PBKS vs CSK: ಪ್ರಿಯಾಂಶ್​ ಆರ್ಯ ಆರ್ಭಟಕ್ಕೆ ಸಿಎಸ್​ಕೆ ಉಡೀಸ್! ಸತತ 4ನೇ ಪಂದ್ಯ ಸೋಲು ಕಂಡ ಚೆನ್ನೈ

ಪಂಜಾಬ್ ಕಿಂಗ್ಸ್ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 18 ರನ್​ಗಳ ರೋಚಕ ಜಯ ಸಾಧಿಸಿದೆ. ಪ್ರಿಯಾಂಶ್ ಆರ್ಯ 103 ರನ್, ಶಶಾಂಕ್ ಸಿಂಗ್ 52 ರನ್ ಅದ್ಭುತ ಬ್ಯಾಟಿಂಗ್ ಮಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅದ್ಭುತ ಪ್ರದರ್ಶನ ತೋರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರನ್​ಗಳ ರೋಚಕ ಜಯ ಸಾಧಿಸಿದೆ. 2ನೇ ತವರಿನಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತ್ತು. ಪಂಜಾಬ್ ಕಿಂಗ್ಸ್ ಪರ ಆರಂಭಿಕ ಬ್ಯಾಟರ್ ಪ್ರಿಯಾಂಶ್ ಆರ್ಯ 103 ರನ್ ಗಳಿಸಿದರೆ, ಶಶಾಂಕ್ ಸಿಂಗ್ ಅಜೇಯ 52 ರನ್ ಗಳಿಸಿದರು. ಈ ಮೊತ್ತವನ್ನು ಬೆನ್ನಟ್ಟಿದ ಸಿಎಸ್​ಕೆ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್​ಗಳಿಸಲಷ್ಟೇ ಶಕ್ತವಾಗಿ 18 ರನ್​ಗಳಿಂದ ಸೋಲು ಕಂಡಿತು.

220ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಪವರ್​ ಪ್ಲೇನಲ್ಲಿ 60 ರನ್​ಗಳಿಸಿ  ಉತ್ತಮ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್​ಗೆ ಕಿವೀಸ್ ಜೋಡಿಗಳಾದ ರಚಿನ್ ರವೀಂದ್ರ ಹಾಗೂ ಡಿವೋನ್ ಕಾನ್ವೆ 61 ರನ್​ ಸೇರಿಸಿದರು. 7ನೇ ಓವರ್​ ಬೌಲಿಂಗ್ ಮಾಡಲು ಬಂದ ಗ್ಲೆನ್ ಮ್ಯಾಕ್ಸ್​ವೆಲ್ ರಚಿನ್ ರವೀಂದ್ರ ವಿಕೆಟ್ ಪಡೆಯುವ ಮೂಲಕ ಪಂಜಾಬ್​ ಕಿಂಗ್ಸ್​ಗೆ ಬ್ರೇಕ್ ನೀಡಿದರು.  ಆ ನಂತರ ಬಂದ ನಾಯಕ ಕೇವಲ 1 ರನ್​ಗೆ ವಿಕೆಟ್ ಒಪ್ಪಿಸುವ ಮೂಲಕ ಸತತ 2ನೇ ಪಂದ್ಯದಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

3ನೇ ವಿಕೆಟ್​ಗೆ ಒಂದಾದ ಶಿವಂ ದುಬೆ ಹಾಗೂ ಡಿವೋನ್ ಕಾನ್ವೆ  89 ರನ್​ಗಳ ಜೊತೆಯಾಟ ನೀಡುವ ಮೂಲಕ ಪಂದ್ಯವನ್ನ ಸಿಎಸ್​ಕೆ ಕಡೆಗೆ ತಿರುಗಿಸಿದ್ದರು. ಆದರೆ ಫರ್ಗ್ಯಸನ್​ ಶಿವಂ ದುಬೆಯನ್ನ ಬೌಲ್ಡ್ ಮಾಡುತ್ತಿದ್ದಂತೆ ಸಿಎಸ್​ಕೆ ಗೆಲುವಿನ ಆಸೆ ಕಮರಿತು. ದುಬೆ ವಿಕೆಟ್ ಬಿದ್ದ ಸಂದರ್ಭದಲ್ಲಿ ಸಿಎಸ್​ಕೆ ಗೆಲುವುಗೆ 25 ಎಸೆತಗಳಲ್ಲಿ 68 ರನ್​ಗಳ ಅಗತ್ಯವಿತ್ತು.

ಮಿಂಚಿದ ಧೋನಿ 

ಆದರೆ ನಿರ್ಣಾಯಕ 17ನೇ ಓವರ್​  ಎಸೆದ ಯುಜ್ವೇಂದ್ರ ಚಹಲ್ ಕೇವಲ 7 ರನ್​ ನೀಡಿದರು. ಕೊನೆ 18 ಎಸೆತಗಳಲ್ಲಿ ಸಿಎಸ್​ಕೆಗೆ 59 ರನ್ ಅತಗ್ಯವಿತ್ತು. ಫರ್ಗ್ಯುಸನ್ 18ನೇ ಓವರ್​ನಲ್ಲಿ 16, ಅರ್ಶದೀಪ್ ಎಸೆದ 19ನೇ ಓವರ್​ನಲ್ಲಿ 15 ರನ್​ ಹಾಗೂ 20ನೇ ಓವರ್​ನಲ್ಲಿ ಕೇವಲ 9 ರನ್​ ಗಳಿಸಲಷ್ಟೇ ಶಕ್ತವಾಯಿತು. ಧೋನಿ 12 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್​ಗಳ ಸಹಿತ 27 ರನ್​ಗಳಿಸಿ ಮಿಂಚಿದರಾದರೂ ಅವರ ಆಟ ತಂಡಕ್ಕೆ ಗೆಲುವು ತಂದುಕೊಡಲಿಲ್ಲ. ಆರಂಭಿಕರಾಗಿ ಬಂದ ಡಿವೋನ್ ಕಾನ್ವೆ 49 ಎಸೆತಗಳನ್ನಾಡಿ 6 ಬೌಂಡರಿ, 2 ಸಿಕ್ಸರ್​ ಸಹಿತ 69 ರನ್​ಗಳಿಸಿದರು. ಇವರ ನಿಧಾನಗತಿ ಆಟವೇ ಸಿಎಸ್​ಕೆ ಸೋಲಿಗೆ ಕಾರಣವಾಯಿತು.

ಪಂಜಾಬ್ ಕಿಂಗ್ಸ್ ಪರ ಲಾಕಿ ಫರ್ಗ್ಯುಸನ್​ 40ಕ್ಕೆ 2 ವಿಕೆಟ್ ಪಡೆದು ಟಾಪ್ ಬೌಲರ್ ಎನಿಸಿಕೊಂಡರು. ಗ್ಲೆನ್ ಮ್ಯಾಕ್ಸ್​ವೆಲ್, ಯಶ್ ಠಾಕೂರ್, ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿ ಪಂಜಾಬ್ ಕಿಂಗ್ಸ್ ಪವರ್​ ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಇನ್ನು ಇಡೀ ತಂಡದಲ್ಲಿ ಕೇವಲ ಮೂವರು ಬ್ಯಾಟರ್ ಮಾತ್ರ ಎರಡಂಕಿ ಮೊತ್ತ ದಾಖಲಿಸಿದರಾದರೂ 220 ರನ್​ಗಳ ಬೃಹತ್ ಟಾರ್ಗೆಟ್ ನೀಡುವಲ್ಲಿ ಸಫಲವಾಯಿತು. 24 ವರ್ಷದ ಪ್ರಿಯಾಂಶ್ ಆರ್ಯ 42 ಎಸೆತಗಳಲ್ಲಿ 7 ಬೌಂಡರಿ, 9 ಸಿಕ್ಸರ್​ಗಳ ಸಹಿತ 103 ರನ್​ಗಳಿಸಿದರೆ, 7ನೇ ಕ್ರಮಾಂಕದಲ್ಲಿ ಬಂದ ಶಶಾಂಕ್ ಸಿಂಗ್ 36 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್​ಗಳ ಸಹಿತ ಅಜೇಯ 52, ಮಾರ್ಕೊ ಜಾನ್ಸನ್​ 19 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 34 ರನ್​ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು.

ನಾಯಕ ಶ್ರೇಯಸ್ ಅಯ್ಯರ್ (9), ಪ್ರಭಸಿಮ್ರಾನ್ ಸಿಂಗ್ (0), ಮಾರ್ಕಸ್​ ಸ್ಟೋಯ್ನಿಸ್ (4), ನೆಹಾಲ್ ವಧೇರಾ(9), ಗ್ಲೆನ್ ಮ್ಯಾಕ್ಸ್​ವೆಲ್ (1) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ಶತಕ ಸಿಡಿಸಿದ ಗೆಲುವಿಗೆ ಕಾರಣರಾದ ಪ್ರಿಯಾಂಶ್​ ಸಿಂಗ್  ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

News 18 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *