” ಪಾರ್ಶ್ವನಾಥ ವಿದ್ಯಾ ಸಂಸ್ಥೆಯ ಕ್ರೀಡಾಕೂಟ- ಮೊಬೈಲ್ ಬಿಟ್ಟು ಮೈದಾನಕ್ಕೆ—ಆರೋಗ್ಯದ ದಾರಿ ಕ್ರೀಡೆ: ಚಿದಾನಂದಸ್ವಾಮಿ “

ಚಿತ್ರದುರ್ಗ ನ. 29

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಮೋಬೈಲ್‍ನಲ್ಲಿ ಆಟವಾಡುವ ಬದಲು ಮೈದಾನದಲ್ಲಿ ಆಟವನ್ನು ಆಡುವುದರ ಮೂಲಕ ನಿಮ್ಮ ದೇಹಕ್ಕೆ ಚೈತ್ಯವನ್ನು ನೀಡುವುದರ ಮೂಲಕ ಉತ್ತಮ ಆರೋಗ್ಯವನ್ನು ಹೊಂದಲು ಕ್ರೀಡೆ ಸಹಕಾರಿಯಾಗಿದೆ ಎಂದು ಶಿಕ್ಷಣ ಇಲಾಖೆಯ ಡಿಪಿಇಓ ಚಿದಾನಂದಸ್ವಾಮಿ ತಿಳಿಸಿದ್ದಾರೆ.


ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ನಗರದ ಶ್ರೀ ಪಾಶ್ರ್ವನಾಥ್ ವಿದ್ಯಾ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳು ಮೈದಾನದಲ್ಲಿ ಆಟವಾಡಿದ್ದಕ್ಕೆ ಬದಲಾಗಿ ತಮ್ಮ ಪೋಷಕರ ಮೊಬೈಲ್‍ನಲ್ಲಿ ಆಟವಾಡಿದ್ದು ಹೆಚ್ಚು ಮೊಬೈಲ್‍ನಲ್ಲಿ ಆಟವಾಡುವುದರಿಂದ ದೇಹಕ್ಕೆ ಯಾವುದೇ ಉಪಯೋಗವಾಗುವುದಿಲ್ಲ ಇದರ ಬದಲು ಮೈದಾನದಲ್ಲಿ ತಮಗೆ ಇಷ್ಠವಾದ ಆಟವನ್ನು ಆಡುವುದರ ಮೂಲಕ ನಮ್ಮ ದೇಹಕ್ಕೆ ಉತ್ತಮವಾದ ಆರೋಗ್ಯವನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತಾವುಗಳಿಸುವ ಅಂಕಗಳ ಜೊತೆಯಲ್ಲಿ ಕ್ರೀಡೆಗೂ ಸಹಾ ಹೆಚ್ಚಿನ ಒತ್ತನ್ನು ನೀಡಬೇಕಿದೆ ಎಂದರು.
ಕ್ರೀಡೆಯಿಂದ ಮಾನವನ ಜೀವನ ಬದುಕು, ಭವಿಷ್ಯವನ್ನು ರೂಪಿಸಬಹುದಾಗಿದೆ. ಕ್ರೀಡೆಯಿಂದ ಉತ್ತಮವಾದ ಬದುಕನ್ನು ಸಹಾ ಪಡೆಯಬಹುದಾಗಿದೆ. ಇಂದಿನ ಜೀವನ ಶೈಲಿಯಿಂದ ಮಾನವ ಕ್ರೀಡೆಯನ್ನು ಮರೆಯುತ್ತಿದ್ದಾನೆ, ಹಿಂದಿನ ಕಾಲದಲ್ಲಿ ಮನೆ, ಹೊಲದಲ್ಲಿ ಕಷ್ಟ ಪಟ್ಟು ದುಡಿಮೆ ಮಾಡುತ್ತಿದ್ದರು, ಇದರಿಂದ ಅವರು ನೂರಾರು ವರ್ಷ ಬದುಕನ್ನು ನಡೆಸುತ್ತಿದ್ದರು, ಆದರೆ ಇಂದಿನ ದಿನಮಾನದಲ್ಲಿ ಎಲ್ಲಾ ಕೆಲಸಕ್ಕೂ ಸಹಾ ಯಂತ್ರಗಳ ಬಳಕೆ ಮಾಡುವುದರ ಮೂಲಕ ನಮ್ಮ ದೇಹಕ್ಕೆ ಕೆಲಸವನ್ನೇ ನೀಡುತ್ತಿಲ್ಲ, ಇದರಿಂದ ನಮ್ಮ ದೇಹದ ಆಯಸ್ಸು ಕಡಿಮೆಯಾಗುತ್ತದೆ ಈ ಹಿನ್ನೆಲೆಯಲ್ಲಿ ನಮ್ಮಗೆ ಇಷ್ಠವಾದ ಯಾವುದಾದರೊಂದು ಕ್ರೀಡೆಯಲ್ಲಿ ಸಕ್ರಿಯಾವಾಗಿ ಭಾಗವಹಿಸುವುದರ ಮೂಲಕ ತಮ್ಮ ದೇಹವನ್ನು ಚನ್ನಾಗಿ ಇಟ್ಟುಕೊಳ್ಳಬಹುದಾಗಿದೆ ಎಂದರು.


ಶಿಕ್ಷಣ ಇಲಾಖೆಯ ಸಿಆರ್‍ಪಿ ಶ್ರೀಮತಿ ಶ್ವೇತಾ ಮಾತನಾಡಿ, ವಿದ್ಯಾರ್ಥಿಗಳು ಪಾಠ ಮತ್ತು ಕ್ರೀಡೆಯನ್ನು ಸಮಾನವಾಗಿ ತೆಗೆದುಕೊಂಡು ಹೋಗಬೇಕಿದೆ, ಆಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧನೆಯನ್ನು ಮಾಡಲು ಸಾಧ್ಯವಿದೆ, ಬರೀ ಶಿಕ್ಷಣದಲ್ಲಿ ಮಾತ್ರವೇ ಸಾಧನೆಯನ್ನು ಮಾಡಲು ಸಾಧ್ಯ ಎನ್ನುವುದು ಬೇಡ ಕ್ರೀಡೆಯಲ್ಲಿಯೂ ಸಹಾ ಸಾಧನೆಯನ್ನು ಮಾಡಲು ಅವಕಾಶ ಇದೆ. ಕ್ರೀಡೆಯಲ್ಲಿ ಸಾಧನೆಯನ್ನು ಮಾಡಿದವರು ಇಂದು ಉನ್ನತವಾದ ಸ್ಥಾನದಲ್ಲಿದ್ದಾರೆ. ಅದೇ ರೀತಿ ನೀವುಗಳು ಸಹಾ ಕ್ರೀಡೆಯಲ್ಲಿ ಉತ್ತಮವಾದ ಸಾಧನೆಯನ್ನು ಮಾಡಿ ಮುಂದೆ ಉನ್ನತವಾದ ಸ್ಥಾನವನ್ನು ಪಡೆಯಿರಿ ಎಂದರು.


ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಜಯ್ಯಣ್ಣ, ಪಾರ್ಶನಾಥ್ ವಿದ್ಯಾ ಸಂಸ್ಥೆಯ ಶಾಲಾ ಸಲಹಾ ಸಮಿತಿಯ ಸದಸ್ಯರಾದ ಪುಕ್‍ರಾಜ್ ಜೈನ್, ಉಪಾಧ್ಯಕ್ಷರಾದ ಮುಕೇಶ್ ಜೈನ್, ಸಹಾ ಕಾರ್ಯದರ್ಶಿ ಸುರೇಶ್ ಪಟ್ಟಿಯಾರ್, ಖಂಜಾಚಿ ರಾಜೇಂದ್ರ ಜೈನ್, ಸದಸ್ಯರಾದ ಚಮೇರಿಲಾಲ್ ಜೈನ್, ಆಶೀಕ ಕುಮಾರ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯರಾದ ನಾಜಿಮ ಸ್ವಲೇಯ, ಹಾಗೂ ಪ್ರೌಢಶಾಲಾ ಮಖ್ಯೋಪಾಧ್ಯಯರಾದ ಜನಕರೆಡ್ಡಿ ಸೇರಿದಂತೆ ಶಾಲಾ ಭೋದಕ ಮತ್ತು ಭೋದಕೇತರರು ಹಾಜರಿದ್ದರು.

Leave a Reply

Your email address will not be published. Required fields are marked *