ ಜಾಗರೂಕತೆ ಅವಶ್ಯಕ. ನಿಮ್ಮ ಆದಾಯವೆಲ್ಲ ನೀರಿನಂತೆ ಖರ್ಚಾಗಬಹುದು. ಸಂಗಾತಿಯಿಂದ ನಿಮ್ಮ ನೋವು ದೂರಾಗಬಹುದು. ಅಧಿಕಾರ ಪ್ರಾಪ್ತಿಗೆ ಓಡಾಟವನ್ನು ಮಾಡುವಿರಿ. ಹೇಳಿದ ಸಮಯಕ್ಕೆ ಕೆಲಸವನ್ನು ಮಾಡಿಕೊಡಲಾಗುವುದು. ಹಿರಿಯರ ಸೇವೆಯಲ್ಲಿ ನೀವು ಇರುವಿರಿ. ನಕಾರಾತ್ಮಕ ಆಲೋಚನೆಗಳನ್ನು ತಲೆಯಿಂದ ತೆಗೆಯಿರಿ. ಕೋಪವನ್ನು ಅಧಿಕಾರಿಗಳಿಂದ ನಿಯಂತ್ರವಿಟ್ಟು ಮಾಡನಾಡಬ ಮೆಚ್ಚುಗೆ ಗಳಿಸುವಿರಿ. ನಿಮ್ಮ ಮಕ್ಕಳ ಬಗ್ಗೆ ಗಮನ ಹೆಚ್ಚು ಬೇಕು. ತಿಳಿವಳಿಕೆ ಇಲ್ಲದವರ ಮುಂದೆ ನಿಮ್ಮ ಉದ್ಯೋಗವನ್ನು ಹೇಳಿಕೊಳ್ಳುವಿರಿ. ನಿಮ್ಮ ಮಿತಿಯನ್ನು ಮೀರಿ ವ್ಯವಹಾರ ಬೇಡ.

ವೃಷಭ ರಾಶಿ: ನೀವು ಅಪರಿಚಿತರ ಸಂಪರ್ಕವನ್ನು ಹೆಚ್ಚು ಮಾಡುವಿರಿ. ಹೂಡಿಕೆಯಲ್ಲಿ ದೀರ್ಘಾವಧಿಯ ಯೋಜನೆಗಳು ಮಾಡಿಕೊಳ್ಳಿ. ನಿಮ್ಮ ಮೇಲಿನ ವಿಶ್ವಾಸವು ದೂರವಾಗಬಹುದು. ನೀವು ಹಿರಿಯರಿಂದ ಬೆಂಬಲವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಯಾರಿಗಾದರೂ ಸಹಾಯ ಮಾಡಲು ಅವಕಾಶವು ಸಿಗಬಹುದು. ನಿರಂತರ ವೃತ್ತಿಪರತೆಯ ನಿಮ್ಮ ಖುಷಿಯನ್ನು ಹೆಚ್ಚಿಸಬಹುದು. ಪ್ರಾಮಾಣಿಕ‌ ಪ್ರಯತ್ನದಲ್ಲಿ ಯಶಸ್ಸನ್ನು ಕಾಣುವಿರಿ. ವಿನಾಕಾರಣ ಸುತ್ತಾಟದಿಂದ ಆಯಾಸವಾಗುವುದು. ಪ್ರಭಾವಿಗಳ ಭೇಟಿಯಿಂದ ಸಂತೋಷವಾಗಲಿದೆ. ಅನ್ಯಸ್ಥಳದಲ್ಲಿ ನಿಮ್ಮ ವಾಸವು ಇರಲಿದೆ. ಯಾರದೋ ಸಂತೋಷಕ್ಕಾಗಿ ನೀವು ದುಡಿಯಬೇಕಾಗಬಹುದು. ಭವಿಷ್ಯದ ಬಗ್ಗೆ ಅಸ್ಪಷ್ಟವಾದ ಚಿಂತೆಯು ಬೇಡ. ಯಂತ್ರಗಳ ವ್ಯಾಪಾರಿಗಳಿಗೆ ಲಾಭದ ದಿನ. ಆಚರಣೆಗಳನ್ನು ಮಾಡಲು ನಿಮಗೆ ಅಧಿಕ ಆಸಕ್ತಿಯು ಬರಬಹುದು. ಉತ್ಸಾಹವು ಎಷ್ಟೇ ಇದ್ದರೂ ನೆಮ್ಮದಿಯ ಮನಸ್ಸಿನಿಂದ ನಿರ್ಧಾರಿಸಿ.

ಮಿಥುನ ರಾಶಿ: ಇಂದು ನೀರಿಗೆ ಸಂಬಂಧಿಸಿದ ವ್ಯಾಪಾರದಲ್ಲಿ ಲಾಭವನ್ನು ಹೆಚ್ಚಿಸಿಕೊಳ್ಳುವಿರಿ. ಕಲಿಕೆಯ ಆಸಕ್ತಿಯು ಹೆಚ್ಚಾಗಬಹುದು. ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಬೇಡ. ಆಕಸ್ಮಿಕವಾಗಿ ಜೀವನದ ದಿಕ್ಕು ಬದಲಾಗಬಹುದು. ಮಾನಸಿಕವಾಗಿ ತಯಾರಿರಬೇಕಾಗಬಹುದು. ನಿಮ್ಮ ಜವಾಬ್ದಾರಿಯನ್ನು ಇತರರು ಮಾಡಬೇಕಾಗಬಹುದು. ಸಾಮೂಹಿಕ ಕಾರ್ಯದಲ್ಲಿ ನಿಮಗೆ ಯಶಸ್ಸು ಸಿಗಬಹುದು. ಮಹಿಳೆಯರು ಉನ್ನತ ಅಧಿಕಾರವನ್ನು ಪಡೆದು ಅಹಂಕಾರ ಮಡುವುದು ಬೇಡ. ಸ್ವಪ್ರತಿಷ್ಠೆನ್ನಿಬ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಹಿರಿಯರೆದುರು ವಿನಯವಿರಲಿ. ದೇವತಾಕಾರ್ಯಗಳಲ್ಲಿ ಆಸಕ್ತಿಯು ಶ್ರದ್ಧೆಯಿಂದ ಭಾಗವಹಿಸುವಿರಿ. ಕಛೇರಿಯಲ್ಲಿ ಅಧಿಕಾರಿಗಳು ನಿಮ್ಮ ಕಾರ್ಯಕ್ಕೆ ಸಂಬಂಧಿಸಿದಂತೆ ವಾಗ್ವಾದ ಮಾಡಬಹುದು. ಯಾರಿಗೂ ಸಾಲವನ್ನು ಕೊಡುವುದು ಬೇಡ.

ಕರ್ಕ ರಾಶಿ: ನಿಮ್ಮ ವೈವಾಹಿಕ ಜೀವನದ ಜಟಿಲ ಸಮಸ್ಯೆಗಳು ದೂರಾಗಬಹುದು. ಸ್ಥಿರ ಚಿತ್ತವನ್ನು ನೀವು ಪ್ರಯತ್ನಪೂರ್ವಕವಾಗಿ ತಂದುಕೊಳ್ಳಬೇಕಾಗುವುದು. ನಿಮ್ಮ ಇಷ್ಟದ ವಿಷಯಗಳಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತೀರಿ. ನಿಮ್ಮವರ ವಿಶ್ವಾಸವನ್ನು ನೀವು ಸುಲಭವಾಗಿ ಗೆಲ್ಲಲು ಸಾಧ್ಯವಾಗುತ್ತದೆ. ವೃತ್ತಿಕ್ಷೇತ್ರದಲ್ಲಿ ನಿಮ್ಮ ಉತ್ತಮ ಚಿಂತನೆಯಿಂದ ಗೌರವವನ್ನು ಪಡೆಯಲು ಸಾಧ್ಯ. ಏನನ್ನಾದರೂ ಮಾಡಲು ನೀವು ಇತರರನ್ನು ಅವಲಂಬಿಸಲು ಇಚ್ಛಿಸುವುದಿಲ್ಲ. ನೀವು ಅನೇಕ ವ್ಯವಹಾರಗಳನ್ನು ನಿಭಾಯಿಸಲು ಕಷ್ಟಪಡುವರು. ಮನೆಯ ಸ್ಥಳವನ್ನು ಬದಲಾಯಿಸುವ ಅನಿವಾರ್ಯತೆ ಬಂದೀತು. ಅನ್ಯಾನ್ಯ ಮಾರ್ಗಗಳಿಂದ ಹಣವು ಬರಬಹುದು. ‌ಕಳೆದಕೊಂಡ ವಸ್ತುವಿಗೆ ತೀವ್ರ ಹುಡುಕಾಟ ಇರುವುದು.‌ ಉತ್ಸಾಹಕ್ಕೆ ತೊಂದರೆ ಆಗುವ ಕಡೆ ನೀವು ಇರಲಾರಿರಿ. ನಿಮ್ಮ ಕಾರ್ಯವನ್ನು ಬಿಟ್ಟು ಬೇರೆಯವರ ಕಾರ್ಯದ ಕಡೆ ಗಮನ ಇರುವುದು. ಉದ್ಯೋಗದಲ್ಲಿ ಅಧಿಕ ಲಾಭಕ್ಕಾಗಿ ಶ್ರಮಿರಿಸಿದರೂ ಲಾಭವು ಕಷ್ಟವಾದೀತು.

ಸಿಂಹ ರಾಶಿ: ನೀವು ಕೆಲಸದ ನಿಯಮಗಳ ಬಗ್ಗೆ ಗಮನ ಹರಿಸಬೇಕು. ಆಗ ಕ್ರಮಬದ್ಧವಾಗಲು ಸಾಧ್ಯ. ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮ‌ ಮಾಡಲು ಬಯಸುವಿರಿ. ಯಾರ ಕಡೆಯಿಂದಲಾದರೂ ಸಾಲ ಪಡೆಯುವುದನ್ನು ತಪ್ಪಿಸಿ. ನೀವು ಇಂದು ಆರಂಭಿಸುವ ಕೆಲಸವು ಹೆಚ್ಚು ಸಮಯವನ್ನು ಪಡೆಯಬಹುದು. ಅಕಾರಣವಾಗಿ ಸಂತೋಷಪಡುವಿರಿ. ಈ ದಿನದ ಆರಂಭವು ಬಹಳ ಉತ್ಸಾಹದಿಂದ ಇರುವುದು. ನೇರ ನಡೆಗೆ ನೀವು ಪ್ರಸಿದ್ಧರಾಗಿರುವಿರಿ. ತಾಯಿಯ ವಾತ್ಸಲ್ಯವು ಸಿಗುವುದು. ಅಸೂಯೆಯಿಂದ ನಿಮ್ಮ ಇತರ ಕೆಲಸಗಳನ್ನು ಹಾಳುಮಾಡಿಕೊಳ್ಳುವಿರಿ. ಬರುವ ಹಣವನ್ನು ನೀವು ತದೇಕ ಚಿತ್ತದಿಂದ ನಿರೀಕ್ಷಿಸಬಹುದು. ಸ್ನೇಹಿತರ ಸಹಾಯದಿಂದ ನಿಮಗೆ ಬಲವು ಬರುವುದು. ನಿಮ್ಮವರಲ್ಲಿ ಯಾರನ್ನಾದರೂ ಕಳೆದುಕೊಳ್ಳುವ ಸಾಧ್ಯತೆ ಇದೆ.

ಕನ್ಯಾ ರಾಶಿ: ಇಂದು ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಗಮನ ಕೊಡುವಿರಿ. ನಿಮ್ಮ ಭೇಟಿಯ ಸಮಯದಲ್ಲಿ ಅಪರಿಚಿತರು ಕೆಲವು ಪ್ರಮುಖ ಮಾಹಿತಿಯನ್ನು ನಿಮ್ಮಿಂದ ಪಡೆಯಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನ ಮತ್ತು ಬರವಣಿಗೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸುವ ಅವಶ್ಯಕತೆ ಇದೆ. ಸ್ನೇಹಿತರ ಜೊತಗೆ ಸ್ವಲ್ಪ ಸಮಯ ಮೋಜಿನಿಂದ ಕಳೆಯುತ್ತೀರಿ. ನಿಮ್ಮ ಸಂಬಂಧಿಕರಿಂದ ಕೆಲವು ಉತ್ತಮ ಸಲಹೆಯನ್ನು ಪಡೆಯಬಹುದು. ಕಾನೂನು ಪ್ರಕರಣದಲ್ಲಿ ನೀವು ಗೆಲ್ಲುವ ಎಲ್ಲ ಸಾಧ್ಯತೆಗಳಿವೆ. ನಿಮ್ಮ ಉದ್ಯೋಗವನ್ನು ಅಪಹಾಸ್ಯ ಮಾಡಬಹುದು. ಸಂಗಾತಿಯನ್ನು ದೂರ ಮಾಡಿಕೊಂಡು ಮನೆಯಲ್ಲಿ ಕಷ್ಟವಾದೀತು. ನಿಮ್ಮ ಗುರಿಯಾಗಿಸಿಕೊಂಡು ಸಹೋದ್ಯೋಗಿಗಳು ಕೆಲಸವನ್ನು ಮಾಡುವರು. ಕೈಗೆ ಸಿಕ್ಕ ಭೂಮಿಯು ತಪ್ಪಿ ಹೋಗಬಹುದು. ನಿಮ್ಮ ಮಾತನಾಡುವ ಸ್ವಭಾವವು ಇತರರಿಗೆ ಕಿರಿಕಿರಿ ಉಂಟಾದೀತು. ಮಾತು ಸರಳವಾಗಿರಲಿ. ಉನ್ನತ ವ್ಯಾಸಂಗಕ್ಕಾಗಿ ನೀವು ಸ್ನೇಹಿತನ‌ ಜೊತೆ ತೆರಳುವಿರಿ.

ತುಲಾ ರಾಶಿ: ಇಂದು ನೀವು ಹೆಚ್ಚು ಭೌತಿಕ ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವಿರಿ. ನೀವು ಎಲ್ಲದರಲ್ಲಿಯೂ ಆಸಕ್ತಿಯನ್ನು ಉಳಿಸಿಕೊಳ್ಳುವಿರಿ. ನಿಮ್ಮ ಕಾರ್ಯದ ತಪ್ಪಿನಿಂದ ಅಧಿಕಾರಿಗಳು ನಿಮ್ಮನ್ನು ನಿಂದಿಸಬಹುದು. ವಿರಳ ಲಾಭದ ಅವಕಾಶಗಳ ಬಗ್ಗೆಯೂ ನೀವು ಗಮನ ಹರಿಸಬೇಕು. ಯಾವುದೇ ಕೆಲಸದ ಬಗ್ಗೆ ಮೊಂಡುತನ ಮತ್ತು ದುರಹಂಕಾರವನ್ನು ತೋರಿಸಬೇಡಿ. ಪ್ರತಿಕೂಲ ಪರಿಸ್ಥಿತಿಯಲ್ಲೂ ನಿಮ್ಮ ಧೈರ್ಯವನ್ನು ಕಾಪಾಡಿಕೊಳ್ಳಬೇಕು. ಇದು ಜಾಣತನವೂ ಹೌದು. ಅನಿರೀಕ್ಷಿತ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಇಂದು ಹಣದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗುವುದು. ಅಧಿಕಾರಿಗಳು ಹೆಚ್ಚು ಒತ್ತಡದಿಂದ ಇರುವರು. ವ್ಯವಹಾರಕ್ಕೆ ಸಂಬಂಧಪಟ್ಟಂತೆ ಮಾತುಗಳು ನಿಖರವಾಗಿ ಇರಲಿ. ಖರ್ಚಿನ ನಿಯಂತ್ರಣವನ್ನು ಮಾಡುವುದು ಕಷ್ಟವಾದೀತು. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ನಿಯಮಗಳನ್ನು ಹಾಕಿಕೊಳ್ಳುವುದು ಉತ್ತಮ. ಸಹೋದ್ಯೋಗಿಗಳ ಜೊತೆ ಸಲುಗೆಯಿಂದ ಇರುವಿರಿ.

ವೃಶ್ಚಿಕ ರಾಶಿ: ಇಂದು ನಿಮಗೆ ಸಾಹಸದಲ್ಲಿ ಅತಿಯಾದ ಆಸಕ್ತಿ ಇರುವುದು. ನೀವು ಸಣ್ಣ ಪ್ರವಾಸಕ್ಕೆ ಹೋಗುವ ಮನಸ್ಸಾಗುವುದು. ಸಹೋದರರ ಸಂಪೂರ್ಣ ಸಹಕಾರವಿರುತ್ತದೆ. ಸಾಮಾಜಿಕ ಕಾರ್ಯಗಳನ್ನು ನೀವು ಹೆಚ್ಚು ಮಾಡುವಿರಿ. ನೀವು ಹೊಸದನ್ನು ಪ್ರಾರಂಭಿಸುವುದು ಒಳ್ಳೆಯದೇ. ನೀವು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯವನ್ನು ಸ್ವೀಕರಿಸಲು ಆಲೋಚಿಸುವಿರಿ. ಜವಾಬ್ದಾರಿಯನ್ನು ಅರ್ಥಮಾಡಿಕೊಂಡು, ಆಲಸ್ಯವನ್ನು ಬಿಟ್ಟು ಪ್ರಯತ್ನಿಸಿ. ಹಳೆಯ ಹೂಡಿಕೆಯಿಂದ ಉತ್ತಮ ಹಣವನ್ನು ಗಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನೀವು ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ಅದನ್ನು ಮರಳಿ ಪಡೆಯುವ ಸಾಧ್ಯತೆ ತುಂಬಾ ಕಡಿಮೆ. ವಿರೋಧಿಗಳು ಕಾರ್ಯಕ್ಷೇತ್ರದಲ್ಲಿ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಬಹುದು. ಯಾರದೋ ಮಾತಿನಿಂದ ನಿಮ್ಮ ನೆಮ್ಮದಿಯನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ಇಂದು ನಿಮಗೆ ಪ್ರಶಂಸೆಯಿಂದ ಜವಾಬ್ದಾರಿಗಳೂ ಹೆಚ್ಚುವುದು. ನಿಮ್ಮ ಪಾಲಿನದ್ದಷ್ಟನ್ನು ಜೋಪಾನವಾಗಿ ಇರಿಸಿಕೊಳ್ಳಿ. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನೌಕರರು ಒಪ್ಪುವುದಿಲ್ಲ.

