ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ನವಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ: ವೈಧೃತಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 56 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 6 ಗಂಟೆ 36 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 05:09 ರಿಂದ 06:37ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:47 ರಿಂದ 02:14ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:42 ರಿಂದ 05:09ರ ವರೆಗೆ.

ಮೇಷ ರಾಶಿ: ಇಂದು ಮೋಜಿಗಾಗಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ನಿಮ್ಮ ಜೀವನದಲ್ಲಿ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಹಲವು ಗೊಂದಲಗಳು ಬರಬಹುದು. ಹಿರಿಯ ಸದಸ್ಯರು ನಿಮ್ಮ ಮಾತಿನಿಂದ ಸಂತೋಷಪಡುತ್ತಾರೆ. ನಿಮ್ಮ ಸಂಗಾತಿಯಿಂದ ವಿಶೇಷ ಉಡುಗೊರೆಯನ್ನು ಪಡೆಯಬಹುದು. ಉದ್ಯೋಗಿಗಳಿಗೆ ಇಂದು ಹೆಚ್ಚಿನ ಕೆಲಸದ ಹೊರೆ ಬರಬಹುದು. ಹಿರಿಯರ ಸಹಕಾರದಿಂದ ಸಮಯಕ್ಕೆ ಸರಿಯಾಗಿ ಮಾರ್ಗವು ತೆರೆಯುವುದು. ಮೋಹದ ಕಾರಣದಿಂದ ನಿಮ್ಮವರ ತಪ್ಪನ್ನು ಹೇಳಲು ನೀವು ತಯಾರಿರುವುದಿಲ್ಲ. ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ. ಗೌಪ್ಯತೆಯ ವಿಚಾರದಲ್ಲಿ ವರ್ತನೆಯು ಎಲ್ಲರೂ ಮೆಚ್ಚುವಂಥದ್ದಾಗಿರಲಿದೆ. ಸ್ತ್ರೀಯರಿಂದ ಸಹಕಾರ ದೊರೆತರೂ ಕೆಲಸ ಪೂರ್ಣವಾಗದು. ನಿಮ್ಮ ಮನೋಬಲವನ್ನು ಕುಗ್ಗಿಸುಲು ಸಹೋದ್ಯೋಗಿಗಳ ಪ್ರಯತ್ನ ಇರಲಿದೆ. ನಿಮ್ಮ ಬಗ್ಗೆ ನಿಮಗೇ ಬೇಕೆಂದು ಏನಾದರೂ ಹೇಳಿಯಾರು.
ವೃಷಭ ರಾಶಿ: ಇಂದು ಅನೇಕ ವಿಷಯಗಳಲ್ಲಿ ಉತ್ತಮ ಫಲಿತಾಂಶವು ನಿಮ್ಮ ಉತ್ಸಾಹವನ್ನು ದುಪ್ಪಟ್ಟು ಮಾಡೀತು. ವ್ಯಾಪಾರಿಗಳು ತಮ್ಮ ಯೋಜನೆಗಳಿಂದ ಉತ್ತಮ ಲಾಭವನ್ನು ಪಡೆಯಬಹುದು. ದೀರ್ಘಾವಧಿಯ ಯಾವುದೇ ಕೆಲಸವು ನಿಮಗೆ ತೊಂದರೆ ನೀಡುತ್ತಿದ್ದರೆ, ಇಂದು ಪರಿಹಾರವಾಗಲಿದೆ. ಆರೋಗ್ಯದ ವಿಷಯದಲ್ಲಿ ಸ್ವಲ್ಪ ತೊಂದರೆ ಇರುತ್ತದೆ. ವಿದ್ಯಾರ್ಥಿಗಳು ಯಾವುದೇ ಸಮಸ್ಯೆಗಳಿದ್ದಲ್ಲಿ ಶಿಕ್ಷಕರಿಂದ ಪರಿಹಾರವು ಲಭ್ಯ.. ಇಂದು ನೀವು ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ಸದುಪಯೋಗವಾಗುವಂತಹ ಕೆಲಸದ ಕಡೆ ಗಮನವಿರಲಿ. ಸುಲಭದ ಕಾರ್ಯವನ್ನು ಸಂಕೀರ್ಣ ಮಾಡಿಕೊಂಡು ಚಿಂತಿಸುವಿರಿ. ಖರೀದಿಯ ವಸ್ತುಗಳು ಕಳೆದುಹೋಗುವ ಸಂಭವವಿದೆ. ಕಾರಣಾಂತರಗಳಿಂದ ಬೇರೆ ಕಡೆ ವಾಸ ಮಾಡುವ ಸಂದರ್ಭವು ಬರಬಹುದು. ಒತ್ತಡವನ್ನು ನೀವಾಗಿಯೇ ತಂದುಕೊಳ್ಳುವ ಸಾಧ್ಯತೆ ಇದೆ. ದುಂದುವೆಚ್ಚವು ನಿಮಗೆ ಆಗಿಬರದು. ಎಲ್ಲರ ಜೊತೆ ಬೆರೆಯುವ ಅವಕಾಶಗಳು ಇಂದು ಕಡಿಮೆ ಇರಲಿದೆ.
ಮಿಥುನ ರಾಶಿ: ಇಂದು ಕೆಲವು ಕೆಲಸದಲ್ಲಿ ಸಮಯಪ್ರಜ್ಞೆಯ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸಬಹುದು. ಈ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಏನಾದರೂ ಹೊಸ ತಂತ್ರಗಳು ಬರಬಹುದು. ಕುಟುಂಬ ಸದಸ್ಯರಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಲು ಬಯಸುವಿರಿ. ನಿಮ್ಮ ವ್ಯವಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ನೀವು ಪರಿಗಣಿಸುತ್ತಿದ್ದರೆ, ಅವರು ಯಶಸ್ವಿಯಾಗುವ ಸಾಧ್ಯತೆಗಳಿವೆ. ನೀವು ಕೆಲವು ನಷ್ಟಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಮದುವೆಗೆ ಸಂಬಂಧಿಸಿದ ಎಲ್ಲ ಅಡೆತಡೆಗಳು ನಿವಾರಣೆಯಾಗುತ್ತವೆ. ಸಂಗಾತಿಯ ಜೊತೆಗಿನ ವೈಮನಸ್ಯವು ದೂರಾಗಿ ಸಂತೋಷವು ಇಂದು ನೆಲೆಸುವುದು. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣ ಇರಲಿದೆ. ಅಪ್ರಾಮಾಣಿಕತೆಯು ನಿಮಗೆ ಇಷ್ಟವಾಗದು. ಅಸಾಧ್ಯವಾದ ಕಾರ್ಯವನ್ನು ಮಾಡಿ ಸಮಯವನ್ನು ವ್ಯರ್ಥ ಮಾಡುವುದು ಬೇಡ. ಶರೀರಪೀಡೆಯನ್ನು ನೀವು ಅನುಭವಿಸುವುದು ಕಷ್ಡವಾಗಬಹುದು. ಸಂಗಾತಿಯ ಸ್ವಭಾವವು ಇಂದು ಸ್ಪಷ್ಟವಾಗಿ ತಿಳಿಯಿತು ಎಂದು ಅಂದುಕೊಂಡಿರುವಿರಿ.
ಕರ್ಕ ರಾಶಿ: ಇಂದು ನಿಮ್ಮ ವಿರೋಧಿಗಳು ನಿಮ್ಮನ್ನು ಕೆಣಕಬಹುದು. ತಾಳ್ಮೆಯನ್ನು ಬಿಡುವುದು ಬೇಡ. ಇಲ್ಲದಿದ್ದರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಆರೋಗ್ಯವು ಹದಗೆಡುವ ಸಾಧ್ಯತೆಯಿದೆ. ನೀವು ವ್ಯಾಪಾರ ತಂಡಕ್ಕಾಗಿ ಯೋಜಿಸಬಹುದು. ನೌಕರರು ಹೊರಗಡೆಯೂ ಎಚ್ಚರಿಕೆಯಿಂದ ಇರಬೇಕಾಗುವುದು. ನಿಮ್ಮ ಎಲ್ಲ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ನಿರೀಕ್ಷೆಯು ಹುಸಿಯಾಗಿ ಬೇಸರವಾಗಬಹುದು. ಸಂಗಾತಿಗೆ ಉದ್ಯೋಗವನ್ನು ಕೊಡಿಸಲು ಓಡಾಟ ಮಾಡುವಿರಿ. ನಿಮ್ಮ ಬಳಿಯೇ ಎಲ್ಲವೂ ಇದ್ದರೂ ಇನ್ನೊಬ್ಬರ ಸ್ವತ್ತಿಗೆ ಕಣ್ಣು ಹಾಕುವಿರಿ. ನಿಮ್ಮ ವ್ಯವಹಾರದಲ್ಲಿ ಲೆಕ್ಕವು ತಪ್ಪಾಗಿ ನೀವು ಹಣವನ್ನು ಕಳೆದುಕೊಳ್ಳಬಹುದು. ಸ್ನೇಹಿತರ ಜೊತೆ ಎಲ್ಲಿಗಾದರೂ ಹೋಗಬೇಕು ಎನಿಸುವುದು. ವಿದ್ಯಾರ್ಥಿಗಳಿಗೆ ಮುಖ್ಯಘಟ್ಟದಲ್ಲಿ ಸೋಲಾಗಬಹುದು. ಉದ್ಯೋಗದಲ್ಲಿ ನೀವು ಜಾಣತನವನ್ನು ತೋರಿಸುವ ಅವಶ್ಯಕತೆ ಇಲ್ಲ. ಪ್ರಯಾಣದಲ್ಲಿ ಜಾಗರೂಕತೆ ಮುಖ್ಯವಾಗಿರಲಿ.
ಸಿಂಹ ರಾಶಿ: ಇಂದು ಅನೇಕ ವಿಷಯಗಳ ಬಗ್ಗೆ ತಿಳಿವಳಿಕೆ ಬರುವುದು. ಇದು ನಿಮ್ಮ ಮುಂದಿನ ನಡೆಗೆ ಪೂರಕವಾಗಿ ಇರುವುದು. ವ್ಯಾಪಾರಿಗಳು ಅನಿರೀಕ್ಷಿತವಾಗಿ ಉತ್ತಮ ಲಾಭವನ್ನು ಗಳಿಸುವರು. ಸಂಬಂಧವಿಲ್ಲದ ವಿಚಾರದಲ್ಲಿ ಚರ್ಚೆ ಮಾಡಿ ಸಮಯವನ್ನು ವ್ಯರ್ಥ ಮಾಡುವಿರಿ. ಸ್ನೇಹಿತರಿಂದ ಬಾಲಿಶ ಸಲಹೆ ಪಡೆಯುವುದನ್ನು ತಪ್ಪಿಸಬೇಕು. ಇದು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ದಾರಿ ಮಾಡಿಕೊಡುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯಬಹುದು. ಆಪ್ತರ ಬಗ್ಗೆ ನಿಮಗೆ ಹಲವು ಅನುಮಾನಗಳು ಇರಬಹುದು. ಕಛೇರಿಯ ಕಿರಿಕಿರಿಯಿಂದ ಮನೆಯಲ್ಲಿಯೂ ನಿಮಗೆ ನೆಮ್ಮದಿ ಸಿಗದು. ಖುಷಿಯ ವಾತಾವರಣವಿದ್ದರೂ ನಿಮಗೆ ನಿಮ್ಮದೇ ಚಿಂತೆ ಕಾಡಬಹುದು. ಬಹಳ ದಿನಗಳ ಅನಂತರ ಪುಣ್ಯ ಸ್ಥಳಗಳಿಗೆ ಹೋಗುವಿರಿ. ಜವಾಬ್ದಾರಿಯ ಕಾರಣಕ್ಕೆ ನಿಮ್ಮ ವರ್ತನೆಯಲ್ಲಿ ಭಿನ್ನತೆ ಕಾಣುವುದು. ನಿಮಗೆ ಬರಬೇಕಾದ ಹಣವನ್ನು ಬೇರೆಯವರ ಮೂಲಕ ಪಡೆದುಕೊಳ್ಳುವಿರಿ.
