ನಮ್ಮ ಆಲೋಚನೆಗಳ ಮೇಲೆ ನಮ್ಮ ಆರೋಗ್ಯ ಅವಲಂಬಿತವಾಗಿರುತ್ತದೆ : ಡಾ.ಬಸವಕುಮಾರ ಸ್ವಾಮೀಜಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು. 06 : ನಮ್ಮ ಆಲೋಚನೆಗಳು ಎಲ್ಲಿಯವರೆಗೆ ಶುದ್ದವಾಗಿರುವುದಿಲ್ಲವೂ, ಅಲ್ಲಿಯವರೆಗೂ ನಮ್ಮ ಆರೋಗ್ಯವೂ ಸಹಾ ಶುದ್ದವಾಗಿ ಇರಲು ಸಾಧ್ಯವಿಲ್ಲ, ನಮ್ಮ ಆಲೋಚನೆಗಳ ಮೇಲೆ ನಮ್ಮ ಆರೋಗ್ಯ ಅವಲಂಬಿತವಾಗಿರುತ್ತದೆ. ಆಲೋಚನೆಗಳು ನಮ್ಮೆಲ್ಲ ಅನಾಹುತಕ್ಕೂ, ಆತಂಕಕ್ಕೂ, ಆಪತ್ತಿಗೂ, ಅನಾರೋಗ್ಯಕ್ಕೂ ಮುಖ್ಯವಾದ ಕಾರಣವಾಗಿರುತ್ತದೆ ಎಂದು ಎಸ್.ಜೆ.ಎಂ.ವಿದ್ಯಾ ಪೀಠದ ಆಡಳಿತ್ಮಾಕ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮಿಜಿ ತಿಳಿಸಿದರು.

ನಗರದ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಶನಿವಾರ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದ ಸಾನೀಧ್ಯವಹಿಸಿ ಮಾತನಾಡಿದ ಶ್ರೀಗಳು, ವ್ಯೆದ್ಯಕೀಯ ಲೋಕದಲ್ಲಿ ಅಶ್ಚರ್ಯಗಳು ನಡೆಯುತ್ತವೆ ಅದಕ್ಕಿಂತಲೂ ಅಪರೂಪದ ಆಶ್ಚರ್ಯಗಳು ಅಧಾತ್ಮ ಲೋಕದಲ್ಲಿ  ನಡೆಯುತ್ತವೆ. ವ್ಯೆದ್ಯರಿಗೆ ಅನೇಕ ಭಾರಿ ಆಶ್ಚರ್ಯಗಳು ಸಂಗತಿಗಳು ನಿಮ್ಮ ಕಣ್ಣೆದುರಿಗೆ ನಡೆಯುತ್ತವೆ ಅದೇ ರೀತಿ ಸಂತರು, ಮಹಾತ್ಮರು ಕೂಡ ತಾಯಿಯಿಂದ ಹಿಡಿದು ಮಕ್ಕಳನ್ನು ಆರೈಕೆ ಮಾಡುವ ಸಂದರ್ಭಗಳು ಬರುತ್ತವೆ. ಕಾಲ ಬದಲಾಗುತ್ತದೆ ಶಿಷ್ಯನೇ ಗುರುವಿಗೆ ಸನ್ಮಾನ ಮಾಡುವಂತ ಸಂದರ್ಭ ಬರುತ್ತದೆ ಎಂದರು.

ದೇಶ, ನಾಡು ,ಸಮಾಜ, ಆರೋಗ್ಯ ಪೂರ್ಣವಾಗಿ ಇರಲು ನಿಮ್ಮ ಶ್ರಮ ಅಧಿಕವಾಗಿದೆ. ಆಧ್ಯಯನಕ್ಕೆ ಬೆಲೆ ನೀಡಲು ಸಾಧ್ಯವಿಲ್ಲ . ವ್ಯೆದ್ಯ ರ ಕಷ್ಟಗಳನ್ನು ನಾವು ಅರ್ಥ ಮಾಡಿಕೊಳ್ಳುಲು ಸಾಧ್ಯವಿಲ್ಲ, ವ್ಯೆದ್ಯರಿಗೆ ಎಷ್ಟೇ ಕಷ್ಟ ವಿದ್ದರೂ ಸಹಾ ನನ್ನನ್ನು ನಂಬಿ ಬಂದ ರೋಗಿಗೆ ಚಿಕಿತ್ಸೆಯನ್ನು ನೀಡುವುದರ ಮೂಲಕ ಆತನ ಆರೈಕೆಯನ್ನು ಮಾಡುತ್ತಾನೆ, ಮೊದಲು ತಾನು ನಂಬಿದ ವೃತ್ತಿಯನ್ನು ಗೌರವಿಸಿ ಅದಕ್ಕೆ ಮನ್ನಣೆಯನ್ನು ನೀಡುವುದರ ಮೂಲಕ ರೋಗಿಗಳ ಸೇವೆಯನ್ನು ಮಾಡುತ್ತಾರೆ ಎಂದು ತಿಳಿಸಿದರು.

ಅನೇಕ ಕಡೆಯಲ್ಲಿ ವೈದ್ಯರ ಕೈಗುಣ ಚನ್ನಾಗಿದೆ ಎನ್ನುತ್ತಾರೆ ,ಅವರ ನೋಡಿದರೆ ಸಾಕು ರೋಗ ಕಡಿಮೆ ಯಾಗುತ್ತದೆ ಎಂಬ ನಂಬಿಕೆ ಇದೆ ಇದರಲ್ಲಿ ವೈದ್ಯರಿಗೆ ಸಾಕಷ್ಟು ಆತ್ಮವಿಶ್ವಾಸವನ್ನು ರೋಗಿಗಳಲ್ಲಿ ತುಂಬುವ ಕೆಲಸವನ್ನು ಮಾಡುತ್ತಾರೆ. ಅವರು ನೀಡುವ ಸಲಹೆ ರೋಗಿಗೆ ಧೈರ್ಯವನ್ನು ತುಂಬುವ ಕಾರ್ಯವನ್ನು ಮಾಡುತ್ತದೆ. ಅಧ್ಯಾತ್ಮ ಮತ್ತು ವೈದ್ಯಕೀಯ ಪ್ರಪಂಚ ವಿಭಿನ್ನವಾಗಿದೆ, ಇಲ್ಲಿ ಮಠದಲ್ಲಿ ಶ್ರೀಗಳು ಭಕ್ತರನ್ನು ನೋಡಿದರೆ ಸಾಕು ನಮ್ಮ ಜೀವನ ಪಾವನವಾಗುತ್ತದೆ ಎಂಬ ನಂಬಿಕೆ ಇದೆ. ಇದೇ ರೀತಿ ವೈದ್ಯರು ಸಹಾ ಓಮ್ಮೆ ರೋಗಿಯನ್ನು ನೋಡಿದರೆ ಸಾಕು ನಮ್ಮ ಆರೋಗ್ಯ ಸುಧಾರಿಸುತ್ತದೆ ಎಂಬ ನಂಬಿಕೆ ಇದೆ.

ಸಂತ, ಮಹಾತ್ಮರ ಆಲೋಚನೆಗಳು ಶುದ್ದವಾಗಿರುತ್ತವೆ, ನಮ್ಮ ಆಲೋಚನೆಗಳು ಎಲ್ಲಿಯವರೆಗೆ ಶುದ್ದವಾಗಿರುವುದಿಲ್ಲವೋ, ಅಲ್ಲಿಯವರೆಗೂ ನಮ್ಮ ಆರೋಗ್ಯವೂ ಸಹಾ ಶುದ್ದವಾಗಿ ಇರಲು ಸಾಧ್ಯವಿಲ್ಲ, ನಮ್ಮ ಆಲೋಚನೆಗಳ ಮೇಲೆ ನಮ್ಮ ಆರೋಗ್ಯ ಆವಲಂಭಿತವಾಗಿರುತ್ತದೆ. ಆಲೋಚನೆಗಳು ನಮ್ಮೆಲ್ಲ ಅನಾಹುತಕ್ಕೂ, ಆತಂಕಕ್ಕೂ, ಆಪತ್ತಿಗೂ ಆನಾರೋಗ್ಯಕ್ಕೂ ಮುಖ್ಯವಾದ ಕಾರಣವಾಗಿರುತ್ತದೆ. ಆಲೋಚನೆಗಳನ್ನು ಶುದ್ದವಾಗಿ ಇಟ್ಟುಕೊಳ್ಳಬೇಕಿದೆ, ಸಂತರು ಯೋಗ,ಧ್ಯಾನ, ಶಿವಯೋಗ,ಪ್ರಾಣಾಯಾಮ, ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ರೂಢಿಸಿಕೊಂಡಿದ್ದರು. ಇವರನ್ನು ಭವ ವೈದ್ಯರು ಎನ್ನಲಾಗುತ್ತಿತ್ತು ವೈದ್ಯಕೀಯ ಲೋಕದಲ್ಲಿ ಅಶ್ಚರ್ಯ ಇದ್ದಂತೆ, ಆಧಾತ್ಮ ಲೋಕದಲ್ಲಿಯೂ ಸಹಾ ಆಶ್ಚರ್ಯಗಳು ನಡೆಯುತ್ತವೆ ಎಂದು ತಿಳಿಸಿದರು.

ದೇಹದಲ್ಲಿ ಆನಾರೋಗ್ಯ ಉಂಟಾದಾಗ ಅದನ್ನು ಸ್ವಚ್ಚಗೊಳಿಸುವುದು ಆಗಿದೆ, ಇದನ್ನೇ 12ನೇ ಶತಮಾನದಲ್ಲಿ ಬಸವಣ್ಣರವರು ಪಂಚೇಂದ್ರಿಯೆಗಳು ಎಂದು ತಿಳಿಸಿದರು. ಇಂದಿನ ದಿನಮಾನದಲ್ಲಿ ದೇಹದ ಪ್ರತಿಯೊಂದು ಅಂಗಗಳಿಗೂ ಒಬ್ಬ ವೈದ್ಯರಿದ್ದಾರೆ, ಆದರೆ 12ನೇ ಶತಮಾನದಲ್ಲಿ ಎಲ್ಲದಕ್ಕೂ ಒಬ್ಬರೇ ವೈದ್ಯರಿದ್ದರು ಯೋಗದ ಮೂಲಕ ರೋಗವನ್ನು ನಿವಾರಣೆಯನ್ನು ಮಾಡುತ್ತಿದ್ದರು. ಜಾತಿಯ ಧರ್ಮದಲ್ಲಿ ಸಿಲುಕಿಕೊಂಡು ಬೇರೆ ಬೇರೆಯಾಗಿದ್ದೇವೆ, ನಿಜವಾಗಲು ಹಿಂದು ಸನ್ಯಾಸ ಹಾಗೂ ಜೈನ್ ಸನ್ಯಾಸಗಳ ಬಗ್ಗೆ ತಾತ್ವಿಕವಾಗಿ ಮಾತನಾಡಿ ಅದಕ್ಕೆ ಚೌಕಟ್ಟನ್ನು ಹಾಕಲಾಗಿದೆ ಇದು ಅಪರಾಧವಾಗಿದೆ. ಅಹಿಂಸೋ ಪರಮೋಧರ್ಮ ,ದಯವೇ ಧರ್ಮದ ಮೂಲವಯ್ಯ ಸಕಲ ಜೀವಿಗಳಲ್ಲಿ ಲೇಸ ಬಯಸುವವನು ಶರಣ ಕುಲವಾಗಿರಬಹುದು. ಬಸವಣ್ಣ ಇಷ್ಟ ಲಿಂಗ ಪೂಜೆಯ ಮೂಲಕ ಕಣ್ಣಿನ ವೈದ್ಯನಾಗಿದ್ದ, ನಾವು ಹಲವಾರು ವಿಷಯಗಳನ್ನು ನೋಡುತ್ತವೆ, ಆಲೋಚಿಸುತ್ತವೆ ಅದರಂತೆ ವರ್ತಿಸುತ್ತವೆ, ನಮ್ಮ ನಡವಳಿಕೆ ಶುದ್ದವಾಗಿರಬೇಕಾದರೆ ನಮ್ಮ ನೋಟ ಶುದ್ದವಾಗಿರಬೇಕಿದೆ. ಮಾತು ನಡೆ ಸರಿಯಾಗಿರಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ವ್ಯದ್ಯಕೀಯ ಸಂಘದ ಅಧ್ಯಕ್ಷರಾದ ಪಿ.ಟಿ.ವಿಜಯಕುಮಾರ್, ಕಾರ್ಯದರ್ಶಿ ಕೆ.ಎಂ. ಬಸವರಾಜ್, ಜಿಲ್ಲಾ ಸರ್ಜನ್ ಡಾ.ಎಸ್.ಪಿ.ರವಿಂದ್ರ,  ಬಸವೇಶ್ವರ ಆಸ್ಪತ್ರೆಯ ಡಾ.ಸುರೇಶ್ ಭಂಡಾರಿ, ಡಾ.ರಾಜೇಶ್ ,ಡಾ. ನಾಗೇಂದ್ರಗೌಡ ಭಾಗವಹಿಸಿದ್ದರು. ಸಿದ್ದಗಂಗಮ್ಮ ಹಾಗೂ ಹೇಮಲತ ಪ್ರಾರ್ಥಿಸಿದರೆ, ಡಾ.ಪ್ರಶಾಂತ್ ಸ್ವಾಗತಿಸಿದರು. ಡಾ.ಬಸವಂತಪ್ಪ ವಂದಿಸಿದರು. ರೂಪ ಕಾರ್ಯಕ್ರಮ ನಿರೂಪಿಸಿದರು.  

Leave a Reply

Your email address will not be published. Required fields are marked *