PAK vs AFG: ಪಾಕಿಸ್ತಾನಕ್ಕೆ ಭಾರೀ ಮುಖಭಂಗ: ಪಾಕ್​​ಗೆ ಮಣ್ಣುಮುಕ್ಕಿಸಿ ಟಿ20 ಕ್ರಿಕೆಟ್​ನಲ್ಲಿ ಚೊಚ್ಚಲ ಜಯ ಸಾಧಿಸಿದ ಅಫ್ಘಾನಿಸ್ತಾನ

ಕ್ರಿಕೆಟ್ ಶಿಶು ಎಂದು ಕರೆಯಲ್ಪಡುವ ಅಫ್ಘಾನಿಸ್ತಾನ ತಂಡ ಬಲಿಷ್ಠ ಪಾಕಿಸ್ತಾನ ತಂಡಕ್ಕೆ ಟಿ20 ಕ್ರಿಕೆಟ್​ನಲ್ಲಿ ಮಣ್ಣುಮುಕ್ಕಿಸಿ ಚೊಚ್ಚಲ ಗೆಲುವು ಕಂಡಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ಸರಣಿಯ ಪ್ರಥಮ ಪಂದ್ಯದಲ್ಲಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ರಶೀದ್ ಖಾನ್ ಪಡೆ ಇತಿಹಾಸ ರಚಿಸಿತು. ಈ ಮೂಲಕ ಅಫ್ಘಾನಿಸ್ತಾನ ಮೊಟ್ಟ ಮೊದಲ ಬಾರಿಗೆ ಪಾಕಿಸ್ತಾನ ತಂಡದ ವಿರುದ್ಧ ಗೆದ್ದು ಸಂಭ್ರಮಿಸಿತು.ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿಯಿತು. ಆದರೆ, ಅಫ್ಘಾನಿಸ್ತಾನದ ಶಿಸ್ತಿನ ಬೌಲಿಂಗ್ ಮುಂದೆ ರನ್ ಗಳಿಸಲು ಪರದಾಡಿತು. 50 ರನ್​ಗು ಮೊದಲೇ 5 ವಿಕೆಟ್ ಕಳೆದುಕೊಂಡಿತು.ಮೊಹಮ್ಮದ್ ಹ್ಯಾರಿಸ್ (6), ಶಫೀಕ್ (0), ಅಜಮ್ ಖಾನ್ (0), ಸೈಮ್ ಅಯುಬ್ (17), ತಯಾಬ್ ತಾಹಿರ್ (16), ಇಮಾದ್ ವಾಸೀಂ 18 ರನ್​ಗೆ ಔಟಾದರೆ ನಾಯಕ ಶದಾಬ್ ಖಾನ್ 12 ರನ್​ಗೆ ನಿರ್ಗಮಿಸಿದರು.ಅಫ್ಘಾನ್ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 92 ರನ್ ಗಳಿಸಿತಷ್ಟೆ. ಅಫ್ಘಾನಿಸ್ತಾನ ಪರ ಫಾರುಖ್, ಮುಜೀಬ್ ಹಾಗೂ ಮೊಹಮ್ಮದ್ ಮಬಿ 2 ವಿಕೆಟ್ ಪಡೆದರು.ಸುಲಭ ಟಾರ್ಗೆಟ್ ಬೆನ್ನಟ್ಟಿದ ಅಫ್ಘಾನಿಸ್ತಾನ ಗೆಲ್ಲಲೇ ಬೇಕೆಂದು ಎಚ್ಚರಿಕೆಯ ಬ್ಯಾಟಿಂಗ್ ಆರಂಭಿಸಿತು. ಹೀಗಿದ್ದರೂ 45 ರನ್ ಆಗುವ ಹೊತ್ತಿಗೆ 4 ವಿಕೆಟ್​ಗಳು ಪತನಗೊಂಡವು. ಗುರ್ಬಜ್ 16, ಜರ್ದನನ್ 9, ಗುಲ್ಬದಿನ್ ನಬಿ 0 ಹಾಗೂ ಕರೀಮ್ ಜನತ್ 7 ರನ್​ಗೆ ಔಟಾದರು.ಆದರೆ, ತನ್ನ ಅನುಭವವನ್ನು ದಾರೆ ಎರೆದ ಮೊಹಮ್ಮದ್ ನಬಿ ಗೆಲುವಿಗೆ ಹೋರಾಟ ನಡೆಸಿದರು. ಪಾಕ್ ಬೌಲಿಂಗ್ ಪಡೆಯನ್ನ ದಿಟ್ಟವಾಗಿ ಎದುರಿಸಿದ ನಬಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. 38 ಎಸೆತಗಳಲ್ಲಿ ಅಜೇಯ 38 ರನ್ ಬಾರಿಸಿದರು. ಇವರಿಗೆ ಸಾಥ್ ನೀಡಿದ ನಜಿಬುಲ್ಲ ಜರ್ದನ್ 17 ರನ್ ಬಾರಿಸಿದರು.ಅಫ್ಘಾನಿಸ್ತಾನ 17.5 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 98 ರನ್ ಬಾರಿಸುವ ಮೂಲಕ ಪಾಕ್ ವಿರುದ್ಧ ಐತಿಹಾಸಿಕ ಗೆಲುವು ಕಂಡಿತು. ಮೊಹಮ್ಮದ್ ನಬಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಇದೀಗ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಅಫ್ಘಾನ್ 1-0 ಮುನ್ನಡೆ ಪಡೆದುಕೊಂಡಿದೆ.

source https://tv9kannada.com/photo-gallery/cricket-photos/pak-vs-afg-1st-t20i-mohammad-nabis-all-round-brilliance-helped-afghanistan-script-their-first-ever-win-over-pakistan-vb-au48-542479.html

Views: 0

Leave a Reply

Your email address will not be published. Required fields are marked *