
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ, 21 : ಕಾಂಗ್ರೆಸ್ ಯಾವತ್ತೂ ದಲಿತರ ಪರ ಅಲ್ಲ.ಕಾಂಗ್ರೆಸ್ ದಲಿತರಿಗೆ ಡೇಂಜರ್.ಕಾಂಗ್ರೆಸ್ ಪಕ್ಷದ ದಲಿತ ನಾಯಕರು ಯಾರು ಸಹ ಬಾಯಿ ಬಿಚ್ಚಲಿಕ್ಕೆ ಬಿಡುವುದಿಲ್ಲ ಗುಲಾಮಗಿರಿಯಲ್ಲಿ ಬದುಕುತ್ತಿದ್ದಾರೆ.ದಲಿತರಿಗೆ ವಂಚನೆ ಮಾಡುತ್ತಿದ್ದೀರಿ.ಕಾಂಗ್ರೆಸ್‍ನ ದಲಿತ ನಾಯಕರು ಬಾಯಿ ಬಿಚ್ಚುವುದಿಲ್ಲ ಏಕೆಂದರೆ ಅವರ ಹೊಟ್ಟೆ ತುಂಬುತ್ತಿದೆ ಅವರಿಗೆ ಅಷ್ಟೇ ಸಾಕು ಎಂದು ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬೆಲೆ ಏರಿಕೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.ತಪ್ಪು ಮಾಡಿದವರಿಗೆ ಯಾವುದೇ ಶಿಕ್ಷೆಯಾಗುತ್ತಿಲ್ಲ.. ಇದರಿಂದ ರಾಜ್ಯ ಸರ್ಕಾರದ ಮೇಲೆ ಜನರು
ಆಕ್ರೋಶಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ತನ್ನ ಕಾರ್ಯವನ್ನು ಮಾಡುತ್ತಿದೆ ಜನರ
ಆಕ್ರೋಶವನ್ನು ಸರ್ಕಾರಕ್ಕೆ ಮುಟ್ಟಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಬಿಜೆಪಿ ಪಕ್ಷದಿಂದ 1 & 2 ನೇ ಜನಾಕ್ರೋಶ ಯಾತ್ರೆಯ ಸಹ ನಡೆದಿದೆ.. ನಾಳೆಯಿಂದ 3ನೇ ಹಂತದ ಜನಾಕ್ರೋಶ ಯಾತ್ರೆ ದಾವಣಗೆರೆಯಿಂದ ಪ್ರಾರಂಭವಾಗಲಿದೆ.ಏಪ್ರಿಲ್-25 ರಂದು ಚಿತ್ರದುರ್ಗಕ್ಕೆ ಬರಲಿದೆ ಎಂದರು.
ಬಡವರಿಗೆ, ಹಿಂದುಳಿದವರಿಗೆ ನ್ಯಾಯ ಕೊಡಬೇಕು ಎನ್ನುವುದು ಸರಿಯಿದೆ ಆದರೆ ಜಾತಿ ಜಾತಿಗಳನ್ನು ಹೊಡೆದು ನ್ಯಾಯ
ಕೊಡುವುದು ನ್ಯಾಯನಾ…? ಕಾಂತರಾಜ್ ವರದಿಯ ನಿಜವಾದ ವರದಿ ಏನಾಯಿತು…? ಕಳ್ಳತನವಾಯಿತಾ…? ದೊಡ್ಡ ದೊಡ್ಡ
ಪೆಟ್ಟಿಗೆಗಳಲ್ಲಿ ಇರುವಂತಹ ವರದಿ ಏನಾಯಿತು.. ಇದರ ಬಗ್ಗೆ ತನಿಖೆ ಮಾಡಿದ್ದೀರಾ…? ಕಾರ್ಯದರ್ಶಿಗಳು ಸಿದ್ದರಾಮಯ್ಯರವರ
ಆಪ್ತರು ಅನ್ನುತ್ತಾರೆ ವರದಿಯ ಕೀಲಿ ಕೈ ಏನು ಮಾಡಿದರು.ಪರಿಶಿಷ್ಟ ಜಾತಿಗಳನ್ನು ಹೊಡೆದು ಅನ್ಯಾಯ ಮಾಡುತ್ತಿದ್ದೀರಿ.. ಇದರ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.
