ಕಲರ್ ಫುಲ್ ಮನೆಗೆ ತಾಳ್ಮೆಯ ಬಿಳುಪು: ಎಂಟ್ರಿ ಕೊಟ್ರು ಎಮ್.ಎಲ್.ಎ ಪ್ರದೀಪು; ಬಿಗ್ ಬಾಸ್ ಮನೆಯಲ್ಲಿ ಪ್ರದೀಪ್ ಈಶ್ವರ್!

ಶಾಸಕ ಪ್ರದೀಪ್‌ ಈಶ್ವರ್‌ ಬಿಗ್‌ ಬಾಸ್‌ಗೆ ಎಂಟ್ರಿ ಕೊಟ್ಟಿದ್ದು, ಸ್ಪರ್ಧಿಗಳು ಸಖತ್‌ ಥ್ರಿಲ್‌ ಆಗಿದ್ದಾರೆ. ʻನಾವೆಲ್ಲ ಕಾಂಪೀಟ್‌ ಮಾಡ್ತಾ ಇರೋದು ಒಬ್ಬ ಶಾಸಕರ ಜತೆʼ ಎಂದು ಸ್ಪರ್ಧಿಗಳು ಸಖತ್‌ ಖುಷಿಯಾಗಿದ್ದಾರೆ. ಇದೀಗ ಈ ಪ್ರೋಮೊವನ್ನು ಕಲರ್ಸ್‌ ಕನ್ನಡ ಹಂಚಿಕೊಂಡಿದೆ.

ಬೆಂಗಳೂರು: ಅಕ್ಟೋಬರ್ 8 ರಿಂದ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಆರಂಭವಾಗಿದೆ. ನಿರೀಕ್ಷೆಯಂತೆಯೇ ಸಾಕಷ್ಟು ಟ್ವಿಸ್ಟ್‌ ಈ ಬಾರಿ ಎದುರಾಗಿದೆ. ಅಷ್ಟೇ ಅಲ್ಲದೇ ಈ ಬಾರಿ ಹ್ಯಾಪಿ ಬಿಗ್‌ ಬಾಸ್‌ ಕೂಡ.

ಶಾಸಕ ಪ್ರದೀಪ್‌ ಈಶ್ವರ್‌ ಬಿಗ್‌ ಬಾಸ್‌ಗೆ ಎಂಟ್ರಿ ಕೊಟ್ಟಿದ್ದು, ಸ್ಪರ್ಧಿಗಳು ಸಖತ್‌ ಥ್ರಿಲ್‌ ಆಗಿದ್ದಾರೆ. ʻನಾವೆಲ್ಲ ಕಾಂಪೀಟ್‌ ಮಾಡ್ತಾ ಇರೋದು ಒಬ್ಬ ಶಾಸಕರ ಜತೆʼ ಎಂದು ಸ್ಪರ್ಧಿಗಳು ಸಖತ್‌ ಖುಷಿಯಾಗಿದ್ದಾರೆ. ಇದೀಗ ಈ ಪ್ರೋಮೊವನ್ನು ಕಲರ್ಸ್‌ ಕನ್ನಡ ಹಂಚಿಕೊಂಡಿದೆ.

ಈ ಬಾರಿ 11 ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಉಳಿದವರನ್ನು ಮುಂದಿನ ವಾರ ಸೆಲೆಕ್ಟ್‌ ಮಾಡಲಾಗುವುದು ಎಂದು ನಿರೂಪಕ ಕಿಚ್ಚ ಸುದೀಪ್‌ ತಿಳಿಸಿದರು. ಆದರೀಗ ಮೊದಲ ದಿನವೇ ಇದ್ದಕ್ಕಿದ್ದಂತೆ ಶಾಸಕ ಪ್ರದೀಪ್‌ ಈಶ್ವರ್‌ ಎಂಟ್ರಿ ಕೊಟ್ಟಿದ್ದಾರೆ. ಕೊಟ್ಟಿದ್ದು ಮಾತ್ರವಲ್ಲ ಅಷ್ಟೇ ಖಡಕ್‌ ಡೈಲಾಗ್‌ ಕೂಡ ಹೇಳಿದ್ದಾರೆ. ನಾನು ನಿನ್ನೆಯೇ ಬಿಗ್‌ ಬಾಸ್‌ ವೇದಿಕೆಗೆ ಬರಬೇಕಿತ್ತು. ಸ್ಪರ್ಧಿಯಾಗಿ ಇಲ್ಲಿ ಸೇರಿದ್ದಕ್ಕೆ ತುಂಬ ಖುಷಿಯಾಗುತ್ತಿದೆ. ಗೆಲ್ಲೋದರಲ್ಲಿ ನಮಗೆ ಕಾಂಪ್ರಮೈಸ್‌ ಇಲ್ಲ ಎಂದು ಸ್ಪರ್ಧಿಗಳ ಮುಂದೆ ಹೇಳಿದ್ದಾರೆ.

ನಾನು ಎಂಟ್ರಿ ಅಂತಲೇ ಅಂತ ಅಂದುಕೊಂಡಿರಲಿಲ್ಲ” ಅಂತ ಸಿರಿ ಅವರು ಪ್ರದೀಪ್ ಎಂಟ್ರಿಗೆ ಹೇಳಿದ್ದಾರೆ. ಪ್ರದೀಪ್ ಈಶ್ವರ್ ಅವರು ಎಂಎಲ್‌ಎ ಆಗಿದ್ದು, ಅವರು ಜನರ ಸಮಸ್ಯೆಗಳನ್ನು ಆಲಿಸಬೇಕು. ದೊಡ್ಮನೆಯೊಳಗಡೆ ಅವರು ಸ್ಪರ್ಧಿಯಾಗಿ ಇರುತ್ತಾರೆ ಎನ್ನೋದು ಡೌಟ್. ಕೆಲವೇ ಕೆಲವು ದಿನ ಅವರು ಅತಿಥಿಯಾಗಿ ಬಿಗ್ ಬಾಸ್ ಮನೆಯಲ್ಲಿ ಇರುವ ಸಾಧ್ಯತೆ ಜಾಸ್ತಿ ಇದೆ.

Source : https://www.kannadaprabha.com/cinema/news/2023/oct/09/mla-pradeep-eshwar-enter-bigg-boss-season-10-503971.html

Leave a Reply

Your email address will not be published. Required fields are marked *