ಪಾಲಕ್ ಬಿರಿಯಾನಿ

ರುಚಿಕರವಾದ ಪಾಲಕ್ ಬಿರಿಯಾನಿ ಮಾಡುವ ವಿಧಾನ…

ಬೇಕಾಗುವ ಪದಾರ್ಥಗಳು…

  • ಗೋಡಂಬಿ-ಸ್ವಲ್ಪ
  • ತುಪ್ಪ- 2 ಚಮಚ
  • ಚಕ್ಕೆ- 2-4
  • ಲವಂಗ-2
  • ಏಲಕ್ಕಿ-2
  • ಜೀರಿಗೆ-1  ಸ್ವಲ್ಪ
  • ಶುಂಠಿ ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
  • ಈರುಳ್ಳಿ ಉದ್ದಕ್ಕೆ ಸೀಳಿಕೊಳ್ಳಿ- 1
  • ಪಾಲಾಕ್ ಸೊಪ್ಪು- 3 ಬಟ್ಟಲು (ತೊಳೆದು ಸಣ್ಣಗೆ ಹೆಚ್ಚಿಕೊಂಡಿದ್ದು)
  • ಖಾರದ ಪುಡಿ, ½ ಚಮಚ
  • ಅರಿಶಿನ ಪುಡಿ- ಸ್ವಲ್ಪ
  • ದನಿಯಾ ಪುಡಿ- 1 ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಪನ್ನೀರ್- (ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು)
  • ಮೊಸರು- 3 ಚಮಚ
  • ಬಾಸುಮತಿ ಅಕ್ಕಿ

ಮಾಡುವ ವಿಧಾನ…

  • ಮೊದಲಿಗೆ ಅಕ್ಕಿಯನ್ನು ತೊಳೆದು 20 ನಿಮಿಷಗಳ ಕಾಲ ನೆನೆಸಿಕೊಳ್ಳಿ. ನಂತರ ಒಂದು ಕುಕ್ಕರ್ ಗೆ ಹಾಕಿ 2 ಕಪ್ ನೀರು ಹಾಕಿ 1 ವಿಷಲ್ ಕೂಗಿಸಿಕೊಳ್ಳಿ.
  • ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ ಇದಕ್ಕೆ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ.
  • ನಂತರ ಕತ್ತರಿಸಿದ ಪಾಲಾಕ್ ಸೊಪ್ಪು ಹಾಕಿ 2 ನಿಮಿಷ ಚೆನ್ನಾಗಿ ಫ್ರೈ ಮಾಡಿ. ಇದಕ್ಕೆ ಖಾರದ ಪುಡಿ, ಅರಿಶಿನ ಪುಡಿ, ದನಿಯಾ ಪುಡಿ, ಉಪ್ಪು, ಮೊಸರು ಹಾಕಿ ಮಿಕ್ಸ್ ಮಾಡಿ.
  • ನಂತರ ತುರಿದ ಪನ್ನೀರ್ ಸೇರಿಸಿ ನಿಧಾನಕ್ಕೆ ಮಿಕ್ಸ್ ಮಾಡಿ ಇದಕ್ಕೆ ಅನ್ನ ಹಾಕಿ ಎಲ್ಲಾ ಸರಿಹೊಂದುವಂತೆ ಮಿಕ್ಸ್ ಮಾಡಿ ಒಂದು ಮುಚ್ಚಳ ಮುಚ್ಚಿ 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ, ನಂತರ ತುಪ್ಪದಲ್ಲಿ ಫ್ರೈ ಮಾಡಿದ ಗೋಡಂಬಿಯೊಂದಿಗೆ ಅಲಂಕರಿಸಿದರೆ ರುಚಿಕರವಾದ ಪಾಲಾಕ್ ಬಿರಿಯಾನಿ ಸವಿಯಲು ಸಿದ್ಧ.

Source : https://www.kannadaprabha.com/food/2023/oct/20/recipe-palak-biryani-504699.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *