ಅಯೋಧ್ಯೆಯ ಶಬರಿ ರಸೋಯಿ ಹೋಟೆಲ್ ಬಿಲ್ ಕಂಡು ಗ್ರಾಹಕ ಶಾಕ್! ಮಾಲೀಕನಿಗೆ ನೋಟಿಸ್.

ಅಯೋಧ್ಯೆ ಜನವರಿ 29: ರಾಮ ಮಂದಿರದ ಉದ್ಘಾಟನೆಯ ನಂತರ ಅಯೋಧ್ಯೆಯ ಹೋಟೆಲ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅದು ಯಾವ ಕಾರಣಕ್ಕೆ ಅಂತ ತಿಳಿದರೆ ಬಹುಶ: ನೀವು ಅಯೋಧ್ಯೆ ಭೇಟಿ ನೀಡಲು ನಿಮ್ಮ ಬಜೆಟ್ ಬಗ್ಗೆ ನೂರು ಬಾರಿ ಯೋಚನೆ ಮಾಡಬಹುದು. ಹೌದು..

ಶಬರಿ ರಸೋಯಿ (Sabri Rasoi) ಎಂಬ ಹೋಟೆಲ್‌ನ ಟೀ ಬಿಲ್ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯಾಕೆಂದರೆ ಇಲ್ಲಿ ಒಂದು ಚಹಾದ ಬೆಲೆ ಬರೋಬ್ಬರಿ 55 ರೂಪಾಯಿ. ಟೋಸ್ಟ್ ಬೆಲೆ 65 ರೂಪಾಯಿ. ಶಬರಿ ಹೋಟೆಲ್ ಬಿಲ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ಹೋಟೆಲ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ತರಾಟೆ ತೆಗೆದುಕೊಳ್ಳಲಾಗಿದೆ. ನಂತರ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಹೋಟೆಲ್ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಶಬರಿ ಹೋಟೆಲ್ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದೆ. ಕೊಪ್ಪಳ-ಅಯೋಧ್ಯೆ ನಡುವೆ ರೈಲು; ದಿನಾಂಕಗಳು 55 ರೂಪಾಯಿ ಟೀ ಬಿಲ್ ವೈರಲ್ ವಾಸ್ತವವಾಗಿ ರಾಮ ಜನ್ಮಭೂಮಿ ಪಥದ ಬಳಿ ಅರುಂಧತಿ ಮಲ್ಟಿಲೇಯರ್ ಪಾರ್ಕಿಂಗ್ ಇದೆ. ಅದರ ನಾಲ್ಕನೇ ಮಹಡಿಯಲ್ಲಿ ಶಬರಿ ರಸೋಯಿ ಹೋಟೆಲ್ ಇದೆ.

ಇದರ ಚಹಾ ದರದ ಬಿಲ್ ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಭಯಂಕರವಾಗಿ ವೈರಲ್ ಆಗಿದೆ ಎಂದರೆ ಈಗ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು (ADA) ರೆಸ್ಟೋರೆಂಟ್ ನಿರ್ವಾಹಕ M/s ಕವಚ್ ಫೆಸಿಲಿಟಿ ಮ್ಯಾನೇಜ್‌ಮೆಂಟ್‌ಗೆ ನೋಟಿಸ್ ಕಳುಹಿಸುವ ಮೂಲಕ ಛೀಮಾರಿ ಹಾಕಿದೆ.

ಗುಜರಾತ್ ಉದ್ಯಮಿ ಶಬರಿ ಮಾಲೀಕ ಮಾಧ್ಯಮ ವರದಿಗಳ ಪ್ರಕಾರ, ಗುಜರಾತ್‌ನ ಉದ್ಯಮಿಯೊಬ್ಬರು ಅಯೋಧ್ಯಾಧಾಮದಲ್ಲಿ ಶಬರಿ ರಸೋಯ್ ಅನ್ನು ತೆರೆದಿದ್ದಾರೆ. ಅದರ ನಂತರ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಅದರ ಉತ್ತರವನ್ನು ಕೋರಿ ರೆಸ್ಟೋರೆಂಟ್‌ಗೆ ನೋಟಿಸ್ ಕಳುಹಿಸಿದೆ. ಎಡಿಎ ಅವರು ನೋಟಿಸ್‌ನಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದು, ಮೂರು ದಿನಗಳಲ್ಲಿ ಸ್ಪಷ್ಟೀಕರಣವನ್ನು ಕೋರಿದ್ದಾರೆ. ಅಲ್ಲದೆ ಯಾವುದೇ ಪ್ರತಿಕ್ರಿಯೆ ಬರದಿದ್ದರೆ ಪ್ರಾಧಿಕಾರವು ನಿಮ್ಮೊಂದಿಗಿನ ಒಪ್ಪಂದವನ್ನು ರದ್ದುಪಡಿಸುತ್ತದೆ ಎಂದು ಎಚ್ಚರಿಸಿದ್ದಾರೆ.

ಚಹಾದ ಬೆಲೆ ಯಾಕಿಷ್ಟು? ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಾದ ಅರುಂಧತಿ ಭವನ ಪಶ್ಚಿಮದ ಸೌಲಭ್ಯಗಳನ್ನು M/s ಕವಚ್ ಫೆಸಿಲಿಟಿ ಮ್ಯಾನೇಜ್‌ಮೆಂಟ್ ನಿರ್ವಹಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಎಡಿಎ ಉಪಾಧ್ಯಕ್ಷ ವಿಶಾಲ್ ಸಿಂಗ್ ಅವರು ಪಾರ್ಕಿಂಗ್ ಮತ್ತು ಆಹಾರಕ್ಕೆ ಸೂಕ್ತ ದರವನ್ನು ನಿಗದಿಪಡಿಸಲಾಗುವುದು ಎಂದು ನೋಟಿಸ್‌ನಲ್ಲಿ ಬರೆದಿದ್ದಾರೆ.

ಆದರೆ ಶಬರಿ ಬಿಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ, ಅದರಲ್ಲಿ ಒಂದು ಕಪ್ ಚಹಾದ ಬೆಲೆ 55 ರೂ. ಇದೆ. ಇದು ಮಾರುಕಟ್ಟೆ ಬೆಲೆಗಿಂತ ಅಧಿಕವಾಗಿದೆ. 3 ದಿನಗಳ ಸ್ಪಷ್ಟನೆ ನೀಡುವಂತೆ ನೋಟೀಸ್ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಇಮೇಜ್‌ಗೆ ಕಳಂಕ ಉಂಟಾಗುತ್ತಿದೆ ಎಂದು ನೋಟಿಸ್‌ನಲ್ಲಿ ಬರೆಯಲಾಗಿದೆ. ಮೂರು ದಿನಗಳಲ್ಲಿ ಸ್ಪಷ್ಟನೆ ನೀಡುವಂತೆ ಅಂತಿಮ ಸೂಚನೆ ನೀಡಲಾಗಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *