ಏಪ್ರಿಲ್ 20 ರಂದು ಹೊಸದುರ್ಗ ಮತಕ್ಷೇತ್ರದಲ್ಲಿ 8 ನಾಮಪತ್ರ ಸಲ್ಲಿಕೆ : 17 ಅಭ್ಯರ್ಥಿಗಳಿಂದ 20 ನಾಮಪತ್ರ ಸಲ್ಲಿಕೆ

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

 

ಚಿತ್ರದುರ್ಗ,ಸುದ್ದಿಒನ್ ನ್ಯೂಸ್, (ಏ.20) :
2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಏಪ್ರಿಲ್ 20 ರಂದು ಹೊಸದುರ್ಗ ಮತಕ್ಷೇತ್ರದಲ್ಲಿ 8 ನಾಮಪತ್ರ ಸಲ್ಲಿಕೆಯಾಗಿವೆ.

ಬಹುಜನ ಸಮಾಜವಾದಿ ಪಕ್ಷದ ತಿಮ್ಮಪ್ಪ.ಕೆ, ಆಮ್ ಆದ್ಮಿ ಪಕ್ಷದ ಎನ್.ವಿ.ರಾಜು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತನು ಸಿ ಯಾದವ್ ಸೇರಿದಂತೆ, ಪಕ್ಷೇತರ ಅಭ್ಯರ್ಥಿಗಳಾಗಿ ಗೂಳಿಹಟ್ಟಿ ಡಿ ಶೇಖರ್, ಬಿ.ಗೀತಾಂಜಲಿ, ಎ.ಎಸ್.ಮಂಜುನಾಥ, ಬಿ.ಶಿವರುದ್ರಪ್ಪ ಹಾಗೂ ಶೇಖರ್ ನಾಯ್ಕ್ ಎಂ.ಆರ್. ನಾಮಪತ್ರ ಸಲ್ಲಿಸಿದ್ದಾರೆ.

ಇದುವರೆಗೂ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಬಿ.ಜಿ.ಗೋವಿಂದಪ್ಪ 2, ಭಾರತೀಯ ಜನತಾ ಪಕ್ಷದ ಎಸ್.ಲಿಂಗಮೂರ್ತಿ 2, ಪಕ್ಷೇತರ ಅಭ್ಯರ್ಥಿಗಳಾದ ಗೂಳಿಹಟ್ಟಿ ಡಿ ಶೇಖರ್ 2, ಟಿ.ಮಂಜುನಾಥ 2, ಡಿ.ಪಾಂಡುರಂಗ ಗರಗ್ 2,  ಉಳಿದಂತೆ ಜ್ಯಾತ್ಯಾತೀತ ಜನತಾ ದಳದ ತಿಪ್ಪೇಸ್ವಾಮಿ.ಎಂ, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಕುಮಾರ್, ಬಹುಜನ ಸಮಾಜ ಪಕ್ಷದ ತಿಮ್ಮಪ್ಪ.ಕೆ, ಆಮ್ ಆದ್ಮಿ ಪಕ್ಷದ ಎನ್.ವಿ.ರಾಜು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತನು ಸಿ ಯಾದವ್, ಪಕ್ಷೇತರ ಅಭ್ಯರ್ಥಿಗಳಾದ ಎಂ.ಎಸ್.ಸತೀಶ್, ಬಿ.ಗೀತಾಂಜಲಿ, ಎ.ಎಸ್.ಮಂಜುನಾಥ, ಬಿ.ಶಿವರುದ್ರಪ್ಪ ಹಾಗೂ ಶೇಖರ್ ನಾಯ್ಕ್.ಎಂ.ಆರ್ ತಲಾ ಒಂದು ನಾಮತ್ರ ಸಲ್ಲಿಸಿದ್ದಾರೆ.

The post ಏಪ್ರಿಲ್ 20 ರಂದು ಹೊಸದುರ್ಗ ಮತಕ್ಷೇತ್ರದಲ್ಲಿ 8 ನಾಮಪತ್ರ ಸಲ್ಲಿಕೆ : 17 ಅಭ್ಯರ್ಥಿಗಳಿಂದ 20 ನಾಮಪತ್ರ ಸಲ್ಲಿಕೆ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/HTscBv2
via IFTTT

Leave a Reply

Your email address will not be published. Required fields are marked *