ಕನ್ಯಾ ರಾಶಿ: ಇಂದು ಸಮಾಜದಲ್ಲಿ ಗೌರವವನ್ನು ಪಡೆಯುವಿರಿ. ನಿಮ್ಮ ಮನೆಗೆ ಹೊಸ ವಾಹನವನ್ನು ಖರೀದಿಸುವ ಉತ್ಸಾಯವಿರುವುದು. ನಿಮ್ಮ ಕುಟುಂಬ ಜೀವನದಲ್ಲಿ ಎಲ್ಲರೂ ಸಂತೋಷದಿಂದ ಇರಲು ಬಯಸುವಿರಿ. ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ. ಬಹಳ ದಿನಗಳ ಅನಂತರ ಹಳೆಯ ಬಂಧುಗಳ ಭೇಟಿಯಾಗುವಿರಿ. ಗೌಪ್ಯ ವಿಷಯಗಳನ್ನು ನಿಮ್ಮ ಸಂಗಾತಿಯಿಂದ ಹಂಚಿಕೊಳ್ಳುವಿರಿ. ಸ್ತ್ರೀಯರಿಗೆ ತಾಳ್ಮೆಯ ಪರೀಕ್ಷೆ ಆಗಬಹುದು. ಮನೆಯ ಕೆಲಸದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಸಹೋದರಿಯರ ನಡುವೆ ಕಲಹವಾಗಬಹುದು. ಅಮೂಲ್ಯವಾದ ವಸ್ತುಗಳನ್ನು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ. ಬಂಧುಗಳ ಆರೋಪವನ್ನು ನೀವು ನಿರಾಕರಿಸುವಿರಿ. ಮನೆಯಲ್ಲಿ ನಿಮ್ಮ ಮಾತಿಗೆ ಯಾವ ಉತ್ತರವೂ ಕೊಡದೇ ಇರುವುದು ನಿಮಗೆ ನೋವಾಗುವುದು. ದುರಭ್ಯಾಸವನ್ನು ಹಿಡಿಸಿಕೊಳ್ಳುವ ಸಂದರ್ಭವು ಬರಬಹುದು. ಕಲಾವಿದರು ಇತರರ ಸಹಕಾರವನ್ನು ಪಡೆಯುವರು.
ತುಲಾ ರಾಶಿ: ಇಂದು ಕೆಲವು ವಿಷಯಗಳ ಬಗ್ಗೆ ಅನಗತ್ಯವಾಗಿ ಚಿಂತಿಸುವಿರಿ. ನಿಮ್ಮ ಕುಟುಂಬದಲ್ಲಿ ಪರಸ್ಪರ ಹೊಂದಣಿಕೆಯಲ್ಲಿ ಭಿನ್ನಾಭಿಪ್ರಾಯವು ಬರಬಹುದು. ಇಂದಿನ ನಿಮ್ಮ ಸುತ್ತಲಿನ ವಾತಾವರಣವು ಸಾಮಾನ್ಯವಾಗಿರುವುದು. ನಿಮ್ಮ ಮನಸ್ಸಿನಲ್ಲಿ ಪ್ರಾಣಭೀತಿಯು ಹೆಚ್ಚಾಗಬಹುದು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮಫಲಿತಾಂಶವನ್ನು ಪಡೆಯುವ ಕಾರಣ ಸಂತೋಷದಿಂದ ಇರುವರು. ಪ್ರಗತಿಯ ಹೊಸ ಮಾರ್ಗಗಳು ನಿಮಗಾಗಿ ತೆರೆದುಕೊಳ್ಳಬಹುದು. ದಾಂಪತ್ಯದಲ್ಲಿ ಶಾಂತಿಯು ಬೇಕಾದರೆ ಸುಮ್ಮನಿರುವುದು ಉತ್ತಮ. ಕೋಪವನ್ನು ದೀರ್ಘಕಾಲ ಮುಂದುವರಿಸುವುದು ಬೇಡ. ಸ್ವಾಭಿಮಾನ ಬಂಧುಗಳ ಎದುರು ಕಾಣಿಸಿಕೊಳ್ಳಬಹುದು. ಎಲ್ಲ ವಿಚಾರದಲ್ಲಿ ಹಿನ್ನಡೆ ಇರಲಿದೆ. ನಿಮ್ಮ ಸ್ವಭಾವಕ್ಕೆ ಯೋಗ್ಯವಾದ ವ್ಯಕ್ತಿಯ ಗೆಳೆತನವಾಗಲಿದೆ. ಸ್ವಂತ ಉದ್ಯಮವನ್ನು ಮಾಡುತ್ತಿದ್ದರೆ ನಿರೀಕ್ಷಿತ ಲಾಭವನ್ನು ತಲುಪುವುದು ಕಷ್ಟವಾದೀತು.
