ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಚೇರಿಯ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ.

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 10
ಚಿತ್ರದುರ್ಗ ನಗರ ಉಪ ವಿಭಾಗ ಬೆಸ್ಕಾಂ, ಕಾರ್ಯನಿರ್ವಾಹ ಇಂಜಿನಿಯರ್ ಬೆಸ್ಕಾಂ ಕಚೇರಿ, ಆಯುಷ್ ಇಲಾಖೆ ಹಾಗೂ ರಾಷ್ಟ್ರೀಯ ಯೋಗ ಶಿಕ್ಷಣ, ಕ್ರೀಡಾ ಮತ್ತು ಸಾಂಸ್ಕøತಿಕ ಕ್ಷೇಮಾಭೀವೃದ್ದಿ ಸಂಘ, (ರಿ)  ಚಿತ್ರದುರ್ಗ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಎಸ್.ಸಿ.,ಎಸ್.ಟಿ. ಹಾಗೂ ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಸಂಯುಕ್ತಾಶ್ರಯದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಚೇರಿಯ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದುರ್ಗ ವಿಭಾಗದ ಬೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ತಿಮ್ಮರಾಯಪ್ಪ ಇಂದಿನ ದಿನಮಾನದಲ್ಲಿ ಪರಿಸರ ಹೆಚ್ಚಾಗಿ ಹಾನಿಯಾಗುತ್ತಿದೆ, ಇದರ ಉಳಿವಿಗಾಗಿ ಎಲ್ಲರು ಸಹಾ ಕೈಜೋಡಿಸಬೇಕಿದೆ, ಇದಕ್ಕಾಗಿ ಸಸಿಗಳನ್ನು ನಡೆವುದರ ಮೂಲಕ ಪರಿಸರವನ್ನು ಉಳಿಸಬೇಕಿದೆ. ಪ್ರತಿಯೊಬ್ಬರ ಮನೆಯಲ್ಲಿಯೂ ಸಹಾ ಸಸಿಗಳನ್ನು ನೆಡುವುದರ ಮೂಲಕ ಪರಿಸರಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡಬೇಕಿದೆ ಎಂದರು.
ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ, ಡಾ.ಚಂದ್ರಕಾಂತ್ ಎಸ್. ನಾಗಸಮುದ್ರ ಮಾತನಾಡಿ, ಇಂದಿನ ದಿನಮಾನದಲ್ಲಿ ಪರಿಸರ ಎಲ್ಲರಿಗೂ ಸಹಾ ಅಗತ್ಯವಾಗಿದೆ. ಉತ್ತಮವಾದ ಪರಿಸರವನ್ನು ಹೊಂದಿದ್ದರೆ ಮಾತ್ರ ನಾವುಗಳು ಆರೋಗ್ಯವಾಗಿ ಇರಲು ಸಾಧ್ಯವಿದೆ. ಉತ್ತಮವಾದ ಪರಿಸರವನ್ನು ಹೊಂದಲು ಎಲ್ಲರು ಸಸಿಗಳನ್ನು ನೆಡುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಬೆಸ್ಕಾಂನ ಚಿತ್ರದುರ್ಗ ವಿಭಾಗದ ಸಹಾಯಕ ಕಾರ್ಯನಿರ್ವಹ ಇಂಜಿನಿಯರ್ ಮಲ್ಲಿಕಾರ್ಜನ್, ಜಿಲ್ಲಾ ಆಯುಷ್ ಹಿರಿಯ ವೈದ್ಯಾಧಿಕಾರಿ ಡಾ.ಶಶಿಕುಮಾರ್, ಚಿತ್ರದುರ್ಗ ಉಪ ವಿಭಾಗದ ನಗರ ಸಹಾಯಕ ಕಾರ್ಯ ನಿರ್ವಹಕ ಇಂಜಿನಿಯರ್ ತಿಮ್ಮಣ್ಣ, ಗ್ರಾಮೀಣ  ಸಹಾಯಕ ಕಾರ್ಯ ನಿರ್ವಹಕ ಇಂಜಿನಿಯರ್ ನಾಗರಾಜು ಪ್ರಭಾರಿ ಕಾರ್ಯ ನಿರ್ವಹಕ ಇಂಜಿನಿಯರ್ ಕೆ.ಪಿ.ಬಸವರಾಜು, ರಾಷ್ಟ್ರೀಯ ಯೋಗ ಶಿಕ್ಷಣ, ಕ್ರೀಡಾ ಮತ್ತು ಸಾಂಸ್ಕøತಿಕ ಕ್ಷೇಮಾಭೀವೃದ್ದಿ ಸಂಘ, (ರಿ)ದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಅನ್ನೇಹಾಳ್, ಉಪಾಧ್ಯಕ್ಷರಾದ ಮಂಜುನಾಥ್, ಕಾರ್ಯದರ್ಶಿ ಬಸವರಾಜು, ಖಂಜಾಚಿ ಕರಿಯಪ್ಪ ಅನ್ನೇಹಾಳ್, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ರವಿ, ಕಾರ್ಯದರ್ಶಿ ಕರಿಬಸವಯ್ಯ, ಎಸ್.ಸಿ.ಎಸ್.ಟಿ. ಕಲ್ಯಾಣ ಸಂಸ್ಥೆ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್.ರಮೇಶ್, ಮಹಿಳಾ ದೂರು ನಿವಾರಣಾ ಸಮಿತಿ ಅಧ್ಯಕ್ಷರಾದ ಶಕುಂತಲಮ್ಮ, ಉಪಾಧ್ಯಕ್ಷರಾದ ವಿಜಯಲಕ್ಷ್ಮೀ, ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾದ ಷಣ್ಮುಖಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಪಿ.ಮಂಜುನಾಥ್, ಬೆಸ್ಕಾಂ ಪ್ರತಿನಿಧಿ ರೇವಣಸಿದ್ದಪ್ಪ, ತಾಲ್ಲೂಕು ಸಮಿತಿ ಅಧ್ಯಕ್ಷರಾದ ಮಂಜುನಾಥ್, ಕಾರ್ಯದರ್ಶಿ ರಾಘವೇಂದ್ರ, ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಭೀಮಪ್ಪ, ಸಂಘಟನಾ ಕಾರ್ಯದರ್ಶಿ ಶ್ರೀಧರ್, ಹೊಸದುರ್ಗ ತಾಲ್ಲೂಕು ಅಧ್ಯಕ್ಷ ವಿರೂಪಾಕ್ಷಪ್ಪ, ತಾಂತ್ರಿಕ ಶಾಖೆಯ ಭರತ್‍ರಾಜ್, ಜಿ.ಎಸ್ ವಾಣಿ, ಹಾಗೂ ಬೆಸ್ಕಾಂ ನೌಕರರ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.    

Leave a Reply

Your email address will not be published. Required fields are marked *