Namma Yatri Auto App: ಕೇಂದ್ರ ಸರ್ಕಾರದ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಾರಂಭಗೊಂಡಿರುವ ಈ ಆ್ಯಪ್ ಶೂನ್ಯ ಕಮಿಷನ್‌ನೊಂದಿಗೆ ಚಾಲಕರನ್ನು ಮತ್ತು ನ್ಯಾಯಯುತ ಬೆಲೆಯೊಂದಿಗೆ ಸವಾರರನ್ನು ಆಕರ್ಷಿಸುತ್ತಿದೆ.

Namma Yatri Auto App: ಕಾಪೋರೇಟ್ ಕಂಪೆನಿಗಳಾದ ಓಲಾ, ಊಬರ್‌ಗಳಿಗೆ ಸೆಡ್ಡು ಹೊಡೆದಿರುವ ನಮ್ಮ ಯಾತ್ರಿ ಆ್ಯಪ್ ಯಶಸ್ವಿ ಓಟವನ್ನು ಮುಂದುವರೆಸಿದೆ. ಕಳೆದ ಕೆಲವು ತಿಂಗಳ ಹಿಂದಷ್ಟೇ ಆರಂಭಗೊಂಡ ಆಟೋ-ರಿಕ್ಷಾ ಆ್ಯಪ್ ನಮ್ಮ ಯಾತ್ರಿಗೆ ಸಿಲಿಕಾನ್ ಸಿಟಿಯಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಚಾಲಕರ ಸ್ವಂತ ರೈಡ್-ಹೇಲಿಂಗ್ ಅಪ್ಲಿಕೇಶನ್ ನಮ್ಮ ಯಾತ್ರಿ 50% ಹೆಚ್ಚಿನ ಕಮಾಯಿ ಮಾಡಿದ್ದು, ಇರೊಂದಿಗೆ ಅಭೂತಪೂರ್ವ ಯಶಸ್ಸಿನ ಸವಾರಿ ನಡೆಸುತ್ತಿದೆ.
ಕೇಂದ್ರ ಸರ್ಕಾರದ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಾರಂಭಗೊಂಡಿರುವ ಈ ಆ್ಯಪ್ ಶೂನ್ಯ ಕಮಿಷನ್‌ನೊಂದಿಗೆ ಚಾಲಕರನ್ನು ಮತ್ತು ನ್ಯಾಯಯುತ ಬೆಲೆಯೊಂದಿಗೆ ಸವಾರರನ್ನು ಆಕರ್ಷಿಸುತ್ತಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಪ್ರತಿದಿನ ಸುಮಾರು 70 ಸಾವಿರ ಆಟೋಗಳಿಂದ ಟ್ರಿಪ್ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ರೈಡ್-ಹೇಲಿಂಗ್ ಅಪ್ಲಿಕೇಶನ್‌ಗಳಿಂದ 4.28 ಲಕ್ಷ ಆಟೋ ಟ್ರಿಪ್ ಆಗುತ್ತಿದೆ. ಇದರಲ್ಲಿ ಸುಮಾರು 17% ನಮ್ಮ ಯಾತ್ರಿ ಆ್ಯಪ್ ನಿಂದಲೇ ಸಂಚಾರ ಮಾಡುತ್ತಿದೆ. ಎಲ್ಲಾ ಆಟೋ ಡ್ರೈವರ್‌ಗಳಲ್ಲಿ ಅರ್ಧದಷ್ಟು ಜನರು ಈಗ ನಮ್ಮ ಯಾತ್ರಿ ಅಪ್ಲಿಕೇಶನ್ ಬಳಕೆ ಮಾಡುತ್ತಿರುವುದು ಹಾಗೂ ಪ್ರಯಾಣಿಕರಿಂದಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.
ಏನಿದು ನಮ್ಮ ಯಾತ್ರಿ ಆ್ಯಪ್?
ಆಟೋ ರಿಕ್ಷಾ ಡ್ರೈವರ್ ಯೂನಿಯನ್ (ARDU) ಕಳೆದ ವರ್ಷ ಆಟೋ ರೈಡ್ ಬುಕ್ಕಿಂಗ್‌ಗಾಗಿ ನಮ್ಮ ಯಾತ್ರಿ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಡಿಜಿಟಲ್ ಕಾಮರ್ಸ್ ಪ್ರೋಟೋಕಾಲ್‌ಗಾಗಿ ಓಪನ್ ನೆಟ್‌ವರ್ಕ್‌ನಲ್ಲಿ ಅಪ್ಲಿಕೇಶನ್ ಅನ್ನು ನಿರ್ಮಿಸಲಾಗಿದೆ . ಟ್ರಿಪ್‌ಗಳ ಸಂಖ್ಯೆ, ಸವಾರಿ ಹುಡುಕಾಟಗಳು ಮತ್ತು ಚಾಲಕರ ಗಳಿಕೆಗಳು, ನೋಂದಾಯಿತ ಬಳಕೆದಾರರು ಮತ್ತು ಚಾಲಕರು ಮತ್ತು ಇತರವುಗಳ ಬಗ್ಗೆ ವಿವರವಾದ ಡೇಟಾವನ್ನು ಅಪ್ಲಿಕೇಶನ್ ಒದಗಿಸುತ್ತದೆ.
ನಮ್ಮ ಯಾತ್ರಿ: ಆಟೋ ರೈಡ್ ಬುಕ್ ಮಾಡುವುದು ಹೇಗೆ?
ನಮ್ಮ ಯಾತ್ರಿ ಅಪ್ಲಿಕೇಶನ್ ಪ್ರಸ್ತುತ ಬೆಂಗಳೂರು ಮತ್ತು ಮೈಸೂರಿನಲ್ಲಿ ಮಾತ್ರ ಉಪಯೋಗಿಸಬಹುದಾಗಿದ್ದು, ಮುಂದಿನ ದಿನಗಳಲ್ಲಿ ಈ ಸೇವೆ ರಾಜ್ಯದ ವಿವಿಧ ಭಾಗಗಳಲ್ಲಿಯೂ ಲಭ್ಯವಾಗುವ ನಿರೀಕ್ಷೆಯಿದೆ. ನಮ್ಮ ಯಾತ್ರಿ: ಆಟೋ ರೈಡ್ ಬುಕ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
* iOS ಅಥವಾ Android ನಿಂದ ಮೊಬೈಲ್ ಮೊದಲಿಗೆ “ನಮ್ಮ ಯಾತ್ರಿ” ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
* ನಿಗದಿತ ಬಾಕ್ಸ್ ನಲ್ಲಿ ನೋಂದಾಯಿಸಲು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
* ಬಳಿಕ, ಮುಂದಿನ ಟ್ಯಾಬ್ ನಲ್ಲಿ ಮುಂದುವರೆಯಲು ಹೆಸರನ್ನು ನಮೂದಿಸಿ.
* ನಮ್ಮ ಯಾತ್ರಿ ಬುಕಿಂಗ್‌ನೊಂದಿಗೆ ಮುಂದುವರಿಯಲು ಸ್ಥಳ ಪ್ರವೇಶವನ್ನು ಅನುಮತಿಸಿ.
* ಪಿಕಪ್ ಮತ್ತು ಡ್ರಾಪ್-ಆಫ್ ಪಾಯಿಂಟ್‌ಗಳನ್ನು ನಮೂದಿಸಿ.
* ಮುಂದೆ, ಸವಾರಿಗಾಗಿ ಅಂದಾಜು ದರವನ್ನು ನಿಮಗೆ ತೋರಿಸಲಾಗುತ್ತದೆ.
* ಬಳಿಕ ನೀವು ರೈಡ್ ಅನ್ನು ಬುಕ್ ಮಾಡಲು ವಿನಂತಿ ಚಾಲಕ (Request Ride) ಆಯ್ಕೆಯ ಮೇಲೆ ಟ್ಯಾಪ್ ಮಾಡಿ.