ವೃಶ್ಚಿಕ ರಾಶಿ: ಇಂದು ಸಿಗುವ ಅನಿರೀಕ್ಷಿತ ಲಾಭದಿಂದ ನಿಮಗೆ ಖುಷಿಯಾಗುವುದು. ವಾಹನ ಚಾಲಕರು ಇಂದು ಜಾಗರೂಕರಾಗಿರಬೇಕು. ವ್ಯಾಪಾರಿಗಳು ಪಾಲುದಾರಿಕೆಯಲ್ಲಿ ಉತ್ತಮ ವ್ಯವಹಾರಗಳನ್ನು ಮಾಡುತ್ತಾರೆ. ಉತ್ತಮ ಫಲಿತಾಂಶವನ್ನೂ ಪಡೆಯುತ್ತಾರೆ. ನೀವು ಹೊಸದನ್ನು ಏನ್ನಾದರೂ ಪ್ರಾರಂಭಿಸಲು ಬಯಸಿದರೆ ನಿಮಗೆ ಒಳ್ಳೆಯದು. ಸಹೋದರ ಸಹೋದರಿಯರ ಜೊತೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಜಗಳಗಳು ಆಗಬಹುದು. ಹೊಸ ಉದ್ಯೋಗವನ್ನು ಹುಡುಕುವವರಿಗೆ ಹೆಚ್ಚು ಗೊಂದಲವಾಗಬಹುದು. ಇಂದು ಒಂದು ಮಿತಿಯಲ್ಲಿ ನಿಮ್ಮ ಮಾತಿರಲಿ. ತಾಯಿಯ ವಿಚಾರದಲ್ಲಿ ಕೋಪಗೊಳ್ಳುವಿರಿ. ಸಹೋದರರ ಸಹಕಾರವು ನಿಮಗೆ ಬಲವನ್ನು ಕೊಡಬಹುದು. ತಾಯಿಯ ಪ್ರೀತಿಯು ನಿಮಗೆ ಅಪರೂಪವೆನಿಸುವಂತೆ ಆಗುವುದು. ನಿಮ್ಮ ಸ್ವಭಾವವನ್ನು ಬಿಟ್ಟು ಎಲ್ಲರ ಜೊತೆ ಹೊಂದಾಣಿಕೆಯಿಂದ ಇರುವಿರಿ. ಯಾರ ಸಹಾಯವನ್ನೂ ಪಡೆಯದೆ ಕಾರ್ಯವು ನಿಧಾನವಾಗುವುದು.
ಧನು ರಾಶಿ: ಇಂದು ಕಾನೂನು ವಿಷಯಗಳಲ್ಲಿ ಉತ್ತಮ ಫಲಿತಾಂಶವನ್ನು ಸಾಧಿಸುವಿರಿ. ನೀವು ಹೊಸ ಆದಾಯದ ಮೂಲಗಳನ್ನು ಹುಡುಕುವಿರಿ. ಕುಟುಂಬದ ಜನರು ನಿಮ್ಮ ಮಾತನ್ನು ಗೌರವಿಸುತ್ತಾರೆ. ಇದರಿಂದ ನಿಮಗೆ ತೃಪ್ತಿ ಸಿಗುವುದು. ವಿಶೇಷವಾದುದನ್ನು ಮಾಡಬೇಕೆಂಬ ನಿಮ್ಮ ಬಯಕೆ ಬಲವಾಗಿರುತ್ತದೆ. ಅಪರಿಚಿತರ ಮಾತುಗಳಿಂದ ದೂರವಿರಬೇಕು. ವಹಿವಾಟಿಗೆ ಸಂಬಂಧಿಸಿದ ಯಾವುದೇ ವಿಷಯವು ನಿಮಗೆ ತಲೆನೋವಾಗಬಹುದು. ಕೆಲವು ಕೆಲಸಗಳಿಗಾಗಿ ನೀವು ಸ್ವಲ್ಪ ದೂರ ಪ್ರಯಾಣಿಸಬೇಕಾಗಬಹುದು. ಮಿಂಚಿದ ಕಾರ್ಯವನ್ನು ಎಷ್ಟೆಂದು ಚಿಂತಿಸುವಿರಿ. ಹಳೆಯ ಮನೆಯನ್ನು ಸುಂದರೀಕರಣ ಮಾಡುವ ಚಿಂತನೆ ನಡೆಸುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳುವರು. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು. ಇನ್ನೊಬ್ಬರಿಗಾಗಿ ವಾಹನ ಚಲಾಯಿಸಬೇಕಾದೀತು. ತುರ್ತು ಕಾರ್ಯದ ನಿಮಿತ್ತ ಪ್ರಯಾಣ ಮಾಡಬೇಕಾದೀತು. ನಿಮ್ಮ ಮಾತಿನ ಮೇಲೆ ಪೂರ್ಣ ವಿಶ್ವಾಸವನ್ನು ಇಡುವುದು ಕಷ್ಟವಾಗಬಹುದು. ಬಂಧುಗಳ ಆಗಮನವನ್ನು ಇಂದು ನಿರೀಕ್ಷಿಸುವಿರಿ.
ಮಕರ ರಾಶಿ: ಇಂದು ನೀವು ಎಲ್ಲರಿಂದ ಉತ್ತಮ ಫಲಿತಾಂಶವನ್ನು ಪಡೆಯುವ ನಿರೀಕ್ಷೆ ಇರಲಿದೆ. ನೀವು ಹೊಸ ವಾಹನವನ್ನು ಖರೀದಿಸುವ ಬಗ್ಗೆ ಮುಂದುವರಿಯಬಹುದು. ನೀವು ಕುಟುಂಬ ಸದಸ್ಯರ ಜೊತೆ ಸೇರಿ ಹಬ್ಬದ ವಾತಾವರಣವು ನಿರ್ಮಾಣ ಮಾಡುವಿರಿ. ನೀವು ಹೊಸ ಕೆಲಸಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ನಿಮ್ಮ ತಾಯಿಗೆ ಯಾವುದಾದರೂ ಹಳೆಯ ಕಾಯಿಲೆ ಮರುಕಳಿಸಬಹುದು. ಬಹಳ ದಿನಗಳ ಅನಂತರ ಹಳೆಯ ಗೆಳೆಯರನ್ನು ಭೇಟಿಯಾಗುವ ಸಂತಸ ಇರಲಿದೆ. ವಿವಾಹದ ಮಾತುಕತೆ ನಿಮಗೆ ಖುಷಿ ತಂದರೂ ಅದನ್ನು ಹೇಳಿಕೊಳ್ಳಲು ಸಂಕೋಚಪಡುವಿರಿ. ಎಂದೂ ನಂಬದವರ ಮಾತನ್ನು ಇಂದು ನಂಬಬೇಕಾದೀತು. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು. ಇಂದು ಪರಿಶ್ರಮವಿದ್ದರೂ ಫಲವು ಅಲ್ಪವಿರಲಿದೆ. ನಿಮ್ಮ ಯೋಜನೆಯು ದೂರದೃಷ್ಟಿಯನ್ನು ಇಟ್ಟಕೊಳ್ಳಲಿ. ಹಳೆಯ ಸ್ನೇಹವನ್ನು ನೀವು ಗುರುತಿಸಲಾರಿರಿ.
