ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ರೈಸ್ ಅಗೇನಸ್ಟ್ ಕ್ಯಾನ್ಸರ್‌ ಆಪ್ ಬಿಡುಗಡೆ.

ಭಾರತದ ಅತಿ ದೊಡ್ಡ ಕ್ಯಾನ್ಸರ್‌ ತಡೆ ಎನ್‌ಜಿಒ ಇಂಡಿಯಾ ಕ್ಯಾನ್ಸರ್ ಸೊಸೈಟಿ (ಐಸಿಎಸ್) ತನ್ನ ವಿಶಿಷ್ಟವಾದ ರೈಸ್ ಅಗೇನಸ್ಟ್ ಕ್ಯಾನ್ಸರ್ ಮೊಬೈಲ್ ಆಪ್‌ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. 

  • ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಶಕ್ತಿಯುತ ಅಸ್ತ್ರವಾಗಿ ಮೇಡ್ ಇನ್ ಇಂಡಿಯಾ ಆಪ್ ಬಿಡುಗಡೆ ಮಾಡಲಾಗಿದ್ದು,
  • ಮೊದಲ ಹಂತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ನೆರವಾಗಲಿದೆ
  • ಇಂಗ್ಲಿಷ್, ಕನ್ನಡ, ಹಿಂದಿ, ಮರಾಠಿ ಮತ್ತು ಬೆಂಗಾಳಿ ಭಾಷೆಯಲ್ಲಿ ರೈಸ್ ಅಗೇನಸ್ಟ್ ಕ್ಯಾನ್ಸರ್‌ ಆಪ್ ಒದಗಿಸುತ್ತದೆ

ಬೆಂಗಳೂರು: ಭಾರತದ ಅತಿ ದೊಡ್ಡ ಕ್ಯಾನ್ಸರ್‌ ತಡೆ ಎನ್‌ಜಿಒ ಇಂಡಿಯಾ ಕ್ಯಾನ್ಸರ್ ಸೊಸೈಟಿ (ಐಸಿಎಸ್) ತನ್ನ ವಿಶಿಷ್ಟವಾದ ರೈಸ್ ಅಗೇನಸ್ಟ್ ಕ್ಯಾನ್ಸರ್ ಮೊಬೈಲ್ ಆಪ್‌ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ರಾಜೀವ್ ಗಾಂಧಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ & ರಿಸರ್ಚ್‌ ಸೆಂಟರ್ (ಆರ್‌ಜಿಸಿಐಆರ್‌ಸಿ) ಬೆಂಬಲಿತ ಮತ್ತು ರೋಶೆ ಪ್ರಾಯೋಜಿತ ಈ ಮೇಡ್ ಇನ್ ಇಂಡಿಯಾ ಆಪ್‌ ಕ್ಯಾನ್ಸರ್‌ ಬಗ್ಗೆ ಮಾಹಿತಿ ಕೊರತೆ ನಿವಾರಿಸುವುದು, ಜಾಗೃತಿ ಮೂಡಿಸುವುದು ಮತ್ತು ಕ್ಯಾನ್ಸರ್‌ ಮುಕ್ತ ಭವಿಷ್ಯಕ್ಕೆ ಸಮುದಾಯಗಳನ್ನು ಸಂಘಟಿಸುವ ಗುರಿಯನ್ನು ಹೊಂದಿದೆ. ಕ್ಯಾನ್ಸರ್‌ ಅನ್ನು ಎದುರಿಸಲು ಜನರು ಮತ್ತು ಸಮುದಾಯಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅಪ್ಲಿಕೇಶನ್ ಅನ್ನು ರೂಪಿಸಲಾಗಿದೆ.

ಕ್ಯಾನ್ಸರ್‌ ತಡೆಗೆ ಐಸಿಎಸ್‌ ಕಳೆದ ಏಳು ದಶಕಗಳಿಂದಲೂ ಕೆಲಸ ಮಾಡುತ್ತಿದೆ. ಚಿಕಿತ್ಸೆಗೆ ಹಣಕಾಸು ನೆರವನ್ನು ಒದಗಿಸುತ್ತದೆ ಮತ್ತು ಚಿಕಿತ್ಸೆಯ ನಂತರದ ಜೀವನವನ್ನು ನಿರ್ವಹಿಸುತ್ತಿದೆ. ಐಸಿಎಸ್‌ನ ಇತ್ತೀಚಿನ ಕಾರ್ಯಕ್ರಮವಾದ ರೈಸ್ ಅಗೇನಸ್ಟ್ ಕ್ಯಾನ್ಸರ್‌ ಈಗ ಕ್ಯಾನ್ಸರ್‌ ರೋಗಿಗಳು ಮತ್ತು ಅವರ ಶುಶ್ರೂಷಕರ ಕಳವಳಗಳು ಮತ್ತು ಪ್ರಶ್ನೆಗಳನ್ನು ಪರಿಹರಿಸುವ ಉದ್ದೇಶವನ್ನು ಹೊಂದಿದೆ. ಮೊಬೈಲ್ ಅಪ್ಲಿಕೇಶನ್‌ನಲ್ಲಿ ಹಲವು ಸೌಕರ್ಯಗಳಿವೆ. ಹೊಸ ಹೊಸ ಮಾಹಿತಿಗೆ ಸುಲಭ ಲಭ್ಯತೆ, ಸಹಭಾಗಿಗಳಿಂದ ಸಮುದಾಯ ಬೆಂಬಲ ಮತ್ತು ಸ್ಥಳೀಯ ಮತ್ತು ವರ್ಚುವಲ್ ಈವೆಂಟ್‌ಗಳು ಇತ್ಯಾದಿಯನ್ನು ಇದು ಒದಗಿಸುತ್ತದೆ. ವಿಶ್ವ ಕ್ಯಾನ್ಸರ್‌ ದಿನ 2024 ರ ಥೀಮ್‌ “ಕ್ಲೋಸ್ ದಿ ಕೇರ್ ಗ್ಯಾಪ್” ಅಂದರೆ ಆರೈಕೆಯ ಕೊರತೆಯನ್ನು ನೀಗಿಸಿ ಎಂಬುದಕ್ಕೆ ಪೂರಕವಾಗಿ, ಐಸಿಎಸ್‌ ಈ ಬಹುಭಾಷೆಯ ಪರಿಕರವನ್ನು ಬಿಡುಗಡೆ ಮಾಡಿದೆ. ಇದು ಕ್ಯಾನ್ಸರ್ ವಿರುದ್ಧದ ತನ್ನ ಹೋರಾಟದಲ್ಲಿ ವ್ಯಕ್ತಿಗಳು ಮತ್ತು ಸಮುದಾಯಗಳನ್ನು ಸಬಲೀಕರಿಸುತ್ತದೆ.

ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ರಾಷ್ಟ್ರೀಯ ಮ್ಯಾನೇಜಿಂಗ್ ಟ್ರಸ್ಟೀ ಆಗಿರುವ ಉಷಾ ಥೋರಟ್‌ ಹೇಳುವಂತೆ “ಕ್ಯಾನ್ಸರ್‌ ಇಂದಿಗೂ ಪ್ರಮುಖ ಜಾಗತಿಕ ಆರೋಗ್ಯ ಸವಾಲು ಆಗಿದ್ದು, ಭಾರತ ಮತ್ತು ವಿಶ್ವದಲ್ಲಿ ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ರೈಸ್ ಅಗೇನಸ್ಟ್ ಕ್ಯಾನ್ಸರ್‌ ಆಪ್ ಅನ್ನು ಬಿಡುಗಡೆ ಮಾಡುವ ಮೂಲಕ ಐಸಿಎಸ್ ತೆಗೆದುಕೊಂಡಿರುವ ಈ ಕ್ರಮವು ಮೊಬೈಲ್ ತಂತ್ರಜ್ಞಾನದ ಅನುಕೂಲವನ್ನು ಬಳಸಿಕೊಂಡು, ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನವನ್ನು ಕ್ಯಾನ್ಸರ್‌ ಮತ್ತು ಅದರ ಕುಟುಂಬದಿಂದ ಬಾಧಿತರಾದವರಿಗೆ ಒದಗಿಸುತ್ತದೆ”.

ಈ ಉಪಕ್ರಮವನ್ನು ಮೆಚ್ಚಿದ ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ನ ರೋಬೋಟಿಕ್ ಸರ್ಜರಿ ವಿಭಾಗದ ಹೆಡ್ ಆಂಡ್ ನೆಕ್ ಆಂಕಾಲಾಜಿ ವಿಭಾಗದ ನಿರ್ದೇಶಕ ಡಾ. ವಿಶಾಲ್ ರಾವ್ ಹೇಳುವಂತೆ “ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಆಪ್‌ ವಿಶ್ವವನ್ನು ಕ್ಯಾನ್ಸರ್‌ ತಡೆಯಿಂದ ಆರೈಕೆಯವರೆಗೆ ಎಲ್ಲವನ್ನೂ ಸಂಪರ್ಕಿಸುತ್ತದೆ. ಅಸಲಿ ಮಾಹಿತಿಯನ್ನು ಒದಗಿಸುವ ಅವರ ಪ್ರಯತ್ನವನ್ನು ನಾನು ಶ್ಲಾಘಿಸುತ್ತೇನೆ. ಈ ತಪ್ಪು ಮಾಹಿತಿಯ ಯುಗದಲ್ಲಿ ಸರಿಯಾದ ಮಾಹಿತಿಯನ್ನು ಹಂಚಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಉತ್ತಮ ಕ್ಯಾನ್ಸರ್‌ ಆರೈಕೆಯನ್ನು ಒದಗಿಸುವ ನಿಟ್ಟಿನಲ್ಲಿ ಅವರ ಬದ್ಧತೆಗೆ ನಾನು ಆಭಾರಿಯಾಗಿದ್ದೇನೆ” ಎಂದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಐಸಿಎಸ್‌ ದೆಹಲಿ ಶಾಖೆಯ ಮುಖ್ಯಸ್ಥೆ ಜ್ಯೋತ್ಸ್ನಾ ಗೋವಿಲ್ “ಸಮುದಾಯದ ಅಗತ್ಯಗಳು ಮತ್ತು ಪ್ರಸ್ತುತ ಬೇಡಿಕೆಯನ್ನು ಗಮನಿಸಿದಾಗ, ಈ ಮೊಬೈಲ್ ಅಪ್ಲಿಕೇಶನ್ ಅನ್ನು ಐಸಿಎಸ್‌ ಅತ್ಯಂತ ಚಾಣಾಕ್ಷತನದಿಂದ ರೂಪಿಸಿದೆ. ಕ್ಯಾನ್ಸರ್‌ನಿಂದ ಬಾಧಿತರನ್ನು ಸಬಲೀಕರಿಸುವ ಉದ್ದೇಶವನ್ನು ರೈಸ್ ಅಗೇನಸ್ಟ್ ಕ್ಯಾನ್ಸರ್ ಆಪ್‌ ಹೊಂದಿದೆ. ತಮ್ಮ ಆರೋಗ್ಯದ ಕಾಳಜಿಯನ್ನು ತಾವೇ ವಹಿಸಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ. ಮಾಹಿತಿ ಕೇಂದ್ರ, ಸಂಪನ್ಮೂಲ ಲೈಬ್ರರಿ, ಈವೆಂಟ್‌ಗಳು, ಸಮುದಾಯ ಮತ್ತು ಬೆಂಬಲ ಸಮೂಹಗಳಂತಹ ವಿವಿಧ ವಲಯಗಳನ್ನು ಇದು ಒಳಗೊಂಡಿದ್ದು, ಕ್ಯಾನ್ಸರ್ ಕುರಿತ ಸುದ್ದಿ ಮತ್ತು ಅಪ್‌ಡೇಟ್‌ಗಳ ಸೆಕ್ಷನ್ ಕೂಡಾ ಇದೆ” ಎಂದಿದ್ದಾರೆ.

ಈ ಐತಿಹಾಸಿಕ ಸನ್ನಿವೇಶದ ಹಿನ್ನೆಲೆಯಲ್ಲಿ ಐಸಿಎಸ್ ಕರ್ನಾಟಕದ ಚೇರ್ಮನ್ ಕಿಶೋರ್ ರಾವ್ ಮಾತನಾಡಿ “ಕ್ಯಾನ್ಸರ್ ವಿಷಯದಲ್ಲಿ ತಪ್ಪು ಮಾಹಿತಿ ಹಾಗೂ ಮಾಹಿತಿ ಕೊರತೆ ತುಂಬಾ ತೊಂದರೆಯನ್ನು ಉಂಟು ಮಾಡಬಹುದು. ಕ್ಯಾನ್ಸರ್ ಆಗಷ್ಟೇ ಪತ್ತೆಯಾದಾಗ, ಒಂದೇ ಸ್ಥಳದಲ್ಲಿ ರೋಗಿಗೆ ಹಾಗೂ ಶುಶ್ರೂಷಕರಿಗೆ ಎಲ್ಲ ಮಾಹಿತಿಯೂ ಸಿಗಬೇಕಿರುತ್ತದೆ. ಇದು ಕೂಡಾ ರೈಸ್ ಅಗೇನಸ್ಟ್ ಕ್ಯಾನ್ಸರ್ ಆಪ್ ಅನ್ನು ಐಸಿಎಸ್ ರೂಪಿಸಿರುವುದಕ್ಕೆ ಒಂದು ಕಾರಣವಾಗಿದೆ. ನಮ್ಮೆಲ್ಲರ ಒಗ್ಗಟ್ಟಿನ ಪ್ರಯತ್ನವು ಕ್ಯಾನ್ಸರ್‌ ತಡೆಯಲ್ಲಿ ಎರಡು ಹೆಜ್ಜೆ ಮುಂದೆ ಇರುವುದಕ್ಕೆ ಜನರಿಗೆ ಪ್ರೋತ್ಸಾಹ ನೀಡುತ್ತದೆ ಎಂದು ನಾವು ನಂಬಿದ್ದೇವೆ. ಬೇಗ ಪತ್ತೆ ಮಾಡುವುದು ಮತ್ತು ಮಧ್ಯಪ್ರವೇಶ ಮಾಡುವುದಕ್ಕೆ ಇದು ಸಕ್ರಿಯ ಕ್ರಮವನ್ನು ತೆಗೆದುಕೊಳ್ಳಲೂ ಪ್ರೋತ್ಸಾಹ ನೀಡುತ್ತದೆ.”

ಕ್ಯಾನ್ಸರ್ ಎದುರಿಸುವ ತನ್ನ ಪ್ರಯತ್ನದಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಕರ್ನಾಟಕ ವಿಭಾಗವು ರಾಜ್ಯದಲ್ಲಿ ತನ್ನ ವ್ಯಾಪ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡಿದೆ. ಐಸಿಎಸ್ ಕರ್ನಾಟಕ ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, ಮಂಗಳೂರು, ಕಲಬುರಗಿ ಮತ್ತು ಧಾರವಾಡದಲ್ಲಿ ಪ್ರಾದೇಶಿಕ ಕಚೇರಿಗಳಿವೆ. ಸಂಪನ್ಮೂಲ ಮತ್ತು ಮಾಹಿತಿಯ ಕೊರತೆಯನ್ನು ಹೊಂದಿರುವ ಗ್ರಾಮೀಣ ಮತ್ತು ನಗರ ಪ್ರದೇಶದ ಜನರನ್ನೂ ಅದು ತಲುಪುತ್ತಿದೆ.

ಕ್ಯಾನ್ಸರ್‌ ಸೊಸೈಟಿ ಬಗ್ಗೆ:  ಇಂಡಿಯನ್ ಕ್ಯಾನ್ಸರ್ ಸೊಸೈಟಿ (ಐಸಿಎಸ್) ಅನ್ನು 1951 ರಲ್ಲಿ ಡಾ. ಡಿ ಜೆ ಜುಸ್ಸಾವಲ್ಲಾ ಮತ್ತು ಶ್ರೀ ನವಲ್ ಟಾಟಾ ಸಂಸ್ಥಾಪಿಸಿದ್ದರು ಮತ್ತು ಇದು ಕ್ಯಾನ್ಸರ್‌ ವಲಯದಲ್ಲಿ ಭಾರತದ ಮೊದಲ ಲಾಭೋದ್ದೇಶ ರಹಿತ ಸಂಸ್ಥೆಯಾಘಿದೆ. ಐಸಿಎಸ್ ಕರ್ನಾಟಕದಲ್ಲಿ 1986ರಲ್ಲಿ ಕಾರ್ಯಾಚರಣೆ ಆರಂಭಿಸಿತು. ಕೆಲವು ಸ್ವಯಂಸೇವಕರ ಜೊತೆಗೆ ಕಿಶೋರ್ ರಾವ್ ಇದನ್ನು ಆರಂಭಿಸಿದರು. ಐಸಿಎಸ್ ಕರ್ನಾಟಕ ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, ಮಂಗಳೂರು, ಕಲಬುರಗಿ ಮತ್ತು ಧಾರವಾಡದಲ್ಲಿ ಪ್ರಾದೇಶಿಕ ಕಚೇರಿಗಳಿವೆ. ಸಂಪನ್ಮೂಲ ಮತ್ತು ಮಾಹಿತಿಯ ಕೊರತೆಯನ್ನು ಹೊಂದಿರುವ ಗ್ರಾಮೀಣ ಮತ್ತು ನಗರ ಪ್ರದೇಶದ ಜನರನ್ನೂ ಅದು ತಲುಪುತ್ತಿದೆ. ಕ್ಯಾನ್ಸರ್‌ನ ಎಲ್ಲ ವಲಯದಲ್ಲೂ ಐಸಿಎಸ್ ಕಾರ್ಯಚಟುವಟಿಕೆಯನ್ನು ವಿಸ್ತರಿಸಿದೆ. ಜಾಗೃತಿ, ಮೊದಲೇ ತಪಾಸಣೆ ಮಾಡುವುದು, ಪತ್ತೆ ಮತ್ತು ಚಿಕಿತ್ಸೆಗೆ ಹಣಕಾಸಿನ ನೆರವು, ಬೆಂಬಲ ಸಮೂಹಗಳು, ಕ್ಯಾನ್ಸರ್‌ನಿಂದ ಬದುಕುಳಿದವರಿಗೆ ಪುನಃಶ್ಚೇತನ, ಸಂಶೋಧನೆ, ನೋಂದಣಿ ಮತ್ತು ಶಿಕ್ಷಣಕ್ಕೆ ಬೆಂಬಲ ವಲಯದಲ್ಲೂ ಇದು ತೊಡಗಿಸಿಕೊಂಡಿದೆ. ಇದರ ಜೊತೆಗೆ, ಇಂಡಿಯನ್ ಜರ್ನಲ್ ಆಫ್ ಕ್ಯಾನ್ಸರ್‌ ಅನ್ನು ಐಸಿಎಸ್ ಪ್ರಕಟಿಸಿದ್ದು, ಇದು ಭಾರತದಲ್ಲಿ ಪ್ರಥಮ ಆಂಕಾಲಜಿ ಜರ್ನಲ್ ಆಗಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 0

Leave a Reply

Your email address will not be published. Required fields are marked *