ಚಿತ್ರದುರ್ಗ ಆ. 14
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಜಿಲ್ಲಾ ಕಾಂಗ್ರೆಸ್ ಸಮಿತಿವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಅಂಗವಾಗಿ ಗುರುವಾರ ಸಂಜೆ ಮೇಣದಬತ್ತಿಗಳೊಂದಿಗೆ ಪಥಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾಧಿಕಾರಿಗಳ ಕಚೇರಿ ವೃತ್ತದ ಬಳಿ ಇರುವ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂದೆ ಸೇರಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು, ವಿವಿಧ ಘಟಕದ ಅಧ್ಯಕ್ಷರು, ಕಾರ್ಯಕರ್ತರು, ಕೈಯಲ್ಲಿ ಮೊಂಬತ್ತಿಯನ್ನು ಹಿಡಿದು ಮತಗಳ್ಳತನದ ವಿರುದ್ದ ಘೋಷಣೆಗಳನ್ನು ಕೂಗುತ್ತಾ, ಮತಗಳ್ಳರೇ ಅಧಿಕಾರನ್ನು ಬಿಡಿ ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ ಎಂಬ ಭಿತ್ತಿ ಪತ್ರವನ್ನು ಹಿಡಿದು ದಾರಿಯುದ್ದಕ್ಕೂ ಸಾಗಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪ್ರಾರಂಭವಾದ ಪಥ ಸಂಚಲನ ಡಾ.ಬಿ.ಆರ್‍ಅಂಬೇಡ್ಕರ್ ಪುತ್ತಳಿವರೆಗೆ ಸಾಗಿ
ಅಲ್ಲಿಂದ ಗಾಂಧಿವೃತ್ತದವರೆಗೆ ಪಥ ಸಂಚಲನವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ತಾಜ್‍ಪೀರ್, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆರ್.ಕೆ.ಸರ್ದಾರ್, ಗ್ಯಾರೆಂಟಿ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಶಿವಣ್ಣ, ತಾಲ್ಲೂಕು ಅಧ್ಯಕ್ಷರಾದ ಪ್ರಕಾಶ್, ಪ್ರಧಾನ ಕಾರ್ಯದರ್ಶಿಕೆ.ಪಿ.ಸಂಪತ್ ಕುಮಾರ್, ಮೈಲಾರಪ್ಪ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಗೀತಾ ನಂದಿನಿ ಗೌಡ, ಮಂಜುನಾಥ್, ಪ್ರಕಾಶ್ ರಾಮನಾಯ್ಕ್, ಖುದ್ದುಸ್, ಓಬಿಸಿ ಘಟಕದ ಅಧ್ಯಕ್ಷ ಎನ್.ಡಿ.ಕುಮಾರ್, ಲಕ್ಷ್ಮೀಕಾಂತ್, ಮೋಕ್ಷಾ ರುದ್ರ ಸ್ವಾಮಿ,ಅಂಜನಪ್ಪ, ಚೋಟು, ಮುದಾಸಿರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Views: 7