Paralympics 2024: ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ಗೆ ವರ್ಣರಂಜಿತ ತೆರೆ.

ಆಗಸ್ಟ್ 28 ರಿಂದ ಶುರುವಾದ ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ ಭಾನುವಾರ ಮುಕ್ತಾಯಗೊಂಡಿದೆ. ಸ್ಟೇಡ್ ಡಿ ಫ್ರಾನ್ಸ್ ಮೈದಾನದಲ್ಲಿ ನಡೆದ ವರ್ಣರಂಜಿತ  ಸಮಾರೋಪ ಸಮಾರಂಭದೊಂದಿಗೆ 17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್​ಗೆ ತೆರೆ ಎಳೆಯಲಾಯಿತು. ಅಲ್ಲದೆ ಮುಂದಿನ ಪ್ಯಾರಾಲಿಂಪಿಕ್ಸ್​ ಆತಿಥ್ಯದ ಧ್ವಜವನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ.

ಇನ್ನು ಈ ಸಮಾರಂಭದಲ್ಲಿ ಭಾರತವನ್ನು ಹರ್ವಿಂದರ್ ಸಿಂಗ್ ಮತ್ತು ಅಥ್ಲೀಟ್ ಪ್ರೀತಿ ಪಾಲ್ ಧ್ವಜಧಾರಿಗಳಾಗಿ ಮುನ್ನಡೆಸಿದರು. ಇಬ್ಬರೂ ಭಾರತೀಯ ತ್ರಿವರ್ಣ ಧ್ವಜದೊಂದಿಗೆ ಸಮಾರೋಪ ಸಮಾರಂಭದಲ್ಲಿ ಕಾಣಿಸಿಕೊಂಡರು. ಸ್ಟೇಡ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ವರ್ಣರಂಜಿತ ಸಮಾರಂಭವು ಸಂಗೀತ, ಬೆಳಕಿನ ವೈಭವದೊಂದಿಗೆ ಪ್ರೇಕ್ಷಕರ ಮನಸೊರೆಗೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಸಮಾರಂಭದ ವಿಡಿಯೋ ಝಲಕ್ ಇಲ್ಲಿದೆ…

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಸಮಾರೋಪ ಸಮಾರಂಭದ ವಿಡಿಯೋಸ್:

ಅಗ್ರಸ್ಥಾನದಲ್ಲಿ ಚೀನಾ:

ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಅತ್ಯಧಿಕ ಪದಕ ಗೆದ್ದಿದ್ದು ಚೀನಾ. 94 ಚಿನ್ನ, 76 ಬೆಳ್ಳಿ ಮತ್ತು 50 ಕಂಚಿನ ಪದಕಗಳೊಂದಿಗೆ ಚೀನಾ ದೇಶವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಇನ್ನು ಗ್ರೇಟ್ ಬ್ರಿಟನ್ 124 ಪದಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರೆ, ಯುಎಸ್​ಎ 105 ಪದಕ ಗೆದ್ದು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ನೆದರ್​ಲ್ಯಾಂಡ್ಸ್​ 56 ಪದಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಇನ್ನು ಈ ಬಾರಿ ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತೀಯ ಕ್ರೀಡಾಪಟುಗಳು ಒಟ್ಟು 29 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಚಿನ ಪದಕಗಳು ಸೇರಿವೆ. ಈ ಮೂಲಕ ಒಟ್ಟು 29 ಪದಕಗಳೊಂದಿಗೆ 18ನೇ ಸ್ಥಾನ ಪಡೆದುಕೊಂಡಿದೆ.

ತಂಡ
1 ಚೀನಾ947650220
2 ಗ್ರೇಟ್ ಬ್ರಿಟನ್494431124
3 ಯುನೈಟೆಡ್ ಸ್ಟೇಟ್ಸ್364227105
4 ನೆದರ್ಲ್ಯಾಂಡ್ಸ್27171256
18 ಭಾರತ791329

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಪದಕ ವಿಜೇತರು:

 
ಸಂ.ಕ್ರೀಡಾಪಟುಕ್ರೀಡೆಸ್ಪರ್ಧೆಪದಕ
1ಅವನಿ ಲೇಖನಾಶೂಟಿಂಗ್ಮಹಿಳೆಯರ 10ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ SH1ಚಿನ್ನ
2ಮೋನಾ ಅಗರ್ವಾಲ್ಶೂಟಿಂಗ್ಮಹಿಳೆಯರ 10ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ SH1ಕಂಚು
3ಪ್ರೀತಿ ಪಾಲ್ಅಥ್ಲೆಟಿಕ್ಸ್ಮಹಿಳೆಯರ 100ಮೀ ಟಿ35ಕಂಚು
4ಮನೀಶ್ ನರ್ವಾಲ್ಶೂಟಿಂಗ್ಪುರುಷರ 10 ಮೀ ಏರ್ ಪಿಸ್ತೂಲ್ SH1ಬೆಳ್ಳಿ
5ರುಬಿನಾ ಫ್ರಾನ್ಸಿಸ್ಶೂಟಿಂಗ್ಮಹಿಳೆಯರ 10ಮೀ ಏರ್ ಪಿಸ್ತೂಲ್ SH1ಕಂಚು
6ಪ್ರೀತಿ ಪಾಲ್ಅಥ್ಲೆಟಿಕ್ಸ್ಮಹಿಳೆಯರ 200ಮೀ ಟಿ35ಕಂಚು
7ನಿಶಾದ್ ಕುಮಾರ್ಅಥ್ಲೆಟಿಕ್ಸ್ಪುರುಷರ ಎತ್ತರ ಜಿಗಿತ T47ಬೆಳ್ಳಿ
8ಯೋಗೇಶ್ ಕಥುನಿಯಾಅಥ್ಲೆಟಿಕ್ಸ್ಪುರುಷರ ಡಿಸ್ಕಸ್ ಥ್ರೋ F56ಬೆಳ್ಳಿ
9ನಿತೇಶ್ ಕುಮಾರ್ಬ್ಯಾಡ್ಮಿಂಟನ್ಪುರುಷರ ಸಿಂಗಲ್ಸ್ SL3ಚಿನ್ನ
10ತುಳಸಿಮತಿ ಮುರುಗೇಶನ್ಬ್ಯಾಡ್ಮಿಂಟನ್ಮಹಿಳೆಯರ ಸಿಂಗಲ್ಸ್ SU5ಬೆಳ್ಳಿ
11ಮನಿಷಾ ರಾಮದಾಸ್ಬ್ಯಾಡ್ಮಿಂಟನ್ಮಹಿಳೆಯರ ಸಿಂಗಲ್ಸ್ SU5ಕಂಚು
12ಸುಹಾಸ್ ಯತಿರಾಜ್ಬ್ಯಾಡ್ಮಿಂಟನ್ಪುರುಷರ ಸಿಂಗಲ್ಸ್ SL4ಬೆಳ್ಳಿ
13ರಾಕೇಶ್ ಕುಮಾರ್ / ಶೀತಲ್ ದೇವಿಬಿಲ್ಲುಗಾರಿಕೆಮಿಶ್ರ ತಂಡಕಂಚು
14ಸುಮಿತ್ ಅಂತಿಲ್ಅಥ್ಲೆಟಿಕ್ಸ್ಜಾವೆಲಿನ್ ಎಸೆತ F64ಚಿನ್ನ
15ನಿತ್ಯ ಶ್ರೀ ಶಿವನ್ಬ್ಯಾಡ್ಮಿಂಟನ್ಮಹಿಳೆಯರ ಸಿಂಗಲ್ಸ್ SH6ಕಂಚು
16ದೀಪ್ತಿ ಜೀವನಜಿಅಥ್ಲೆಟಿಕ್ಸ್ಮಹಿಳೆಯರ 400 ಮೀ ಟಿ20ಕಂಚು
17ಮರಿಯಪ್ಪನ್ ತಂಗವೇಲುಅಥ್ಲೆಟಿಕ್ಸ್ಪುರುಷರ ಎತ್ತರ ಜಿಗಿತ T63ಕಂಚು
18ಶರದ್ ಕುಮಾರ್ಅಥ್ಲೆಟಿಕ್ಸ್ಪುರುಷರ ಎತ್ತರ ಜಿಗಿತ T63ಬೆಳ್ಳಿ
19ಅಜೀತ್ ಸಿಂಗ್ಅಥ್ಲೆಟಿಕ್ಸ್ಪುರುಷರ ಜಾವೆಲಿನ್ ಎಸೆತ F46ಬೆಳ್ಳಿ
20ಸುಂದರ್ ಸಿಂಗ್ ಗುರ್ಜರ್ಅಥ್ಲೆಟಿಕ್ಸ್ಪುರುಷರ ಜಾವೆಲಿನ್ ಎಸೆತ F46ಕಂಚು
21ಸಚಿನ್ ಖಿಲಾರಿಅಥ್ಲೆಟಿಕ್ಸ್ಪುರುಷರ ಶಾಟ್ ಪುಟ್ F46ಬೆಳ್ಳಿ
22ಹರ್ವಿಂದರ್ ಸಿಂಗ್ಬಿಲ್ಲುಗಾರಿಕೆಪುರುಷರ ವೈಯಕ್ತಿಕ ರಿಕರ್ವ್ ಚಿನ್ನ
23ಧರಂಬೀರ್ಅಥ್ಲೆಟಿಕ್ಸ್ಪುರುಷರ ಕ್ಲಬ್ ಥ್ರೋ F51ಚಿನ್ನ
24ಪರ್ಣವ್ ಸೂರ್ಮಾಅಥ್ಲೆಟಿಕ್ಸ್ಪುರುಷರ ಕ್ಲಬ್ ಥ್ರೋ F51ಬೆಳ್ಳಿ
25ಕಪಿಲ್ ಪರ್ಮಾರ್ಜೂಡೋಪುರುಷರ -60 ಕೆಜಿ J1ಕಂಚು
26ಪ್ರವೀಣ್ ಕುಮಾರ್ಅಥ್ಲೆಟಿಕ್ಸ್ಪುರುಷರ ಎತ್ತರ ಜಿಗಿತ T64ಚಿನ್ನ
27ಹೊಕಾಟೊ ಹೊಟೊಝೆ ಸೆಮಾಅಥ್ಲೆಟಿಕ್ಸ್ಪುರುಷರ ಶಾಟ್ ಪುಟ್ F57ಕಂಚು
28ಸಿಮ್ರಾನ್ ಶರ್ಮಾಅಥ್ಲೆಟಿಕ್ಸ್ಮಹಿಳೆಯರ 200 ಮೀ ಟಿ12ಕಂಚು
29ನವದೀಪ್ ಸಿಂಗ್ಅಥ್ಲೆಟಿಕ್ಸ್ಪುರುಷರ ಜಾವೆಲಿನ್ ಎಸೆತ F41ಚಿನ್ನ

Source : https://tv9kannada.com/sports/paris-paralympics-2024-closing-ceremony-kannada-news-zp-898871.html

Leave a Reply

Your email address will not be published. Required fields are marked *