ಚಿತ್ರದುರ್ಗ ಸೆ. 14
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ನಿನ್ನೆ ಚಿತ್ರದುರ್ಗ ನಗರದಲ್ಲಿ ನಡೆದ ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆಯ ಸಮಯದಲ್ಲಿ ಆಗಮಿಸಿದ್ದ ಭಕ್ತಾಧಿಗಳಿಗೆ ಪ್ರಸಾದವನ್ನು ಚಿತ್ರದುರ್ಗ ತಾಲೂಕು ನಿವೃತ್ತ ನೌಕರ ಸಂಘದ ಹಾಗೂ ಮನರಂಜನ ಕೇಂದ್ರದ, ವತಿಯಿಂದ ಶ್ರೀ ಕಣಿವೆಮಾರಮ್ಮ ದೇವಸ್ಥಾನ ಸನ್ನಿಧಿಯಲ್ಲಿ ಆಯೋಜಿಸಲಾಗಿತ್ತು.

ಪ್ರಸಾದವನ್ನು ವಿತರಣೆ ಮಾಡುವ ಕಾರ್ಯಕ್ಕೆ ಚಿತ್ರದುರ್ಗ ನಗರಸಭೆಯ ನೂತನ ಅಧ್ಯಕ್ಷರಾದ ಶ್ರೀಮತಿ ಅನಿತಾ ರಮೇಶ್‍ರವರು ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಸದಸ್ಯ ಟಿ.ರಮೇಶ್,ತಾಲೂಕು ಸಂಘದ ಅಧ್ಯಕ್ಷರಾದ ,ಬಿ.ಕೆ. ಹನುಮಂತಪ್ಪ, ಉಪಾಧ್ಯಕ್ಷರಾದ, ಪಿ.ಎಸ್. ಶಿವಕುಮಾರ್ ಓ, ಮಾದಪ್ಪ,ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಪರಮೇಶ್ವರಪ್ಪ ಕಾರ್ಯಾಧ್ಯಕ್ಷರಾದ ಗೋವಿಂದಯ್ಯನವರು ಖಜಾಂಚಿ, ಎಸ್. ಹಾಲಾನಾಯ್ಕ ರವರು, ಸಹಕಾರಿದರ್ಶಿಗಳಾದ ,ಎ .ತಿಪ್ಪೇಸ್ವಾಮಿ. ಸಂಘಟನಾ ಕಾರ್ಯದರ್ಶಿ ಎ. ನೀಲಕಂಠಚಾರ, ಸಲಹಾ ಸಮಿತಿ ವಿ.ಬಿ. ತಿಮ್ಮಾರೆಡ್ಡಿ ,ನಿರ್ದೇಶಕರುಗಳಾದ, ಪಿ .ನಾಗರಾಜ್, ಕೆ ನಾಗರಾಜ. ಶಿವಾನಾಯ್ಕ,ಕೆ.. ಈಶ್ವರಪ್ಪ, ಲಕ್ಷ್ಮೀನಾರಾಯಣರೆಡ್ಡಿ. ಕನಕದಾಸ, ಎ.ಜಿ. ದೇವೇಂದ್ರಪ್ಪ ಹಾಗೂ ಚಿತ್ರದುರ್ಗ ತಾಲೂಕು ನಿವೃತ್ತ ನೌಕರ ಸಂಘದ ಹಾಗೂ ಮನರಂಜನ ಕೇಂದ್ರದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Views: 32