ದೊಡ್ಡವರನ್ನು ನೋಡಿ ಮಕ್ಕಳು ಅದನ್ನೇ ಕಲಿಯುತ್ತಾರೆ ಎನ್ನುವ ಮಾತಿದೆ. ಇದು ನಿಜ ಕೂಡ. ಮಕ್ಕಳು ದೊಡ್ಡವರ ಅಭ್ಯಾಸಗಳನ್ನು ಬೇಗನೆ ಕಲಿಯುವರು.

ಮಕ್ಕಳ ಲಾಲನೆ ಪಾಲನೆ ಸಂದರ್ಭದಲ್ಲಿ ಪೋಷಕರು ಎಷ್ಟು ಜಾಗೃತೆ ವಹಿಸಿದರೂ ಸಾಲದು, ಈ ವೇಳೆ ಅವರು ತಮ್ಮ ಹವ್ಯಾಸ, ಅಭ್ಯಾಸ ಮತ್ತು ನಡವಳಿಕೆ ಕಡೆ ಕೂಡ ನಿಯಂತ್ರಣ ಸಾಧಿಸಬೇಕು. ಯಾಕೆಂದರೆ ಮಕ್ಕಳು ಯಾವಾಗಲೂ ತಮ್ಮ ಪೋಷಕರನ್ನು ಅನುಕರಿಸಿಕೊಂಡು ಹೋಗುವರು. ಅದರಲ್ಲೂ ಕೆಲವು ಕೆಟ್ಟ ಅಭ್ಯಾಸಗಳನ್ನು ಮಕ್ಕಳು ಬೇಗನೆ ಕಲಿತುಕೊಳ್ಳುವರು. ಹೀಗಾಗಿ ಪೋಷಕರು ಮಕ್ಕಳ ಕಡೆ ಗಮನಹರಿಸಬೇಕು ಮತ್ತು ಅವರು ತಮ್ಮಿಂದ ಕಲಿಯಬಾರದ ಕೆಲವು ಹವ್ಯಾಸಗಳನ್ನು ನಿಯಂತ್ರಿಸಬೇಕು. ಇಂತಹ ಹವ್ಯಾಸಗಳು ಯಾವುದು ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ಅವ್ಯವಸ್ಥಿತ ನಡವಳಿಕೆ
ಮಕ್ಕಳು ಸಣ್ಣವರಾಗಿರುವ ವೇಳೆ ಬೇಗನೆ ಎಲ್ಲವನ್ನು ಕಲಿತುಕೊಳ್ಳುವರು. ಹೊರಗಿನಿಂದ ಬಂದು ಬಟ್ಟೆ ತೆಗೆದ ಬಳಿಕ ಅದನ್ನು ಹಾಗೆಯೇ ನೆಲದ ಮೇಲೆ ಬಿಡುವಂತಹ ಅಭ್ಯಾಸವು ಪೋಷಕರಲ್ಲಿ ಯಾರಿಗಾದರೂ ಇದ್ದರೆ, ಆಗ ಇದನ್ನು ಮಕ್ಕಳು ಕಲಿತುಕೊಂಡು ಅದನ್ನು ಜೀವನಪೂರ್ತಿ ಪಾಲಿಸಿಕೊಂಡು ಹೋಗುವರು. ಮಕ್ಕಳಿಗೆ ವ್ಯವಸ್ಥಿತವಾಗಿ ಬಟ್ಟೆಗಳನ್ನು ಇಡುವುದನ್ನು ಮತ್ತು ಬೆಡ್ ಶೀಟ್ ಇಡುವುದನ್ನು ಕಲಿಸಬೇಕು.
ಅತಿಯಾದ ಪೈಪೋಟಿ
ಹೆಚ್ಚಿನ ಪೋಷಕರು ತಮ್ಮ ಮಕ್ಕಳ ಪರೀಕ್ಷೆಯ ಅಂಕಗಳನ್ನು ನೋಡಿ ಅವರ ಯಶಸ್ಸನ್ನು ಪರಿಗಣಿಸುವರು ಮತ್ತು ಮಕ್ಕಳಿಗೆ ಅವರಾಗಿಯೇ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ. ಇದರಿಂದಾಗಿ ಅವರ ಆತ್ಮವಿಶ್ವಾಸದ ಮೇಲೆ ಹೊಡೆತ ಬೀಳುವುದು, ನಿರಾಶೆ, ಖಿನ್ನತೆ ಮತ್ತು ಕಿರಿಕಿರಿ ಅನುಭವಿಸುವರು.
ವೈಯಕ್ತಿಕ ಸ್ವಚ್ಛತೆ ಇಲ್ಲದೆ ಇರುವುದು
ರಾತ್ರಿ ಮಲಗುವ ಮೊದಲು ಹಲ್ಲುಜ್ಜುವ ಅಭ್ಯಾಸ ಮಾಡಿಕೊಳ್ಳದೆ ಇದ್ದರೆ ಆಗ ಮಕ್ಕಳು ಕೂಡ ಇದನ್ನೇ ಪಾಲಿಸಿಕೊಂಡು ಹೋಗುವರು. ಇದರಿಂದ ಅವರ ಬಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ನಿತ್ಯವೂ ಸ್ನಾನ ಮಾಡುವುದು, ಒಳ ಉಡುಪು ಬದಲಾಯಿಸುವುದು, ತ್ವಚೆಯ ಆರೈಕೆ ಮಾಡುವ ಬಗ್ಗೆ ಮಕ್ಕಳಿಗೆ ಪೋಷಕರು ಕಲಿಸಿಕೊಡಬೇಕು.
ಬೇರೆಯವರಿಗೆ ಹೊಡೆಯುವುದು
ಕೆಲವು ಮಕ್ಕಳು ಬೇರೆ ಮಕ್ಕಳಿಗೆ ಹೊಡೆಯುವ ಅಭ್ಯಾಸವನ್ನು ಬೆಳೆಸಿಕೊಂಡಿರುವರು. ಈ ವೇಳೆ ಪೋಷಕರು ಹೋಗಿ ತಮ್ಮ ಮಕ್ಕಳಿಗೆ ಕೆಪ್ಪೆಗೆ ಹೊಡೆದು ಅಥವಾ ಎಚ್ಚರಿಕೆ ಕೊಟ್ಟು ಬಿಡುವರು. ಆದರೆ ಇದರ ಪರಿಣಾಮವು ಭಿನ್ನವಾಗಿರುವುದು. ಇದರಿಂದ ಮಕ್ಕಳಿಗೆ ಬೇರೆಯೇ ಸಂದೇಶ ಹೋಗುವುದು.
ಬೈಯುವುದು
ಮಕ್ಕಳು ಮನೆಯಲ್ಲಿ ಕೆಟ್ಟ ಭಾಷೆ ಬಳಕೆ ಮಾಡುತ್ತಿದ್ದರೆ, ಆಗ ನೀವು ನಿಮ್ಮ ಮಾತಿನ ಕಡೆಗೆ ಗಮನಹರಿಸಬೇಕು. ಭಾಷೆ ಕಲಿಯುತ್ತಿರುವ ವೇಳೆ ಮಕ್ಕಳು ಯಾವಾಗಲೂ ಹೊಸ ಪದಗಳನ್ನು ಹುಡುಕುತ್ತಾ ಇರುವರು. ಹೀಗಾಗಿ ಅವರು ಇರುವಾಗ ಯಾವಾಗಲೂ ಒಳ್ಳೆಯ ಮಾತುಗಳನ್ನು ಆಡಬೇಕು.
ತಂತ್ರಗಳು
ಮಕ್ಕಳಿಗೆ ತಮಗೆ ಬೇಕಾಗಿರುವುದನ್ನು ಪಡೆಯಬೇಕು ಎನ್ನುವ ಆಸೆಯು ಇದ್ದೇ ಇರುವುದು. ಇದಕ್ಕಾಗಿ ಅವರು ಏನಾದರೊಂದು ತಂತ್ರವನ್ನು ಅಳವಡಿಸಿಕೊಂಡು ಹೋಗುವರು. ಪೋಷಕರಲ್ಲಿ ಯಾರಾದರೊಬ್ಬರು ತಮ್ಮ ಸಂಗಾತಿಯಿಂದ ಕೆಲಸ ಮಾಡಿಸಿಕೊಳ್ಳಲು ಬಳಸುವ ತಂತ್ರವನ್ನು ಮಕ್ಕಳು ಕೂಡ ಅನುಸರಿಸಬಹುದು.
ಉಗುರು ಕಚ್ಚುವುದು
ಒತ್ತಡಕ್ಕೆ ಒಳಗಾದ ವೇಳೆ ಹೆಚ್ಚಿನ ಪೋಷಕರು ಮತ್ತು ಮಕ್ಕಳು ಉಗುರು ಕಚ್ಚುವ ಅಭ್ಯಾಸ ಬೆಳೆಸಿಕೊಂಡಿರುವರು. ಉಗುರುಕಚ್ಚುವ ಅಭ್ಯಾಸವನ್ನು ಸರಿಯಾದ ಸಮಯಕ್ಕೆ ನಿಲ್ಲಿಸದೆ ಇದ್ದರೆ ಆಗ ಇದು ಹಾಗೆ ಉಳಿದುಕೊಳ್ಳುವುದು.
ಅತಿಯಾಗಿ ಮೊಬೈಲ್ ಬಳಕೆ
ಪೋಷಕರು ಯಾವಾಗಲೂ ಲ್ಯಾಪ್‌ಟಾಪ್, ಕಂಪ್ಯೂಟರ್, ಸ್ಮಾರ್ಟ್‌ಪೋನ್, ಟ್ಯಾಬ್ಲೆಟ್ ಗಳನ್ನು ಅತಿಯಾಗಿ ಬಳಕೆ ಮಾಡುತ್ತಲಿದ್ದರೆ, ಆಗ ಮಕ್ಕಳು ಕೂಡ ಅದನ್ನು ಅನುಸರಿಸಿಕೊಂಡು ಹೋಗುವರು. ಹೀಗಾಗಿ ಇವುಗಳನ್ನು ಬಳಕೆ ಮಾಡುವ ಸಂದರ್ಭದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು.
ಅನಾರೋಗ್ಯಕಾರಿ ಆಹಾರ ಕ್ರಮ
ಪೋಷಕರು ಆರೋಗ್ಯಕಾರಿ ಆಹಾರ ಸೇವನೆ ಮಾಡಿದರೆ, ಆಗ ಮಕ್ಕಳು ಕೂಡ ಇದನ್ನು ಸೇವಿಸುವರು. ಪೋಷಕರು ಫಿಜ್ಜಾ, ಅಥವಾ ಆರೋಗ್ಯಕಾರಿ ಸೂಪ್ ಯಾವುದನ್ನೇ ತಿಂದರೂ ಮಕ್ಕಳು ಕೂಡ ಅದನ್ನು ಅನುಸರಿಸುವರು. ಮಕ್ಕಳು ಯಾವಾಗಲೂ ಕೇಕ್ ಮತ್ತು ಕ್ಯಾಂಡಿಯಂತಹ ಅಧಿಕ ಸಕ್ಕರೆ ಇರುವ ಆಹಾರವನ್ನು ಸೇವಿಸಿದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುವುದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1