ದಸರಾ ರಜೆ ಉಲ್ಲಂಘನೆ ಮಾಡಿದ ಕಾನ್ವೆಂಟ್ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು: ಪ್ರಮೋದ್ ಮುತಾಲಿಕ್.

ಚಿತ್ರದುರ್ಗ,ಸೆ.18: 

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ರಾಜ್ಯ ಸರ್ಕಾರ ನೀಡಿರುವ ದಸರಾ ರಜೆಗಳ ಆದೇಶವನ್ನು ಕಾನ್ವೆಂಟ್ ಶಾಲೆಗಳು ಉಲ್ಲಂಘನೆ ಮಾಡಿ, ಶಾಲೆಗಳನ್ನು ನಡೆಸುತ್ತಿರುವ ಬಗ್ಗೆಶ್ರೀರಾಮ ಸೇನೆಯ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ.


ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಬ್ಬಗಳನ್ನು ಆಚರೆಣೆ ಮಾಡಲೆಂದು ಸರ್ಕಾರ ದಸರಾ ರಜೆ ಘೋಷಣೆ ಮಾಡಿ ಆದೇಶನ್ನು ನೀಡದೆ. ಆದರೆ ಕಾನ್ವೆಂಟ್ ಶಾಲೆಗಳು ದಸರಾ ರಜೆ ನೀಡದೆ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದಾರೆ.

ಕಾನ್ವೆಂಟ್ ಶಾಲೆಗಳಲ್ಲಿ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಹಾಗೂ ಬಸವೇಶ್ವರವರ ಭಾವಚಿತ್ರ ಕೂಡ ಹಾಕದೇ ಸರ್ಕಾರದ ಸೂಚನೆ ಪಾಲಿಸಲಾಗುತ್ತಿಲ್ಲ. ಕೆಲವೊಂದು ಕಡೆ ರಾಷ್ಟ್ರೀಯ ಹಬ್ಬಗಳ ಆಚರಣೆಯೂ ಮಾಡುತ್ತಿಲ್ಲ. ಸರ್ಕಾರ ಕೂಡಲೇ ಈ ತಪ್ಪುಗಳನ್ನು ಸರಿ ಪಡಿಸಿಬೇಕು ಎಂದು ಶ್ರೀ ರಾಮ ಸೇನೆ ಆಗ್ರಹಿಸುತ್ತದೆ ಎಂದರು.


ಕಾನ್ವೆಂಟ್ ಶಾಲೆಗಳಲ್ಲಿ ಶೇ.90 ರಷ್ಟು ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕಿಯರು. ಮತ್ತು ಸಿಬ್ಬಂಧಿ ವರ್ಗದವರು ಹಿಂದೂಗಳೇ ಇದ್ದಾಗ ದಸರಾ ರಜೆ ರದ್ದು ಮಾಡಿ, ಶಾಲೆ ನಡೆಸುತ್ತಿರುವವರ ಶಾಲಾ ಆಡಳಿತದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ದಸರಾ ರಜೆ ದಿನಗಳಲ್ಲಿ ಪರೀಕ್ಷೆ ಘೋಷಣೆ ಮಾಡಿದ್ದಾರೆ, ಇದು ಅಪಾಯಕಾರಿಯಾಗಿದೆ. ಶಿಕ್ಷಕರು. ಪೋಷಕರು, ಮಕ್ಕಳು ಸೇರಿ ಎಲ್ಲರೂ ಮುಕ್ತವಾಗಿ ಹಬ್ಬವನ್ನು ಆಚರಿಸಲು ಆಗುವುದಿಲ್ಲ. ಅವರನ್ನು ಹಬ್ಬದಿಂದ ವಂಚಿಸಲಾಗುತ್ತಿದೆ. ಆದ ಕಾರಣ ಪರೀಕ್ಷೆಯನ್ನು ಕೂಡಲೇ ರದ್ದುಗೊಳಿಸಬೇಕು.

ಈ ಕುರಿತು ಪಾಲಕರು, ಪೋಷಕರು ತಕರಾರು ಮಾಡಿದ್ದಲ್ಲಿ ಅವರನ್ನು ಬೆದರಿಸಲಾಗುತ್ತಿದೆ. ಅಷ್ಟೇ ಅಲ್ಲದೆ ತಕರಾರು ಮಾಡಿದ ಪಾಲಕರ ಮಕ್ಕಳ ಮೇಲೆ ಸೇಡು ತೀರಿಸಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ ಆದ್ದರಿಂದ ಕೂಡಲೇಪರೀಕ್ಷೆಯನ್ನು ತಡೆದು ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಕಾನ್ವೆಂಟ್ ಶಾಲೆಗಳಲ್ಲಿ 05 ಪ್ರತಿ ಶತದಿಂದ ಶೇಕಡ 10 ರಷ್ಟು ಮಾತ್ರ ಕ್ರಿಶ್ಚಿಯನ್ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬಹು ಸಂಖ್ಯಾತ ಹಿಂದೂ ವಿದ್ಯಾರ್ಥಿಗಳು ಇದ್ದರೂ ಸಹ ಕ್ರಿಸ್ಮಸ್ ಹಬ್ಬಕ್ಕೆ ಕಡ್ಡಾಯ 10 ದಿನಗಳ ರಜೆ ಘೋಷಿಸಲಾಗುತ್ತದೆ ಈ ತಪ್ಪನ್ನು ಸಹ ಕೂಡಲೇ ಸರಿಪಡಿಸಬೇಕು ಎಂದರು.


ಮಹಾತ್ಮ ಗಾಂಧೀಜೀ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಸವೇಶ್ವರರವರ ಭಾವಚಿತ್ರ ಕಡ್ಡಾಯವಾಗಿ ಕಾನ್ವೆಂಟ್ ಶಾಲೆಗಳಲ್ಲಿ ಇರುವುದನ್ನು ಅಧಿಕಾರಿಗಳು ದೃಢಪಡಿಸಬೇಕು. ಸಾಕಷ್ಟು ಶಾಲೆಗಳಲ್ಲಿ ರಾಷ್ಟ್ರೀಯ ಉತ್ಸವದ ಕನ್ನಡ ರಾಜ್ಯೋತ್ಸವ ತಿರಸ್ಕಾರ ಮಾಡಿ, ಹಿಂದೂ ಹಬ್ಬಗಳಿಗೆ, ಹಿಂದೂ ಆಚರಣೆಗಳಿಗೆ ಹಾಗೂ ಹಿಂದೂ ವಿದ್ಯಾರ್ಥಿ, ಶಿಕ್ಷಕರಿಗೆ, ಮಾನಸಿಕ, ಆರ್ಥಿಕವಾಗಿ ತೊಂದರೆ ಕೊಡುತ್ತಿದ್ದು, ಇದು ಕೂಡಲೇ ನಿಲ್ಲಿಸಬೇಕು ಮತ್ತು ಕಡ್ಡಾಯವಾಗಿ ರಾಷ್ಟ್ರೀಯ ಉತ್ಸವಗಳನ್ನು ಆಚರಿಸಿ ಅದರ ವರದಿಯನ್ನು ತರಿಸಿ ಕೊಡಬೇಕು ಎಂದರು.


ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ 6 ಲಕ್ಷ ಜನ ಸೇರಿ ಬಹಳ ಅದ್ಭುತವಾಗಿ ಯಶಸ್ವಿಯಾಗಿದೆ. ಆದರೆ ಶೋಭಾಯಾತ್ರೆ ವೇಳೆ ಡಿಜೆ ಬಳಕೆ ಮಾಡಿದ ಡಿಜೆ ಮಾಲೀಕರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿರುವುದು ಎಷ್ಟು ಸರಿ ? ಇದಕ್ಕೆ ಕಾರಣವನ್ನು ಕೇಳಿದರೆ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಡಿಜೆ ಬಳಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆದರೆ ಮುಸ್ಲಿಂರು ದಿನಕ್ಕೆ 5 ಬಾರಿ ನಮಾಜ್ ಮಾಡುವಾಗ ಅವರು ಬಳಸುವ ಧ್ವನಿವರ್ಧಕದ ಡೆಸಿಬೆಲ್ ಎಷ್ಟು ಅಂತ ಗೊತ್ತಾ ? ಅವರ ಮೇಲೆ ಯಾಕೆ ಕೇಸ್ ಹಾಕಿಲ್ಲ ? ಅವರುಗಳು ಅನುಮತಿ ತೆಗೆದುಕೊಂಡಿದ್ದಾರ ? ಎಂದು ಪ್ರಶ್ನಿಸಿದ ಅವರು, ಸುಪ್ರೀಂ ಕೋರ್ಟ್ ಕೇವಲ ಹಿಂದೂಗಳಿಗೆ ಮಾತ್ರ ಆದೇಶ ಮಾಡಿದೆಯಾ ? ಹಿಂದೂಗಳು ಮಾತ್ರ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದೇವಾ ಹೇಳಿ ಎಂದು ಕಿಡಿಕಾರಿ, ಡಿಜೆ ವಿಚಾರವಾಗಿ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣವನ್ನು ಕೂಡಲೇ ಕೈಬಿಡಬೇಕು ಇಲ್ಲದೆ ಹೋದರೆ ಇದೇ ವಿಚಾರವಾಗಿ ಇಡೀ ಹಿಂದೂ ಸಮಾಜದಿಂದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

Views: 17

Leave a Reply

Your email address will not be published. Required fields are marked *