ಚಿತ್ರದುರ್ಗ ಆ. 30
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ನಗರದ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದಿಂದ ಗಣೇಶೋತ್ಸವದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 85ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಮಾರಂಭದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಸ್.ಆಕಾಶ್ ಪ್ರತಿಭಾ ಪುರಸ್ಕಾರವನ್ನು ನಡೆಸಿಕೊಟ್ಟು ಮಾತನಾಡಿ, ವಿದ್ಯಾರ್ಥಿಗಳು ಕೇವಲ ಇಚ್ಛೆಪಟ್ಟರೆ ಸಾಲದು, ಆ ಗುರಿಯನ್ನು ಸಾಧಿಸಲು ಕಠಿಣ ತಪಸ್ಸಿನಂತೆ ಅಭ್ಯಾಸ ಮಾಡಬೇಕೆಂದು ತಮ್ಮದೇ ಉದಾಹರಣೆಯೊಂದಿಗೆ ಸ್ಫೂರ್ತಿದಾಯಕ ಮಾತುಗಳನ್ನು ಹೇಳಿ ನÉರೆದಿದ್ದ ಪೋಷಕರಿಗೆ ಮಕ್ಕಳ ಗುರಿ ಸಾಧನೆಗೆ ಪೂರಕ ವಾತಾವರಣವನ್ನು ಕಲ್ಪಿಸಿ,ಸಹಕರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ 12 ವಿದ್ಯಾರ್ಥಿನಿಯರು ಹಾಗೂ 3 ವಿದ್ಯಾರ್ಥಿಗಳಿಗೆ ಶಾಲು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರದೊಂದಿಗೆ ಸನ್ಮಾನಿಸಲಾಯಿತು ಈ ಸಮಯದಲ್ಲಿ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದ ಪರಶುರಾಮ್, ಅಧ್ಯಕ್ಷರಾದ ಪ್ರತಾಪ್ ರೆಡ್ಡಿ, ಕಾರ್ಯದರ್ಶಿ ಗಾಯತ್ರಿ ಶಿವರಾಮ್, ಉಪಾಧ್ಯಕ್ಷ ಶಂಕರ್ ಸಹ ಕಾರ್ಯದರ್ಶಿ ಮಂಜುನಾಥ್ ಖಜಾಂಚಿ ಮುಕುಂದ ರೆಡ್ಡಿ ಹಾಗೂ ನಿರ್ದೇಶಕರಾದ ಮಂಜುನಾಥ್, ಜ್ಞಾನಮೂರ್ತಿ, ವೀರೇಶ್,ವೀಣಾ ಜಯರಾಮ್, ಜಯಪ್ರಕಾಶ್‍ರೆಡ್ಡಿ, ತಿಪ್ಪೇಸ್ವಾಮಿ, ಪ್ರಹ್ಲಾದ್, ಶ್ರೀನಿವಾಸ್, ವಿಜಯ್,ರಾಜಯ್ಯ,ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.
Views: 208