ಮುಖ್ಯಮಂತ್ರಿಗಳ ಪರ ಸಚಿವರು ಮತ್ತು ಶಾಸಕರು ಪ್ರತಿಭಟನೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ? ಓ ಪ್ರತಾಪ್ ಜೋಗಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 19 ಜಿಲ್ಲೆಯಲ್ಲಿ ಸುಮಾರು ಒಂದು ವಾರಗಳಿಂದ ಧಾರಕಾರವಾದ ಮಳೆ ಮತ್ತು ಗಾಳಿ ಬಂದು ಮನೆಗಳು ಮತ್ತು ಗುಡಿಸಲು ಬಿದ್ದು ಹಾಳಾಗಿ ಎಷ್ಟೋ ಕುಟುಂಬಗಳು ಬೀದಿ ಪಾಲಾಗಿದ್ದು, ಇಂತಹ ಕ್ಷೇತ್ರಗಳಿಗೆ ಭೇಟಿ ಕೊಡದೇ ಸಚಿವರು ಮತ್ತು ಶಾಸಕರು ಅಧಿಕಾರದ ಧಾಹಕ್ಕಾಗಿ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆಗೆ ಮುಂದಾಗಿರುವುದು ನೋವಿನ ಸಂಗತಿಯಾಗಿದೆ.

 ಮುಖ್ಯಮಂತ್ರಿಗಳಾದಸಿದ್ಧರಾಮಯ್ಯನವರ ಪರ ಸಚಿವರು ಮತ್ತು ಶಾಸಕರು ಪ್ರತಿಭಟನೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ? ಎಂದು ಜಿಲ್ಲಾ ಜಾತ್ಯಾತೀತ ಜನತಾದಳದ ಯುವ ಘಟಕದ ಜಿಲ್ಲಾಧ್ಯಕ್ಷರಾದ ಓ ಪ್ರತಾಪ್ ಜೋಗಿ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಜಾತ್ಯಾತೀತ ನಾಯಕ ಮತ್ತು ಪ್ರಗತಿಪರ ಚಿಂತಕ ಎಂದು ಹೆಸರು ಪಡೆದಿರುವ ಇವರ ಮೇಲೆ ಆರೋಪ ಬಂದಾಗ ಅವರ ಪರವಾಗಿ ಪ್ರತಿಭಟನೆ ಮಾಡುತ್ತಿರುವುದು ಸ್ವಾಗತರ್ಹ. ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ಒಂದು ವಾರದಿಂದ ಧಾರಕಾರವಾದ ಮಳೆ ಮತ್ತು ಗಾಳಿ ಬಂದು ಮನೆಗಳು ಮತ್ತು ಗುಡಿಸಲು ಬಿದ್ದು ಹಾಳಾಗಿ ಎಷ್ಟೋ ಕುಟುಂಬಗಳು ಬೀದಿ ಪಾಲಾಗಿದ್ದು, ಇಂತಹ ಕ್ಷೇತ್ರಗಳಿಗೆ ಭೇಟಿ ಕೊಡದೇ ಸಚಿವರು ಮತ್ತು ಶಾಸಕರು ಅಧಿಕಾರದ ಧಾಹಕ್ಕಾಗಿ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆಗೆ ಮುಂದಾಗಿರುವುದು ನೋವಿನ ಸಂಗತಿಯಾಗಿದೆ

ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸದವರು ಮುಖ್ಯಮಂತ್ರಿಗಳ ಪರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಸತ್ಯ ಅಸತ್ಯಗಳ ಕಾಣದೇ ಒಂದು ದಿನಕ್ಕೆ ಸುಮಾರು ಪ್ರಕರಣಗಳು ದಾಖಲು ಮಾಡುತ್ತಾರೆ. ಅವನು ಆ ಕೃತ್ಯದಲ್ಲಿ ಭಾಗಿಯಾಗಿರುತ್ತಾನೋ ಇಲ್ಲವೋ ಗೊತ್ತಿರುವುದಿಲ್ಲ. ಆದರೂ ಸಹ ಅವನು ಆರೋಪಿಯಾಗಿರುತ್ತಾನೆ. ಒಬ್ಬ ಸಾಮಾನ್ಯನಿಗೆ ತೊಂದರೆಯಾಗಿ ಕುಟುಂಬ ಬೀದಿ ಪಾಲಾದಾಗ ಸಚಿವರಾಗಲಿ, ಶಾಸಕರಾಗಿಲಿ, ಕಾಂಗ್ರೆಸ್ ಮುಖಂಡರಾಗಲಿ ಪ್ರತಿಭಟನೆ ಮಾಡಿರುವುದು ನಿದರ್ಶನಗಳಿರುವುದಿಲ್ಲ ಎಂದಿದ್ದಾರೆ. ರಾಜಕಾರಣದಲ್ಲಿ ಅನೇಕ ಮುಖ್ಯಮಂತ್ರಿಗಳು ಮತ್ತು ಸಚಿವರುಗಳು ಕೇವಲ ಆರೋಪ ಬಂದ ತಕ್ಷಣ ರಾಜೀನಾಮೆ ನೀಡಿ ನಂತರ ಆರೋಪದಿಂದ ಮುಕ್ತರಾದಾಗ ಮತ್ತೆ ಮಂತ್ರಿಗಳು ಮತ್ತು ಸಚಿವರುಗಳಾಗಿರುತ್ತಾರೆ. ಮುಖ್ಯ ಮಂತ್ರಿಗಳು ರಾಜೀನಾಮೆ ನೀಡಿ ಜಾತ್ಯಾತೀತ ನಾಯಕರಾಗಿ ಉಳಿಯಬೇಕೆಂದು ನಮ್ಮ ಆಶಯವಾಗಿದೆ ಎಂದು ಪ್ರತಾಪ್‍ಜೋಗಿ.ಓ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *