

ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ರೋಹಿತ್ ತಮ್ಮ ತಂಡದಲ್ಲಿ ಬದಲಾವಣೆ ಮಾಡಿದ್ದಾರೆ. ರಿಲೇ ಮೆರೆಡಿತ್ ಬದಲು, ಆಕಾಶ್ ಮಂಡ್ವಾಲ್ಗೆ ಪ್ಲೇಯಿಂಗ್-11ರಲ್ಲಿ ಅವಕಾಶ ಸಿಕ್ಕಿದೆ. ನಾಥನ್ ಎಲ್ಲಿಸ್ ಪಂಜಾಬ್ ತಂಡಕ್ಕೆ ಮರಳಿದ್ದಾರೆ. ಮ್ಯಾಥ್ಯೂ ಶಾರ್ಟ್ ಕೂಡ ತಂಡಕ್ಕೆ ಮರಳಿದ್ದಾರೆ.