ಧನು ರಾಶಿ: ನಿಮ್ಮ ಪೋಷಕರ ಜೊತೆ ನೀವು ಆಸ್ತಿಯ ವಿಚಾರವಾಗಿ ಚರ್ಚಿಸುವಿರಿ. ಎಲ್ಲರೊಂದಿಗೆ ಪ್ರೀತಿಯನ್ನು ಬೆಳೆಸಿಕೊಳ್ಳುವಿರಿ. ಇಂದು ನೀವು ಆಚರಣೆಗೆ ಹೆಚ್ಚು ಒತ್ತು ನೀಡುವಿರಿ. ರಾಜಕೀಯದಲ್ಲಿ ನಿಮಗೆ ಜನಬೆಂಬಲ ಹೆಚ್ಚಾಗಬಹುದು. ನೀವು ಅಮೂಲ್ಯವಾದ ವಸ್ತುವನ್ನು ಉಡುಗೊರೆಯಾಗಿ ಆಪ್ತರಿಗೆ ಕೊಡುವಿರಿ. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಶ್ರದ್ಧೆ ಹೆಚ್ಚಿರುವುದು. ಇನ್ನೊಬ್ಬರನ್ನು ಹಿಂದಿಕ್ಕಲು ಪ್ರಯತ್ನ ಪೂರ್ವಕವಾಗಿ ಕಾರ್ಯ ಮಾಡುವಿರಿ. ಸ್ನೇಹಿತನ ಮನೆಯಲ್ಲಿ ಇಂದು ಹಬ್ಬದ ವಾತಾವರಣವು ಇರಲಿದೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹಾದಿ ಸುಗಮವಾಗಲಿದೆ. ನಂಬಿಕೆಯಿಂದ ಕೆಲಸವನ್ನು ಮಾಡುವಿರಿ. ಪ್ರಯತ್ನಿಸಿದ ಕಾರ್ಯಗಳು ನಿಮಗೆ ಬಹುಪಾಲು ಉತ್ತಮ‌ ಫಲಿತಾಂಶವು ಕೊಡುವುದು. ಸ್ವಂತ ಉದ್ಯೋಗಸ್ಥರು ಲಾಭ ಗಳಿಸುವರು. ಯಾರೊಂದಿಗೂ ವೈರ ಬೇಡ. ಸರ್ಕಾರದಿಂದ ಕೆಲವು ವಿಚಾರಕ್ಕೆ ಕಿರಿಕಿರಿ ಉಂಟಾದೀತು.

ಮಕರ ರಾಶಿ: ಇಂದು ನೀವು ಹಲವು ದಿನಗಳಿಂದ ಮಾಡುತ್ತಿದ್ದ ಕಾರ್ಯದಲ್ಲಿ ದೊಡ್ಡ ಗುರಿಯನ್ನು ಪೂರೈಸುವಿರಿ. ಸಹೋದ್ಯೋಗಿಗಳ ಬಗ್ಗೆ ಪೂರ್ವಾಗ್ರಹವಿರುವುದು. ನೀವು ಸಂಬಂಧಿಕರ ಜೊತೆ ಸ್ವಲ್ಪ ಸಮಯ ಒಟ್ಟಿಗೆ ಕುಳಿತು ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಿರಿ. ಯಾವ ಕಾರ್ಯವನ್ನಾದರೂ ಜಾಣ್ಮೆಯಿಂದ ಮಾಡುವಿರಿ. ದುಃಖವನ್ನು ನೀವು ಸರಿಯಾದ ಜನರ ಬಳಿ ಹೇಳಿಕೊಳ್ಳುವಿರಿ. ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು. ನಾಯಕತ್ವಸ ಸಾಮರ್ಥ್ಯವು ಬಲವಾಗಬಹುದು. ಕ್ರಿಯಾಶೀಲತೆಯು ನಿಮ್ಮ ಅಧಿಕಾರಕ್ಕೆ ಪೂರಕವಾಗಿರುವುದು. ನಿಮ್ಮ ಸುತ್ತಲಿನ ವಾತಾವರಣವು ನಿಮಗೆ ಹಿತವಾಗುವುದು. ನಿಮ್ಮ ಸಹನೆಯನ್ನು ಪರೀಕ್ಷಿಸುವ ಸಂದರ್ಭಗಳು ಬರಬಹುದು. ಆಸ್ತಿಯ ಭಾಗವನ್ನು ಮಾರಾಟ ಮಾಡಬೇಕಾದೀತು. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಬಾಕಿ ಇರುವುದು. ಆಲಸ್ಯದಿಂದ ಮುಖ್ಯ ಕೆಲಸವನ್ನೇ ಮರೆಯುವಿರಿ. ಯಾವುದೋ ಯೋಚನೆಯಲ್ಲಿ ಮುಖ್ಯ ಕಾರ್ಯವು ಗೌಣವಾಗಬಹುದು.

ಕುಂಭ ರಾಶಿ: ಇಂದು ನಿಮಗಾಗಿ ಯಾರಾದರೂ ಸಹಕಾರವನ್ನು ನೀಡಲು ಬರಬಹುದು. ಹೆಚ್ಚುತ್ತಿರುವ ವೆಚ್ಚಗಳನ್ನು ಕಡಿವಾಣ ಹಾಕಿಕೊಳ್ಳಿ. ಆರೋಗ್ಯದ ವಿಚಾರದಲ್ಲಿ ನೀವು ಜಾಗರೂಕರಾಗಿರಬೇಕು. ನೀವು ಅಪೂರ್ಣವಾದ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವಿರಿ. ನಿಮ್ಮ ಕಾರ್ಯದ ಒಟ್ಟು ಅವಲೋಕನದ ಅವಶ್ಯಕತೆ ಇರಲಿದೆ. ನಿಮ್ಮ ಮಾತಿನಿಂದ ಸ್ಥಾನಮಾನ ಮತ್ತು ಪ್ರತಿಷ್ಠೆಗಳು ಹೆಚ್ಚಾಗಬಹುದು. ಆಮದಿನ ವಿಷಯದಲ್ಲಿ ನೀವು ಗೊಂದಲವಿರಬಹುದು. ನೀವು ಮಂಗಳಕರ ಕಾರ್ಯಕ್ರಮದಲ್ಲಿ ಭಾಗಿಯಾಗುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಾಡುವಿರಿ. ಸಂತೋಷದ ಕೂಟದಲ್ಲಿ ನೀವು ಭಾಗಿಗಳಾಗುವಿರಿ. ಉದ್ಯಮವನ್ನು ಆರಂಭಿಸುವ ಮೊದಲು ಸರಿಯಾದ ಯೋಜನೆ ಇರಲಿ.

ಮೀನ ರಾಶಿ: ಆರ್ಥಿಕ ವ್ಯವಹಾರಕ್ಕೆ ಇಂದು ಶುಭ ದಿನವಾಗಿದೆ. ನಿಮ್ಮ ಆಲಸ್ಯದ ಕಾರಣ ನಿಮ್ಮ ಕೆಲಸದಲ್ಲಿ ಅಜಾಗರೂಕರಾಗಿರುವಿರಿ. ನಿಮ್ಮ ಆದಾಯವನ್ನು ಹೆಚ್ಚಿಸಲು ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸುವಿರಿ. ಪ್ರೀತಿಪಾತ್ರರ ಬೆಂಬಲ ನಿಮ್ಮೊಂದಿಗೆ ಇದ್ದರೂ ಮಾನಸಿಕವಾಗಿ ಒಪ್ಪಿಕೊಳ್ಳಲಾರಿರಿ. ಆಡಳಿತದ ವಿಚಾರದಲ್ಲಿ ನೀವು ಬಹಳ ಗಂಭೀರವಾಗುವಿರಿ. ನಿಮ್ಮ ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ನೀವು ತೊಡೆದುಹಾಕುತ್ತೀರಿ. ನಿಮ್ಮ ಆರ್ಥಿಕ ಪರಿಸ್ಥಿತಿಯು ಮೊದಲಿಗಿಂತ ಉತ್ತಮವಾಗಿದ್ದು, ಹೂಡಿಕೆಯ ಕಡೆ ಗಮನವಿರುವುದು. ನಿಮ್ಮ ಪ್ರಮುಖ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನಿಮ್ಮ ಕೈಲಾದಷ್ಟು ಪ್ರಯತ್ನಿಸಿ. ಸ್ಥಿರತೆಯು ನಿಮಗೆ ಬಲವನ್ನು ಕೊಡುವುದು. ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಮಾಡಿಕೊಳ್ಳುವಿರಿ. ಮಕ್ಕಳಿಂದ ಆಗುವ ಅಸಮಾಧಾನವನ್ನು ಸಹಿಸಲಾರಿರಿ. ವಿರೋಧಿಗಳ ಮಾತನ್ನು ನೀವು ನಿರ್ಲಕ್ಷಿಸುವಿರಿ. ನಿಮ್ಮ ಉದ್ಯೋಗದ ತೊಂದರೆಗಳನ್ನು ಸರಿಮಾಡಿಕೊಂಡು ಮುನ್ನಡೆಯುವಿರಿ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 0

Leave a Reply

Your email address will not be published. Required fields are marked *