ಕುಂಭ ರಾಶಿ: ಇಂದು ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ದುರ್ಬಲರಾಗುವಿರಿ. ಉದ್ಯಮಿಗಳು ಕೆಲವು ಹೊಸ ಕೆಲಸಗಳನ್ನು ಪ್ರಾರಂಭಿಸುವ ಲಕ್ಷಣವಿರುವುದು. ಆದರೆ ಪಾಲುದಾರಿಕೆಯಲ್ಲಿ ಏನನ್ನೂ ನಿಮ್ಮಷ್ಟಕ್ಕೇ ನಿರ್ಣಯ ಮಾಡಬೇಡಿ. ನಿಮ್ಮ ಮನಸ್ಸು ಯಾವುದೋ ಚಿಂತೆಯಲ್ಲಿ ಇರುವಂತೆ ತೋರುವುದು. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಕೆಲವು ಅಪವಾದವನ್ನು ಕೇಳಬೇಕಾದೀತು. ನೀವು ಕೆಲವು ಹಳೆಯ ತಪ್ಪುಗಳಿಂದ ಕಲಿಯಬೇಕು. ಇಂದು ಹೆಚ್ಚಿನ ಸಮಯವನ್ನು ತಂದೆ-ತಾಯಿಯರ ಸೇವೆಯಲ್ಲಿ ಕಳೆಯಬೇಕು ಎನಿಸಬಹುದು. ಇಂದು ನಡೆದ ಅಹಿತಕರ ಘಟನೆಯನ್ನು ಕೆಟ್ಟ ಗಳಿಗೆ ಎಂದು ಮರೆತುಬಿಡುವಿರಿ. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಕಚ್ಚಬಹುದು. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ. ನಿಷ್ಠುರದ ಮಾತಿನಿಂದ ಅನಂತರ ಪಶ್ಚಾತ್ತಾಪಗೊಳ್ಳುವಿರಿ. ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ತೊಂದರೆ ಎದುರಾಗಬಹುದು.
ಮೀನ ರಾಶಿ: ಇಂದು ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅನವಶ್ಯಕ ಜಗಳಗಳು, ಗೊಂದಲಗಳಿಂದ ನೀವು ತುಂಬಾ ಚಿಂತಿತರಾಗುತ್ತೀರಿ. ಕೆಲವು ಕಾರ್ಯಗಳು ಪೂರ್ಣಗೊಳ್ಳದ ಕಾರಣ ನೀವು ನಿರಾಶೆಗೊಳ್ಳುವಿರಿ. ನಿಮ್ಮ ಮಾತು ಮತ್ತು ನಡವಳಿಕೆಯಲ್ಲಿ ಸಂಯಮ ಬೇಕು. ಇಲ್ಲದಿದ್ದರೆ ಸಮಸ್ಯೆಗಳು ಉದ್ಭವಿಸಬಹುದು. ನಿಮ್ಮ ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಕಾನೂನಿನ ಕ್ರಮದಲ್ಲಿ ಮುಂದುವರಿದರೆ, ನೀವು ಅದರಲ್ಲಿ ಯಶಸ್ವಿಯಾಗುತ್ತೀರಿ. ರಾಜಕೀಯದಲ್ಲಿ ಕೆಲಸ ಮಾಡುವವರಿಗೆ ದೊಡ್ಡ ಹುದ್ದೆಗಳು ಸಿಗುತ್ತವೆ. ಉದ್ಯಮಿಗಳ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರವನ್ನು ಕಾನೂನಾತ್ಮಕವಾಗಿ ನಡೆಸಿದರೆ ಉತ್ತಮ. ಆಕಸ್ಮಿಕವಾಗಿ ಬರುವ ಅಲ್ಪ ಸಂಪತ್ತೂ ಕೈಯಲ್ಲಿ ನಿಲ್ಲದು. ಕೋಪವನ್ನು ಮಾಡುವ ಸಂದರ್ಭವು ಎದರಾಗಲಿದ್ದು, ನಿಮ್ಮ ನಿಯಂತ್ರಣದಲ್ಲಿ ಇರಲಿ. ಆದಾಯದ ಮೂಲಗಳನ್ನು ನೀವು ಉಳಿಸಿಕೊಳ್ಳುವುದು ಕಷ್ಟವಾದೀತು. ಸಂಗಾತಿಯ ನೋವನ್ನು ನಿಮ್ಮದೇ ಆದ ವಿಧಾನದಿಂದ ಸರಿ ಮಾಡುವಿರಿ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1