ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು. 25 : ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಬಜೆಟ್‌ನಲಿ ಯಾವುದೇ ಕೇಂದ್ರೀಯ ಯೋಜನೆಗಳನ್ನು, ನೀರಾವರಿ, ರಸ್ತೆ, ಅಭಿವೃದ್ಧಿ, ಉದ್ಯೋಗ, ಬರ ಪರಿಹಾರ, ಅತಿವೃಷ್ಠಿ ಯೋಜನೆಗಳನ್ನಾಗಲಿ ಅಥವಾ ಇತರೆ ರಾಜ್ಯಕ್ಕೆನೀಡಬೇಕಾದ ಅನುದಾನಗಳನ್ನಾಗಲಿ ನೀಡದೇ, ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಮಲತಾಯಿ ಧೋರಣಿಯನ್ನುಅನುಸರಿಸುತ್ತಾ “ದೊಡ್ಡ ಚೊಂಬು ಕೊಡುತ್ತಿರುವುದನ್ನು” ವಿರೋಧಿಸಿ ಪ್ರತಿಭಟನೆಯನ್ನು ಜು. 27ರ ಶನಿವಾರ ಬೆಳಿಗ್ಗೆ 11.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದ ಬಳಿ ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನೆಯಲ್ಲಿ ಯೋಜನಾ & ಸಾಂಖ್ಯಿಕ ಇಲಾಖೆ & ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್, ರಾಜ್ಯಾಧ್ಯಕ್ಷರು, ರಾಜ್ಯ ವಕ್ಫ್‌ಮಂಡಳಿ & ಕೆಪಿಸಿಸಿಯ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಕೆ.ಅನ್ವರ್‌ಬಾಷಾ ಮಾಜಿ ಸಂಸದಬಿ. ಎನ್. ಚಂದ್ರಪ್ಪ ಕೆಪಿಸಿಸಿ ಉಪಾಧ್ಯಕ್ಷರು ಮಾಜಿ ಸಚಿವರಾದ ಹೆಚ್. ಆಂಜನೇಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ನಗರಾಭಿವೃಧ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಕಾರ್ಯಾಧ್ಯಕ್ಷರಾದ ಕೆ.ಎಂ.ಹಾಲಸ್ವಾಮಿ, ಜಿಲ್ಲಾ ಪ್ರಚಾರ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಆರ್. ಕೃಷ್ಣಮೂರ್ತಿ ಶಾಸಕರುಗಳಾದ ಎನ್.ವೈ.ಗೋಪಾಲಕೃಷ್ಣ, ಬಿ.ಜಿ.ಗೋವಿಂದಪ್ಪ, ಟಿ.ರಘು ಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ ವಿಧಾನಪರಿಷತ್ ಸದಸ್ಯರಾದ ಡಿ. ಟಿ. ಶ್ರೀನಿವಾಸ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್, ದ್ರಾಕ್ಷರಸ ಮಂಡಳಿಯ ರಾಜ್ಯಾಧ್ಯಕ್ಷರಾದ ಡಾ. ಬಿ. ಯೋಗೇಶ್ ಬಾಬು, ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಶ್ರೀಮತಿ ಸವಿತಾ ರಘು ಕುಶಲಕರ್ಮಿಗಳ ಕಾಂಗ್ರೆಸ್ ವಿಭಾಗದ ರಾಜ್ಯಾಧ್ಯಕ್ಷರಾದ ಆರ್.ಪ್ರಸನ್ನಕುಮಾರ್ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾಧ್ಯಕ್ಷ ಆರ್. ಶಿವಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್. ಎ. ಷಣ್ಮುಖಪ್ಪ ಬಿ.ಸೋಮಶೇಖರ್ , ಮಾಜಿ ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್, ಎ.ವಿ.ಉಮಾ ಡಾ. ಬಿ. ತಿಪ್ಪೇಸ್ವಾಮಿ ಎಸ್. ವಿಜಯಕುಮಾರ್ ಪಿ. ರಘು ಎಂ. ರಾಮಪ್ಪ, ಡಾ. ರಾಘವೇಂದ್ರ ಪ್ರಧಾನ ಕಾರ್ಯದರ್ಶಿ, ರಮೇಶ್‌ಬಾಬು ಸೇರಿದಂತೆ ಇತರರುಣ ಭಾಗವಹಿಸಲಿದ್ದಾರೆ.
ಈ ಪ್ರತಿಭಟನೆಯಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಎಲ್ಲಾ ಬ್ಲಾಕ್ ಅಧ್ಯಕ್ಷರು, ಮುಂಚೂಣಿ ಹಾಗೂ ಇತರೆ ಸೆಲ್‌ಗಳ ಜಿಲ್ಲಾಧ್ಯಕ್ಷರುಗಳು ಚೊಂಬನ್ನು ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.