ಹೈದರಾಬಾದ್: ಇಂದಿನ ಕಾಲಘಟ್ಟದಲ್ಲಿ ಎಲ್ಲರ ಅಡುಗೆ ಮನೆಯಲ್ಲಿಯೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಗೆ ಇದ್ದೇ ಇರುತ್ತದೆ. ಖಾದ್ಯ ತಯಾರಿಗೆ ಜಿಂಜರ್- ಗಾರ್ಲಿಕ್ ಪೇಸ್ಟ್ ಹಾಕುವುದು ಸಾಮಾನ್ಯ. ಆದರೆ ನೀವು ಖರೀದಿಸುವ ಜಿಂಜರ್ – ಗಾರ್ಲಿಕ್ ಪೇಸ್ಟ್ ನಿಜವಾಗಿಯೂ ಶುಂಠಿ- ಬೆಳ್ಳುಳ್ಳಿಯಿಂದಲೇ ತಯಾರಿ ಮಾಡುತ್ತಾರೆಯೇ?
ಅದಕ್ಕೆ ಬೇರೆ ಯಾವ ಕೆಮಿಕಲ್ ಬಳಸುತ್ತಾರೆ ಎಂದು ಯೋಚಿಸಿದ್ದೀರಾ? ಇಲ್ಲಿದೆ ನಿಮ್ಮನ್ನು ಬೆಚ್ಚಿಬೀಳಿಸುವ ಸುದ್ದಿ.
ಹೈದರಾಬಾದ್ ನಲ್ಲಿ ನಕಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿ ಮಾಡುತ್ತಿದ್ದ ಘಟಕವೊಂದನ್ನು ಬೇಧಿಸಲಾಗಿದೆ. ಸೈಬರಾಬಾದ್ ವಿಶೇಷ ಕಾರ್ಯಾಚರಣೆ ತಂಡವು ಕಾಟೇದನ್ ನಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದೆ. ಅಲ್ಲಿ ಹಾನಿಕಾರಕ ವಸ್ತುಗಳನ್ನು ಬಳಸಿ ಕಲಬೆರಕೆ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ತಯಾರಿಸಲಾಗುತ್ತಿತ್ತು. ಪೊಲೀಸರು ಸ್ಥಳದಿಂದ 35 ಕ್ವಿಂಟಾಲ್ ಕಲಬೆರಕೆ ಪೇಸ್ಟ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸುಳಿವಿನ ಮೇರೆಗೆ ತಂಡವು ಮೈಲಾರ್ ದೇವಪಲ್ಲಿಯ ಸುಭಾಷ್ ಕಾಲೋನಿಯಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿತು. ಸಿಂಥೆಟಿಕ್ ರಾಸಾಯನಿಕಗಳು, ಬೆಲ್ಲದ ಪುಡಿ ಮತ್ತು ಹಾಳಾದ ಬೆಳ್ಳುಳ್ಳಿ ಬಲ್ಬ್ ಗಳು ಮತ್ತು ಶುಂಠಿ ಬಳಸಿ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ತಯಾರಿಸುತ್ತಿದ್ದ ಮೊಹಮ್ಮದ್ ಅಹ್ಮದ್ (34) ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಎಸ್‌ಒಟಿ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
ಉತ್ಪನ್ನವನ್ನು ಮಾರಾಟ ಮಾಡಲು ಅಹ್ಮದ್ ಅವರು ಪಡೆದ ಪರವಾನಗಿ ಎರಡು ವರ್ಷಗಳ ಹಿಂದೆ ಮುಗಿದಿದೆ. ಆದರೆ ಅವರು ಇನ್ನೂ ಚೀಟಿಗಳಲ್ಲಿ ಸಂಖ್ಯೆಯನ್ನು ಮುದ್ರಿಸುತ್ತಾರೆ. ಬಾಟಲಿಗಳ ಮೇಲೆ ಅಂಟಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಮುಂದಿನ ಕ್ರಮಕ್ಕಾಗಿ ಮಹಮ್ಮದ್ ಅಹ್ಮದ್ ಅವರನ್ನು ವಶಪಡಿಸಿಕೊಂಡ ವಸ್ತುಗಳೊಂದಿಗೆ ಮೈಲಾರ್ದೇವಪಲ್ಲಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1