Odisha Train tragedy: 290 ಜನರ ಸಾವಿಗೆ ಕಾರಣವಾದ ಒಡಿಶಾ ರೈಲು ದುರಂತದ ರಹಸ್ಯ ಬಹಿರಂಗ!

Odisha Train tragedy: ರೈಲು ದುರಂತದ ಬಗ್ಗೆ ಸಿಬಿಐನಿಂದಲೂ ತನಿಖೆ ಮುಂದುವರೆದಿದೆ. ರೈಲು ದುರಂತದ ಹಿಂದೆ ವಿಧ್ವಂಸಕ ಕೃತ್ಯದ ಶಂಕೆಯಿರುವ ಹಿನ್ನೆಲೆ ಸಿಬಿಐ ತನಿಖೆ ಕೈಗೊಂಡಿದೆ. ಜೂನ್ 2ರಂದು ಸಂಭವಿಸಿದ ತ್ರಿವಳಿ ರೈಲು ಅಪಘಾತಕ್ಕೆ ಮಾನವ ತಪ್ಪು ಕಾರಣವೆಂದು ರೈಲ್ವೆ ಸುರಕ್ಷತಾ ಆಯುಕ್ತರು(CRS) ತಿಳಿಸಿದ್ದಾರೆ.

ನವದೆಹಲಿ: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ರೈಲು ದುರಂತಕ್ಕೆ ಇಲಾಖೆ ಸಿಬ್ಬಂದಿಯ ಎಡವಟ್ಟೇ ಕಾರಣವೆಂದು ರೈಲ್ವೆ ಸುರಕ್ಷಿತ ಆಯುಕ್ತರು (CRS) ವರದಿ ನೀಡಿದ್ದಾರೆ.

ಜೂನ್ 2ರಂದು ಸಂಭವಿಸಿದ ರೈಲು ಅಪಘಾತದಲ್ಲಿ 290ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. 1,200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ರೈಲುಗಳ ಅಪಘಾತಕ್ಕೆ ಎರಡು ಇಲಾಖೆಯ ಸಿಬ್ಬಂದಿಯೇ ಕಾರಣವೆಂದು ತಿಳಿದುಬಂದಿದೆ. ಈ ದೊಡ್ಡ ಲೋಪಕ್ಕೆ ರೈಲ್ವೆಯ ಸಿಗ್ನಲ್ ಮತ್ತು ಕಾರ್ಯನಿರ್ವಹಣೆ ಸಿಬ್ಬಂದಿ ಕಾರಣವೆಂದು ರೈಲ್ವೆ ಆಯುಕ್ತರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ಸಿಬಿಐನಿಂದಲೂ ದುರಂತದ ತನಿಖೆ!

ರೈಲು ದುರಂತದ ಬಗ್ಗೆ ಸಿಬಿಐನಿಂದಲೂ ತನಿಖೆ ಮುಂದುವರೆದಿದೆ. ರೈಲು ದುರಂತದ ಹಿಂದೆ ವಿಧ್ವಂಸಕ ಕೃತ್ಯದ ಶಂಕೆಯಿರುವ ಹಿನ್ನೆಲೆ ಸಿಬಿಐ ತನಿಖೆ ಕೈಗೊಂಡಿದೆ. ಜೂನ್ 2ರಂದು ಸಂಭವಿಸಿದ ತ್ರಿವಳಿ ರೈಲು ಅಪಘಾತಕ್ಕೆ ಮಾನವ ತಪ್ಪು ಕಾರಣವೆಂದು ರೈಲ್ವೆ ಸುರಕ್ಷತಾ ಆಯುಕ್ತರು(CRS) ತಿಳಿಸಿದ್ದಾರೆ. ಕೇಂದ್ರೀಯ ತನಿಖಾ ದಳ(ಸಿಬಿಐ) ನಡೆಸುತ್ತಿರುವ ಸಮಾನಾಂತರ ತನಿಖೆಯ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಲು ಮುಚ್ಚಿಟ್ಟಿರುವ ವರದಿಯಲ್ಲಿ ತೋರಿಸಿರುವ ದೋಷಗಳ ಕುರಿತು ಯಾವುದೇ ವಿವರ ಬಹಿರಂಗಪಡಿಸದಿರಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಈ ವರದಿಯು ಮಾನವ ದೋಷವನ್ನು ಸ್ಪಷ್ಟವಾಗಿ ಎತ್ತಿ ತೋರಿಸಿದೆ. ವಿಧ್ವಂಸಕ ಕೃತ್ಯದ ಬಗ್ಗೆ ಸಿಬಿಐ ತನಿಖೆ ನಡೆಸುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. CRS ವರದಿಯನ್ನು ಅಪಘಾತ ಸಂಭವಿಸಿದ ವಿಭಾಗದ ಆಗ್ನೇಯ ರೈಲ್ವೆಯ(SER) ಪ್ರಧಾನ ವ್ಯವಸ್ಥಾಪಕರಿಗೆ ಮತ್ತು ಅಧ್ಯಕ್ಷ ರೈಲ್ವೆ ಮಂಡಳಿ(CRB) ಅನಿಲ್ ಕುಮಾರ್ ಲಹೋಟಿ ಅವರಿಗೆ ಇಮೇಲ್ ಮೂಲಕ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ವರದಿಯನ್ನು ಈ ಇಬ್ಬರು ಅಧಿಕಾರಿಗಳಿಗೆ ಮಾತ್ರ ಹಂಚಿಕೊಳ್ಳಲಾಗಿದೆ ಮತ್ತು ಸಚಿವಾಲಯದ ಬೆರಳೆಣಿಕೆಯ ಉನ್ನತ ಅಧಿಕಾರಿಗಳಿಗೆ ಮಾತ್ರ ಇದನ್ನು ತಿಳಿದುಕೊಳ್ಳುವ ಅವಕಾಶ ನೀಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ‘ಇನ್ನೊಂದು ಸ್ವತಂತ್ರ ತನಿಖೆ (ಸಿಬಿಐ) ನಡೆಯುತ್ತಿರುವುದರಿಂದ ನಾವು CRS ವರದಿಯನ್ನು ಬಹಿರಂಗಪಡಿಸುವುದಿಲ್ಲ. ಈ ವರದಿಯು ಇತರ ವರದಿಯ ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರುವುದಿಲ್ಲ ಅಥವಾ ಹಸ್ತಕ್ಷೇಪ ಮಾಡುವುದಿಲ್ಲವೆಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ‘ನಾವು ಎರಡೂ ವರದಿಗಳ ಮಾಹಿತಿಯನ್ನು ತೆಗೆದುಕೊಳ್ಳುತ್ತೇವೆ. ಈ ಘಟನೆಯ ಒಟ್ಟಾರೆ ಮೌಲ್ಯಮಾಪನವನ್ನು ಮಾಡುತ್ತೇವೆ ಮತ್ತು ನಂತರ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

Source : https://zeenews.india.com/kannada/india/the-secret-of-the-odisha-train-tragedy-that-caused-the-death-of-290-people-is-revealed-143133

Leave a Reply

Your email address will not be published. Required fields are marked *