ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನ. 14
ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದ ವಜ್ರ ಮಹೋತ್ಸವದ ಹಬ್ಬವನ್ನು ನ.26 ರಂದು ನಗರದ ಹಳೆ ಮಾಧ್ಯಮಿಕ ಶಾಲಾ
ಆವರಣದಲ್ಲಿ ಆಚರಿಸಲಾಗುವುದೆಂದು ವಜ್ರ ಮಹೇಶ್ ಮತ್ತು ಸ್ನೇಹಿತರು ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನ್ಯಾಯವಾದಿ ನರಹರಿ 1956 ರಲ್ಲಿ ಸಂವಿಧಾನ ರಚನೆಯಾಗಿ 68
ವರ್ಷಗಳಾಗಿರುವುದರಿಂದ ಸಂವಿಧಾನದ ಆಚರಿಸಲು ತೀರ್ಮಾನಿಸಿದ್ದೇವೆ. ಹಬ್ಬ ಒಂದು ಜಾತಿಗೆ ಸೀಮಿತವಲ್ಲ. ರಾಷ್ಟ್ರಕ್ಕೆ ಸೇರಿದ್ದು, ಬುದ್ದ,
ಬಸವ, ಅಂಬೇಡ್ಕರ್ ತತ್ವವನ್ನು ಆಧಾರವಾಗಿಟ್ಟುಕೊಂಡು ಆಚರಿಸುತ್ತಿರುವ ಸಂವಿಧಾನದ ಹಬ್ಬದಲ್ಲಿ ಜೀ-ಟಿವಿ ಕನ್ನಡ ವಾಹಿನಿಯಲ್ಲಿ
ಬಿತ್ತರವಾಗುತ್ತಿರುವ ಮಹಾನಾಯಕ ಧಾರವಾಹಿಯ ಎಲ್ಲಾ ಕಲಾವಿದರು, ಸಾಹಿತಿಗಳು, ಗಣ್ಯರು ಇನ್ನು ಅನೇಕರು
ಭಾಗವಹಿಸಲಿದ್ದಾರೆಂದು ಹೇಳಿದರು.
ಸಂವಿಧಾನದ ಹಬ್ಬ ಮುನ್ನಾ ದಿನ ನ.25 ರಂದು ಅಂಬೇಡ್ಕರ್ ಸರ್ಕಲ್‍ನಿಂದ ಬೆಳಿಗ್ಗೆ 10 ಕ್ಕೆ ಬೈಕ್ ರ್ಯಾಲಿ ಹೊರಟು ನಗರದ ರಾಜ
ಬೀದಿಗಳಲ್ಲಿ ಸಂಚರಿಸಲಿದೆ. ಎಲ್ಲಾ ಜಾತಿ ಧರ್ಮದವರು ಸಂವಿಧಾನದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ನ್ಯಾಯವಾದಿ ನರಹರಿ ಮನವಿ
ಮಾಡಿದರು.
ವಜ್ರ ಮಹೇಶ್ ಮಾತನಾಡಿ ಬುದ್ದ ಬಸವ ಅಂಬೇಡ್ಕರ್ ಹಾದಿಯಲ್ಲಿ ಎಲ್ಲರೂ ಸಾಗುವಂತೆ ಜಾಗೃತಿ ಮೂಡಿಸುವುದು ವಜ್ರ ಮಹೋತ್ಸವದ
ಉದ್ದೇಶವಾಗಿದ್ದು, ಕೇವಲ ದಲಿತರಷ್ಟೆ ಅಲ್ಲ ಎಲ್ಲಾ ಜಾತಿಯವರು ಸಂವಿಧಾನದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ನ್ಯಾಯವಾದಿ ವಿಶ್ವಾನಂದ ಮಾತನಾಡುತ್ತ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ದೇಶದ ಪ್ರತಿಯೊಬ್ಬರಿಗೂ ಸಮಾನವಾದ
ಹಕ್ಕು ನೀಡಿದ್ದಾರೆ. ಹೊಸ ಹೊಸ ವಿಷಯಗಳನ್ನು ಸಂವಿಧಾನದಿಂದ ಹೆಕ್ಕಿ ತೆಗೆಯುವುದು ವಜ್ರ ಮಹೋತ್ಸವದ ಉದ್ದೇಶ. ಮೂಲಭೂತ
ಹಕ್ಕನ್ನು ಕೇಳುವುದಷ್ಟೆ ಅಲ್ಲ. ಕರ್ತವ್ಯವನ್ನು ಎಲ್ಲರೂ ಪಾಲಿಸಿದಾಗ ಮಾತ್ರ ಸಂವಿಧಾನಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದು ಹೇಳಿದರು.
ಪ್ರಥಮ ದರ್ಜೆ ಗುತ್ತಿಗೆದಾರ ಬ್ಯಾಲಾಳ್ ಜಯಪ್ಪ ಮಾತನಾಡಿ ಇನ್ನು ಮುಂದೆ ಪ್ರತಿ ವರ್ಷವೂ ಸಂವಿಧಾನದ ಹಬ್ಬವನ್ನು ಅದ್ದೂರಿಯಾಗಿ
ಆಚರಿಸಬೇಕೆಂದುಕೊಂಡಿದ್ದೇವೆ. ಮಧ್ಯ ಕರ್ನಾಟಕದ ಚಿತ್ರದುರ್ಗದಲ್ಲಿ ನಾಡ ಹಬ್ಬದ ರೀತಿಯಲ್ಲಿ ದೊಡ್ಡ ಮಟ್ಟದಲ್ಲಾಗಬೇಕೆಂಬುದು ನಮ್ಮ
ಆಸೆ. ನ.26 ರಂದು ನಡೆಯುವ ವಜ್ರ ಮಹೋತ್ಸವದಲ್ಲಿ ನಾಡಿನ ನಾನಾ ಭಾಗಗಳಿಂದ ಜನ ಆಗಮಿಸುವ ನಿರೀಕ್ಷೆಯಿದೆ ಎಂದರು.
ನ್ಯಾಯವಾದಿಗಳಾದ ಎಸ್.ಕೆ.ಸುರೇಶ್ ಬಂಜಗೆರೆ, ಎಸ್.ದಯಾನಂದ್, ಮುನಿ, ಸುನಿಲ್, ಪ್ರಸನ್ನ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.