​ಫೆಬ್ರವರಿ 28ರಂದು ಆಕಾಶದಲ್ಲಿ ಅಪರೂಪದ ‘ಗ್ರಹಗಳ ಪರೇಡ್’: ಒಂದೇ ಸಾಲಿನಲ್ಲಿ ಕಾಣಿಸಲಿವೆ 6 ಗ್ರಹಗಳು!

ವಿಶೇಷ ಲೇಖನ:

​ಇದೇ ಫೆಬ್ರವರಿ 28 ರ ಸಂಜೆಯ ಆಕಾಶದಲ್ಲಿ ಚಮತ್ಕಾರ ಸಂಭವಿಸಲಿದೆ. ಆ ದಿನದಂದು ಗ್ರಹಗಳ ಪರೇಡ್ ಅಂದರೆ ಒಂದೇ ಸಾಲಿನಲ್ಲಿ 6 ಗ್ರಹಗಳನ್ನು ಬರಿಗಣ್ಣಿನಲ್ಲಿ ನೋಡಬಹುದಾಗಿದೆ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್. ಟಿ.ಸ್ವಾಮಿ ತಿಳಿಸಿದ್ದಾರೆ.

​ಅಂದು ಪಶ್ಚಿಮ ದಿಗಂತದ ಕಡೆ ಕಣ್ಣು ಹಾಯಿಸಿದರೆ, ದಿಗಂತದಲ್ಲಿ ಬುಧ, ಹೊಳೆಯುವ ಶುಕ್ರ, ಕೆಂಪುಬಣ್ಣದ ಶನಿಗ್ರಹ, ತುಸು ಎತ್ತರದಲ್ಲಿ ಪ್ರಕಾಶಮಾನವಾಗಿ ಹೊಳೆಯುವ ಗುರುಗ್ರಹಗಳನ್ನು ನೋಡಬಹುದಾಗಿದೆ. ಈ ಅಪರೂಪದ ಜೋಡಣೆಯು ಬರಿಗಣ್ಣಿಗೆ ಒಂದು ರೇಖೆಯಂತೆ ಕಂಡರೂ, ವಾಸ್ತವದಲ್ಲಿ ಗ್ರಹಗಳು ಬಾಹ್ಯಾಕಾಶದಲ್ಲಿ ತಮ್ಮದೇ ಆದ ಕಕ್ಷೆಗಳಲ್ಲಿರುತ್ತವೆ.

​ಈ ಘಟನೆಯನ್ನು ಸಂಜೆ 6.30 ರಿಂದ 8 ಗಂಟೆಯವರೆಗೂ ಅರ್ಧ ಗಂಟೆಗಳ ಕಾಲ ನೋಡಬಹುದಾಗಿದೆ. ಯುರೇನಸ್ ಹಾಗೂ ನೆಪ್ಚೂನ್ ಗ್ರಹಗಳನ್ನು ಬೈನಾಕ್ಯುಲರ್ ಇಲ್ಲವೇ ಉತ್ತಮ ದೂರದರ್ಶಕಗಳ ಮೂಲಕವೇ ನೋಡಬೇಕು. ಮತ್ತೆ ಈ ಘಟನೆ ನೋಡಲು 2040 ರ ತನಕ ಕಾಯಬೇಕು ಎಂದು H S T ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *