ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಆ. 24 : ಕುಂಚಿಗ ಸಮಾಜವನ್ನು ಮುಂದಿನ ಪೀಳಿಗೆ ಮುನ್ನೆಡೆಸುವ ಜವಾಬ್ದಾರಿಯನ್ನು ಹೊರಬೇಕಿದೆ. ಸಮಾಜಕ್ಕೆ ಸಹಾಯ ಮಾಡಲು ಮನೆಯಲ್ಲಿ ಮಹಿಳೆಯರು ಪುರುಷರ ಮೇಲೆ ಒತ್ತಡವನ್ನು ತರಬೇಕೆಂದು ಮಾಜಿ ಶಾಸಕರು, ಕುಂಚಿಗ ವೀರಶೈವ ಲಿಂಗಾಯಿತ ಸಮಾಜದ ಜಿಲ್ಲಾಧ್ಯಕ್ಷರಾದ ಎಂ.ಬಿ.ತಿಪ್ಪೇರುದ್ರಪ್ಪ ಕರೆ ನೀಡಿದರು.
ಕುಂಚಿಗ ವೀರಶೈವ ಲಿಂಗಾಯಿತ ಸಮಾಜ ಮತ್ತು ಉತ್ಥಾನ ಟ್ರಸ್ಟ್ ವತಿಯಿಂದ ಚಿತ್ರದುರ್ಗ ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಮಾಜ ಬೆಳೆಯಬೇಕಾದರೆ ಸಾರ್ವಜನಿಕರ ಸಹಾಯ ಸಹಕಾರ ಅಗತ್ಯವಾಗಿದೆ. ದಾನ ಮಾಡುವ ಪ್ರವೃತ್ತಿಯನ್ನು ಬೆಳಸಿಕೊಳ್ಳಬೇಕಿದೆ. ಪುರುಷರು ದಾನಕ್ಕೆ ಅಷ್ಟಾಗಿ ತೆಲೆ ಕೆಡಿಸಿಕೊಳ್ಳುವುದಿಲ್ಲ ಇದರಿಂದ ಮನೆಯಲ್ಲಿ ಮಹಿಳೆಯರು ಪುರುಷರ ಮೇಲೆ ಒತ್ತಡವನ್ನು ತರುವುದರ ಮೂಲಕ ಸಮಾಜಕ್ಕೆ ದಾನವನ್ನು ಮಾಡಿಸಬೇಕಿದೆ ಈ ರೀತಿ ಮಾಡುವುದರಿಂದ ಮುಂದಿನ ವರ್ಷ ಇನ್ನೂ ಅದ್ದೂರಿಯಾಗಿ ಇಂತಹ ಸಮಾರಂಭವನ್ನು ಮಾಡಬಹುದಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕರಾದ ಪಿ.ರಮೇಶ್ ಮಾತನಾಡಿ, ನಮ್ಮ ಸಮಾಜ ಎಂದು ಎಲ್ಲರು ತಿಳಿದುಕೊಂಡಾಗ ಮಾತ್ರ ಸಮಾಜ ಬೆಳೆಯಲು ಗಟ್ಟಿಯಾಗಲು ಸಾಧ್ಯವಿದೆ. ನಮ್ಮಲ್ಲಿನ ಕೀಳಿರಿಮೆಯನ್ನು ತೊರೆಯಬೇಕಿದೆ ಆಗ ಮಾತ್ರ ಮುಂದೆ ಬರಲು ಸಾಧ್ಯವಿದೆ. ನಮಗೆ ಸ್ವಾಮಿಗಳಾರು ಎಂಬ ಗೊಂದಲ್ಲದಲ್ಲಿ ನಾವಿದ್ದೆವೆ ಎಲ್ಲಾ ಮಠಗಳಿಗೂ ಸಹಾ ನಾವು ಭೇಟಿ ಮಾಡುತ್ತವೆ ಆದರೆ ನಮ್ಮವರು ಯಾರು ಎಂದು ಗೊತ್ತಿಲ್ಲ, ಸಮಾಜದ ಬಾಂದವರು ದೇಣೀಗೆಯನ್ನು ನೀಡುವುದರ ಮೂಲಕ ಇಂತಹ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕಿದೆ. ವರ್ಷದಿಂದ ವರ್ಷಕ್ಕೆ ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕಿದೆ. ಇದಲ್ಲದೆ ಪ್ರತಿಭಾ ಪುರಸ್ಕಾರ ಪ್ರಮಾಣವೂ ಸಹಾ ಹೆಚ್ಚಾಗಬೇಕಿದೆ ಎಂದರು.
ಇಂದಿನ ಮಕ್ಕಳಲ್ಲಿ ಸಮಾಜಕ್ಕೆ ಏನಾದರೂ ಸಹಾಯ ಮಾಡುವ ಗುಣವನ್ನು ಬೆಳಸಬೇಕಿದೆ. ನಾವು ಸಮಾಜದಿಂದ ಸಹಾಯವನ್ನು ಪಡೆದಿದ್ದೆವೆ ನಮ್ಮಿಂದ ಬೇರೆಯವರು ಸಹಾ ಸಹಾಯವನ್ನು ಪಡೆಯಲಿ ಎಂಬ ಮನೋಭಾವದಿಂದ ಮುಂದಿನ ದಿನದಲ್ಲಿ ಸಮಾಜಕ್ಕೆ ಸಹಾಯವನ್ನು ಮಾಡುವ ಪ್ರವೃತಿಯನ್ನು ಬೆಳಸಿಕೊಂಡರೆ ಸಮಾಜಕ್ಕ ಒಳ್ಳೆಯದು ಎಂದು ರಮೇಶ್ ತಿಳಿಸಿದರು.
ಪತ್ರಕರ್ತರಾದ ಜಿ.ಎಸ್.ಉಜ್ಜನಪ್ಪ ಮಾತನಾಡಿ, ನಮ್ಮಲ್ಲಿ ನಮ್ಮ ಸಮಾಜ ಎಂಬ ಭಾವನೆ ಮೂಡಬೇಕಿದೆ, ಆಗ ಮಾತ್ರ ಸಮಾಜ ಪ್ರಗತಿ ಹೊಂದಲು ಸಾಧ್ಯವಿದೆ. ನಮ್ಮಲ್ಲಿ ಸಂಘಟನೆ ಹೆಚ್ಚಾಗಬೇಕಿದೆ. ಸಮಾಜವನ್ನು ಬೆಳಸಬೇಕಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಕಾರ್ಯದರ್ಶಿ ಹೆಚ್ ಕುಬೇರಪ್ಪ ಪ್ರಸ್ಥಾವಿಕವಾಗಿ ಮಾತನಾಡಿದರು ಸಮಾಜದ ಸಹಕಾರ್ಯದರ್ಶಿ ನಿವೃತ್ತ ಡಿ.ವೈ.ಎಸ್.ಪಿ. ಬಸವರಾಜ್,ನಿರ್ದೇಶಕರಾದ ಜಿ.ಅರ್.ರಾಜಪ್ಪ ಪಿ, ಶಿವಪ್ರಕಾಶ, ಬಿ. ಟಿ.ವಿಶ್ವನಾಥ್, ಲವಕುಮಾರ್, ಓಂಕಾರಪ್ಪ,ಯೋಗೇಂದ್ರಪ್ಪ,ಸ್ವಾಮಿ,ನಿವೃತ ಉಪನ್ಯಾಸ ಹರೀಶ್,ಸಿದ್ದಪ್ಪ,ಎಂ ತಿಪ್ಪೇರುದ್ರಪ್ಪ, ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭೆಗಳಾದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯುನಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದವರನ್ನು ಸನ್ಮಾನಿಸಲಾಯಿತು ಇದ್ದಲ್ಲದೆ ಸಮಾಜದ ವೈದ್ಯರುಗಳಾದ ಡಾ.ಯೋಗೇಂದ್ರ ಹಾಗೂ ಡಾ.ಅರವಿಂದ ಪಾಟೀಲ್ ರವರನ್ನು ಗೌರವಿಸಲಾಯಿತು. ಗಂಜಿಗಟ್ಟೆ ಕೃಷ್ಣಮೂರ್ತಿ ಹಾಗು ಮೀನಾಕ್ಷಮ್ಮ ಜಾನಪದ ಗೀತೆಗಳ ಗಾಯನ ಮಾಡಿದರು.