ಭಾರತದ ಹೆಸರಾಂತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಆಸಕ್ತಿದಾಯಕ ಪೋಸ್ಟ್, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅದೇ ರೀತಿಯ ಸುಂದರ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಕಲಾವಿದರೊಬ್ಬರು ಧೂಳು ಹಿಡಿದ ಕಾರುಗಳ ಗ್ಲಾಸ್ಗಳಲ್ಲಿ ಅದ್ಭುತವಾಗಿ ಚಿತ್ರಗಳನ್ನು ಬಿಡಿಸುವ ದೃಶ್ಯವನ್ನು ಕಾಣಬಹುದು.

ಸಾಮಾಜಿಕ ಜಾಲತಾಣವು ಪ್ರತಿಭೆಗಳನ್ನು ಪ್ರದರ್ಶಿಸಲಿರುವ ಒಂದು ಅದ್ಭುತ ವೇದಿಕೆಯಾಗಿದೆ. ಅದೆಷ್ಟೋ ಜನರು ತಮ್ಮ ಡಾನ್ಸ್, ಆಕ್ಟಿಂಗ್, ಚಿತ್ರಕಲೆ ಹೀಗೆ ತಮ್ಮ ಪ್ರತಿಭೆಗಳ ಕುರಿತ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಗ ಅದೇ ರೀತಿ ಭಾರತದ ಹೆಸರಾಂತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು, ಭಾರತದ ಅದ್ಭುತ ಕಲಾವಿದರೊಬ್ಬರ ಕಲಾ ಪ್ರತಿಭೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆನಂದ್ ಮಹಿಂದ್ರಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಟಿವ್ ಆಗಿದ್ದು, ಪ್ರತಿನಿತ್ಯ ಇಂಟರೆಸ್ಟಿಂಗ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗ ಅಂತಹದ್ದೇ ಕಲಾವಿದರೊಬ್ಬರು ಧೂಳು ಹಿಡಿದ ಕಾರ್ ಗ್ಲಾಸ್ ಮೇಲೆ ಅದ್ಭುತವಾದ ಚಿತ್ರಗಳನ್ನು ಮೂಡಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಕಲಾವಿದರ ಕೈ ಚಳಕಕ್ಕೆ ಎಲ್ರೂ ಫಿದಾ ಆಗಿದ್ದಾರೆ.
ಈ ವಿಡಿಯೋವನ್ನು ಆನಂದ್ ಮಹೀಂದ್ರಾ (@anandmahindra) ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ಎಂತಹ ಅದ್ಭುತ ಪ್ರತಿಭೆ. ಕಲಾವಿದರು ಎಲ್ಲೆಲ್ಲೂ ಕಾಣಸಿಗುತ್ತಾರೆ, ಮತ್ತು ನಿಜವಾದ ಕಲಾವಿದನು ಪ್ರಪಂಚದ ಪ್ರತಿಯೊಂದು ವಸ್ತುವಿನಲ್ಲೂ ತನ್ನ ಕಲೆಯ ಚಿತ್ತಾರವನ್ನು ಮೂಡಿಸುತ್ತಾನೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು, ಧೂಳು ಹಿಡಿದ ಕಾರಿನ ಗ್ಲಾಸ್ ಮೇಲೆ ಅದ್ಭುತವಾದ ಚಿತ್ರಗಳನ್ನು ಬಿಡಿಸುವ ದೃಶ್ಯವನ್ನು ಕಾಣಬಹುದು. ವೈರಲ್ ವಿಡಿಯೋದಲ್ಲಿ ಕಲಾವಿದರೊಬ್ಬರು ಧೂಳು ಹಿಡಿದ ಕಾರುಗಳ ಗ್ಲಾಸ್ ಮೇಲೆ ಕೈ, ನಾಯಿ ಮರಿ, ಸೈನಿಕರು, ಆನೆ, ಮಂಗ ಸೇರಿದಂತೆ ಅದ್ಭುತ ಚಿತ್ರಗಳನ್ನು ತನ್ನ ಕೈಯಾರೆ ಬಿಡಿಸುವ ಸುಂದರ ದೃಶ್ಯವನ್ನು ಕಾಣಬಹುದು.
ಡಿಸೆಂಬರ್ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕಿಂತೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅದ್ಭುತ ಕಲಾವಿದʼ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಕಲಾವಿದನ ಕ್ರಿಯೇಟಿವಿಟಿಗೆ ತಲೆಬಾಗಿದ್ದಾರೆ.
Source : https://tv9kannada.com/trending/man-creates-art-on-cars-dusty-windows-viral-news-mda-749873.html
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0