ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ಉಪನ್ಯಾಸಕರೂ ಇಲ್ಲ ಅತಿಥಿ ಉಪನ್ಯಾಸಕರೂ ಇಲ್ಲ.

ಚಿತ್ರದುರ್ಗ ಸೆ. 24 ಉಪನ್ಯಾಸಕರೂ ಇಲ್ಲ ಅತಿಥಿ ಉಪನ್ಯಾಸಕರೂ ಇಲ್ಲದೇ ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳು ಸೊರಗುತ್ತಿದ್ದು, ಕಾಲೇಜಿನ ಕೆಲವು ವಿಭಾಗಗಳಲ್ಲಿ ಉಳಿದ ಒಬ್ಬ ಇಬ್ಬರು ಉಪನ್ಯಾಸಕರನ್ನು
ವರ್ಗಾವಣೆಗೊಳಿಸದೇ ಅಲ್ಲಿಯೇ ಮುಂದುವರೆಸಲು ಅವಕಾಶ ನೀಡಿ ಅಥವಾ ಬೇರೆ ಯಾರಾದರೂ ಉಪನ್ಯಾಸಕರನ್ನು
ವರ್ಗಾವಣೆ/ನಿಯೋಜನೆ ಮಾಡಿ ಈ ಸಮಸ್ಯೆಯನ್ನು ಬಗೆಹರಿಸಿ ಐತಿಹಾಸಿಕ ಸರ್ಕಾರಿ ವಿಜ್ಞಾನ ಕಾಲೇಜನ್ನು ಉಳಿಸಿ ಬಡ ವಿದ್ಯಾರ್ಥಿಗಳಿಗೆ
ಭವಿಷ್ಯ ರೂಪಿಸಿಕೊಳ್ಳಲು ಸಹಕರಿಸಬೇಕಾಗಿ ಸರ್ಕಾರಿ ವಿಜ್ಞಾನ ಕಾಲೇಜಿನ ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರು ಜಿಲ್ಲಾ ಕಾಂಗ್ರೆಸ್
ಸಮಿತಿ ಪದವೀಧರರ ವಿಭಾಗ ಅಧ್ಯಕ್ಷರಾದ ಪ್ರಕಾಶ್ ರಾಮಾನಾಯ್ಕ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಚಿತ್ರದುರ್ಗದ ಐತಿಹಾಸಿಕ ಸರ್ಕಾರಿ ವಿಜ್ಞಾನ ಕಾಲೇಜು ರಾಜ್ಯದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದ್ದು ಯಶಸ್ವಿ 75ವರ್ಷ
ಪೂರೈಸಿದೆ.ಈ ಕಾಲೇಜು ಲಕ್ಷಾಂತರ ವಿಧ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅನೇಕರ ಅತ್ಯುನ್ನತ ಸ್ಥಾನವನ್ನು ಹೊಂದಿದ್ದಾರೆ. ಇಂತಹ ಹಿನ್ನೆಲೆ
ಹೊಂದಿರುವ ಕಾಲೇಜಿನಲ್ಲಿ ಈಗಲೂ ಸಾವಿರಾರು ವಿಧ್ಯಾರ್ಥಿಗಳು ಪ್ರವೇಶ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ.ಕಾಲೇಜಿನಲ್ಲಿ ಬಹುತೇಕ
ವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲಾ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು ಬಡ ವಿಧ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದು. ಹಿಂದಿನ ಕಾಂಗ್ರೆಸ್
ಸರ್ಕಾರದಲ್ಲಿ ಯಾವುದೇ ಬಡ ವಿಧ್ಯಾರ್ಥಿಗಳು ಕಾಲೇಜಿಗೆ ಪ್ರವೇಶ ಬಯಸಿ ಬಂದಲ್ಲಿ ಅವರಿಗೆ ಪ್ರವೇಶ ನಿರಾಕರಿಸುವ ಹಾಗಿಲ್ಲ ಎಂದು
ಆದೇಶಿಸಿದ್ದು ಅದು ಬಡ ವರ್ಗದ ವಿಧ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿತ್ತು.ಈ ವರ್ಷ ಕಾಲೇಜಿಗೆ ಹಲವು ವಿಭಾಗದಲ್ಲಿ ವಿಧ್ಯಾರ್ಥಿಗಳು
ಪ್ರವೇಶ ಬಯಸಿ ಬಂದರೂ ಅವರೆಲ್ಲರಿಗೂ ಹಲವು ಸಬೂಬು ಹೇಳಿ ಪ್ರಾಂಶುಪಾಲರು ಪ್ರವೇಶ ನಿರಾಕರಿಸಿ ಖಾಸಗಿ ಕಾಲೇಜಿಗೆ ವರದಾನ
ಮತ್ತು ಬಡ ವಿಧ್ಯಾರ್ಥಿಗೆ ಶಾಪವಾಗಿದ್ದಾರೆ. ಯಾವುದೇ ವಿಭಾಗಕ್ಕೆ ವಿಧ್ಯಾರ್ಥಿಗಳು ಪ್ರವೇಶ ಅರಸಿ ಬಂದಲ್ಲಿ ಅವರಿಗೆ ಪ್ರವೇಶ ನೀಡಿ
ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಣ ಇಲಾಖೆಗೆ ಹೆಚ್ಚುವರಿ ಪ್ರವೇಶಾತಿ ಪ್ರಸ್ತಾವನೆ ಸಲ್ಲಿಸಿ ಪ್ರವೇಶ ಪಡೆಯಬಹುದು .ಇದೇ
ನಿಯಮವನ್ನು ಅನುಸರಿಸುತ್ತಾ ಹಿಂದಿನಿಂದಲೂ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಪ್ರವೇಶ ನಿರಾಕರಿಸದೇ ಪ್ರವೇಶ ಪಡೆದು ವಿಧ್ಯಾರ್ಥಿಗಳು
ಮತ್ತು ಕಾಲೇಜಿನ ಏಳಿಗೆಗೆ ಬೇರೆ ಕಾಲೇಜು ಪ್ರಾಂಶುಪಾಲರು ಶ್ರಮಿಸುತ್ತಿದ್ದಾರೆ.ಆದರೆ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು
ಯಾರ ಶಿಫಾರಸ್ಸು, ಸಲಹೆ ಕೇಳದೇ ನಿರ್ಲಕ್ಷ್ಯ ಧೋರಣೆ ಮತ್ತು ಕಾಲೇಜು ಇದ್ದರೇನು ಬಿಟ್ಟರೇನು ಅನ್ನುವ ಮನಸ್ಥಿತಿಯಿಂದ ಜಿಲ್ಲೆಯ
ಯಾವ ಕಾಲೇಜಿನಲ್ಲೂ ಇಲ್ಲದ ಸಮಸ್ಯೆಗಳು ಇಲ್ಲಿ ಉಧ್ಭವಿಸುವಂತಾಗಿವೆ.ಹೀಗಾಗಿ ಈ ವರ್ಷ ದಾಖಲಾತಿ ಸಂಖ್ಯೆಯಲ್ಲಿ ಕುಸಿತಕ್ಕೆ
ಕಾರಣರಾಗಿದ್ದು ಹಲವು ವಿಭಾಗಳು ಅಳಿವಿನಂಚಿನಲ್ಲಿವೆ.

ಇದೊಂದೆಡೆಯಾದರೆ ಕಾಲೇಜಿನಲ್ಲಿ 2007-08ರಿಂದ ರಸಾಯನ ಶಾಸ್ತ್ರ, ಬೌತಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಗಣಿತ ವಿಭಾಗಗಳು ಕಾರ್ಯ
ನಿರ್ವಹಿಸುತ್ತಿದ್ದು ಇಡೀ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಅತ್ಯುತ್ತಮ ಸಾಧನೆಗಯ್ಯುತ್ತಾ ಬಂದಿದ್ದು ಈ ಸಾಧನೆಗೆ ಅತಿಥಿ ಮತ್ತು ಖಾಯಂ
ಉಪನ್ಯಾಸಕರು ಕಾರಣೀಭೂತರಾಗಿದ್ದಾರೆ. ಆದರೆ ಈ ಬಾರಿಯ ದಾಖಲಾತಿ ಕುಸಿತದಿಂದ ಕಾರ್ಯಭಾರ ಕಡಿಮೆಯಾಗಿದ್ದು
ಸ್ನಾತಕೋತ್ತರ ವಿಭಾಗದ ಕಾರ್ಯಾಬಾರದ ಮಾಹಿತಿಯನ್ನು ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಇಲಾಖೆಗೆ ಅಪ್ಲೋಡ್ ಮಾಡದೇ
ಇನ್ಮೇನು ಕೆಲವೇ ದಿನಗಳಲ್ಲಿ ತರಗತಿಗಳು ಶುರುವಾದರು ಅತಿಥಿ ಉಪನ್ಯಾಸಕರ ನೇಮಕಾತಿ ಬೇಗ ಪೂರ್ಣಗೊಂಡರೂ ಸ್ನಾತಕೊತ್ತರ
ವಿಭಾಗಗನುಗುಣವಾಗಿ ಕಾರ್ಯಾಬಾರಕ್ಕೆ ಅತಿಥಿ ಉಪನ್ಯಾಸಕರು ನೇಮಕವಾಗುವುದಿಲ್ಲ. ಹೀಗಿರುವಾಗ ಮೊನ್ನೆ ಕಾಲೇಜು ಶಿಕ್ಷಣ
ಇಲಾಖೆಯಿಂದ ನಡೆದ ವರ್ಗಾವಣೆಯಿಂದಾಗಿ ಈ ಕಾಲೇಜಿನ ಹಲವು ಖಾಯಂ ಉಪನ್ಯಾಸಕರು ವರ್ಗಾವಣೆಯಾಗಿದ್ದು ಕೆಲವು
ಸ್ನಾತಕೊತ್ತರ ವಿಭಾಗಕ್ಕೆ ಯಾವುದೇ ಉಪನ್ಯಾಸಕರು ಇಲ್ಲದೆಯೇ ಇಡೀ ವಿಭಾಗಗಳು ಅಳಿವಿನಂಚಿಗೆ ತಲುಪಿ ಮುಚ್ಚುವ ಪರಿಸ್ಥಿತಿ ಒದಗಿ
ಬರಲಿದೆ.

ಇತ್ತ ಉಪನ್ಯಾಸಕರೂ ಇಲ್ಲ ಅತಿಥಿ ಉಪನ್ಯಾಸಕರೂ ಇಲ್ಲದೇ ಸೊರಗಲಿರುವ ವಿಭಾಗಗಳು ಸುಸೂತ್ರವಾಗಿ ನಡೆದು ವಿಧ್ಯಾರ್ಥಿಗಳ
ಜೀವನ ಮತ್ತು ಸರ್ಕಾರಿ ವಿಜ್ಞಾನ ಕಾಲೇಜು ಉಳಿದು ಬೆಳೆಯಬೇಕಾದರೆ ಉನ್ನತ ಶಿಕ್ಷಣ ಇಲಾಖೆ ಆಯುಕ್ತರು ಮತ್ತು ಸಚಿವರಾದ ಎಂ ಸಿ
ಸುಧಾಕರ್ ರವರು ಹಾಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಕಾಲೇಜಿನ ಕೆಲವು ವಿಭಾಗಗಳಲ್ಲಿ ಉಳಿದ ಒಬ್ಬ ಇಬ್ಬರು
ಉಪನ್ಯಾಸಕರನ್ನು ವರ್ಗಾವಣೆಗೊಳಿಸದೇ ಅಲ್ಲಿಯೇ ಮುಂದುವರೆಸಲು ಅವಕಾಶ ನೀಡಿ ಅಥವಾ ಬೇರೆ ಯಾರಾದರೂ
ಉಪನ್ಯಾಸಕರನ್ನು ವರ್ಗಾವಣೆ/ನಿಯೋಜನೆ ಮಾಡಿ ಈ ಸಮಸ್ಯೆಯನ್ನು ಬಗೆಹರಿಸಿ ಐತಿಹಾಸಿಕ ಸರ್ಕಾರಿ ವಿಜ್ಞಾನ ಕಾಲೇಜನ್ನು ಉಳಿಸಿ
ಬಡ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿಕೊಳ್ಳಲು ಸಹಕರಿಸಬೇಕಾಗಿ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *