Olympics 2028: ಲಾಸ್ ಏಂಜಲೀಸ್ ಒಲಿಂಪಿಕ್ಸ್‌; ಕ್ರಿಕೆಟ್ ಪಂದ್ಯಗಳಿಗೆ ಸ್ಥಳ ನಿಗದಿ.

Los Angeles Olympics Cricket 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಮರಳಿ ಬರುತ್ತಿದೆ. ಪಂದ್ಯಗಳು ಕ್ಯಾಲಿಫೋರ್ನಿಯಾದ ಪೊಮೊನಾದ ಫೇರ್‌ಪ್ಲೆಕ್ಸ್‌ನಲ್ಲಿ ನಡೆಯಲಿವೆ. ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ತಲಾ 6 ತಂಡಗಳು ಟಿ20 ಸ್ವರೂಪದಲ್ಲಿ ಪದಕಕ್ಕಾಗಿ ಸ್ಪರ್ಧಿಸಲಿವೆ. ಆದಾಗ್ಯೂ ಈ ಪಂದ್ಯಾವಳಿಗೆ ಅರ್ಹತಾ ಮಾನದಂಡಗಳನ್ನು ಇನ್ನೂ ನಿರ್ಧರಿಸಬೇಕಾಗಿದೆ.

ಸುಮಾರು 128 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ (Olympics) ಕ್ರಿಕೆಟ್ ಮತ್ತೆ ಕಾಣಿಸಿಕೊಳ್ಳುತ್ತಿದೆ. ಈ ಕ್ರೀಡೆಯನ್ನು 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ( Los Angeles Olympics) ಅಧಿಕೃತವಾಗಿ ಸೇರಿಸಲಾಗಿದೆ. ಇದೀಗ ಕ್ರಿಕೆಟ್ ಪಂದ್ಯಾವಳಿ ಯಾವ ಸ್ಥಳದಲ್ಲಿ ನಡೆಯಲಿದೆ ಎಂಬುದರ ಬಗ್ಗೆ ದೊಡ್ಡ ಮಾಹಿತಿ ಹೊರಬಿದ್ದಿದೆ. ಕ್ಯಾಲಿಫೋರ್ನಿಯಾದ ಪೊಮೊನಾ (Pomona) ನಗರದಲ್ಲಿ 500 ಎಕರೆ ವಿಸ್ತೀರ್ಣದ ಮೈದಾನದಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಲಿವೆ ಎಂಬ ಮಾಹಿತಿಯನ್ನು ಇದೀಗ ಐಸಿಸಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ತಾತ್ಕಾಲಿಕ ಕ್ರೀಡಾಂಗಣ ನಿರ್ಮಾಣ

ಪೊಮೋನಾದಲ್ಲಿ ಕ್ರಿಕೆಟ್ ಆಡಲಾಗುವ ಮೈದಾನವನ್ನು ಫೇರ್‌ಪ್ಲೆಕ್ಸ್ ಎಂದೂ ಕರೆಯುತ್ತಾರೆ. ಅಲ್ಲಿ ಕ್ರಿಕೆಟ್ ಅಥವಾ ಯಾವುದೇ ಇತರ ಕ್ರೀಡೆಗೆ ಈಗಾಗಲೇ ಇರುವ ಯಾವುದೇ ಸಂಕೀರ್ಣವಿಲ್ಲ. ಸಾಮಾನ್ಯವಾಗಿ ಇದನ್ನು ಮೇಳಗಳನ್ನು ಆಯೋಜಿಸಲು ಬಳಸಲಾಗುತ್ತಿತ್ತು. 500 ಎಕರೆ ಪ್ರದೇಶದಲ್ಲಿ ಹರಡಿರುವ ಈ ಮೈದಾನವು 103 ವರ್ಷಗಳಿಂದ (1922) ಲಾಸ್ ಏಂಜಲೀಸ್ ಕೌಂಟಿ ಮೇಳವನ್ನು ಆಯೋಜಿಸುತ್ತಿದೆ. ಆದರೆ ಈಗ ಕ್ರಿಕೆಟ್‌ಗಾಗಿ ಇಲ್ಲಿ ತಾತ್ಕಾಲಿಕ ಸ್ಥಳವನ್ನು ಸಿದ್ಧಪಡಿಸಲಾಗುವುದು. ಇದಕ್ಕೂ ಮೊದಲು, ಅಂದರೆ 2024 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ಗೆ ಅಮೆರಿಕ ಆತಿಥ್ಯವಹಿಸಿತ್ತು. ಆ ಸಮಯದಲ್ಲಿ ಉದ್ಯಾನವನ ಪ್ರದೇಶದಲ್ಲಿ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗಿತ್ತು.

ಒಲಿಂಪಿಕ್ ಪೋಸ್ಟರ್‌ನಲ್ಲಿ ಕೊಹ್ಲಿಗೆ ಮಾತ್ರ ಸ್ಥಾನ!

ಒಲಿಂಪಿಕ್ಸ್ ಆಯೋಜಿಸುವ ಸಮಿತಿಯು ಕ್ರಿಕೆಟ್ ಪಂದ್ಯಾವಳಿ ನಡೆಯುವ ಸ್ಥಳದ ಬಗ್ಗೆ ಮಾಹಿತಿ ನೀಡುವ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದೆ. ಈ ಪೋಸ್ಟರ್‌ನಲ್ಲಿ ವಿರಾಟ್ ಕೊಹ್ಲಿ ಅವರ ಭಾವಚಿತ್ರವನ್ನು ಹೊರತುಪಡಿಸಿ ಮತ್ತ್ಯಾವ ಕ್ರಿಕೆಟಿಗನಿಗೂ ಅವಕಾಶ ನೀಡಲಾಗಿಲ್ಲ. ಇದರಿಂದ, ಕ್ರಿಕೆಟ್​ನಲ್ಲಿ ಕೊಹ್ಲಿ ಎಷ್ಟು ದೊಡ್ಡ ಹೆಸರು ಎಂದು ಅಂದಾಜು ಮಾಡಬಹುದು. ಕೊಹ್ಲಿ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಿರುವುದರಿಂದ ಕ್ರಿಕೆಟ್ ಅನ್ನು ಸೇರಿಸುವ ಬಗ್ಗೆ ಯೋಚಿಸಲು ಪ್ರಾರಂಭಿಸಿದ್ದೇವೆ ಎಂದು ಒಲಿಂಪಿಕ್ ಸಮಿತಿ ಈ ಹಿಂದೆ ಹೇಳಿತ್ತು.

6 ತಂಡಗಳು ಆಡಲಿವೆ

ಇತ್ತೀಚೆಗೆ, ಐಒಸಿ (ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ) ಲಾಸ್ ಏಂಜಲೀಸ್ ಒಲಿಂಪಿಕ್ಸ್ 2028 ರಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ತಲಾ 6 ತಂಡಗಳನ್ನು ಸೇರಿಸಲು ಅನುಮೋದನೆ ನೀಡಿತ್ತು. ಈ ತಂಡಗಳು ಪದಕಗಳಿಗಾಗಿ ಟಿ20 ಸ್ವರೂಪದಲ್ಲಿ ಸ್ಪರ್ಧಿಸಬೇಕಾಗುತ್ತದೆ. ಇದಲ್ಲದೆ, ಎರಡೂ ವಿಭಾಗಗಳಲ್ಲಿ ತಲಾ 90 ಕ್ರೀಡಾಪಟುಗಳ ಕೋಟಾವನ್ನು ಸಹ ಅನುಮೋದಿಸಲಾಗಿದೆ. ಇದರರ್ಥ ಪ್ರತಿ ತಂಡವು ಒಲಿಂಪಿಕ್ಸ್‌ಗಾಗಿ 15 ಸದಸ್ಯರ ತಂಡವನ್ನು ಪ್ರಕಟಿಸಬಹುದಾಗಿದೆ.

ಆದಾಗ್ಯೂ, ಇದಕ್ಕೆ ಅರ್ಹತಾ ಮಾನದಂಡಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ. ವರದಿಗಳ ಪ್ರಕಾರ, ಆತಿಥೇಯ ರಾಷ್ಟ್ರವಾಗಿರುವುದರಿಂದ ಅಮೆರಿಕ ತಂಡಕ್ಕೆ ನೇರ ಪ್ರವೇಶ ಸಿಗಬಹುದು. ಇದರ ನಂತರ, ಐಸಿಸಿ ಶ್ರೇಯಾಂಕಗಳ ಆಧಾರದ ಮೇಲೆ ಉಳಿದ 5 ಸ್ಥಾನಗಳಿಗೆ ತಂಡಗಳನ್ನು ಆಯ್ಕೆ ಮಾಡಬಹುದು. ಇದರರ್ಥ ಐಸಿಸಿಯ ಅಗ್ರ-5 ತಂಡಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬಹುದು. ಇದಕ್ಕಾಗಿ ಕಟ್-ಆಫ್ ದಿನಾಂಕವನ್ನು ಸಹ ನಿಗದಿಪಡಿಸಬಹುದು.

Source : TV9 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *