ಪರಿಶಿಷ ಜಾತಿ ಕಾಲೋನಿಗಳ ಮೂಲಭೂತ ಸೌಕರ್ಯಕ್ಕೆ ಒಂದು ಕೋಟಿ ಅನುದಾನ ದುರ್ಬಳಕೆ: ವೈ.ಎ.ನಾರಾಯಣಸ್ವಾಮಿ

ಚಿತ್ರದುರ್ಗ ಫೆ. ೧೭ ಇಂಗಳದಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವರ್ಕ್ ಅರ್ಡರ್ ಇಲ್ಲದೇ ಒಂದು ಕೋಟಿ ವೆಚ್ಚದ ಸೋಲಾರ್ ದೀಪ ಅಳವಡಿಸಿದ್ದು ಸಂಪೂರ್ಣ ಕಳಪೆ ಲೈಟ್ ಗಳಾಗಿದ್ದು ಸಂಬಂಧಿಸಿದ ಅಧಿಕಾರಿಗಳು ಅನುದಾನ ಬಿಡುಗಡೆ ಮಡಬಾರದು ಮತ್ತು ಸೂಕ್ತ ತನಿಖೆಗೆ
ಕ್ರಮ ವಹಿಸಿಬೇಕು ಎಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯ ರಾಘವೇಂದ್ರ ಆರೋಪಿಸಿದ್ದಾರೆ.


ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಳೆದ ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ
ವೈ.ಎ.ನಾರಾಯಣಸ್ವಾಮಿ ಅವರು ಪರಿಶಿಷ ಜಾತಿ ಕಾಲೋನಿಗಳ ಮೂಲಭೂತ ಸೌಕರ್ಯಕ್ಕೆ ಒಂದು ಕೋಟಿ ನೀಡಿದ್ದು ಆ
ಅನುದಾನ ಸಂಪೂರ್ಣ ದುರ್ಬಳಕೆ ಆಗಿದೆ ಎಂದು ಆರೋಪಿದರು.

ಇಂಗಳದಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆರು ಹಳ್ಳಿಗಳ ಎಸ್ ಇಪಿ ಹಣ ನೀಡಿದ್ದರು. ಆ ಹಣ ಸಮಾಜ ಕಲ್ಯಾಣ
ಇಲಾಖೆಯಿಂದ ಚಿತ್ರದುರ್ಗ ಕಾರ್ಯಪಾಲಕ ಪಂಚಾಯತ್ ರಾಜ್ ವಿಭಾಗದಿಂದ ೧ ಕೋಟಿ ವೆಚ್ಚದ ಸೋಲರ್ ಲೈಟ್ ಅಳವಡಿಕೆಗೆ
ತುಂಡು ಗುತ್ತಿಗೆ ಕರೆದಿದ್ದರು. ಪ್ರತಿ ೫ ಲಕ್ಷ ಮೀರದಂತೆ ತುಂಡು ಗುತ್ತಿಗೆ ನೀಡಿದ್ದಾರೆ. ಇದರ ಭಾಗವಾಗಿ ಅನುಮೋದನೆಗಾಗಿ
ಪಂಚಾತ್ ರಾಜ್ ಇಲಾಖೆ ಅವರು ಶಿವಮೊಗ್ಗ ಮುಖ್ಯ ಕಚೇರಿಗೆ ಕಳಸಿದ್ದರು ಆದರೆ ಕಾಮಗಾರಿ ಅನುಮೋದನೆ ಪ್ರತಿ ಮತ್ತು ಸ್ಥಳ
ಪರಿಶೀಲನೆ ನಡೆಸುವುದಕ್ಕಿಂದ ಮೊದಲೇ ರಾತ್ರೋ ರಾತ್ರಿ ಯಾವುದೇ ಸರ್ಕಾರ್ ಮಾರ್ಗಸೂಚಿ ಪಾಲನೆ ಮಾಡದೇ ಕಳಪೆ ಮಟ್ಟದ
ಸೋಲರ್ ಲೈಟ್ ಹಾಕಿದ್ದಾರೆ ಎಂದು ಗುತ್ತಿಗೆದಾರನ ವಿರುದ್ದ ಗುಡುಗಿದರು.
ಸೋಲರ್ ಲೈಟ್ ಮೇಲೆ ಯಾವುದೇ ಕಂಪನಿಯ ಹೆಸರಿಲ್ಲ, ಐಎಸ್‌ಐ ಮಾರ್ಕ್ ಇಲ್ಲ, ಗುಣಮಟ್ಟ ಸಹ ಇಲ್ಲ,ದಲಿತ ಕಾಲೋನಿ
ಇಲ್ಲದ ಕಡೆ ಸಹ ಸೋಲರ್ ಲೈಟ್ ಅಳವಡಿಸಿದ್ದು ಹಣ ದುರುಪಯೋಗವಾಗಿದೆ. ಸೋಲರ್ ಲೈಟ್ ಗಳು ನೋಡಿದರೆ ಇದು ಹಣ
ಒಡೆಯುವ ಸ್ಕೀಂ ನಂತೆ ಕಾಣುತ್ತಿದ್ದು ಎಲ್ಲಾ ಕಡೆಗಳಲ್ಲಿ ಹಾಕಿರುವ ಸೋಲರ್ ಅನುದಾನದ ಮೊತ್ತವನ್ನು ರದ್ದುಗೊಳಿಸಿ ಹೊಸ
ಟೆಂಡರ್ ಕರೆಯಬೇಕು. ಈಗ ಅನುಮೋದನೆ ನೀಡುತ್ತಿರುವ ಗುತ್ತಿಗೆದಾರನ ಲೈಸನ್ಸ್ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಹೋರಟಗಾರ ನಾಗಭೂಷಣ್ ಮಾತನಾಡಿ ಇಂಗಳದಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ
ಬ್ರಹ್ಮಾಂಡ ಭ್ರಷಚಾರವಾಗಿದೆ. ಮಾಡಿರುವ ಕಡೆಗಳಲ್ಲಿ ಬಣ್ಣ ಮತ್ತು ಸುಣ್ಣ ಒಡೆದು ಹಣ ಮನಸ್ಸಿಗೆ ಬಂದಂತೆ ಬರೆದುಕೊಳ್ಳುತ್ತಿದ್ದು
ಅಧಿಕಾರಿಗಳು ಯಾವುದೇ ಪರಿಶೀಲನೆ ಮಾಡದೇ ಅನುದಾನ ಒದಗಿಸುತ್ತಿದ್ದಾರೆ. ರಾತ್ರೋ ರಾತ್ರಿ ಜೆಸಿಪಿ ಮೂಲಕ ಕಾಮಗಾರಿ
ಮಾಡಿ ಬಿಲ್ ಬರೆದುಕೊಳ್ಳುತ್ತಿದ್ದು ಜೊತೆ ಜಿಪಿಎಸ್ ಫೋಟೋಗೆ ಮಾತ್ರ ಜನರನ್ನು ಕರೆದುಕೊಂಡು ಹೋಗುತ್ತಿದ್ದಾರ ಎಂದು
ನೇರವಾಗಿ ಅಧಿಕಾರಿಗಳ ಮೇಲೆ ಆರೋಪಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಮಹೇಶ್, ಮುಖಂಡರಾದ ಸಂತೋಷ,ಬಾಬು, ಮಹಲಿಂಗಪ್ಪ ಇದ್ದರು.

Leave a Reply

Your email address will not be published. Required fields are marked *