ಧರ್ಮಧಾರಿತ ಮೀಸಲಾತಿಯನ್ನು ನೀಡಲಿಕ್ಕೆ ಬರುವುದಿಲ್ಲ ಎಂದು ಅಂಬೇಡ್ಕರ್ ಅವರು ನೀಡಿದ ಸಂವಿಧಾನದಲ್ಲಿ ಸ್ಪಷ್ಟವಾಗಿ
ಹೇಳಲಾಗಿದೆ.. ಆದರೆ ನೀವು ಮುಸ್ಲಿಂ ಜನಾಂಗಕ್ಕೆ ಮೀಸಲಾತಿ ನೀಡುತ್ತೇವೆ ಎಂದು ನಂಬಿಕೆ ಗಳಿಸಲು , ಹೊರಟಿದ್ದೀರಿ.. ಅವರಿಗೂ ಕೂಡ ಕಾಂಗ್ರೆಸ್ ಬೂತ ಹಿಡಿದಿದೆ.ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿದ್ದ ಎಸ್.ಸಿ.ಎಸ್.ಪಿ.ಟಿ.ಎಸ್.ಪಿ ಯೋಜನೆಯ ಅನುದಾನ ಏನು ಮಾಡಿದ್ದೀರಿ..?ಪಶ್ಚಿಮ ಬಂಗಾಳದಲ್ಲಿ ದಲಿತರ ಮನೆಗೆ ನುಗ್ಗಿದ್ದಾರೆ.. ಇದರ ಬಗ್ಗೆ ಯಾರು ಸಹ ಬಾಯಿ ಬಿಚ್ಚುತ್ತಿಲ್ಲ.ವೆಮುಲ್ ಆಕ್ಟ್ ಜಾರಿಗೆ ತರುತ್ತೇವೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ.. ಕಂಬಲ್ ಪಲ್ಲಿ ಆಕ್ಟ್ ಯಾವಾಗ ತರುತ್ತೀರಿ..? ದಲಿತರಿಗೆ ನ್ಯಾಯ ಯಾವಾಗ ಕೊಡಿಸುತ್ತೀರಿ…? ಎಂದು ಪ್ರಶ್ನಿಸಿದರು.
ಓಟಿನ ಕಾರಣಕ್ಕಾಗಿ ಕಾಂಗ್ರೆಸ್ ನಾಟಕ ಆಡಲಾಗುತ್ತಿದೆ. ಅಂಬೇಡ್ಕರ್ ರವರು ಸಂವಿಧಾನ ಬರೆದಿದ್ದಾರೆ ಎಂದು ಇಡೀ ದೇಶ
ಹೇಳುತ್ತಿದೆ ಆದರೆ ರಾಹುಲ್ ಗಾಂಧಿ ಹೇಳುತ್ತಾರೆ ಎಂದು 1000 ವರ್ಷಗಳ ಹಿಂದೆ ಸಂವಿಧಾನವನ್ನು ಬರೆಯಲಾಗಿದೆ ಎಂದು
ಇಂಥವರನ್ನು ಯಾವ ಆಸ್ಪತ್ರೆಗೆ ಸೇರಿಸಬೇಕು..?ಸುಮಾರು 50 ವರ್ಷ ರಾಜಕೀಯ ಮಾಡಿದ ಸಿದ್ದರಾಮಯ್ಯ ರವರಿಗೆ ರಾಜಕೀಯ ಗುರು ಇಲ್ಲ ಅನ್ಸುತ್ತೆ.. ಇತ್ತೀಚಿಗೆ ಒಬ್ಬ ಗುರುಗಳನ್ನು ಅವರು ಕಂಡಿದ್ದಾರೆ ಅವರು ಯಾರೆಂದರೆ ಛೋಟಾ ಖರ್ಗೆಯ ಮಗ ಮೋಟು ಖರ್ಗೆಯವರು ಕಾಂಗ್ರೆಸ್ ನವರು ಸಂವಿಧಾನವನ್ನು ಕೈಯಲ್ಲಿಟ್ಟುಕೊಂಡು ಗಿರಗಿಟ್ಲೆ ಆಡಿಸುತ್ತಿದ್ದಾರೆ ಕಾಂಗ್ರೆಸ್ ಇಸ್ ಎ ಕರೆಪ್ಟ್… ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಿಂದ ಎಲ್ಲರೂ ಭ್ರಷ್ಟರು ಎಂದು ದೂರಿದರು.
ಇಡೀ ದೇಶದಲ್ಲಿ 14 ರಿಂದ 15 ಲಕ್ಷ ಎಕರೆ ವಕ್ಫಾ ಅಸ್ತಿಯಿದೆ.. ಆದರೆ ಅದು ಕೇವಲ ಪ್ರಮುಖರು, ಮುತ್ತುವಲ್ಲಿಗಳು ಕದ್ದು
ತಿನ್ನುತ್ತಿದ್ದಾರೆ.. ಇದನ್ನು ಸರಿಪಡಿಸಲು ಬಿಲ್ಲನ್ನು ಜಾರಿಗೆ ತಂದರೆ ಅವಿವೇಕಿಗಳು ವಿರೋಧಿಸುತ್ತಾರೆ.. ವಕ್ಫಾನ ಒಂದೇ ಒಂದು ಎಕರೆ ಜಮೀನನ್ನು ವಾಪಾಸ್ ಪಡೆದಿಲ್ಲ ಈ ಸರ್ಕಾರ.ಕಾಂಗ್ರೆಸ್ ಪಕ್ಷ ರಾಷ್ಟ್ರದಲ್ಲಿ ಬಂದಾಗಿನಿಂದ ಗರಬೀ ಹಟಾವೋ ಅನ್ನುತ್ತಾರೆ.. ಇದು ಬಡವರ ಹಟಾವೋ ಆಗಿದೆ.60 – 70 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ರವರಿಗೆ ಸರಿಯಾದ ಸ್ಥಾನಮಾನ ಸಿಗಲಿಲ್ಲ ಅಂತ ಹೇಳುತ್ತಾರೆ.. ಸ್ಥಾನಮಾನ ಕೊಡಬೇಕಾಗಿದ್ದವರು ಯಾರು…? ಎಂದು ನಾರಾಯಣ ಸ್ವಾಮಿ ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಕೇಂದ್ರ ಸರ್ಕಾರ ಅಪ್ಪರ್ ಭದ್ರಾ ಯೋಜನೆಗೆ ಸಂಬಂಧಿಸಿದಂತೆ
ಹಣವನ್ನು ಬಿಡುಗಡೆ ಮಾಡಲು ಸಿದ್ದವಿದೆ ಆದರೆ ರಾಜ್ಯ ಸರ್ಕಾರ ಇದಕ್ಕೆ ಸಂಬಂಧಪಟ್ಟಂತೆ ವಿವರಗಳನ್ನು ನೀಡಬೇಕಿದೆ ಆದರೆ
ಇದನ್ನು ನೀಡಲು ರಾಜ್ಯ ಸರ್ಕಾರ ವಿಳಂಭ ಮಾಡುತ್ತಿದೆ ಇದರಿಂದ ಕೇಂದ್ರದಿಂದ ಹಣ ಬಿಡುಗಡೆಯಲ್ಲಿ ವಿಳಂಭವಾಗುತ್ತಿದೆ ರಾಜ್ಯ
ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಸಲುವಾಗಿ ಕೇಂದ್ರದ ಮೇಲೆ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪ ಮಾಡುತ್ತಿದೆ ಎಂದರು.
ಮಾಜಿ ಶಾಸಕರಾದ ಜಿ,ಎಚ್.ತಿಪ್ಪಾರೆಡ್ಡಿ ಮಾತನಾಡಿ, ಅಪ್ಪರ್ ಭದ್ರಾ ಯೋಜನೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ತನ್ನ
ಪಾಲಿನ ಹಣವನ್ನು ಬಿಡುಗಡೆ ಮಾಡಿದೇ ಬರೀ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿದೆ ಕಳೇದ ಮೂರು ಸಾರಿಯೂ ರಾಜ್ಯ ಸರ್ಕಾರ ತನ್ನ ಆಯವ್ಯಯದಲ್ಲಿ ಅಪ್ಪರ್ ಭದ್ರಾ ಯೋಜನೆಗೆ ಹಣವನ್ನು ನೀಡಿಲ್ಲ ಸ್ವಲ್ಪ ಮಟ್ಟಿಗೆಯಾದರೂ ಹಣವನ್ನು ನೀಡಿದ್ದರೆ ಈಗಾಗಲೇ ಕಾಮಗಾರಿ ಮುಂದುವರೆಯತ್ತಿತು ಎಂದು ಸರ್ಕಾರದ ಕ್ರಮವನ್ನು ವಿರೋಧಿಸಿದರು.
ಗೋಷ್ಟಿಯಲ್ಲಿ ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಜಿಲ್ಲಾಧ್ಯಕ್ಷ ಎ.ಮುರುಳಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್,
ಮಖಂಡರಾದ ಸಿದ್ದಾರ್ಥ ಗುಡಾರ್ಪಿ, ಮೋಹನ್, ವಕ್ತಾರರಾದ ಬೇದ್ರೇ ನಾಗರಾಜ್ ಛಲವಾದಿ ತಿಪ್ಪೆಸ್ವಾಮಿ, ಮಂಡಲ ಅಧ್ಯಕ್ಷರಾದ ನಾಗರಾಜ್ ಲೋಕೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಕಾಂಗ್ರೆಸ್ ಪಕ್ಷ ಗಿರವಿ ಅಂಗಡಿ ಇದ್ದಹಾಗೆ.ಗಿರವಿ ಅಂಗಡಿಗೆ ಹೋದ ವಸ್ತು ಯಾವತ್ತೂ ವಾಪಾಸ್ ಬರುವುದಿಲ್ಲ.. ಗಿರಿವಿ ಅಂಗಡಿಗೆ
ಶ್ರೀಮಂತರು ಹೊಡೆದುಕೊಳ್ಳಲು ಹೋಗುತ್ತಾರೆ.. ಬಡವರು ಕಳೆದುಕೊಳ್ಳಲು ಹೋಗುತ್ತಾರೆ… ದಲಿತರು ಹಿಂದುಳಿದವರು ಈ ಗಿರವಿ ಅಂಗಡಿಗೆ ಹೋಗಬೇಡಿ.
-ವಿಧಾನಪರಿಷತ್‍ನ ವಿರೋಧಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