ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ ಮೇ. 04 ಕನ್ನಡ ನಾಡು, ನುಡಿ, ಜಲಕ್ಕೋಸ್ಕರ ಹೋರಾಡುವುದು ನಮ್ಮ ಧ್ಯೇಯವಾಗಿದೆ ಎಂದು ನವ ಕ್ರಾಂತಿ ರಕ್ಷಣೆ ವೇದಿಕೆಯ ರಾಜ್ಯ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಹೇಳಿದರು
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನವ ಕ್ರಾಂತಿ ರಕ್ಷಣೆ ವೇದಿಕೆಯ ಚಿತ್ರದುರ್ಗ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಜಾತಿ ಬೇಧವಿಲ್ಲದೆ ಸಮಾನತೆಗೋಸ್ಕರ ಹಾಗೂ ಶಿಕ್ಷಣ ಅಭಿವೃದ್ಧಿಗಾಗಿ ಹೋರಾಡಿ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿರದಂತೆ ನೋಡಿಕೊಳ್ಳುವುದು ಪಕ್ಷ ಭೇದ ಮರೆತು ಕನ್ನಡ ನಾಡು, ನುಡಿ, ಜಲಕ್ಕೋಸ್ಕರ ಹೋರಾಡಿ ಎಂದು ಜಿಲ್ಲಾ ಸಂಘಟನೆಗೆ ಕರೆಕೊಟ್ಟರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾಗಿ ಮೋಹನ್ ಸಿ.ಆರ್. ರವರನ್ನು ಆಯ್ಕೆ ಮಾಡಲಾಯಿತು ಜೊತೆಗೆ ಶ್ರೀನಿವಾಸ ಯಾದವ್ ಬಸವರಾಜ್, ಆಕಾಶ್,ವಿನಯ್ ಕುಮಾರ್ ಆರ್, ನವೀನ್ ಕುಮಾರ್, ಜಗದೀಶ್ ಕೆ, ಸಿದ್ದೇಶ್ ಕೆ ಧನಂಜಯ್ ಕುಮಾರ್ ಕೆ, ಗೋಪಿ ,ವೀರೇಶ, ರವೀಂದ್ರನಾಥ್ ಧರ್ಮರಾಜ್, ಸಂಕಣ್ಣ, ರವರನ್ನು ಚಿತ್ರದುರ್ಗ ಜಿಲ್ಲಾ ಘಟಕದ ಪದಾಧಿಕಾರಿಗಳನ್ನಾಗಿ ಜಿಲ್ಲಾ ಘಟಕಕ್ಕೆ ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ನವ ಕ್ರಾಂತಿ ರಕ್ಷಣೆ ವೇದಿಕೆಯ ಉಪಾಧ್ಯಕ್ಷರು ಬಾಗೋಡಿ ಸ್ವಾಮಿ, ಹನುಮಂತರಾಯ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ ಜಿಲ್ಲಾ ಗೌರವ ಅಧ್ಯಕ್ಷಮಲ್ಲೇಗೌಡ್ರು ಉಪಸ್ಥಿತರಿದ್ದರು.
Views: 14