ತಿಂಗಳ ಮೊದಲ ದಿನವೇ ಬೆಲೆ ಏರಿಕೆ ಬಿಸಿ ! ಇಂದಿನಿಂದ ರೆಡಿಯಾಗಿ ಈ ಎಲ್ಲಾ ಬದಲಾವಣೆಗಳಿಗೆ !

ಇಂದಿನಿಂದ ಆಗಿರುವ ಮಹತ್ವದ ಬದಲಾವಣೆಗಳ ಬಗ್ಗೆ ದೇಶದ ಜನರು ಜಾಗೃತರಾಗಿರಬೇಕು. ಇಲ್ಲವಾದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು.   

Rule Changes : ಹೊಸ ತಿಂಗಳು ಪ್ರಾರಂಭವಾಗಿದೆ. ಇದರೊಂದಿಗೆ ದೇಶದಲ್ಲಿ ಹಲವು ಮಹತ್ವದ ಬದಲಾವಣೆಗಳೂ ಆಗಿವೆ. ಈ ಬದಲಾವಣೆಗಳಿಂದ ಜನ ಸಾಮಾನ್ಯರ ಜೇಬಿಗೂ ನೇರವಾಗಿ ಹೊಡೆತ ಬೀಳಲಿದೆ. ಈ ಮಹತ್ವದ ಬದಲಾವಣೆಗಳ ಬಗ್ಗೆ ದೇಶದ ಜನರು ಜಾಗೃತರಾಗಿರಬೇಕು. ಇಲ್ಲವಾದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. 

ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ :
ನವೆಂಬರ್ ಆರಂಭದೊಂದಿಗೆ, ಬೆಲೆ ಏರಿಕೆಯ ಪೆಟ್ಟು ಕೂಡಾ ಜನ ಸಾಮಾನ್ಯನ ಮೇಲೆ ಬಿದ್ದಿದೆ. ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯಲ್ಲಿ ಏರಿಕೆಯಾಗಿದೆ.  ವಾಣಿಜ್ಯ ಸಿಲಿಂಡರ್ ಬೆಲೆ  101.50 ರೂ.ಗೆ ಏರಿಕೆಯಾಗಿದೆ. ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. ಆದರೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಅನಿರೀಕ್ಷಿತ ಲಾಭದ ತೆರಿಗೆಯಲ್ಲಿ ಹೆಚ್ಚಳ : 
ಡೀಸೆಲ್ ರಫ್ತಿನ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವಾಗ ಸರ್ಕಾರವು ದೇಶದಲ್ಲಿ ಉತ್ಪಾದಿಸುವ ಕಚ್ಚಾ ತೈಲದ ಮೇಲಿನ ವಿಂಡ್‌ಫಾಲ್ ಪ್ರಾಫಿಟ್ ತೆರಿಗೆಯನ್ನು (Windfall Profit Tax )  ಹೆಚ್ಚಿಸಿತು. ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಅಥವಾ SAED ರೂಪದಲ್ಲಿ ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲೆ ವಿಧಿಸಲಾದ ತೆರಿಗೆಯನ್ನು ಪ್ರತಿ ಟನ್‌ಗೆ 9,050 ರೂ.ನಿಂದ 9,800 ರೂ.ಗೆ ಹೆಚ್ಚಿಸಲಾಗಿದೆ. ಡೀಸೆಲ್ ರಫ್ತಿನ ಮೇಲಿನ SAED ಅನ್ನು ಲೀಟರ್‌ಗೆ 4 ರಿಂದ 2 ರೂಪಾಯಿಗೆ ಮತ್ತು ವಿಮಾನ ಇಂಧನ (ATF) ಮೇಲೆ ಲೀಟರ್‌ಗೆ 1 ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಪೆಟ್ರೋಲ್ ರಫ್ತಿನ ಮೇಲೆ SAED ಈಗಾಗಲೇ ಶೂನ್ಯವಾಗಿದೆ. ಹೊಸ ದರಗಳು ನವೆಂಬರ್ 1 ರಿಂದ ಅನ್ವಯವಾಗುತ್ತವೆ.

ಬಿಎಸ್ಇ ಶುಲ್ಕ :
ಬಾಂಬೆ ಸ್ಟಾಕ್ ಎಕ್ಸೇಚೇಂಜ್(ಬಿಎಸ್ಇ) ನವೆಂಬರ್ 1 ರಿಂದ ಈಕ್ವಿಟಿ ಡೆರಿವೇಟಿವ್ ವಿಭಾಗದಲ್ಲಿ ವಹಿವಾಟು ಶುಲ್ಕವನ್ನು ಹೆಚ್ಚಿಸುವುದಾಗಿ ಘೋಷಿಸಿತ್ತು. S&P BSE ಸೆನ್ಸೆಕ್ಸ್ ಆಯ್ಕೆಗಳಲ್ಲಿ ಈ ಶುಲ್ಕವನ್ನು ಹೆಚ್ಚಿಸಲಾಗುತ್ತದೆ. ಸುಂಕ ಹೆಚ್ಚಳವು ಚಿಲ್ಲರೆ ಹೂಡಿಕೆದಾರರು ಮತ್ತು ವ್ಯಾಪಾರಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

gst ಸರಕುಪಟ್ಟಿ :
ನವೆಂಬರ್ 1 ರಿಂದ, 100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವ್ಯವಹಾರ ಮಾಡುವವರು 30 ದಿನಗಳಲ್ಲಿ ಇ-ಚಲನ್ ಪೋರ್ಟಲ್‌ನಲ್ಲಿ ಜಿಎಸ್‌ಟಿ ಚಲನ್ ಅನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

ಪಾಲಿಸಿದಾರರ KYC : 
ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಕೂಡಾ ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಈಗ ನವೆಂಬರ್ 1 ರಿಂದ ಎಲ್ಲಾ ವಿಮೆದಾರರಿಗೆ KYC ಅನ್ನು ಕಡ್ಡಾಯಗೊಳಿಸಲಾಗಿದೆ.

Source : https://zeenews.india.com/kannada/business/from-today-changes-in-these-major-rules-must-know-167795

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *