“ಮಕ್ಕಳ ಸಂತೆಯಲ್ಲಿ ಗ್ರಾಹಕರಾದ ಪೋಷಕರು”

‘ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ಹಣ್ಣಿನ ಮಾರುಕಟ್ಟೆ ಆಚರಣೆ’

ನಗರದ ಪ್ರತಿಷ್ಟಿತ ಶಾಲೆಗಳಲ್ಲೊಂದಾದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “1ನೇ ತರಗತಿ ವಿದ್ಯಾರ್ಥಿಗಳಿಂದ “ಮಕ್ಕಳ ಸಂತೆ”
ಆಯೋಜಿಸಲಾಗಿತ್ತು.


ಸಂತೆಯಲ್ಲಿ ಮಕ್ಕಳು ಬನ್ನಿ ಬಾಳೆ ಹಣ್ಣು ಕೊಳ್ಳಿ ಅನಾನಸ್, ಕಿವಿ ಹಣ್ಣು ಸಪೋಟ, ಸೀತಾಫಲ, ಪೇರಲ ಹಣ್ಣು ನಮ್ಮ ಬಳಿ ಇದೆ, ಬೇಗ ಬೇಗ ಬನ್ನಿ, ಇಲ್ಲವಾದರೆ ಖಾಲಿ ಆಗುತ್ತದೆ. ಬನ್ನಿ ಅಂಕಲ್ ಬನ್ನಿ ಆಂಟಿ, ತಾತಾ-ಅಜ್ಜಿ ಎಂದು ಕರೆಯುತ್ತಿದ್ದ ಚಿತ್ರಣ ನಿಜಕ್ಕೂ ಮಾರುಕಟ್ಟೆಯನ್ನು ನಾಚಿಸುವಂತಿತ್ತು. ಕಿತ್ತಳೆ ಬೇಕೆ ಸೇಬು ಸೇಲ್ ಆಗುತ್ತಿದೆ. ಬೇಗ ಬನ್ನಿ ಬಾರೆ ಹಣ್ಣು ಇದೆ. ಪಪ್ಪಾಯ, ದ್ರಾಕ್ಷಿ ಮಜುಬೂತಾಗಿದೆ ಬನ್ನಿ ಎಂದು ಕೂಗುತ್ತಾ ಮಾರಾಟ ಮಾಡುತ್ತಿದ್ದ್ದರು. ಇದರಿಂದ ಮಕ್ಕಳಲ್ಲಿ ಹೇಗೆ ವ್ಯಾಪಾರ ಮಾಡಬೇಕು ಹಾಗೂ ಗ್ರಾಹಕರ ಜೊತೆ ಹೇಗೆ ವ್ಯವಹರಿಸಬೇಕು ಎಂಬುದರ ತಿಳಿವಳಿಕೆ ಮೂಡಿಸಲು ಈ ಕಾರ್ಯಕ್ರಮ ತುಂಬ ಅನುಕೂಲವಾಗಿತ್ತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ ಕುಮಾರ್ ಮಕ್ಕಳಲ್ಲಿ ಇಂತಹ ಕಾರ್ಯಕ್ರಮಗಳು ಶಾಶ್ವತವಾದ ಯೋಚನಾ ಲಹರಿ ಬೆಳವಣಿಗೆಗೆ ಸಹಕಾರಿ ಅಲ್ಲದೇ ಪ್ರತಿ ದಿನ ಪೋಷಕರು ತಂದ ಹಣ್ಣುಗಳನ್ನು ತಿನ್ನುತ್ತಿದ್ದ ಮಕ್ಕಳು, ಇಂದು ಮಕ್ಕಳೇ ಹಣ್ಣುಗಳು ಮಾರಾಟ ಮಾಡುವಾಗ ಅದರ ಬೆಲೆ ಮಾರುವ ವಿಧಾನ ಈ ಎಲ್ಲಾ ವಿಚಾರಗಳನ್ನು ತಿಳಿದುಕೊಂಡರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಎಂ.ಪೃಥ್ವಿಶ ಮಾತನಾಡುತ್ತಾ ಇದೊಂದು ನವೀನ ರೀತಿಯ ಜೀವನ ಕಲಿಕೆಯ

ಪಾಠ ನಾಲ್ಕು ಗೋಡೆಗಳ ಮಧ್ಯೆ ನಾವುಗಳು ಕಲಿಯುವುದು ಜ್ಞಾನಾರ್ಜನೆಗೆ ಅದರೂ ಜೀವನ ಅನುಭವ ಕಲಿಸುವ ಪಾಠ ಉಪಯುಕ್ತವಾದುದು ಅಲ್ಲದೇ ಹಣ್ಣುಗಳ ಮಾರಾಟದ ಜೊತೆ ಹಣ್ಣುಗಳಲ್ಲಿರುವ ವಿಶೇಷತೆಗಳನ್ನು ಹಾಗೂ ಹಣ್ಣಿನಲ್ಲಿರುವ ಪೋಷಕಾಂಶದ ಬಗ್ಗೆ ತಿಳಿ ಹೇಳಿ ಎಂದರು.


ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸುನಿತ ಪಿ ಸಿ, ಐಸಿಎಎಸ್‌ಇ ಪ್ರಾಚಾರ್ಯರಾದ ಬಸವರಾಜಯ್ಯ.ಪಿ, ಐಸಿಎಎಸ್‌ಇ
ಉಪಪ್ರಾಚಾರ್ಯರಾದ ಅಬಿನಾಶ್ ಬಿ, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ.ಎನ್.ಜಿ.ತಿಪ್ಪೇಸ್ವಾಮಿ ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *