ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾದ ರಂಗು ರಂಗಿನ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಮಾರ್ಚ್ 22ರಂದು ಆರಂಭವಾಗಲಿರುವ 17ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ.

ಮೆಗಾ ಟೂರ್ನಿ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಾರ್ಚ್ 19ರಂದು ತನ್ನ ತವರು ಕ್ರೀಡಾಂಗಣವಾದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅನ್ಬಾಕ್ಸಿಂಗ್ ಇವೆಂಟ್ ಆಯೋಜಿಸಿತ್ತು. ವರ್ಣರಂಜಿತ ಕಾರ್ಯಕ್ರಮದಲ್ಲಿ ಆರ್ಸಿಬಿ ತಂಡದ ನೂತನ ಜೆರ್ಸಿ ಹಾಗೂ ಲೋಗೋವನ್ನು ಅನಾವರಣ ಮಾಡಲಾಗಿದೆ.
ಕಳೆದ ಬಾರಿಗಿಂತ ವಿಭಿನ್ನವಾಗಿ ಈ ಬಾರಿಯ ಜೆರ್ಸಿಯನ್ನು ವಿನ್ಯಾಸಗೊಳಿಸಲಾಗಿದೆ. ಈ ಜೆರ್ಸಿಯನ್ನು ಕೊಹ್ಲಿ-ಫಾಫ್ ರಿವೀಲ್ ಮಾಡಿದ್ದಾರೆ. ಕಳೆದ ವರ್ಷ ಆರ್ಸಿಬಿ ತಂಡ ಕೆಂಪು ಬಣ್ಣದ ಜರ್ಸಿಯಲ್ಲಿ ಕಣಕ್ಕಿಳಿದಿತ್ತು. ಇದಕ್ಕಾಗಿಯೇ ಆರ್ಸಿಬಿ ತಂಡಕ್ಕೆ ರೆಡ್ ಆರ್ಮಿ ಎಂದೂ ಕರೆಯಲಾಗುತ್ತದೆ. ಆದರೆ ಈ ಬಾರಿ ಜೆರ್ಸಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಜೆರ್ಸಿಯ ಮೇಲ್ಬಾಗದಲ್ಲಿ ನೀಲಿ ಬಣ್ಣ ಹಾಗೂ ಕೆಳಭಾಗದಲ್ಲಿ ಹಿಂದಿನ ಕಡು ಕೆಂಪು ಬಣ್ಣದಿಂದ ಜೆರ್ಸಿಯನ್ನು ಡಿಸೈನ್ ಮಾಡಲಾಗಿದೆ.
ಇದರ ನಡುವೆ ಆರ್ಸಿಬಿ ಹೊಸ ಲೋಗೋವನ್ನೂ ರಿಲೀಸ್ ಮಾಡಲಾಗಿದೆ. ಅದರಂತೆ ಕಳೆದ ಕೆಲ ವರ್ಷಗಳಿಂದ ಅಭಿಮಾನಿಗಳ ಬೇಡಿಕೆಗೆ ಇಂದು ಆರ್ಸಿಬಿ ಪ್ರಾಂಚೈಸಿ ಮನ್ನಣೆ ನಿಡಿದ್ದು, ಕೊನೆಗೂ Royal Challengers Bangalore ಎಂದು ಇದ್ದ ಹೆಸರನ್ನು Royal Challengers Bengaluru ಎಂದು ಬದಲಿಸಿದೆ. ಜೆರ್ಸಿ ಹಾಗೂ ಲೋಗೋ ಅನಾವರಣಕ್ಕೂ ಮುನ್ನ ಬ್ರೋದಾ, ಅಲೇನ್ ವಾಕರ್, ರಘು ದೀಕ್ಷಿತ್, ನೀತು ಮೋಹನ್, ಜೋರ್ಡನ್ ಬ್ರದರ್ಸ್ ಸೇರಿದಂತೆ ಆರ್ಸಿಬಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
ಇತ್ತ ಹೊಸ ಜೆರ್ಸಿ ಅನಾವರಣಗೊಳ್ಳುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹೊಸದಕ್ಕಿಂತ ಹಳೆಯ ಜರ್ಸಿ ತುಂಬಾ ಚೆನ್ನಾಗಿದೆ, ಅತ್ಯಾಧುನಿಕತೆಯ ಟಚ್ ಇರುವಂತಿದೆ ಎನ್ನುತ್ತಾರೆ ನೆಟಿಜನ್ಗಳು. ಮುಂಬೈ ಇಂಡಿಯನ್ಸ್ನಿಂದ ನೀಲಿ ಬಣ್ಣವನ್ನು ನಕಲಿಸಿ ಈ ಜರ್ಸಿಯಲ್ಲಿ ಹಾಕಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಹಳೆಯ ಜರ್ಸಿಯ ಕೆಂಪು ಮತ್ತು ಕಪ್ಪು ಕಾಂಬಿನೇಷನ್ ಚೆನ್ನಾಗಿರುತ್ತಿತ್ತು. ಈ ಬದಲಾವಣೆ ಬೇಕಿರಲಿಲ್ಲ ಎಂದಿದ್ದಾರೆ. ಸೈರನ್ ಲೈಟ್ನಂತಿದೆ ಜರ್ಸಿ, ಕೆಂಪು ಮತ್ತು ನೀಲಿ ಕಾಂಬೋ ಚೆನ್ನಾಗಿಲ್ಲ, ದಯವಿಟ್ಟು ಜೆರ್ಸಿಯನ್ನು ಬದಲಿಸಿ, ಹಳೆಯ ಜರ್ಸಿಯನ್ನೇ ಧರಿಸಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1