
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮೇ. 12 : ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಶ್ರೀ ಭದ್ರಕಾಳಮ್ಮ ಸಮೇತ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ನೂತನ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಲೋಕಾರ್ಪಣೆ ಸಮಾರಂಭವೂ ಮೇ. 13 ಮತ್ತು 14 ರಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ವೀರಭದ್ರೇಶ್ವರ ಭಕ್ತ
ಮಂಡಳಿ ತಿಳಿಸಿದೆ.
ಲೋಕ ಕಲ್ಯಾಣಾರ್ಥವಾಗಿ ಮೇ. 13ನೇ ಮಂಗಳವಾರ ಸಂಜೆ 7.00 ರಿಂದ ಗೋದೂಳಿ ಲಗ್ನದಲ್ಲಿ ಗಂಗಾ ಪೂಜೆ, ಗೋ ಪೂಜೆ, ದೀಪ ಪೂಜೆ, ಗಣಪತಿ ಸ್ವಸ್ತಿ ಪುಣ್ಯಾಹ ವಾಚನ ಹಾಗೂ ವಿಗ್ರಹ ಸಂಸ್ಕಾರ ಪೂಜಾ ಕಾರ್ಯಕ್ರಮ ನಡೆಯಲಿದೆ.
ಮೇ. 14ನೇ ಬುಧವಾರ ಬೆಳಿಗ್ಗೆ 6.00 ರಿಂದ ಬ್ರಾಹ್ಮಿ ಮುಹೂರ್ತದಲ್ಲಿ ಕಲಶ ಸ್ಥಾಪನೆ, ಉತ್ಸವಮೂರ್ತಿಗೆ ಪ್ರಾಣ ಪತ್ರಿಷ್ಠೆ, ರುದ್ರಾಭಿಷೇಕ, ಗಣ ಹೋಮ ಪೂರ್ಣಾಹುತಿ ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿದೆ.
ಬೆಳಿಗೆ 11.00 ರಿಂದ ವೇದಿಕೆ ಕಾರ್ಯಕ್ರಮ ನಡೆಯಲಿದ್ದು. ದಿವ್ಯ ಸಾನಿಧ್ಯವನ್ನು ಎಡೆಯೂರು ಕ್ಷೇತ್ರದ ಬಾಳೆಹೊನ್ನೂರು ಮಠದ
ಶಿಲಾಮಠ ತಾವರೆಕೆರೆ, ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ(ರಿ)ಯ ಗೌರವಾಧ್ಯಕ್ಷರಾದ ಶ್ರೀ ರೇಣುಕ
ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಿದ್ದಾಪುರ ಗ್ರಾಮಸ್ಥರು ಹಾಗೂ
ಸಮಸ್ತ ಭಕ್ತಾದಿಗಳ ಮನವಿ ಮಾಡಿದ್ದಾರೆ.