ಜಿಲ್ಲಾ ಜೆ.ಡಿ.ಎಸ್ ಘಟಕದ ವತಿಯಿಂದ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 09 ಜಿಲ್ಲಾ ಜೆ.ಡಿ.ಎಸ್ ಘಟಕದವತಿಯಿಂದ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ನಗರದ ನೀಲಕಂಠೇಶ್ವರ ದೇವಸ್ಥಾನ ಪಕ್ಕ ಇರುವ ಜಿಲ್ಲಾ ಜೆ ಡಿ ಎಸ್ ಘಟಕದ ಹೆಚ್. ಡಿ. ದೇವೇಗೌಡ ಭವನದಲ್ಲಿ ಫೆ. 11ರ ಮಂಗಳವಾರ ಬೆಳಿಗ್ಗೆ 11ಕ್ಕೆ
ಹಮ್ಮಿಕೂಳ್ಳಲಾಗಿದೆ ಎಂದು ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಿ. ಗೋಪಾಲಸ್ವಾಮಿನಾಯಕ ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ರಾಜ್ಯ ಜೆ.ಡಿ.ಎಸ್ ಘಟಕದ ಮಹಾಪ್ರಧಾನ ಕಾರ್ಯದರ್ಶಿಗಳು ಹಾಗೂ ಮಾಜಿ ಸಚಿವರಾದ ನಾಡಗೌಡ,
ಜಿಲ್ಲಾ ಉಸ್ತುವಾರಿಗಳು ತುರುವೇಕೆರೆ ಶಾಸಕರಾದ ಎಂ.ಟಿ. ಕೃಷ್ಣಪ್ಪ, ತುಮಕೂರಿನ ಮಾಜಿ ಶಾಸಕರಾದ ಹೆಚ್.ನಿಂಗಯ್ಯ
ಮಧುಗಿರಿ ಮಾಜಿ ಶಾಸಕರಾದ ವೀರಭದ್ರಯ್ಯ, ದಾವಣಗೆರೆಯ ಶ್ರೀಮತಿ ಶೀಲಾನಾಯಕ್ ಭಾಗವಹಿಸುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನೂ ಜಿಲ್ಲಾ ಜೆ.ಡಿ.ಎಸ್ ಘಟಕದ ಅಧ್ಯಕ್ಷರಾದ ಎಂ ಜಯಣ್ಣ ವಹಿಸುವರು. ರಾಜ್ಯ ಪ್ರಧಾನ
ಕಾರ್ಯದರ್ಶಿ ಬಿ. ಕಾಂತರಾಜ್, ಜಿಲ್ಲಾ ಜೆ ಡಿ ಎಸ್ ಘಟಕದ ಮಾಜಿ ಅಧ್ಯಕ್ಷರಾದ ಡಿ ಯಶೋಧರ್, ವಿಧಾನಸಭಾ ಪರಾಜಿತ
ಅಭ್ಯರ್ಥೀಗಳಾದ ರವೀಂದ್ರಪ್ಪ, ವೀರಭದ್ರಪ್ಪ,ತಿಪ್ಪೇಸ್ವಾಮಿ ರವೀಶ್, ಜಿಲ್ಲಾ ಘಟಕದ ಕಾರ್ಯಧ್ಯಕ್ಷರಾದ ಜಿ ಬಿ ಶೇಖರ್ ಮಠದ
ಹಟ್ಟಿ ವೀರಣ್ಣ, ಜಿಲ್ಲೆಯ ತಾಲ್ಲೂಕ್ ಘಟಕದ ಅಧ್ಯಕ್ಷರಾದ ಸಣ್ಣತಿಮ್ಮಪ್ಪ, ಹನುಮಂತರಾಯಪ್ಪ, ಕರಿಬಸಪ್ಪ, ಗಣೇಶ
ಮೂರ್ತಿ,ಪರಮೇಶ್ವರಪ್ಪ,ಪಿ. ತಿಪ್ಪೇಸ್ವಾಮಿ, ವಿವಿಧ ಘಟಕಗಳ ಅಧ್ಯಕ್ಷರಾದ ಲಿಂಗರಾಜ್, ಪ್ರತಾಪ್ ಜೋಗಿ, ಪರಮೇಶ್ ಅಬ್ಬು
ಲಲಿತಾ ಕೃಷ್ಣ ಮೂರ್ತಿ, ಗೀತಮ್ಮ ರಾಜ್ಯ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು ಭಾಗವಹಿಸುವರು

ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಪಕ್ಷದ ಎಲ್ಲಾ ಘಟಕದ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿ ಗೂಳಿಸಬೇಕೆಂದು ಡಿ. ಗೋಪಾಲಸ್ವಾಮಿ ನಾಯಕ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *